GT vs DC Playing XI IPL 2022: ಬಲಿಷ್ಠ ಡೆಲ್ಲಿಗೆ ಗುಜರಾತ್ ಸವಾಲು; ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
GT vs DC Playing XI IPL 2022: ದೆಹಲಿ ಕ್ಯಾಪಿಟಲ್ಸ್ ಶನಿವಾರ ಪುಣೆಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇಬ್ಬರೂ ಗೆಲುವಿನೊಂದಿಗೆ ಖಾತೆ ತೆರೆದಿದ್ದರೂ ಪ್ರದರ್ಶನದ ದೃಷ್ಟಿಯಿಂದ ಯಾವ ತಂಡವೂ ಸಂಪೂರ್ಣ ತೃಪ್ತರಾಗಿರಲಿಲ್ಲ.
ಐಪಿಎಲ್ 2022 (IPL 2022)ಸೀಸನ್‌ನ ಮೊದಲ ವಾರ ಬಹುತೇಕ ಮುಗಿದಿದ್ದು, ಇದೀಗ ಪಂದ್ಯಾವಳಿಯು ಎರಡನೇ ವಾರಕ್ಕೆ ಪ್ರವೇಶಿಸುತ್ತಿದೆ. ಇದರೊಂದಿಗೆ ಮೊದಲ ಪಂದ್ಯದ ಯಶಸ್ಸು-ವೈಫಲ್ಯದ ಬಳಿಕ ಮುಂದಿನ ಸುತ್ತಿನ ಪಂದ್ಯಗಳಲ್ಲಿ ಪರಸ್ಪರ ಮೇಲುಗೈ ಸಾಧಿಸಲು ಇತ್ತಂಡಗಳೂ ಪೈಪೋಟಿ ನಡೆಸಲಿವೆ. ಶನಿವಾರ ಏಪ್ರಿಲ್ 2 ರಂದು, ತಮ್ಮ ಮೊದಲ ಪಂದ್ಯಗಳನ್ನು ಗೆದ್ದಿರುವ ಎರಡು ತಂಡಗಳು ಪರಸ್ಪರ ಸೆಣಸಲಿವೆ. ದೆಹಲಿ ಕ್ಯಾಪಿಟಲ್ಸ್ ಶನಿವಾರ ಪುಣೆಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಇಬ್ಬರೂ ಗೆಲುವಿನೊಂದಿಗೆ ಖಾತೆ ತೆರೆದಿದ್ದರೂ ಪ್ರದರ್ಶನದ ದೃಷ್ಟಿಯಿಂದ ಯಾವ ತಂಡವೂ ಸಂಪೂರ್ಣ ತೃಪ್ತರಾಗಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಎರಡು ತಂಡಗಳು ಮುಖಾಮುಖಿಯಾಗುವ ಪಂದ್ಯಕ್ಕೆ ಉಭಯ ತಂಡಗಳ ಆಡುವ XI ನಲ್ಲಿನ ಬದಲಾವಣೆಯ ಮೇಲೆ ಸಾಕಷ್ಟು ನಿರೀಕ್ಷೆಯಿದೆ.
ಉಭಯ ತಂಡಗಳ ಮೊದಲ ಪಂದ್ಯದ ಪಲಿತಾಂಶ ನೋಡುವುದಾದರೆ, ಮೊದಲ ಪಂದ್ಯದಲ್ಲಿ ಡೆಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಸಂಕಷ್ಟ ಎದುರಿಸಬೇಕಾಯಿತು. ಕಮಲೇಶ್ ನಾಗರಕೋಟಿ, ಶಾರ್ದೂಲ್ ಠಾಕೂರ್ ಮತ್ತು ಅಕ್ಷರ್ ಪಟೇಲ್ ಮುಂಬೈ ಇಂಡಿಯನ್ಸ್ ವಿರುದ್ಧ ಅತ್ಯಂತ ದುಬಾರಿಯಾಗಿದ್ದರು. ಅದೇ ವೇಳೆ ಬ್ಯಾಟಿಂಗ್‌ನಲ್ಲಿ ನಾಯಕ ರಿಷಬ್ ಪಂತ್, ಮನ್ ದೀಪ್ ಸಿಂಗ್, ರೋವ್ ಮನ್ ಪೊವೆಲ್ ವಿಫಲರಾದರು. ಗುಜರಾತ್ ಬಗ್ಗೆ ಮಾತನಾಡುವುದಾದರೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತಂಡದ ಬೌಲಿಂಗ್‌ನಲ್ಲಿ ದೊಡ್ಡ ಸಮಸ್ಯೆ ಇರಲಿಲ್ಲ, ಆದರೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಬ್ಯಾಟಿಂಗ್‌ನಲ್ಲಿ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಇದು ಎರಡೂ ಆಟಗಾರರ XI ಮೇಲೆ ಪರಿಣಾಮ ಬೀರಬಹುದು.
ದೆಹಲಿ: ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಎರಡು ಬದಲಾವಣೆ! ಪಂತ್ ನೇತೃತ್ವದ ತಂಡಕ್ಕೆ ದೊಡ್ಡ ಸಮಾಧಾನವೆಂದರೆ ಅದರ ಇಬ್ಬರು ಪ್ರಮುಖ ವಿದೇಶಿ ಬೌಲರ್‌ಗಳಾದ ಮುಸ್ತಾಫಿಜುರ್ ರೆಹಮಾನ್ ಮತ್ತು ಲುಂಗಿ ಎನ್‌ಗಿಡಿ ತಂಡವನ್ನು ಸೇರಿಕೊಂಡಿದ್ದಾರೆ ಮತ್ತು ಪಂದ್ಯಕ್ಕೆ ಲಭ್ಯವಿದ್ದಾರೆ. ಹೀಗಿರುವಾಗ ಕಮಲೇಶ್ ನಾಗರಕೋಟಿ ಬದಲು ಇಬ್ಬರಲ್ಲಿ ಯಾರಿಗಾದರೂ ಅವಕಾಶ ಸಿಗಬಹುದು. ಮಿತವ್ಯಯ ಬೌಲಿಂಗ್‌ನಲ್ಲಿ ವಿಕೆಟ್‌ಗಳನ್ನು ಪಡೆಯುವುದರಿಂದ ಮುಸ್ತಫಿಜುರ್‌ಗೆ ಹೆಚ್ಚಿನ ಅವಕಾಶಗಳಿವೆ. ಎನ್ರಿಖ್ ನಾರ್ಕಿಯಾ ಸಂಪೂರ್ಣ ಫಿಟ್ ಆಗಲು ತಂಡವು ಇನ್ನೂ ಕಾಯುತ್ತಿದೆ.
ಅದೇ ಹೊತ್ತಿಗೆ ಬ್ಯಾಟಿಂಗ್‌ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಕೊರತೆ ಈ ಪಂದ್ಯದಲ್ಲೂ ಪೂರ್ಣವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಓಪನಿಂಗ್ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮನ್‌ದೀಪ್ ಸಿಂಗ್‌ಗೆ ಮತ್ತೊಮ್ಮೆ ಅವಕಾಶ ಸಿಗುವ ನಿರೀಕ್ಷೆ ಇದ್ದರೂ, ಅವರನ್ನು ಕೈಬಿಟ್ಟರೆ ಸರ್ಫರಾಜ್ ಖಾನ್‌ಗೆ ಅವಕಾಶ ನೀಡುವುದು ಉತ್ತಮ ಆಯ್ಕೆಯಾಗಿದೆ.
ಗುಜರಾತ್: ಮತ್ತೆ ಗೆಲ್ಲುವ ಕಾಂಬಿನೇಷನ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಟೂರ್ನಿಯಲ್ಲಿ ಪಾದಾರ್ಪಣೆ ಮಾಡಿದ್ದು, ಮೊದಲ ಪಂದ್ಯದಲ್ಲಿಯೇ ಸಾಕಷ್ಟು ಪ್ರಭಾವ ಬೀರಿದೆ. ವಿಶೇಷವಾಗಿ ಮೊಹಮ್ಮದ್ ಶಮಿ ಮತ್ತು ರಶೀದ್ ಖಾನ್ ನಾಯಕತ್ವದಲ್ಲಿ ತಂಡದ ವೇಗದ ಮತ್ತು ಸ್ಪಿನ್ ಬೌಲರ್‌ಗಳು ಉಳಿದ ತಂಡಗಳಿಗೆ ಎಚ್ಚರಿಕೆ ನೀಡಿದರು. ಇಂತಹ ಪರಿಸ್ಥಿತಿಯಲ್ಲಿ ತಂಡದ ಬೌಲಿಂಗ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್ನು ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಶುಭಮನ್ ಗಿಲ್ ಹಾಗೂ ವಿಜಯ್ ಶಂಕರ್ ವೈಫಲ್ಯ ತಂಡಕ್ಕೆ ನಿರಾಸೆ ಮೂಡಿಸಿದೆಯಾದರೂ ಬದಲಾವಣೆಯಾಗುವ ನಿರೀಕ್ಷೆ ಇಲ್ಲ. ಅಂದರೆ, ಒಟ್ಟಾರೆ ಗುಜರಾತ್ ಟೈಟಾನ್ಸ್ ಗೆಲುವಿನ ಸಂಯೋಜನೆಯೊಂದಿಗೆ ಕಣಕ್ಕಿಳಿಯಬಹುದು.
GT vs DC: ಎರಡೂ ತಂಡಗಳ ಸಂಭಾವ್ಯ ಆಡುವ XI ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್, ಪೃಥ್ವಿ ಶಾ, ಟಿಮ್ ಸೀಫರ್ಟ್, ಸರ್ಫರಾಜ್ ಖಾನ್, ಲಲಿತ್ ಯಾದವ್, ರೋವ್ಮನ್ ಪೊವೆಲ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಖಲೀಲ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್.
ಗುಜರಾತ್ ಟೈಟಾನ್ಸ್: ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್ ಖಾನ್, ಲಾಕಿ ಫರ್ಗುಸನ್, ಮೊಹಮ್ಮದ್ ಶಮಿ ಮತ್ತು ವರುಣ್ ಆರೋನ್.
ಇದನ್ನೂ ಓದಿ:IPL 2022 MI vs RR Head to Head: ಮುಂಬೈ-ರಾಜಸ್ಥಾನ ಮುಖಾಮುಖಿ; ಉಭಯ ತಂಡಗಳಲ್ಲಿ ಯಾರಿಗೆ ಮೇಲುಗೈ?