AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs KKR: ಆರ್​ಸಿಬಿ vs ಕೆಕೆಆರ್ ಪಂದ್ಯದಲ್ಲಿ ಸಿಎಸ್​ಕೆ ಫ್ಯಾನ್ಸ್: ಮೈದಾನದಲ್ಲಿ ಮಾಡಿದ್ದೇನು ನೋಡಿ

CSK fans in RCB vs KKR Match: ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ತಂಡದ ಬಿದ್ಧವೈರಿ ಎಂದರೆ ಅದು ಸಿಎಸ್​ಕೆ ಎಂದೇ ಹೇಳಲಾಗುತ್ತದೆ. ಈ ತಂಡದ ಅಭಿಮಾನಿಗಳು ಬೆಂಗಳೂರು- ಕೆಕೆಆರ್ ನಡುವಣ ಪಂದ್ಯಕ್ಕೆ ಹಾಜರಾಗಿದ್ದರು. ಅದು ಫಾಫ್ ಡುಪ್ಲೆಸಿಸ್​ಗಾಗಿ.

RCB vs KKR: ಆರ್​ಸಿಬಿ vs ಕೆಕೆಆರ್ ಪಂದ್ಯದಲ್ಲಿ ಸಿಎಸ್​ಕೆ ಫ್ಯಾನ್ಸ್: ಮೈದಾನದಲ್ಲಿ ಮಾಡಿದ್ದೇನು ನೋಡಿ
CSK Fans RCB vs KKR IPL 2022
TV9 Web
| Updated By: Vinay Bhat|

Updated on: Mar 31, 2022 | 12:59 PM

Share

ಇಂಡಿಯನ್ ಪ್ರೀಮಿಯರ್ ಲೀಗ್​ನ 15ನೇ ಆವೃತ್ತಿಯಲ್ಲಿ ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR) ತಂಡಗಳ ನಡುವಣ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಕಡಿಮೆ ಮೊತ್ತದ ಕಾದಾಟದಲ್ಲಿ ಪಂದ್ಯ ಕೊನೆಯ ಓವರ್ ವರೆಗೂ ತಲುಪಿತು. ಅಂತಿಮ 6 ಎಸೆತಗಳಲ್ಲಿ ಗೆಲ್ಲಲು 7 ರನ್ ಬೇಕಿದ್ದಾಗ ದಿನೇಶ್ ಕಾರ್ತಿಕ್ ತಮ್ಮದೆ ಶೈಲಿಯಲ್ಲಿ ಚೆಂಡನ್ನು ಸಿಕ್ಸರ್​​ಗೆ ಅಟ್ಟಿ ಪಂದ್ಯವನ್ನು ಫಿನಿಶ್ ಮಾಡಿದರು. ಈ ಮೂಲಕ ಆರ್​ಸಿಬಿ ಐಪಿಎಲ್ 2022 ರಲ್ಲಿ (IPL 2022) ಗೆಲುವಿನ ಖಾತೆ ತೆರೆಯಿತು. ಆರ್​ಸಿಬಿಯ ನೂತನ ನಾಯಕನಾಗಿರುವ ಫಾಫ್ ಡುಪ್ಲೆಸಿಸ್​ಗೆ ಕೂಡ ಈ ಗೆಲುವು ಅನಿವಾರ್ಯವಾಗಿತ್ತು. ಈ ರೋಚಕ ಕಾದಾಟವನ್ನು ಕಣ್ತುಂಬಿಕೊಳ್ಳಲು ಮೈದಾನದಲ್ಲಿ ಪ್ರೇಕ್ಷಕರ ದಂಡೇ ತುಂಬಿತ್ತು. ಆದರೆ, ಈ ಪಂದ್ಯಕ್ಕೆ ಆರ್​​ಸಿಬಿ ಮತ್ತು ಕೆಕೆಆರ್ ತಂಡದ ಅಭಿಮಾನಿಗಳು ಮಾತ್ರವಲ್ಲದೆ ಚೆನ್ನೈ ಸೂಪರ್ ಕಿಂಗ್ಸ್​ (CSK) ತಂಡದ ಫ್ಯಾನ್ಸ್ ಕೂಡ ಹಾಜರಿದ್ದರು.

ಹೌದು, ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ತಂಡದ ಬಿದ್ಧವೈರಿ ಎಂದರೆ ಅದು ಸಿಎಸ್​ಕೆ ಎಂದೇ ಹೇಳಲಾಗುತ್ತದೆ. ಈ ತಂಡದ ಅಭಿಮಾನಿಗಳು ಬೆಂಗಳೂರು- ಕೋಲ್ಕತ್ತಾ ನಡುವಣ ಪಂದ್ಯಕ್ಕೆ ಹಾಜರಾಗಿದ್ದರು. ಇದಕ್ಕೆ ಕಾರಣ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್. ಡುಪ್ಲೆಸಿಸ್ ಚೆನ್ನೈ ತಂಡದ ಮಾಜಿ ಆಟಗಾರ. ಸಿಎಸ್​ಕೆ ಪರ ಬ್ಯಾಟ್ ಬೀಸಿ ಅದೆಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ನಿಂತು ಗೆಲ್ಲಿಸಿಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಚೆನ್ನೈ ಅಭಿಮಾನಿಗಳಿಗೆ ಫಾಫ್ ಎಂದರೆ ಈಗಲೂ ಪ್ರೀತಿ.

ಸಿಎಸ್​ಕೆ ತಂಡದ ಒಂದಿಷ್ಟು ಅಭಿಮಾನಿಗಳು ಆರ್​ಸಿಬಿ- ಕೆಕೆಆರ್ ನಡುವಣ ಪಂದ್ಯಕ್ಕಾಗಿ ಡಾ. ಡಿವೈ ಪಾಟೀಲ್ ಸ್ಟೇಡಿಯಂಗೆ ಆಗಮಿಸಿದ್ದರು. ಇವರ ಕೈಯಲ್ಲಿ ದೊಡ್ಡದಾದ ಪೋಸ್ಟರ್ ಕೂಡ ಇತ್ತು. ಇದರಲ್ಲಿ ಮನಕಲಕುವ ಸಂದೇಶ ಬರೆದಿದ್ದರು. ಪಂದ್ಯದ ನಡುವೆ ಇದು ಕಂಡುಬಂತು. ಈ ಪೋಸ್ಟರ್​ನಲ್ಲಿ, “ನಾವು ಸಿಎಸ್​ಕೆ ತಂಡದ ಅಭಿಮಾನಿಗಳು ಆದರೆ ಇಲ್ಲಿ ನಾವು ಪ್ರೀತಿಯಿಂದ ಫಾಫ್ ಡುಪ್ಲೆಸಿಸ್​ಗಾಗಿ ಬಂದಿದ್ದೇವೆ,” ಎಂದು ಬರೆದುಕೊಂಡಿದ್ದರು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಪಂದ್ಯ ಮುಗಿದ ಬಳಿಕ ಮಾತನಾಡಿದ ಫಾಫ್ ಡುಪ್ಲೆಸಿಸ್, “ಈ ಪಂದ್ಯದಲ್ಲಿ ಗೆಲುವು ಸಾಧಿಸಿರುವುದು ನನಗೆ ತುಂಬಾ ಸಂತಸವಾಗಿದೆ. ಇದು ಕಡಿಮೆ ಮೊತ್ತದ ಗುರಿಯಾಗಿತ್ತು. ಇದರ ಹೊರತಾಗಿಯೂ ನೀವು ಕೊನೆಯ ಹಂತದವರೆಗೂ ಪಂದ್ಯವನ್ನು ತೆಗೆದುಕೊಂಡು ಹೋಗಬಾರದು. ನಿಜ ಹೇಳಬೇಕೆಂದರೆ ನಮಗೆ ಬ್ಯಾಟಿಂಗ್ ಮಾಡಲು ಕಷ್ಟವಾಯಿತು. ಇದಕ್ಕೆ ಕಾರಣ ಎದುರಾಳಿ ತಂಡದ ಸೀಮಿರ್‌ಗಳು ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದು. ಈ ಪಂದ್ಯದಲ್ಲಿ ರಾತ್ರಿ ಸೀಮ್‌ ಹಾಗೂ ಸ್ವಲ್ಪ ಹೆಚ್ಚಿನ ಬೌನ್ಸ್‌ ಇತ್ತು, ಇದರ ಜೊತೆಗೆ ಹೆಚ್ಚಿನ ಸ್ವಿಂಗ್‌ ಕೂಡ ಆಗುತ್ತಿತ್ತು. ಕಳೆದ ಪಂದ್ಯದಲ್ಲಿ ನಮ್ಮದು 200 ರನ್ ಆಗಿತ್ತು. ಇವತ್ತು 130 ರನ್. ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಇದೆಲ್ಲ ಒಂದು ಉತ್ತಮ ಅನುಭವ,” ಎಂದು ಹೇಳಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಕೆಕೆಆರ್‌ ಎದುರು 129 ರನ್‌ಗಳ ಸಾಧಾರಣ ಗುರಿ ಪಡೆದರೂ ರನ್‌ ಗಳಿಸಲು ಒದ್ದಾಡಿ ಕೊನೇ ಓವರ್‌ನಲ್ಲಿ ಆರ್​ಸಿಬಿ ಗೆಲುವಿನ ದಡ ಮುಟ್ಟಿತು. 17ಕ್ಕೆ 3 ವಿಕೆಟ್‌ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ರಾಯಲ್‌ ಚಾಲೆಂಜರ್ಸ್‌ಗೆ ಇನಿಂಗ್ಸ್‌ ಮಧ್ಯದಲ್ಲಿ ಡೇವಿಡ್‌ ವಿಲ್ಲಿ (17), ಶೆರ್ಫೇನ್‌ ರುದರ್‌ಫೋರ್ಡ್‌ (28) ಮತ್ತು ಶೆಹಬಾಝ್‌ ಅಹ್ಮದ್‌ (27) ಅದ್ಭುತ ಹೋರಾಟ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೆಕೆಆರ್‌ ಕೂಡ ಪವರ್‌ ಪ್ಲೇ ಓವರ್‌ಗಳಲ್ಲೇ ಪ್ರಮುಖ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಇನಿಂಗ್ಸ್‌ ಮಧ್ಯದಲ್ಲಿ ಆರ್‌ಸಿಬಿ ತಂಡದ ಸ್ಟಾರ್‌ ಸ್ಪಿನ್ನರ್‌ ವನಿಂದು ಹಸರಂಗ ಮಿಂಚಿ ಕೆಕೆಆರ್​ಗೆ ಮಾರಕವಾದರು. ಅಂತಿಮವಾಗಿ ಕೋಲ್ಕತ್ತಾ 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ಆಲ್‌ಔಟ್‌ ಆಯಿತು.

RCB vs KKR: ಎರಡನೇ ಪಂದ್ಯದಲ್ಲೂ ಕ್ರಿಕೆಟ್ ಪ್ರಿಯರ ಬೆರಗಾಗಿಸಿದ ಶೆಲ್ಡನ್ ಜಾಕ್ಸನ್: ಅಬ್ಬಾ ಎಂಥಾ ಕ್ಯಾಚ್

Glenn Maxwell: ಇಂದು ಆರ್​ಸಿಬಿಗೆ ಬರ್ತಿದ್ದಾನೆ ಆ ಆಟಗಾರ: ಎದುರಾಳಿಗರಲ್ಲಿ ಶುರುವಾಗಿದೆ ಟೆನ್ಶನ್.. ಟೆನ್ಶನ್..

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!