IPL 2022 Points Table: ಆರ್ಸಿಬಿ ಗೆಲುವಿನ ಬಳಿಕ ಪಾಯಿಂಟ್ ಪಟ್ಟಿಯಲ್ಲಾಗಿರುವ ಬದಲಾವಣೆಗಳಿವು..!
IPL 2022 Points Table: ಇಂದು ಬುಧವಾರ ಲಕ್ನೋ vs CSK ಪಂದ್ಯ. ಆ ಪಂದ್ಯಕ್ಕೂ ಮುನ್ನ ಈ 6 ಪಂದ್ಯಗಳ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಯಾವುದು ಎಂಬುದನ್ನು ತಿಳಿದುಕೊಳ್ಳೋಣ.

ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Lucknow Super Giants and Chennai Super Kings) ಇಂದು ಗುರುವಾರ ಬ್ರಬೋರ್ನ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಬುಧವಾರ ನಡೆದ ಐಪಿಎಲ್‌ನ ಆರನೇ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತು ಶ್ರೇಯಸ್ ಅಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಮುಖಾಮುಖಿಯಾದವು . ಈ ಪಂದ್ಯವನ್ನು ಆರ್ಸಿಬಿ 3 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಈ ಬಾರಿ ಐಪಿಎಲ್‌ನಲ್ಲಿ ಇದುವರೆಗೆ ಒಟ್ಟು 6 ಪಂದ್ಯಗಳು ನಡೆದಿವೆ. ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಪಾಯಿಂಟ್ಸ್ ಟೇಬಲ್ ಕಡೆಗೆ ವಿಶೇಷ ಗಮನ ನೀಡುತ್ತಿದ್ದಾರೆ. ಲೀಗ್ ಪಟ್ಟಿಯಲ್ಲಿ ಮೊದಲ ನಾಲ್ಕು ತಂಡಗಳು ಟೂರ್ನಿಯ ಪ್ಲೇ-ಆಫ್‌ನಲ್ಲಿ ಆಡುವ ಅವಕಾಶವನ್ನು ಪಡೆಯುತ್ತವೆ. ಅದರ ನಂತರ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಇರುತ್ತದೆ. ವಿಜೇತ ತಂಡವು ಪ್ರತಿ ಪಂದ್ಯದಲ್ಲಿ 2 ಅಂಕಗಳನ್ನು ಪಡೆಯುತ್ತದೆ. ಯಾವುದೇ ಫಲಿತಾಂಶವಿಲ್ಲದಿದ್ದರೆ, 1 ಪಾಯಿಂಟ್ ಎರಡೂ ತಂಡಗಳಿಗೂ ಸಿಗಲಿದೆ. ಒಂದು ವೇಳೆ ಪಂದ್ಯ ಟೈ ಆಗಿದ್ದರೆ ಅದು ‘ಸೂಪರ್ ಓವರ್’ ಮುಖಾಂತರ ಇತ್ಯಾರ್ಥವಾಗುತ್ತದೆ.
ಇಂದು ಬುಧವಾರ ಲಕ್ನೋ vs CSK ಪಂದ್ಯ. ಆ ಪಂದ್ಯಕ್ಕೂ ಮುನ್ನ ಈ 6 ಪಂದ್ಯಗಳ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ಯಾವುದು ಎಂಬುದನ್ನು ತಿಳಿದುಕೊಳ್ಳೋಣ.
1. ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ಐಪಿಎಲ್‌ನಲ್ಲಿ ಇದುವರೆಗೆ 5 ಪಂದ್ಯಗಳ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ರಾಜಸ್ಥಾನದ ನಿವ್ವಳ ರನ್ ರೇಟ್ +3.050.
2. ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಲೀಗ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ದೆಹಲಿಯ ನಿವ್ವಳ ರನ್ ರೇಟ್ +0.914 ಆಗಿದೆ.
3. ಮೂರನೇ ಸ್ಥಾನದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಇದೆ. ಪಂಜಾಬ್ ನಿವ್ವಳ ರನ್ ರೇಟ್ +0.698 ಆಗಿದೆ.
4. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಗುಜರಾತ್ ನಿವ್ವಳ ರನ್ ರೇಟ್ +0.28.
5. ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಲೀಗ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಕಿಂಗ್ ಖಾನ್ ಒಡೆತನದ KKR ನೆಟ್ ರನ್ ರೇಟ್ +0.093 ಆಗಿದೆ.
6. ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವುದು ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು. RCB ನಿವ್ವಳ ರನ್ ರೇಟ್ -0.046.
7. ಲೋಕೇಶ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಲೀಗ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಲಕ್ನೋದ ನಿವ್ವಳ ರನ್ ರೇಟ್ -0.28.
8. ಎಂಟನೇ ಸ್ಥಾನದಲ್ಲಿ ರವೀಂದ್ರ ಜಡೇಜಾ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಇದೆ. CSK ನಿವ್ವಳ ರನ್ ರೇಟ್ -0.639.
9. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಮುಂಬೈ ನಿವ್ವಳ ರನ್ ರೇಟ್ -0.914.
10. ಕೆನ್ ವಿಲಿಯಮ್ಸನ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ಸದ್ಯಕ್ಕೆ ಲೀಗ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಹೈದರಾಬಾದ್ ನಿವ್ವಳ ರನ್ ರೇಟ್ – 3.050.
ಇದನ್ನೂ ಓದಿ:IPL 2022: ಫಿಟ್ನೆಸ್ ಸಮಸ್ಯೆಯಿಂದ ರಾಷ್ಟ್ರೀಯ ತಂಡಗಳಿಂದ ಗೇಟ್ಪಾಸ್ ಪಡೆದವರು ಐಪಿಎಲ್‌ನಲ್ಲಿ ಸೂಪರ್ಸ್ಟಾರ್..!
