IND vs ENG: ‘ಭಾರತವನ್ನು ನೋಡಿ ಕಲಿಯಿರಿ’; ಇಂಗ್ಲೆಂಡ್​ನ ಭಾಝ್ ಬಾಲ್ ಕ್ರಿಕೆಟ್​ಗೆ ಮಾಜಿ ನಾಯಕರಿಂದಲೇ ಅಪಸ್ವರ..!

IND vs ENG: ಇಂಗ್ಲೆಂಡ್ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿರುವ ಇಂಗ್ಲೆಂಡ್‌ನ ಮಾಜಿ ನಾಯಕರಾದ ನಾಸರ್ ಹುಸೇನ್ ಮತ್ತು ಮೈಕೆಲ್ ವಾನ್ ಭಾರತ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್​ನ ಭಾಝ್ ಬಾಲ್ ಕ್ರಿಕೆಟ್ ವಿಧಾನವನ್ನು ಟೀಕಿಸಿದ್ದಾರೆ.

IND vs ENG: ‘ಭಾರತವನ್ನು ನೋಡಿ ಕಲಿಯಿರಿ’; ಇಂಗ್ಲೆಂಡ್​ನ ಭಾಝ್ ಬಾಲ್ ಕ್ರಿಕೆಟ್​ಗೆ ಮಾಜಿ ನಾಯಕರಿಂದಲೇ ಅಪಸ್ವರ..!
ಬೆನ್ ಸ್ಟೋಕ್ಸ್-ಬ್ರೆಂಡನ್ ಮೆಕಲಮ್
Follow us
ಪೃಥ್ವಿಶಂಕರ
|

Updated on:Feb 19, 2024 | 10:03 PM

ಭಾಝ್ ಬಾಲ್ (Bazball) ಕ್ರಿಕೆಟ್ ಮೂಲಕ ಟೀಂ ಇಂಡಿಯಾವನ್ನು ಹಣಿಯುವ ಇರಾದೆಯೊಂದಿಗೆ ಭಾರತಕ್ಕೆ ಕಾಲಿಟ್ಟಿದ ಬೆನ್ ಸ್ಟೋಕ್ಸ್ ಪಡೆ, ತನ್ನ ತಂತ್ರದಲ್ಲಿ ವಿಫಲವಾಗಿ ರೋಹಿತ್ ಪಡೆಯ (India vs England) ಮುಂದೆ ಸೋಲಿನ ಸುಳಿಗೆ ಸಿಲುಕಿದೆ. ರಾಜ್​ಕೋಟ್​ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 434 ರನ್​ಗಳಿಂದ ಸೋತ ಇಂಗ್ಲೆಂಡ್ ತಂಡದ ತಂತ್ರದ ಬಗ್ಗೆ ಈಗ ಎಲ್ಲೆಡೆ ಚರ್ಚೆ ಶುರುವಾಗಿದೆ. ಈಗ ಅದೆಲ್ಲ ಸಾಲದೆಂಬಂತೆ ಇಂಗ್ಲೆಂಡ್‌ ತಂಡದ ಮಾಜಿ ಆಟಗಾರರು ತಂಡದ ನಾಯಕ ಹಾಗೂ ಮುಖ್ಯ ಕೋಚ್ ವಿರುದ್ಧ ಕಿಡಿಕಾರಿದ್ದಾರೆ. ತಂಡದ ಪ್ರದರ್ಶನದ ಬಗ್ಗೆ ಮಾತನಾಡಿರುವ ಇಂಗ್ಲೆಂಡ್‌ನ ಮಾಜಿ ನಾಯಕರಾದ ನಾಸರ್ ಹುಸೇನ್ ಮತ್ತು ಮೈಕೆಲ್ ವಾನ್ (Nasser Hussain, Michael Vaughan) ಭಾರತ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್​ನ ಭಾಝ್ ಬಾಲ್ ಕ್ರಿಕೆಟ್ ವಿಧಾನವನ್ನು ಟೀಕಿಸಿದ್ದಾರೆ. ಪ್ರವಾಸಿ ತಂಡವು ಯಾವಾಗಲೂ ಆಕ್ರಮಣಕಾರಿ ತಂತ್ರಕ್ಕಿಂತ ಹೆಚ್ಚಾಗಿ ಪಂದ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಆಡಬೇಕು ಎಂದು ಹೇಳಿದ್ದಾರೆ.

ಅತ್ಯಂತ ಕೆಟ್ಟ ಸೋಲು

ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಇಂಗ್ಲೆಂಡ್‌ನ ಮಾಜಿ ನಾಯಕರಾದ ಮೈಕೆಲ್ ವಾನ್, ‘ಇದು ಬೆನ್ ಸ್ಟೋಕ್ಸ್ ಮತ್ತು ಬ್ರೆಂಡನ್ ಮೆಕಲಮ್ ನಾಯಕತ್ವದಲ್ಲಿ ಅತ್ಯಂತ ಕೆಟ್ಟ ಸೋಲು. ಈ ಸೋಲು ಅವರ ಕಳಪೆ ತಂತ್ರವನ್ನು ಬಹಿರಂಗಪಡಿಸಿದೆ. ಯಾವಾಗಲೂ ಆಕ್ರಮಣಕಾರಿ ಶೈಲಿ ಕೆಲಸ ಮಾಡುವುದಿಲ್ಲ. ಬದಲಿಗೆ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಆಡಬೇಕು’ ಎಂದಿದ್ದಾರೆ.

ಪ್ರಬುದ್ಧ ಇನ್ನಿಂಗ್ಸ್‌ ಆಡಿದ್ದರು

ಇದೇ ಮಾತನ್ನು ಪುನರ್​ಚ್ಚರಿಸಿರುವ ಹುಸೇನ್, ‘ಭಾಝ್ ಬಾಲ್ ಕ್ರಿಕೆಟ್ ಚಿಂತನೆ ಒಳ್ಳೆಯದ್ದೆ. ಆದರೆ ಒತ್ತಡದ ಸಮಯದಲ್ಲಿ ಹೇಗೆ ಆಡುಬೇಕು ಎಂಬುದರ ಬಗ್ಗೆಯೂ ಗಮನ ಹರಿಸಬೇಕು. ಆಕ್ರಮಣಕಾರಿ ಶೈಲಿ ಎನ್ನುತ್ತಾ ಇಂಗ್ಲೆಂಡ್ ತಂಡ ಸತತ ವಿಫಲವಾಗುತ್ತಿದೆ. ಆದರೆ ಇದಕ್ಕೆ ವಿರುದ್ಧವಾಗಿ, ಭಾರತದ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಯುವ ಆಟಗಾರ ಯಶಸ್ವಿ ಜೈಸ್ವಾಲ್, ಇದುವರೆಗೆ ಸರಣಿಯಲ್ಲಿ ಎರಡು ದ್ವಿಶತಕಗಳನ್ನು ಸಿಡಿಸಿದ್ದಾರೆ. ಸರ್ಫರಾಜ್ ಖಾನ್ ಕೂಡ ಪ್ರಬುದ್ಧ ಇನ್ನಿಂಗ್ಸ್‌ ಆಡಿದ್ದರು. ಆದರೆ ಈ ಇಬ್ಬರು ಆಕ್ರಮಣಕಾರಿ ಬ್ಯಾಟಿಂಗ್ ನಡೆಸುವ ಮೊದಲು ಕ್ರೀಸ್‌ನಲ್ಲಿ ಸಾಕಷ್ಟು ಸಮಯ ಕಳೆದರು’ ಎಂದಿದ್ದಾರೆ.

Explained: ಆಂಗ್ಲರ ದಾರಿ ತಪ್ಪಿಸಿತಾ ಭಾಝ್ ಬಾಲ್ ಕ್ರಿಕೆಟ್? ಹಾಲಿ ಚಾಂಪಿಯನ್ನರು ಎಡವಿದ್ದೆಲ್ಲಿ?

ಇದೇ ಟೆಸ್ಟ್ ಬ್ಯಾಟಿಂಗ್

ಮುಂದುವರೆದು ಮಾತನಾಡಿರುವ ವಾನ್, ‘ಜೈಸ್ವಾಲ್ ಮತ್ತು ಶುಭ್​ಮನ್ ಗಿಲ್ ಮೂರನೇ ದಿನದಲ್ಲಿ ಹೇಗೆ ಪ್ರದರ್ಶನ ನೀಡಿದರು ಎಂಬುದನ್ನು ಇಂಗ್ಲೆಂಡ್ ಆಟಗಾರರು ನೋಡಬೇಕಾಗಿದೆ. ಅವರಿಗೆ ಆರಂಭದ 30 ಅಥವಾ 40 ಎಸೆತಗಳಲ್ಲಿ ಹೆಚ್ಚು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆ ನಂತರ ಅವರು ಬೌಂಡರಿಗಳನ್ನು ಹೊಡೆಯಲು ಪ್ರಾರಂಭಿಸಿದರು. ಇದೇ ಟೆಸ್ಟ್ ಬ್ಯಾಟಿಂಗ್. ಭಾರತ 228.5 ಓವರ್‌ಗಳಲ್ಲಿ 875 ರನ್ ಗಳಿಸಿತು. ಇಲ್ಲಿ ಭಾರತ ಬ್ಯಾಟಿಂಗ್ ನೋಡುವುದು ಬೇಸರ ತಂದಿದೆ ಎಂದು ಯಾರೂ ಹೇಳಲಾರರು.

ತಂಡದ ಆಟಗಾರರಿಗೆ ಎಚ್ಚರಿಕೆಯಾಗಿದೆ

ಹೈದರಾಬಾದ್‌ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯವನ್ನು ಗೆದ್ದ ನಂತರ ಇಂಗ್ಲೆಂಡ್‌ ತಂಡ ಹಳಿತಪ್ಪಿದೆ. ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳು ಕಳಪೆ ಹೊಡೆತಗಳನ್ನು ಆಡಿದ್ದು ಆತಿಥೇಯ ತಂಡಕ್ಕೆ ಲಾಭ ತಂದುಕೊಟ್ಟಿತು. ಇಂತಹ ಹೀನಾಯ ಸೋಲು ಖಂಡಿತವಾಗಿಯೂ ಬೆನ್ ಸ್ಟೋಕ್ಸ್ ಮತ್ತು ತಂಡದ ಆಟಗಾರರಿಗೆ ಎಚ್ಚರಿಕೆಯಾಗಿದೆ. ಹಾಗೆಯೇ ಕಳಪೆ ಫಾರ್ಮ್‌ನೊಂದಿಗೆ ಬಳಲುತ್ತಿರುವ ಬ್ಯಾಟ್ಸ್‌ಮನ್ ಜೋ ರೂಟ್ ಅವರು ಮೂರನೇ ಟೆಸ್ಟ್‌ನಲ್ಲಿ ಔಟಾದ ರೀತಿಗೂ ವಾನ್ ಅಸಮಾಧಾನ ಹೊರಹಾಕಿದರು.

ನನ್ನ ಕಣ್ಣುಗಳಿಂದ ನಂಬಲಾಗಲಿಲ್ಲ

ವಾಸ್ತವವಾಗಿ ರೂಟ್, ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ರಿವರ್ಸ್ ಸ್ಕೂಪ್‌ ಆಡುವ ಯತ್ನದಲ್ಲಿ ಎರಡನೇ ಸ್ಲಿಪ್‌ನಲ್ಲಿ ಕ್ಯಾಚಿತ್ತು ಔಟಾದರು. ಈ ಬಗ್ಗೆ ಮಾತನಾಡಿದ ವಾನ್, ‘ಈ ವಾರ ಇಂಗ್ಲೆಂಡ್ ಆಡಿದ ರೀತಿಯನ್ನು ನೋಡಿದರೆ, ಅವರೇ ಭಾರತಕ್ಕೆ ವಿಜಯವನ್ನು ಉಡುಗೊರೆಯಾಗಿ ನೀಡಿದರು. ಮೂರನೇ ದಿನ ತಂಡ ಬ್ಯಾಟ್ ಮಾಡಿದ ರೀತಿ, ಅದರಲ್ಲೂ ಜೋ ರೂಟ್ ಆಡಿದ ಶಾಟ್ ಅನ್ನು ನನ್ನ ಕಣ್ಣುಗಳಿಂದ ನಂಬಲಾಗಲಿಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Mon, 19 February 24

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!