RCB vs KKR: ಎರಡನೇ ಪಂದ್ಯದಲ್ಲೂ ಕ್ರಿಕೆಟ್ ಪ್ರಿಯರ ಬೆರಗಾಗಿಸಿದ ಶೆಲ್ಡನ್ ಜಾಕ್ಸನ್: ಅಬ್ಬಾ ಎಂಥಾ ಕ್ಯಾಚ್
Sheldon Jackson: ಆರ್‌ಸಿಬಿ ವಿರುದ್ಧ ಕೆಕೆಆರ್ ಸೋತರು ಬೌಲರ್ಗಳು ನೀಡಿದ ಪ್ರದರ್ಶನ ಮತ್ತು ಶೆಲ್ಡನ್ ಜಾಕ್ಸನ್ ಅವರು ವಿಕೆಟ್ ಹಿಂಭಾಗದಲ್ಲಿ ನೀಡಿದ ಚುರುಕಿನ ಆಟ ಎಲ್ಲರ ಮನಗೆದ್ದಿತು. ಅದರಲ್ಲೂ ಜಾಕ್ಸನ್ ಶೆರ್ಫನ್ ರುಥರ್ಫಾರ್ಡ್ ಅವರ ಕ್ಯಾಚ್ ಹಿಡಿದಿದ್ದು ರೋಚಕವಾಗಿತ್ತು.

ಐಪಿಎಲ್ 2022 (IPL 2022) ಆರಂಭವಾಗಿ ಆರು ದಿನಗಳಷ್ಟೆ ಕಳೆದಿವೆ. ಅದಾಗಲೇ ಕೆಲ ಯುವ ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ತಮ್ಮ ಚೊಚ್ಚಲ ಪಂದ್ಯದಲ್ಲೇ ಅಬ್ಬರಿಸುತ್ತಿದ್ದಾರೆ. ಇತ್ತ ನೂತನ ನಾಯಕನಾಗಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಶೆಲ್ಡನ್ ಜಾಕ್ಸನ್ (Sheldon Jackson) ಮೊದಲ ಪಂದ್ಯದಿಂದಲೂ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಬುಧವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೆಕೆಆರ್ (RCB vs KKR) ತಂಡ ಅಂತಿಮ ಹಂತದ ವರೆಗೂ ಹೋರಾಡಿ ಸೋಲು ಕಂಡಿತು. ಕೋಲ್ಕತ್ತಾ ಈ ಪಂದ್ಯದಲ್ಲಿ ಸೋತರು ಬೌಲರ್ಗಳು ನೀಡಿದ ಪ್ರದರ್ಶನ ಮತ್ತು ಶೆಲ್ಡನ್ ಅವರು ವಿಕೆಟ್ ಹಿಂಭಾಗದಲ್ಲಿ ನೀಡಿದ ಚುರುಕಿನ ಆಟ ಎಲ್ಲರ ಮನಗೆದ್ದಿತು. ಅದರಲ್ಲೂ ಶೆರ್ಫನ್ ರುಥರ್ಫಾರ್ಡ್ ಅವರ ಕ್ಯಾಚ್ ಹಿಡಿದಿದ್ದು ರೋಚಕವಾಗಿತ್ತು.
ಹೌದು, ಕೆಕೆಆರ್ ತಂಡದ ಗೆಲುವಿಗೆ ಶೆರ್ಫನ್ ರುಥರ್ಫಾರ್ಡ್ ಮಾರಕವಾಗಿ ಪರಿಣಮಿಸಿದ್ದರು. ಸಿಂಗಲ್, ಡಬಲ್ ಮೂಲಕ ಆರ್‌ಸಿಬಿ ಗೆಲುವಿಗೆ ಹರಸಾಹಸ ಪಡುತ್ತಿದ್ದರು. ಇವರ ವಿಕೆಟ್ ಕೆಕೆಆರ್ ತಂಡಕ್ಕೆ ಬಹುಮುಖ್ಯವಾಗಿತ್ತು. ಸಿಕ್ಕ ಸಣ್ಣ ಅವಕಾಶವನ್ನೂ ಕೋಲ್ಕತ್ತಾ ಪ್ಲೇಯರ್ ಬಳಸಿಕೊಳ್ಳಲು ತಯಾರಾಗಿದ್ದರು. ಅದರಂತೆ 18ನೇ ಓವರ್ನ ಟಿಮ್ ಸೌಥೀ ಅವರ ಬೌಲಿಂಗ್ನಲ್ಲಿ ರುಥರ್ಫಾರ್ಡ್ ಅವರು ಸಿಕ್ಸ್ ಸಿಡಿಸಲು ವಿಫಲವಾಗಿ ಚೆಂಡು ಇನ್ಸೈಡ್ ಇಡ್ಜ್ ಆಯಿತು. ಇದನ್ನು ತಕ್ಷಣವೇ ಅರಿತ ಜಾಕ್ಸನ್ ತನ್ನ ವಿರುದ್ಧ ದಿಕ್ಕಿನಲ್ಲಿ ಬಂದ ಚೆಂಡನ್ನು ಡೈವ್ ಬಿದ್ದು ಅಮೋಘವಾಗಿ ಕ್ಯಾಚ್ ಹಿಡಿದರು. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
@ShelJackson27 what a catch ? @msdhoni @KKRiders #whatacatch pic.twitter.com/QLbSg33ZwS
— sid (@siddheshnate) March 30, 2022
ಕಳೆದ ಪಂದ್ಯದಲ್ಲೂ ಮಿಂಚಿದ್ದ ಜಾಕ್ಸನ್:
ಹೌದು, ಕಳೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲೂ ಶೆಲ್ಡನ್ ಜಾಕ್ಸನ್ ಮಿಂಚಿನ ಸ್ಟಂಪಿಂಗ್ ಮೂಲಕ ಗಮನ ಸೆಳೆದರು. ಆ ಪಂದ್ಯದ 8ನೇ ಓವರ್ ಬೌಲಿಂಗ್ ಮಾಡಲು ವರುಣ್ ಚಕ್ರವರ್ತಿ ಬಂದರು. ಆ ಹೊತ್ತಿಗಾಗಲೇ ರಾಬಿನ್ ಉತ್ತಪ್ಪ ಅಪಾಯಕಾರಿಯಾಗಿ ಗೋಚರಿಸಿದ್ದರು. ಇವರ ವಿಕೆಟ್ ಕೀಳುವುದು ಕೆಕೆಆರ್ಗೆ ಮಖ್ಯವಾಗಿತ್ತು. ವರುಣ್ ತಮ್ಮ ಐದನೇ ಎಸೆತವನ್ನು ಲೆಗ್-ಸ್ಟಂಪ್‌ನ ಹೊರಗೆ ಹಾಕಿದರು. ಕ್ರೀಸ್ ಬಿಟ್ಟು ಮುಂದೆ ಬಂದಿದ್ದ ಉತ್ತಪ್ಪ ಬ್ಯಾಟ್ಗೆ ಚೆಂಡು ತಾಗಲೇ ಇಲ್ಲ. ಇದನ್ನು ಅರಿತ ಕೀಪರ್ ಶೆಲ್ಡನ್ ಜಾಕ್ಸನ್ ಲೆಗ್-ಸ್ಟಂಪ್‌ನ ಹೊರಗೆ ಚೆಂಡು ಇದ್ದರೂ ರಾಬಿನ್ ಉತ್ತಪ್ಪ ಅವರ ಅದ್ಭುತ ಸ್ಟಂಪಿಂಗ್ ಮಾಡಿ ಅಮೋಘ ಪ್ರದರ್ಶನ ನೀಡಿದರು. ಸೌರಾಷ್ಟ್ರದ 35 ವರ್ಷದ ಆಟಗಾರ ಸ್ಟಂಪ್ ಹಿಂದೆ ಮಿಂಚಿನ ವೇಗದ ಪ್ರದರ್ಶನದಿಂದ ಎಲ್ಲರನ್ನೂ ಆಕರ್ಷಿಸಿದರು.
ಕೊನೇ ಹಂತದವರೆಗೂ ನಡೆದ ಜಿದ್ದಾಜಿದ್ದಿಯ ಕಾದಾಟದಲ್ಲಿ ಆರ್‌ಸಿಬಿ ತಂಡ ಕೋಲ್ಕತ್ತಾ ನೈಟ್‌ರೈಡರ್ಸ್ (RCB vs KKR) ಟೀಮ್ ಅನ್ನು 3 ವಿಕೆಟ್‌ಗಳಿಂದ ಮಣಿಸಿತು. ವನಿಂದು ಹಸರಂಗ (20ಕ್ಕೆ 4), ಆಕಾಶ್ ದೀಪ್ (45ಕ್ಕೆ 3) ಮತ್ತು ಹರ್ಷಲ್ ಪಟೇಲ್ (11ಕ್ಕೆ 2) ಮಾರಕ ದಾಳಿಗೆ ನಲುಗಿದ ಕೆಕೆಆರ್ 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಆರ್‌ಸಿಬಿ ಕಡೇ ಓವರ್‌ವರೆಗೂ ಹೋರಾಡಿ ದಿನೇಶ್ ಕಾರ್ತಿಕ್ ಸಿಕ್ಸ್ ಸಿಡಿಸಿದ ಪರಿಣಾಮ ಅಂತಿಮವಾಗಿ ಗೆಲುವು ಸಾಧಿಸಿತು.
Glenn Maxwell: ಇಂದು ಆರ್ಸಿಬಿಗೆ ಬರ್ತಿದ್ದಾನೆ ಆ ಆಟಗಾರ: ಎದುರಾಳಿಗರಲ್ಲಿ ಶುರುವಾಗಿದೆ ಟೆನ್ಶನ್.. ಟೆನ್ಶನ್..
Faf du Plessis: ಮೊದಲ ಗೆಲುವು: ಪಂದ್ಯ ಮುಗಿದ ಬಳಿಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಕೇಳಿ
