AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Faf du Plessis: ಮೊದಲ ಗೆಲುವು: ಪಂದ್ಯ ಮುಗಿದ ಬಳಿಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಕೇಳಿ

Dinesh Karthik as ice cool as MS Dhoni: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಕಡೇ ಓವರ್‌ವರೆಗೂ ಹೋರಾಡಿ ದಿನೇಶ್ ಕಾರ್ತಿಕ್ ಸಿಕ್ಸ್ ಸಿಡಿಸಿದ ಪರಿಣಾಮ ಅಂತಿಮವಾಗಿ ಗೆಲುವು ಸಾಧಿಸಿತು. ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮಾತನಾಡಿದ್ದು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

Faf du Plessis: ಮೊದಲ ಗೆಲುವು: ಪಂದ್ಯ ಮುಗಿದ ಬಳಿಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಕೇಳಿ
Faf du Plessis post match RCB vs KKR
TV9 Web
| Edited By: |

Updated on: Mar 31, 2022 | 9:58 AM

Share

ಐಪಿಎಲ್ 2022ರ (IPL 2022) ಮೊದಲ ಪಂದ್ಯದಲ್ಲಿ 200ಕ್ಕೂ ಅಧಿಕ ರನ್ ಸಿಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲಿಂಗ್​ನಲ್ಲಿ ಸಂಪೂರ್ಣ ವಿಫಲವಾಗಿ ಸೋಲು ಕಂಡಿತು. ಇದೀಗ ಎರಡನೇ ಪಂದ್ಯದಲ್ಲಿ ಬೌಲರ್​​ಗಳು ಭರ್ಜರಿ ಪ್ರದರ್ಶನ ತೋರಿದರೆ ಬ್ಯಾಟರ್​ಗಳ ಸಾಧಾರಣ ಪ್ರದರ್ಶನದ ನಡುವೆ ಅಂತಿಮ ಹಂತದಲ್ಲಿ ಗೆಲುವಿನ ನಗೆ ಬೀರಿತು. ಕೊನೇ ಹಂತದವರೆಗೂ ನಡೆದ ಜಿದ್ದಾಜಿದ್ದಿಯ ಕಾದಾಟದಲ್ಲಿ ಆರ್​ಸಿಬಿ ತಂಡ ಕೋಲ್ಕತ್ತಾ ನೈಟ್‌ರೈಡರ್ಸ್‌ (RCB vs KKR) ಟೀಮ್ ಅನ್ನು 3 ವಿಕೆಟ್‌ಗಳಿಂದ ಮಣಿಸಿತು. ವನಿಂದು ಹಸರಂಗ (20ಕ್ಕೆ 4), ಆಕಾಶ್ ದೀಪ್ (45ಕ್ಕೆ 3) ಮತ್ತು ಹರ್ಷಲ್ ಪಟೇಲ್ (11ಕ್ಕೆ 2) ಮಾರಕ ದಾಳಿಗೆ ನಲುಗಿದ ಕೆಕೆಆರ್ 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಆರ್‌ಸಿಬಿ ಕಡೇ ಓವರ್‌ವರೆಗೂ ಹೋರಾಡಿ ದಿನೇಶ್ ಕಾರ್ತಿಕ್ ಸಿಕ್ಸ್ ಸಿಡಿಸಿದ ಪರಿಣಾಮ ಅಂತಿಮವಾಗಿ ಗೆಲುವು ಸಾಧಿಸಿತು. ಪಂದ್ಯ ಮುಗಿದ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (Faf du Plessis) ಮಾತನಾಡಿದ್ದು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

“ಈ ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ನನಗೆ ತುಂಬಾ ಸಂತಸವಾಗಿದೆ. ಇದು ಕಡಿಮೆ ಮೊತ್ತದ ಗುರಿಯಾಗಿತ್ತು. ಇದರ ಹೊರತಾಗಿಯೂ ನೀವು ಕೊನೆಯ ಹಂತದವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗಬಾರದು. ನಿಜ ಹೇಳಬೇಕೆಂದರೆ ನಮಗೆ ಬ್ಯಾಟಿಂಗ್ ಮಾಡಲು ಕಷ್ಟವಾಯಿತು. ಇದಕ್ಕೆ ಕಾರಣ ಎದುರಾಳಿ ತಂಡದ ಸೀಮಿರ್‌ಗಳು ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದು. ಈ ಪಂದ್ಯದಲ್ಲಿ ರಾತ್ರಿ ಸೀಮ್‌ ಹಾಗೂ ಸ್ವಲ್ಪ ಹೆಚ್ಚಿನ ಬೌನ್ಸ್‌ ಇತ್ತು, ಇದರ ಜೊತೆಗೆ ಹೆಚ್ಚಿನ ಸ್ವಿಂಗ್‌ ಕೂಡ ಆಗುತ್ತಿತ್ತು. ಕಳೆದ ಪಂದ್ಯದಲ್ಲಿ ನಮ್ಮದು 200 ರನ್ ಆಗಿತ್ತು. ಇವತ್ತು 130 ರನ್. ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಇದೆಲ್ಲ ಒಂದು ಉತ್ತಮ ಅನುಭವ. ರನ್‌ಗಳು ಎಂದಿಗೂ ಸಮಸ್ಯೆಯಾಗಿರಲಿಲ್ಲ. ನಮ್ಮ ಕೈಯಲ್ಲಿ ವಿಕೆಟ್ ಇರಬೇಕಷ್ಟೆ. ಇದೇ ರೀತಿ ಮುಂದೆ ಎದುರಾಗುವ ಪಂದ್ಯಗಳನ್ನು ಗೆಲ್ಲಬೇಕಾದ ಅಗತ್ಯವಿದೆ,” ಎಂದು ಹೇಳಿದ್ದಾರೆ.

ಆರ್​ಸಿಬಿ ತಂಡದ ಫಿನಿಶರ್ ಆಗಿ ಗುರುತಿಸಿಕೊಂಡಿರುವ ದಿನೇಶ್‌ ಕಾರ್ತಿಕ್‌ ಬಗ್ಗೆ ಮಾತನಾಡಿದ ಡುಪ್ಲೆಸಿಸ್, “ದಿನೇಶ್ ಕಾರ್ತಿಕ್ ಅವರ ಅಪಾರ ಅನುಭವ ನಮಗೆ ಇಲ್ಲಿ ತುಂಬಾ ಸಹಾಯವಾಗಿದೆ. ಕೊನೆಯ ಹಂತದಲ್ಲಿ ನಮಗೆ ಸಾಕಷ್ಟು ರನ್‌ಗಳ ಅಂತರವಿರಲಿಲ್ಲ. ಆದರೆ ಕೊನೆಯ ಐದು ಓವರ್‌ಗಳ ಒತ್ತಡದ ಸಂದರ್ಭವನ್ನು ದಿನೇಶ್‌ ಕಾರ್ತಿಕ್‌ ಅವರು ಎಂಎಸ್‌ ಧೋನಿಯಿಂತೆ ತಾಳ್ಮೆಯಿಂದ ನಿರ್ವಹಿಸಿದ್ದಾರೆ. ನಮ್ಮ ಕ್ಯಾಂಪ್​​ನಲ್ಲಿ ಅತ್ಯುತ್ತಮವಾದ ಸದಸ್ಯರಿದ್ದಾರೆ. ತಂಡದಲ್ಲಿ ಉತ್ತಮ ಸಂವಹನವಿದೆ. ಆಟಗಾರರು ಅದ್ಭುತವಾಗಿದ್ದಾರೆ. ಅವರು ಬೆಂಬಲ ನೀಡಿದ್ದಾರೆ. ಅವರ ಬಳಿ ಏನೇ ಹೊಸ ಹೊಸ ಆಲೋಚನೆಗಳಿದ್ದರೆ ನನ್ನ ಬಳಿ ಬಂದು ಹಂಚಿಕೊಳ್ಳುತ್ತಾರೆ,” ಎಂಬುದು ಫಾಫ್ ಮಾತು.

ಇನ್ನು ಪಂದ್ಯದ ಬಳಿಕ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ, “ಪಂದ್ಯ ಆರಂಭ ಆಗುವುದಕ್ಕೂ ಮೊದಲು ಈ ಮ್ಯಾಚ್ ರೋಚಕವಾಗಿರುತ್ತದೆ ಎಂದು ನಾನು ಭಾವಿಸಿದ್ದೆ. ಈ ಪಂದ್ಯದಲ್ಲಿ ನಮ್ಮ ಪಾತ್ರ ಮುಖ್ಯವಾಗುತ್ತದೆ ಎಂದು ನಾನು ನನ್ನ ತಂಡದ ಆಟಗಾರರ ಜೊತೆ ಮಾತನಾಡಿಕೊಳ್ಳುತ್ತಿರುವಾಗ ಹೇಳಿದೆ. ಈ ಪಂದ್ಯದಲ್ಲಿ ನಾವು ಆಡಿದ ಬಗ್ಗೆ ನಮಗೆ ಹೆಮ್ಮೆಯಿದೆ. ಅದರಲ್ಲೂ ಕೊನೇ ಓವರ್ ವರೆಗೆ ಕೊಂಡೊಯ್ಯಿದಿದ್ದೇವೆ. ಅದು ತುಂಬಾ ಕಷ್ಟದ ಸಮಯವಾಗಿತ್ತು. ಯಾಕೆಂದರೆ ಎದುರಾಳಿಯ ವಿಕೆಟ್ ಕೀಳುವ ಯೋಜನೆಯಿಂದ ನಮ್ಮ ಬೆಸ್ಟ್ ಬೌಲರ್​​ಗಳ ಕೋಟವನ್ನು ಮೊದಲೇ ಮುಗಿಸಿದ್ದೆ. ಆದರೆ, ಅದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಆರ್​ಸಿಬಿ ತಂಡದ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಪ್ರಮುಖವಾಗಿ ಮಧ್ಯಮ ಕ್ರಮಾಂಕದಲ್ಲಿ,” ಎಂದು ಹೇಳಿದ್ದಾರೆ.

LSG vs CSK, IPL 2022: ಸೋತವರ ಕಾಳಗ: ಲಖನೌ-ಚೆನ್ನೈ ಪೈಕಿ ಗೆಲುವಿನ ಖಾತೆ ತೆರೆಯುವವರು ಯಾರು?

Dinesh Kartik: ಆರ್​ಸಿಬಿ ಗೆಲುವಿಗೆ ಕಾರಣ ಕೊನೇ ಓವರ್​ನಲ್ಲಿ ನಡೆದ ಆ ಒಂದು ಘಟನೆ: ಏನದು ಗೊತ್ತೇ?

Follow Us
ಇಂದು ಈ ರಾಶಿಯಲ್ಲಿ 'ಗಜಕೇಸರಿ ಯೋಗ': ಯಾರಿಗೆ ಒಲಿಯಲಿದೆ ಅದೃಷ್ಟ?
ಇಂದು ಈ ರಾಶಿಯಲ್ಲಿ 'ಗಜಕೇಸರಿ ಯೋಗ': ಯಾರಿಗೆ ಒಲಿಯಲಿದೆ ಅದೃಷ್ಟ?
ಟರ್ಕಿಯ ಶಾಲೆಯಲ್ಲಿ ಗುಂಡಿನ ದಾಳಿ; ನಾಲ್ವರು ಸಾವು, 20 ಜನರಿಗೆ ಗಾಯ
ಟರ್ಕಿಯ ಶಾಲೆಯಲ್ಲಿ ಗುಂಡಿನ ದಾಳಿ; ನಾಲ್ವರು ಸಾವು, 20 ಜನರಿಗೆ ಗಾಯ
ದಾವಣಗೆರೆಯಲ್ಲಿ ಭುಗಿಲೆದ್ದ ಆಕ್ರೋಶ: ಕಾಂಗ್ರೆಸ್​​ಗೆ ಖಡಕ್ ಎಚ್ಚರಿಕೆ ಸಂದೇಶ
ದಾವಣಗೆರೆಯಲ್ಲಿ ಭುಗಿಲೆದ್ದ ಆಕ್ರೋಶ: ಕಾಂಗ್ರೆಸ್​​ಗೆ ಖಡಕ್ ಎಚ್ಚರಿಕೆ ಸಂದೇಶ
ಪಾಪಪ್ರಜ್ಞೆಯಿಂದ ಸಾಕ್ಷಿ ನುಡಿದೆ: ಮಾಫಿ ಸಾಕ್ಷಿ ಸ್ಫೋಟಕ ಹೇಳಿಕೆ
ಪಾಪಪ್ರಜ್ಞೆಯಿಂದ ಸಾಕ್ಷಿ ನುಡಿದೆ: ಮಾಫಿ ಸಾಕ್ಷಿ ಸ್ಫೋಟಕ ಹೇಳಿಕೆ
ನಾಳೆ ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ
ನಾಳೆ ತಮಿಳುನಾಡಿನಲ್ಲಿ ಕಪ್ಪು ಬಾವುಟ ಪ್ರದರ್ಶನ, ಪ್ರತಿಭಟನೆ
ಕಾಂಗ್ರೆಸ್ ಹೈಕಮಾಂಡ್ ನಡೆಗೆ ಅಬ್ದುಲ್ ಜಬ್ಬಾರ್ ಕೆಂಡಾಮಂಡಲ
ಕಾಂಗ್ರೆಸ್ ಹೈಕಮಾಂಡ್ ನಡೆಗೆ ಅಬ್ದುಲ್ ಜಬ್ಬಾರ್ ಕೆಂಡಾಮಂಡಲ
ಭಾರತದ ಧ್ವಜದ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಸಿಎಂ ಒಮರ್ ಅಬ್ದುಲ್ಲ
ಭಾರತದ ಧ್ವಜದ ಬಣ್ಣದ ರಿಬ್ಬನ್ ಕತ್ತರಿಸಲು ನಿರಾಕರಿಸಿದ ಸಿಎಂ ಒಮರ್ ಅಬ್ದುಲ್ಲ
ಶಾಸಕ ವಿನಯ್ ಕುಲಕರ್ಣಿ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್!
ಶಾಸಕ ವಿನಯ್ ಕುಲಕರ್ಣಿ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್!
ಮಹಿಳೆಯ ಹಾಡು ಶುರುವಾಗುತ್ತಿದ್ದಂತೆಯೇ ಮುರಿದು ಬಿತ್ತು ಸ್ಟೇಜ್
ಮಹಿಳೆಯ ಹಾಡು ಶುರುವಾಗುತ್ತಿದ್ದಂತೆಯೇ ಮುರಿದು ಬಿತ್ತು ಸ್ಟೇಜ್
180 ಅಪ್ರಾಪ್ತ ಬಾಲಕಿಯರ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ವೈರಲ್
180 ಅಪ್ರಾಪ್ತ ಬಾಲಕಿಯರ 350ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ವೈರಲ್