Glenn Maxwell: ಇಂದು ಆರ್​ಸಿಬಿಗೆ ಬರ್ತಿದ್ದಾನೆ ಆ ಆಟಗಾರ: ಎದುರಾಳಿಗರಲ್ಲಿ ಶುರುವಾಗಿದೆ ಟೆನ್ಶನ್.. ಟೆನ್ಶನ್..

RCB vs KKR: ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಕ್ಕೆ ಸ್ಫೋಟಕ ಬ್ಯಾಟ್ಸ್​ಮನ್ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಆಗಮನವಾಗುತ್ತಿದೆ. ಈ ಬಗ್ಗೆ ಗ್ಲೆನ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಹಂಚಿಕೊಂಡಿದ್ದಾರೆ.

Glenn Maxwell: ಇಂದು ಆರ್​ಸಿಬಿಗೆ ಬರ್ತಿದ್ದಾನೆ ಆ ಆಟಗಾರ: ಎದುರಾಳಿಗರಲ್ಲಿ ಶುರುವಾಗಿದೆ ಟೆನ್ಶನ್.. ಟೆನ್ಶನ್..
Glenn Maxwell RCB IPl 2022
TV9kannada Web Team

| Edited By: Vinay Bhat

Mar 31, 2022 | 11:14 AM

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಟೂರ್ನಿಯಲ್ಲಿ ಹೊಸ ನಾಯಕ, ನೂತನ ತಂಡದೊಂದಿಗೆ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್​​ ಬೆಂಗಳೂರು (Royal Challengers Bangalore) ತಂಡಕ್ಕೆ ಅಂದುಕೊಂಡಷ್ಟು ಮಟ್ಟಿಗೆ ಯಶಸ್ಸು ಸಿಗಲಿಲ್ಲ. ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಿದರೂ ಬೌಲರ್​ಗಳು ಸಂಪೂರ್ಣ ವಿಫಲವಾದ ಪರಿಣಾಮ ಸೋಲು ಕಂಡಿತು. ಬುಧವಾರ ನಡೆದ ದ್ವಿತೀಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅಂತಿಮ ಹಂತದಲ್ಲಿ ಸೋಲಿನ ದವಡೆಯಿಂದ ಪಾರಾಯಿತು. ಲೋ ಸ್ಕೋರ್ ಗೇಮ್​ನಲ್ಲಿ ಈ ಬಾರಿ ಡುಪ್ಲೆಸಿಸ್ ಪಡೆಯ ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿದರೆ, ಬ್ಯಾಟರ್​ಗಳು ಕೈಕೊಟ್ಟರು. ಕೊನೇ ಹಂತದಲ್ಲಿ ದಿನೇಶ್ ಕಾರ್ತಿಕ್ ಸಿಕ್ಸ್ ಸಿಡಿಸಿ ಜಯ ತಂದಿಟ್ಟರು. ತಂಡದ ಸ್ಥಿತಿ ಹೀಗಿರುವಾಗ ಆರ್​ಸಿಬಿಗೆ ಸ್ಟಾರ್ ಆಟಗಾರ ಆಗಮಿಸುತ್ತಿದ್ದಾನೆ. ಹೌದು, ಬೆಂಗಳೂರು ತಂಡಕ್ಕೆ ಸ್ಫೋಟಕ ಬ್ಯಾಟ್ಸ್​ಮನ್ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಆಗಮನವಾಗುತ್ತಿದೆ. ಈ ಬಗ್ಗೆ ಗ್ಲೆನ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಹಂಚಿಕೊಂಡಿದ್ದಾರೆ.

ಗ್ಲೆನ್ ಮ್ಯಾಕ್ಸ್​ವೆಲ್ ಮಾರ್ಚ್ 18 ರಂದು ಭಾರತೀಯ ಮೂಲದ ವಿನಿ ಅವರೊಂದಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದರು. ಬಳಿಕ ಮಂಗಳವಾರದಂದು (ಮಾರ್ಚ್ 29) ಚೆನ್ನೈನಲ್ಲಿ ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲೂ ಮದುವೆಯಾಗಿದ್ದಾರೆ. ಮದುವೆ ಕಾರ್ಯ ನಿಮಿತ್ತ ಐಪಿಎಲ್ 2022ರ ಆರಂಭದ ಕೆಲ ಪಂದ್ಯಗಳಿಗೆ ಅಲಭ್ಯರಾಗಿದ್ದ ಮ್ಯಾಕ್ಸ್​​ವೆಲ್ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಳ್ಳಲು ಸಜ್ಜಾಗಿದ್ದಾರೆ. ಇಂದು ಮುಂಬೈ ತಲುಪಲಿರುವ ಮ್ಯಾಕ್ಸ್​ವೆಲ್ ಮೂರು ದಿನಗಳ ಕಡ್ಡಾಯ ಕ್ವಾರಂಟೈನ್ ಅನುಭವಿಸಿ ಬಳಿಕ ತಂಡ ಸೇರಿಕೊಳ್ಳಲಿದ್ದಾರೆ. ಇವರು ಮುಂದಿನ ಪಂದ್ಯಕ್ಕೆ ಲಭ್ಯರಿದ್ದಾರಾ ಎಂಬ ಬಗ್ಗೆ ಮಾಹಿತಿಯಿಲ್ಲ.

6ನೇ ಸ್ಥಾನದಲ್ಲಿದೆ ಆರ್​ಸಿಬಿ:

ಆಡಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಸೋಲು ಒಂದರಲ್ಲಿ ಗೆಲುವು ಸಾಧಿಸಿ ಆರ್​ಸಿಬಿ ತಂಡ ಪಾಯಿಂಟ್ ಪಟ್ಟಿಯಲ್ಲಿ ಒಟ್ಟು ಎರಡು ಅಂಕದೊಂದಿಗೆ ಆರನೇ ಸ್ಥಾನದಲ್ಲಿದೆ. ಜೊತೆಗೆ -0.048 ರನ್​ರೇಟ್ ಹೊಂದಿದೆ. ಮೊದಲ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವಿದ್ದು ಆಡಿದ ಒಂದು ಪಂದ್ಯದಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿ +3.050 ರನ್​​ರೇಟ್ ಹೊಂದಿದೆ. ಎರಡನೇ ಸ್ಥಾನದಲ್ಲಿ ಡೆಲ್ಲಿ, ಮೂರನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ನಾಲ್ಕನೇ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್​ ತಂಡವಿದೆ.

ಆರ್​ಸಿಬಿ ಮುಂದಿನ ಪಂದ್ಯ:

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತನ್ನ ಮುಂದಿನ ಪಂದ್ಯವನ್ನು ಎಪ್ರಿಲ್ 5 ರಂದು ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಪ್ರತಿಷ್ಠಿತ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಇದಾದ ಬಳಿಕ ಎಪ್ರಿಲ್ 9 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಾಟ ನಡೆಸಲಿದೆ. ಎಪ್ರಿಲ್ 12 ರಂದು ಬದ್ಧವೈರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಾದಾಟ ನಡೆಸಲಿದೆ.

ಕೆಕೆಆರ್ ವಿರುದ್ಧ ರೋಚಕ ಜಯ:

ಬುಧವಾರ ನಡೆದ ಪಂದ್ಯದಲ್ಲಿ ಕೊನೇ ಹಂತದವರೆಗೂ ಆರ್​ಸಿಬಿ ಹಾಗೂ ಕೆಕೆಆರ್ ನಡುವೆ ಜಿದ್ದಾಜಿದ್ದಿಯ ಕಾದಾಟ ನಡೆಯಿತು. ಅಂತಿಮವಾಗಿ ಆರ್​ಸಿಬಿ ತಂಡ ಕೋಲ್ಕತ್ತಾ ನೈಟ್‌ರೈಡರ್ಸ್‌ ಟೀಮ್ ಅನ್ನು 3 ವಿಕೆಟ್‌ಗಳಿಂದ ಮಣಿಸಿತು. ವನಿಂದು ಹಸರಂಗ (20ಕ್ಕೆ 4), ಆಕಾಶ್ ದೀಪ್ (45ಕ್ಕೆ 3) ಮತ್ತು ಹರ್ಷಲ್ ಪಟೇಲ್ (11ಕ್ಕೆ 2) ಮಾರಕ ದಾಳಿಗೆ ನಲುಗಿದ ಕೆಕೆಆರ್ 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಆರ್‌ಸಿಬಿ ಕಡೇ ಓವರ್‌ವರೆಗೂ ಹೋರಾಡಿ 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 132 ರನ್‌ಗಳಿಸಿ ಜಯದ ನಗೆ ಬೀರಿತು.

Faf du Plessis: ಮೊದಲ ಗೆಲುವು: ಪಂದ್ಯ ಮುಗಿದ ಬಳಿಕ ಫಾಫ್ ಡುಪ್ಲೆಸಿಸ್ ಏನು ಹೇಳಿದ್ರು ಕೇಳಿ

LSG vs CSK, IPL 2022: ಸೋತವರ ಕಾಳಗ: ಲಖನೌ-ಚೆನ್ನೈ ಪೈಕಿ ಗೆಲುವಿನ ಖಾತೆ ತೆರೆಯುವವರು ಯಾರು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada