
ಬೆಂಗಳೂರಿನಲ್ಲಿ ಆರ್‌ಸಿಬಿ (RCB) ತಂಡದ ವಿಜಯೋತ್ಸವ ಮೆರವಣಿಗೆಗೂ ಮುನ್ನ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವನ್ನಪ್ಪಿದವರ ಕುಟುಂಬಗಳಿಗೆ ಆರ್‌ಸಿಬಿ ಫ್ರಾಂಚೈಸಿ ಸಹಾಯ ಹಸ್ತ ಚಾಚಿದ್ದು, 10 ಲಕ್ಷ ರೂ ಪರಿಹಾರ ಘೋಷಿಸಿದೆ. ಅಲ್ಲದೆ ಈ ವಿಚಾರವಾಗಿ ಆರ್‌ಸಿಬಿ ವಿರುದ್ಧ ಪ್ರಕರಣವೂ ದಾಖಲಾಗಿದೆ. ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಈ ವಿಷಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಗಂಭೀರ್, ‘ಗೆಲುವಿನ ನಂತರ ಇಂತಹ ರೋಡ್ ಶೋಗಳು ನಡೆಯಬಾರದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಏಕೆಂದರೆ ಆಚರಣೆಗಳಿಗಿಂತ ಜೀವಗಳು ಮುಖ್ಯ. ನನಗೆ ರೋಡ್ ಶೋಗಳಲ್ಲಿ ನಂಬಿಕೆ ಇಲ್ಲ. ನಾನು ಆಡುತ್ತಿದ್ದಾಗ ಮತ್ತು ನಾವು ಟಿ20 ವಿಶ್ವಕಪ್ ಗೆದ್ದಾಗಲೂ, ನಾನು ಈ ರೋಡ್ ಶೋಗೆ ಬೆಂಬಲ ನೀಡಿರಲಿಲ್ಲ. ಜನರ ಜೀವಗಳು ಹೆಚ್ಚು ಮುಖ್ಯ. ಬೆಂಗಳೂರಿನಲ್ಲಿ ನಡೆದದ್ದು ನೋವಿನ ಸಂಗತಿ ಎಂದರು.
ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದಾಗ, ಕೋಟ್ಯಾಂತರ ಅಭಿಮಾನಿಗಳು ತುಂಬಾ ಸಂತೋಷಪಟ್ಟರು. ಫೈನಲ್ ಪಂದ್ಯ ಮುಗಿದ ಮರು ದಿನ ವಿಜಯೋತ್ಸವ ಮೆರವಣಿಗೆಯನ್ನು ವಿಧಾನಸಸೌಧದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ನಡೆಸಬೇಕಿತ್ತು. ಆದರೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಕ್ರೀಡಾಂಗಣದ ಬಳಿ ಜಮಾಯಿಸಿದರು, ಅವರನ್ನು ನಿಭಾಯಿಸುವುದು ಪೊಲೀಸರಿಗೂ ಕಷ್ಟಕರವಾಯಿತು. ಆ ನಂತರ ಕಾಲ್ತುಳಿತ ಸಂಭವಿಸಿ 11 ಅಭಿಮಾನಿಗಳು ಕೂಡ ಸಾವನ್ನಪ್ಪಿದರು. ಈ ದುರಂತದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದ್ದು, ಆರ್‌ಸಿಬಿ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.
RCB Income: ಅರ್ಧ ಸಾವಿರ ಕೋಟಿಗೂ ಅಧಿಕ..! ಇದು ಐಪಿಎಲ್ 2025 ರಲ್ಲಿ ಆರ್ಸಿಬಿಯ ಆದಾಯ
ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 3 ಪಂದ್ಯಗಳನ್ನು ಮಾತ್ರ ಆಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಗೌತಮ್ ಗಂಭೀರ್, ಬುಮ್ರಾ ಯಾವ ಮೂರು ಟೆಸ್ಟ್‌ಗಳನ್ನು ಆಡುತ್ತಾರೆ ಎಂಬುದನ್ನು ನಿರ್ಧರಿಸಲಾಗಿಲ್ಲ. ಸರಣಿಯ ಸ್ಥಿತಿಯನ್ನು ನೋಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ನಮ್ಮಲ್ಲಿ ಗುಣಮಟ್ಟದ ಬೌಲರ್‌ಗಳಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿಯೂ ಸಹ, ಟೀಂ ಇಂಡಿಯಾ ಅವರಿಲ್ಲದೆ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ತೋರಿಸಿತ್ತು, ಈ ಬಾರಿಯೂ ಅವರು ಅದೇ ರೀತಿ ಮಾಡಬೇಕಾಗುತ್ತದೆ ಎಂದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ