‘ನೀನು ಸ್ವಾರ್ಥಿ, ರೋಹಿತ್​ರನ್ನು ನೋಡಿ ಕಲಿ’; ಮಾಜಿ ನಾಯಕನ ಮೇಲೆ ಹರಿಹಾಯ್ದ ಹಾಲಿ ನಾಯಕ ಶಕೀಬ್

ODI World Cup 2023: ಭಾರತಕ್ಕೆ ಬರುವ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಹಾಲಿ ನಾಯಕ ಶಕೀಬ್ ಅಲ್ ಹಸನ್, ಆ ತಮೀಮ್ ಇಕ್ಬಾಲ್ ಸ್ವಾರ್ಥಿಯಾಗಿದ್ದು, ತಂಡದ ಬಗ್ಗೆ ಯೋಚಿಸುವುದಿಲ್ಲ. ತಂಡದ ಒಳಿತಿಗಾಗಿ ತಮೀಮ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡುವಂತೆ ಕೇಳಿದರೆ ಅದರಲ್ಲಿ ತಪ್ಪೇನಿದೆ ಎಂದು ಶಕೀಬ್ ಹೇಳಿದ್ದಾರೆ.

‘ನೀನು ಸ್ವಾರ್ಥಿ, ರೋಹಿತ್​ರನ್ನು ನೋಡಿ ಕಲಿ’; ಮಾಜಿ ನಾಯಕನ ಮೇಲೆ ಹರಿಹಾಯ್ದ ಹಾಲಿ ನಾಯಕ ಶಕೀಬ್
ಶಕೀಬ್, ತಮೀಮ್
Follow us
ಪೃಥ್ವಿಶಂಕರ
|

Updated on: Sep 28, 2023 | 3:35 PM

ಯಾವುದೇ ದೊಡ್ಡ ಟೂರ್ನಿ ಆರಂಭಕ್ಕೂ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ತಂಡದಲ್ಲಿ (Bangladesh Men’s Cricket Team) ವಿವಾದಗಳು ಏಳದೆ ಇರಲು ಸಾಧ್ಯವಿಲ್ಲ. ವಿಶ್ವಕಪ್ (World Cup 2023) ಆರಂಭಕ್ಕೂ ಮುನ್ನ ಬಾಂಗ್ಲಾ ತಂಡದಲ್ಲಿ ನಾಯಕ ಹಾಗೂ ಮಾಜಿ ನಾಯಕನ ರಂಪಾಟ ಇದೀಗ ಬೀದಿಗೆ ಬಂದು ನಿಂತಿದೆ. ವಾಸ್ತವವಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಕೆಲವು ದಿನಗಳ ಹಿಂದೆ ಏಕದಿನ ವಿಶ್ವಕಪ್​ಗೆ ತನ್ನ ತಂಡವನ್ನು ಪ್ರಕಟಿಸಿತ್ತು. ಆದರೆ ಆ ತಂಡದಲ್ಲಿ ಮಾಜಿ ನಾಯಕ ತಮೀಮ್ ಇಕ್ಬಾಲ್ (Tamim Iqbal) ಅವರಿಗೆ ಸ್ಥಾನ ನೀಡಿರಲಿಲ್ಲ. ಆ ನಂತರ ಬಾಂಗ್ಲಾದೇಶ ತಂಡದಲ್ಲಿ ಕೋಲಾಹಲ ಉಂಟಾಗಿದ್ದು, ಇದೀಗ ತಂಡದ ನಾಯಕ ಶಕೀಬ್ (Shakib Al Hasan), ಮಾಜಿ ನಾಯಕ ತಮೀಮ್ ಮೇಲೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ತಮೀಮ್ ಪ್ರಸ್ರಾವನೆಗೆ ಶಕೀಬ್ ಒಲ್ಲೆ

ವಾಸ್ತವವಾಗಿ ಬಾಂಗ್ಲಾದೇಶ ವಿಶ್ವಕಪ್ ತಂಡ ಆಯ್ಕೆಗೂ ಮುನ್ನ ಆಯ್ಕೆ ಮಂಡಳಿ ಅಧ್ಯಕ್ಷರ ಮನೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಾಜಿ ನಾಯಕ ತಮೀಮ್ ಕೇವಲ ಕೆಲವೇ ಪಂದ್ಯಗಳಲ್ಲಿ ಆಡುವ ಪ್ರಸ್ತಾವನೆ ಮುಂದಿಟ್ಟಿದ್ದರು. ಆದರೆ ಈ ಪ್ರಸ್ತಾವನೆ ನಾಯಕ ಶಕೀಬ್​ಗೆ ಇಷ್ಟವಾಗಲಿಲ್ಲ. ಹೀಗಾಗಿ ಪೂರ್ಣ ಫಿಟ್ ಇಲ್ಲದ ಆಟಗಾರನ ಬದಲು ಫಿಟ್ ಇರುವ ಆಟಗಾರನಿಗೆ ತಂಡದಲ್ಲಿ ಅವಕಾಶ ನೀಡಬೇಕೆಂದು ಶಕೀಬ್ ವಾದಿಸಿದ್ದರು. ಅಲ್ಲದೆ ತಮೀಮ್ ತಂಡದಲ್ಲಿ ಆಡಿದರೆ ನಾನು ತಂಡದ ನಾಯಕತ್ವ ತ್ಯಜಿಸುವುದರ ಜೊತೆಗೆ ವಿಶ್ವಕಪ್​ನಿಂದ ಹೊರನಡೆಯುವುದಾಗಿ ಹೇಳಿಕೊಂಡಿದ್ದರು ಎಂದು ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿದ್ದವು.

ಇದೀಗ ಭಾರತಕ್ಕೆ ಬರುವ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಹಾಲಿ ನಾಯಕ ಶಕೀಬ್ ಅಲ್ ಹಸನ್, ಆ ತಮೀಮ್ ಇಕ್ಬಾಲ್ ಸ್ವಾರ್ಥಿಯಾಗಿದ್ದು, ತಂಡದ ಬಗ್ಗೆ ಯೋಚಿಸುವುದಿಲ್ಲ. ತಂಡದ ಒಳಿತಿಗಾಗಿ ತಮೀಮ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡುವಂತೆ ಕೇಳಿದರೆ ಅದರಲ್ಲಿ ತಪ್ಪೇನಿದೆ ಎಂದು ಶಕೀಬ್ ಹೇಳಿದ್ದಾರೆ.

ನಾಯಕ- ಮಾಜಿ ನಾಯಕನ ನಡುವೆ ಕಿತ್ತಾಟ; ವಿಶ್ವಕಪ್​ಗೂ ಮುನ್ನ ಬಾಂಗ್ಲಾ ತಂಡದಲ್ಲಿ ಭಿನ್ನಮತ ಸ್ಫೋಟ

ರೋಹಿತ್ ಉದಾಹರಣೆ

ಮುಂದುವರೆದು ಮಾತನಾಡಿದ ಶಕೀಬ್, ಭಾರತದ ಹಾಲಿ ನಾಯಕ ರೋಹಿತ್ ಶರ್ಮಾ ಅವರ ಉದಾಹರಣೆಯನ್ನು ನೀಡಿ, ಅಂತಹ ದೊಡ್ಡ ಆಟಗಾರ 7 ನೇ ಸ್ಥಾನದಲ್ಲಿ ಬ್ಯಾಟಿಂಗ್ ಆರಂಭಿಸಿ, ಈಗ ಓಪನರ್ ಆಗಿ 10000 ರನ್ ಪೂರೈಸಿದ್ದಾರೆ. ತಂಡದ ಒಳಿತಿಗಾಗಿ ರೋಹಿತ್ ಶರ್ಮಾ 3 ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸಾಧ್ಯವಾದರೆ, ಅದರಲ್ಲಿ ಸಮಸ್ಯೆ ಏನು? ತಂಡಕ್ಕಾಗಿ ಆಟಗಾರ ಎಲ್ಲಿ ಬೇಕಾದರೂ ಬ್ಯಾಟಿಂಗ್ ಮಾಡಲು ಸಿದ್ಧರಿರಬೇಕು. ಏಕೆಂದರೆ ವ್ಯಕ್ತಿಗಿಂತ ತಂಡವು ಅತ್ಯಂತ ಮಹತ್ವದ್ದಾಗಿದೆ. ನೀವು ಶತಕ ಅಥವಾ ದ್ವಿಶತಕ ಸಿಡಿಸಿದ ಹೊರತಾಗಿಯೂ ತಂಡವ ಸೋತರೆ ನಿಮ್ಮ ವೈಯಕ್ತಿಕ ಸಾಧನೆಯೊಂದಿಗೆ ನೀವು ಏನು ಮಾಡುತ್ತೀರಿ? ಎಂದು ತಮೀಮ್​ರನ್ನು ಪ್ರಶ್ನಿಸಿದ್ದಾರೆ.

ತಮೀಮ್ ವಿರುದ್ಧ ಮುನಿದ ಶಕೀಬ್

ಇನ್ನು ತಮೀಮ್ ಬಗ್ಗೆ ಗಂಭೀರ ಆರೋಪ ಹೊರಿಸಿರುವ ಶಕೀಬ್, ತಮೀಮ್ ತಂಡದ ಬಗ್ಗೆ ಯೋಚಿಸುತ್ತಿಲ್ಲ. ಜನರಿಗೆ ಇದು ಅರ್ಥವಾಗುತ್ತಿಲ್ಲ. ಅಷ್ಟಕ್ಕೂ ತಮೀಮ್​ಗೆ ಈ ಪ್ರಪೋಸಲ್ ಕೊಟ್ಟಿದ್ದು ಯಾಕೆ? ಇದು ತಂಡದ ಒಳಿತಿಗಾಗಿತ್ತು. ಇದರಲ್ಲಿ ತಪ್ಪೇನು? ನೀವು ತಂಡಕ್ಕಾಗಿ ಆಡುತ್ತಿದ್ದರೆ ಈ ಪ್ರಸ್ತಾಪಗಳನ್ನು ಒಪ್ಪಿಕೊಳ್ಳುವಲ್ಲಿ ನಿಮಗೆ ಯಾವ ಸಮಸ್ಯೆ ಇದೆ? ಎಂದು ತಮೀಮ್​ರನ್ನು ಶಕೀಬ್​ ಪ್ರಶ್ನಿಸಿದ್ದಾರೆ.

ವಿವಾದದಲ್ಲಿ ತಮೀಮ್

ಕಳೆದ ಒಂದು ವರ್ಷದಲ್ಲಿ ತಮೀಮ್ ಇಕ್ಬಾಲ್ ಕ್ರಿಕೆಟ್​ಗಿಂತ ಹೆಚ್ಚಾಗಿ ಇತರ ವಿಚಾರಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದ ತಮೀಮ್, ಆ ನಂತರ ಪ್ರಧಾನಿ ಒಲೈಕೆಯಿಂದ ತಮ್ಮ ನಿರ್ಧಾರವನ್ನು ಹಿಂತೆಗೆದುಕೊಂಡಿದ್ದರು. ಬಳಿಕ ಇಂಜುರಿಯಿಂದ ಈ ಆಟಗಾರ ಏಷ್ಯಾಕಪ್​ನಲ್ಲೂ ಆಡಿರಲಿಲ್ಲ. ನ್ಯೂಜಿಲೆಂಡ್ ಸರಣಿಯಲ್ಲೂ ತಮೀಮ್ ಭಾಗವಹಿಸಿರಲಿಲ್ಲ. ಇದೀಗ ಪೂರ್ಣ ಫಿಟ್ ಇಲ್ಲದ ತಮೀಮ್ ಅವರನ್ನು ವಿಶ್ವಕಪ್ ತಂಡದಿಂದ ಕೈಬಿಡಲಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
Hanuman Chalisa: ಹನುಮಾನ್ ಚಾಲಿಸಾದ ವಿಶೇಷ ಹಾಗೂ ಮಹತ್ವ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ರವಿ ಮಕರ ರಾಶಿಯಲ್ಲಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: ದಿನ ಭವಿಷ್ಯ ಇಲ್ಲಿದೆ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು