AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ್ ತಂಡದ ಸಹವಾಸ ಸಾಕಪ್ಪ ಸಾಕು ಅನಿಸಿತು..!

ಸೌತ್ ಆಫ್ರಿಕಾದ ಮಾಜಿ ಆಟಗಾರ ಗ್ಯಾರಿ ಕಸ್ಟರ್ನ್​ ಕ್ರಿಕೆಟ್ ಅಂಗಳದ ಅತ್ಯುತ್ತಮ ಕೋಚ್​ಗಳಲ್ಲಿ ಒಬ್ಬರು. 2011 ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಂಡಿದ್ದ ಕಸ್ಟರ್ನ್​ ಅವರು ಟೀಮ್ ಇಂಡಿಯಾಗೆ ಏಕದಿನ ವಿಶ್ವಕಪ್ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದರು. ಇದೇ ಕಾರಣದಿಂದಾಗಿ 2024 ರಲ್ಲಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಗ್ಯಾರಿ ಕಸ್ಟರ್ನ್ ಅವರನ್ನು ಪಾಕ್ ತಂಡದ ಕೋಚ್ ಆಗಿ ನೇಮಿಸಿತ್ತು.

ಪಾಕಿಸ್ತಾನ್ ತಂಡದ ಸಹವಾಸ ಸಾಕಪ್ಪ ಸಾಕು ಅನಿಸಿತು..!
Gary Kirsten
ಝಾಹಿರ್ ಯೂಸುಫ್
|

Updated on: Jun 16, 2025 | 10:25 AM

Share

ಪಾಕಿಸ್ತಾನ್ ತಂಡದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಪಾಕ್ ತಂಡದೊಳಗಿನ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಮನಬಿಚ್ಚುವಿಕೆಯೊಂದಿಗೆ ಪಾಕ್ ತಂಡದೊಳಗಿನ ಪರಿಸ್ಥಿತಿ ಬಹಿರಂಗವಾಗಿದೆ. ಸೌತ್ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅವರನ್ನು ಏಪ್ರಿಲ್ 2024 ರಲ್ಲಿ ಪಾಕಿಸ್ತಾನ್ ತಂಡದ ‘ವೈಟ್-ಬಾಲ್ ಕೋಚ್’ ಆಗಿ ನೇಮಿಸಲಾಗಿತ್ತು. ಇತ್ತ 2011 ರಲ್ಲಿ ಭಾರತ ತಂಡವನ್ನು ಏಕದಿನ ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಕಸ್ಟರ್ನ್ ಅವರ ಮೇಲೆ ಅಪಾರ ನಿರೀಕ್ಷೆಗಳಿದ್ದವು. ಆದರೆ ಆರು ತಿಂಗಳಲ್ಲೇ ಗ್ಯಾರಿ ಕಸ್ಟರ್ನ್​ ಪಾಕ್ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಕ್ಕೆ ಕಾರಣಗಳೇನು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

ನಾನು ಪಾಕಿಸ್ತಾನ್ ತಂಡದ ‘ವೈಟ್-ಬಾಲ್ ಕೋಚ್’ ಆಗಿ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಿಲ್ಲ ಎಂಬುದನ್ನು ಶೀಘ್ರದಲ್ಲೇ ಅರಿತುಕೊಂಡಿದ್ದೆ. ಏಕೆಂದರೆ ಪಾಕ್ ತಂಡದಲ್ಲಿ ಅಂತಹ ವಾತಾವರಣ ಇರಲಿಲ್ಲ. ಹೀಗಾಗಿ ಈ ತಂಡದೊಂದಿಗೆ ಸಕಾರಾತ್ಮಕ ಪರಿಣಾಮ ಬೀರುವುದು ಸಾಧ್ಯವಿಲ್ಲ ಎಂಬುದು ನನಗೆ ಆರಂಭದಲ್ಲೇ ತಿಳಿಯಿತು.

ಅದರಲ್ಲೂ ಮೊದಲ 6 ತಿಂಗಳು ಎಂಬುದು ಪ್ರಕ್ಷುಬ್ಧ ವಾತಾವರಣವಾಗಿತ್ತು. ಹೀಗಾಗಿ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗುವುದಿಲ್ಲ ಎಂದು ನನಗೆ ಅರಿವಾಯಿತು. ನನ್ನನ್ನು ಮೊದಲು ತಂಡದ ಆಯ್ಕೆಯ ವಿಚಾರದಿಂದ ಹೊರಗಿಡಲಾಯಿತು. ಆ ಬಳಿಕ ತಂಡವನ್ನು ರೂಪಿಸಲು ಸಹ ಅವಕಾಶ ನಿರಾಕರಿಸಲಾಯಿತು.

ಇದರಿಂದ ತರಬೇತುದಾರನಾಗಿ ತಂಡದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು ತುಂಬಾ ಕಷ್ಟಕರವಾಯಿತು. ಇದೇ ಕಾರಣದಿಂದಾಗಿ ಪಾಕ್ ತಂಡದ ಕೋಚ್ ಹುದ್ದೆಯನ್ನು ತ್ಯಜಿಸಲು ನಿರ್ಧರಿಸಿದೆ ಎಂದು ಗ್ಯಾರಿ ಕಸ್ಟರ್ನ್ ಹೇಳಿದ್ದಾರೆ.

ಇನ್ನು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯಿಂದ ನನಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಅಲ್ಲದೆ ಪಾಕ್ ತಂಡದ ವಾತಾವರಣ ಕೂಡ ಅಂದುಕೊಂಡಂತೆ ಇರಲಿಲ್ಲ. ಹೀಗಾಗಿ ಆರಂಭದಲ್ಲೇ ನನಗೆ ಈ ತಂಡದೊಂದಿಗೆ ಮುಂದುವರೆಯುವುದು ಕಷ್ಟಕರ ಎನಿಸಿತು. ಇದೇ ಕಾರಣದಿಂದಾಗಿ ಆರು ತಿಂಗಳ ಬಳಿಕ ರಾಜೀನಾಮೆ ನೀಡಿರುವುದಾಗಿ ಗ್ಯಾರಿ ಕಸ್ಟರ್ನ್ ಹೇಳಿದ್ದಾರೆ.

ಇದಾಗ್ಯೂ ಸರಿಯಾದ ಸಂದರ್ಭಗಳಲ್ಲಿ ಮತ್ತು ಯಾವುದೇ ಬಾಹ್ಯ ಹಸ್ತಕ್ಷೇಪವಿಲ್ಲದೆ ಪಾಕಿಸ್ತಾನ ತಂಡಕ್ಕೆ ತರಬೇತಿ ನೀಡಲು ಅವಕಾಶ ಸಿಕ್ಕರೆ, ಮತ್ತೆ ಕೋಚ್ ಆಗಲು ಸಿದ್ಧ.  ನಾಳೆ ನನ್ನನ್ನು ಪಾಕಿಸ್ತಾನಕ್ಕೆ ಮರಳಿ ಕರೆದರೆ, ನಾನು ಹೋಗುತ್ತೇನೆ. ಆದರೆ ಆಟಗಾರರಿಗಾಗಿ ಹೋಗಲು ಇಷ್ಟಪಡುತ್ತೇನೆ.

ನನ್ನ ಪ್ರಕಾರ, ಕ್ರಿಕೆಟ್ ತಂಡಗಳನ್ನು ಕ್ರಿಕೆಟ್ ಜನರು ನಡೆಸಬೇಕು. ಹೊರಗಿನವರಿಂದ ಸಾಕಷ್ಟು ಹಸ್ತಕ್ಷೇಪ ಇದ್ದಾಗ, ಒಂದು ಉತ್ತಮ ತಂಡವನ್ನು ರೂಪಿಸುವುದು ಕಷ್ಟಕರ. ಈ ಮೂಲಕ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಿದೆ ಎಂದು ಗ್ಯಾರಿ ಕರ್ಸ್ಟನ್ ಪರೋಕ್ಷವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಸೋಲಿನ ಸರಪಳಿ ಬ್ರೇಕ್… 3 ತಂಡಗಳಿಗೆ ಒಲಿದ ಚಾಂಪಿಯನ್ ಪಟ್ಟ

ಅಂದಹಾಗೆ ಗ್ಯಾರಿ ಕರ್ಸ್ಟನ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಕಸ್ಟರ್ನ್​ ಮುಂದಾಳತ್ವದಲ್ಲಿ ಈ ಬಾರಿ ಗುಜರಾತ್ ಟೈಟಾನ್ಸ್ ಬ್ಯಾಟರ್​ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಪ್ಲೇಆಫ್ ಪ್ರವೇಶಿಸಿದ್ದ ಗುಜರಾತ್ ಟೈಟಾನ್ಸ್ ಎಲಿಮಿನೇಟರ್ ಪಂದ್ಯದಲ್ಲಿ ಸೋಲನುಭವಿಸಿದ್ದರು.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ