AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೆಂಕಟೇಶ್ವರ ಸ್ವಾಮಿಯ ಆಶೀರ್ವಾದದಿಂದ ಭಾರತ ವಿಶ್ವಕಪ್ ಗೆಲ್ಲಲಿದೆ: ತಿರುಮಲ ಭೇಟಿ ಬಳಿಕ ಗಂಭೀರ್ ಪ್ರತಿಕ್ರಿಯೆ

Gautam Gambhir Tirumala Visit: ಈ ಬಾರಿಯ ಏಕದಿನ ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾಕ್ಕೆ ಉತ್ತಮ ಅವಕಾಶಗಳಿವೆ. 140 ಕೋಟಿ ಭಾರತೀಯರ ಪ್ರಾರ್ಥನೆ ಹಾಗೂ ತಿರುಮಲ ದೇವರ ಆಶೀರ್ವಾದದಿಂದ ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲಲಿದೆ ಎಂದು ಗೌತಮ್ ಗಂಭೀರ್ ಭರವಸೆ ವ್ಯಕ್ತಪಡಿಸಿದ್ದಾರೆ.

ವೆಂಕಟೇಶ್ವರ ಸ್ವಾಮಿಯ ಆಶೀರ್ವಾದದಿಂದ ಭಾರತ ವಿಶ್ವಕಪ್ ಗೆಲ್ಲಲಿದೆ: ತಿರುಮಲ ಭೇಟಿ ಬಳಿಕ ಗಂಭೀರ್ ಪ್ರತಿಕ್ರಿಯೆ
Gautam Gambhir visited Tirumala
Vinay Bhat
|

Updated on: Sep 28, 2023 | 1:10 PM

Share

ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ (Gautam Gambhir) ತಿರುಮಲ ಶ್ರೀಗಳ ದರ್ಶನ ಪಡೆದಿದ್ದಾರೆ. ವಿಐಪಿ ಬ್ರೇಕ್ ದರ್ಶನದ ವೇಳೆ ಗಂಭೀರ್ ಕುಟುಂಬ ಸದಸ್ಯರೊಂದಿಗೆ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡು ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧಿಕಾರಿಗಳು ಗಂಭೀರ್ ದಂಪತಿಗೆ ಆತ್ಮೀಯ ಸ್ವಾಗತ ಕೋರಿ, ದೇವಸ್ಥಾನದ ರಂಗನಾಯಕರ ಮಂಟಪದಲ್ಲಿ ವೈದಿಕರು ವೇದಾಶೀರ್ವಾದ ನೀಡಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
ಚಿನ್ನದ ಮೇಲೆ ಕಣ್ಣು: ಚೀನಾಕ್ಕೆ ತಲುಪಿದ ಭಾರತ ಕ್ರಿಕೆಟ್ ತಂಡದ ಆಟಗಾರರು
Image
ಬಾಬರ್​ಗೆ ಕೇಸರಿ ಶಾಲು ಹೊದಿಸಿ ಅದ್ಧೂರಿ ಸ್ವಾಗತ ನೀಡಿದ ಭಾರತ
Image
ಕೊಹ್ಲಿ ಜೊತೆ ಜಗಳವಾಡಿದ್ದ 24 ವರ್ಷದ ನವೀನ್ ಉಲ್ ಹಖ್ ದಿಢೀರ್ ನಿವೃತ್ತಿ
Image
ಪೋಸ್ಟ್ ಮ್ಯಾಚ್​ನಲ್ಲಿ ಟ್ರೋಫಿ ಪಡೆದುಕೊಳ್ಳಲು ನಿರಾಕರಿಸಿದ ರೋಹಿತ್ ಶರ್ಮಾ

ತಿರುಮಲ ಭೇಟಿಯ ವಿಡಿಯೋ ಇಲ್ಲಿದೆ ನೋಡಿ:

ದರ್ಶನ ಮುಗಿಸಿ ಹೊರಬಂದ ಗಂಭೀರ್ ಜೊತೆ ಸೆಲ್ಫಿ, ಫೋಟೋ ತೆಗೆದುಕೊಳ್ಳಲು ಹಲವು ಅಭಿಮಾನಿಗಳು ಪೈಪೋಟಿ ನಡೆಸಿದರು. ಈ ವೇಳೆ ಮಾತನಾಡಿದ ಗಂಭೀರ್, ”ಶ್ರೀವಾರಿಯ ದರ್ಶನ ಅದ್ಭುತವಾಗಿತ್ತು. ಈ ಬಾರಿಯ ಏಕದಿನ ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾಕ್ಕೆ ಉತ್ತಮ ಅವಕಾಶಗಳಿವೆ. 140 ಕೋಟಿ ಭಾರತೀಯರ ಪ್ರಾರ್ಥನೆ ಹಾಗೂ ತಿರುಮಲ ದೇವರ ಆಶೀರ್ವಾದದಿಂದ ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲಲಿದೆ,” ಎಂದು ಭರವಸೆ ವ್ಯಕ್ತಪಡಿಸಿದರು.

IND vs AUS 3rd ODI: ಮೂರನೇ ಏಕದಿನ ಪಂದ್ಯ ಮುಗಿದ ಬಳಿಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ

ಪ್ರತಿಷ್ಠಿತ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಭಾರತದಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಈ ಮೆಗಾ ಟೂರ್ನಮೆಂಟ್‌ಗಾಗಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಈಗಾಗಲೇ ಭಾರತವನ್ನು ತಲುಪಿವೆ.

ಶುಕ್ರವಾರ (ಸೆಪ್ಟೆಂಬರ್ 29) ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ಅಭ್ಯಾಸ ಪಂದ್ಯ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಡಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ