Fact Check: ಮಹಾಕುಂಭ ಮೇಳಕ್ಕೆ ಜಾನ್ ಸೀನಾ ಬಂದು ಪವಿತ್ರ ಸ್ನಾನ ಮಾಡಿದ್ದು ನಿಜವೇ?
ಜಾನ್ ಸೀನಾ ಸೇರಿದಂತೆ ಕೆಲ ಪ್ರಸಿದ್ಧ WWE ಕುಸ್ತಿಪಟುಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಚಿತ್ರಗಳನ್ನು ಮಹಾಕುಂಭಕ್ಕೆ ಜೋಡಿಸಿ ವೈರಲ್ ಮಾಡಲಾಗುತ್ತಿದೆ. ಈ ಕುಸ್ತಿಪಟುಗಳು ಪ್ರಯಾಗರಾಜ್ ತಲುಪಿದ್ದಾರೆ ಮತ್ತು ಮಹಾಕುಂಭ ಮೇಳ 2025 ರಲ್ಲಿ ಭಾಗವಹಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹೇಳಿಕೊಳ್ಳಲಾಗುತ್ತಿದೆ.
ಕುಂಭಮೇಳ ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಇಲ್ಲಿ ಕೋಟ್ಯಂತರ ಭಕ್ತರು ತಮ್ಮ ಮನಸ್ಸಿನಲ್ಲಿ ನಂಬಿಕೆ ಮತ್ತು ಭಾವನೆಗಳೊಂದಿಗೆ ಪಾಲ್ಗೊಳ್ಳುತ್ತಾರೆ. ಇಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಪಾಪಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ಆಯೋಜಿಸಿರುವ ಮಹಾಕುಂಭಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಇಲ್ಲಿಯವರೆಗೆ 13.21 ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ. ವಿದೇಶದಿಂದ ಕೂಡ ಜನರು ಬಂದು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಹೀಗಿರುವಾಗ ಇದೀಗ WWE ಸೂಪರ್ ಸ್ಟಾರ್ ಜಾನ್ ಸೀನಾ ಕೂಡ ಮಹಾಕುಂಭಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
WWE ಯ ಪ್ರಸಿದ್ಧ ಕುಸ್ತಿಪಟುಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಚಿತ್ರಗಳನ್ನು ಮಹಾಕುಂಭಕ್ಕೆ ಜೋಡಿಸಿ ವೈರಲ್ ಮಾಡಲಾಗುತ್ತಿದೆ. ಈ ಕುಸ್ತಿಪಟುಗಳು ಪ್ರಯಾಗರಾಜ್ ತಲುಪಿದ್ದಾರೆ ಮತ್ತು ಮಹಾಕುಂಭ ಮೇಳ 2025 ರಲ್ಲಿ ಭಾಗವಹಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹೇಳಿಕೊಳ್ಳಲಾಗುತ್ತಿದೆ. ಜಾನ್ ಸೆನಾ ಮತ್ತು ಬ್ರಾಕ್ ಲೆಸ್ನರ್ ಅವರ ಈ ಚಿತ್ರಗಳನ್ನು ಹಂಚಿಕೊಳ್ಳುವಾಗ, ಫೇಸ್‌ಬುಕ್ ಬಳಕೆದಾರರು ‘ಜೈ ಶ್ರೀ ರಾಮ್ ಜಾನ್ ಸೆನಾ ಮತ್ತು ಬ್ರಾಕ್ ಲೆಸ್ನರ್ 2025 ರ ಮಹಾಕುಂಭ ಮೇಳದಲ್ಲಿ ಪ್ರಯಾಗರಾಜ್’ ಎಂದು ಬರೆದಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಚಿತ್ರಗಳನ್ನು ಕೃತಕ ಬುದ್ದಿಮತ್ತೆ (AI) ಯಿಂದ ರಚಿಸಲಾಗಿದೆ. WWE ಗೆ ಸಂಬಂಧಿಸಿದ ಯಾವುದೇ ಕುಸ್ತಿಪಟು ಕುಂಭದಲ್ಲಿ ಭಾಗವಹಿಸಿಲ್ಲ. ಈ ಎಲ್ಲ ಫೋಟೋಗಳು ಎಐ ಆಗಿವೆ. ಆದರೆ, ಕೆಲವರು ಇದನ್ನು ನಿಜವೆಂದು ನಂಬಿ ಶೇರ್ ಮಾಡುತ್ತಿದ್ದಾರೆ.
Fact Check: ಮಹಾಕುಂಭದಲ್ಲಿ ಆರತಿ ಮಾಡುವಾಗ ಶಿವನ ರೂಪ ಕಂಡಿದ್ದು ನಿಜವೇ?
ವೈರಲ್ ಫೋಟೋಗಳ ನಿಜಾಂಶವನ್ನು ತಿಳಿಯಲು ನಾವು, ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ WWE- ಕುಸ್ತಿಪಟುಗಳು ಮಹಾಕುಂಭ 2025 ಕ್ಕೆ ಬಂದಿದ್ದಾರೆ ಎಂಬ ಹಕ್ಕನ್ನು ದೃಢೀಕರಿಸುವ ಯಾವುದೇ ಮಾಧ್ಯಮ ವರದಿಯನ್ನು ನಾವು ಕಂಡುಕೊಂಡಿಲ್ಲ.
ಅಂತಹ ಪರಿಸ್ಥಿತಿಯಲ್ಲಿ, ಚಿತ್ರಗಳು AI ರಚಿತವಾಗಿದೆ ಎಂದು ನಾವು ಅನುಮಾನಿಸಿದ್ದೇವೆ. ಇದನ್ನು ಖಚಿತ ಪಡಿಸಿಕೊಳ್ಳಲು ನಾವು AI ಡಿಟೆಕ್ಟರ್ ಪರಿಕರ ಹೈವ್ ಮಾಡರೇಶನ್ ಮೂಲಕ ಪರಿಶೀಲಿಸಿದ್ದೇವೆ. ಆಗ ಈ ಎಲ್ಲ ಫೋಟೋಗಳು ಎಐ ಯದ್ದು ಎಂದು ಶೇ. 90 ಕ್ಕಿಂತ ಹೆಚ್ಚಿನ ಫಲಿತಾಂಶ ನೀಡಿದೆ. ಈ ಮೂಲಕ ವೈರಲ್ ಆಗುತ್ತಿರುವ ಫೋಟೋಗಳು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ದೇಶ ವಿದೇಶಗಳಿಂದ ಈ ಬಾರಿಯ ಮಹಾಕುಂಭಕ್ಕೆ ನಾಲ್ಕು ಕೋಟಿಗೂ ಅಧಿಕ ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಪ್ರಯಾಗರಾಜ್‌ನಲ್ಲಿ ಮಹಾಕುಂಭದ ಮಹಾ ಧಾರ್ಮಿಕ ಕಾರ್ಯಕ್ರಮವು ಜನವರಿ 13 ರಂದು ಪೌಷ್ ಪೂರ್ಣಿಮೆಯ ದಿನದಂದು ಪ್ರಾರಂಭವಾಗಿದೆ. ಇದು 26 ಫೆಬ್ರವರಿ ಮಹಾಶಿವರಾತ್ರಿಯ ದಿನದಂದು ಮುಕ್ತಾಯಗೊಳ್ಳುತ್ತದೆ. ಮಹಾಕುಂಭದಲ್ಲಿರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ವಿಶೇಷ ಧಾರ್ಮಿಕ ಮಹತ್ವವನ್ನು ಹೊಂದಿದೆ. ಕುಂಭದಲ್ಲಿ ಮಾಘದಲ್ಲಿ ಸ್ನಾನ ಮಾಡುವುದಕ್ಕಿಂತ ಪವಿತ್ರವಾದ ಮತ್ತು ಪಾಪ-ನಾಶಕ ಹಬ್ಬವಿಲ್ಲ ಎಂದು ನಂಬಲಾಗಿದೆ. ಮಹಾಕುಂಭದಲ್ಲಿ ನಿತ್ಯ ಸ್ನಾನ ಮಾಡುವುದರಿಂದ ಅಶ್ವಮೇಧ ಯಾಗ ಮಾಡಿದಂತೆಯೇ ಪುಣ್ಯ ಸಿಗುತ್ತದೆ. ಮಹಾಕುಂಭದಲ್ಲಿ ಸಂಗಮ ಸ್ನಾನ ಮಾಡಲು ದೇಶ ವಿದೇಶಗಳಿಂದ ಮುನಿಗಳು, ಸಂತರು, ಭಕ್ತರು ಆಗಮಿಸುತ್ತಿದ್ದಾರೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Mon, 27 January 25