ಏಕದಿನ- ಟಿ20 ತಂಡದಲಿಲ್ಲ ಸ್ಥಾನ; ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಆಸೀಸ್ ವಿಕೆಟ್ ಕೀಪರ್

ಏಕದಿನ- ಟಿ20 ತಂಡದಲಿಲ್ಲ ಸ್ಥಾನ; ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಆಸೀಸ್ ವಿಕೆಟ್ ಕೀಪರ್
ಪೀಟರ್

ಮ್ಯಾಥ್ಯೂ ವೇಡ್‌ನಿಂದ ಪೀಟರ್​ಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಪೀಟರ್ ಆಸ್ಟ್ರೇಲಿಯಾ ಪರ ಒಂಬತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 2016ರ ಟಿ20 ವಿಶ್ವಕಪ್ ಕೂಡ ಸೇರಿತ್ತು.

TV9kannada Web Team

| Edited By: pruthvi Shankar

Apr 01, 2022 | 5:08 PM

ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡ (Australian Cricket Team) ಪಾಕಿಸ್ತಾನ ಪ್ರವಾಸದಲ್ಲಿದೆ. ಏತನ್ಮಧ್ಯೆ, ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಪೀಟರ್ ನೆವಿಲ್ಲೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಎಲ್ಲಾ ರೀತಿಯ ವೃತ್ತಿಪರ ಕ್ರಿಕೆಟ್‌ನಿಂದ ಪೀಟರ್ ನಿವೃತ್ತಿ ಹೊಂದಿದ್ದಾರೆ. ESPNcricinfo ವೆಬ್‌ಸೈಟ್ ತನ್ನ ವರದಿಯಲ್ಲಿ ಈ ಮಾಹಿತಿಯನ್ನು ನೀಡಿದೆ. ಪೀಟರ್ ತನ್ನ 13 ವರ್ಷದ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದು, 36 ವರ್ಷದ ನೆವಿಲ್ಲೆ ತಮ್ಮ ದೇಶಕ್ಕಾಗಿ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದಲ್ಲದೆ ಆಸ್ಟ್ರೇಲಿಯಾ ಪರ ಒಂಬತ್ತು ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಅವರು 2016 ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದರು. ಇದರ ನಂತರ ಅವರು ದೇಶೀಯ ಕ್ರಿಕೆಟ್ ಆಡುವುದನ್ನು ಮುಂದುವರೆಸಿದರು. ಪೀಟರ್ ನ್ಯೂ ಸೌತ್ ವೇಲ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದಲ್ಲದೆ 43 ಶೀಲ್ಡ್ ಪಂದ್ಯಗಳನ್ನೂ ಆಡಿದ್ದಾರೆ. ಅವರಿಗಿಂತ ಬೇರೆ ಯಾವ ಆಟಗಾರನೂ ಈ ತಂಡದ ನಾಯಕತ್ವ ವಹಿಸಿರಲಿಲ್ಲ.

ಪೀಟರ್ ನ್ಯೂ ಸೌತ್ ವೇಲ್ಸ್ ತಂಡದ ಪರವಾಗಿ ಒಟ್ಟು 101 ಪಂದ್ಯಗಳನ್ನು ಆಡಿದ್ದಾರೆ. 100ಕ್ಕೂ ಹೆಚ್ಚು ಶೀಲ್ಡ್ ಪಂದ್ಯಗಳನ್ನು ಆಡಿದ ಈ ತಂಡದ ಕೆಲವೇ ಆಟಗಾರರಲ್ಲಿ ಪೀಟರ್ ಕೂಡ ಒಬ್ಬರು. ಅವರು ಫೆಬ್ರವರಿಯಲ್ಲಿ ಟ್ಯಾಸ್ಮೆನಿಯಾ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಭುಜದ ಗಾಯದಿಂದಾಗಿ ಪೀಟರ್, ತಮ್ಮ ವೃತ್ತಿಜೀವನವನ್ನು ಬೇಗನೆ ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಪೀಟರ್ ತಮ್ಮ ತಂಡದ ಪರ ಹೆಚ್ಚು ಕ್ಯಾಚ್‌ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದು ಒಟ್ಟು 310 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.

ಖಾತೆಯಲ್ಲಿ ಹಲವು ಮೈಲಿಗಲ್ಲುಗಳು ನೆವಿಲ್ಲೆ ಎರಡು ಶೀಲ್ಡ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಎರಡು ಮಾರ್ಷ್ ಕಪ್ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ. 2019-20ರಲ್ಲಿ ಅವರ ನಾಯಕತ್ವದಲ್ಲಿ ತಂಡವು ಶೀಲ್ಡ್ ಪಂದ್ಯಾವಳಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಂಡವು ಪರಿವರ್ತನೆಯ ಅವಧಿಯಲ್ಲಿ ಸಾಗುತ್ತಿರುವಾಗ ನೆವಿಲ್ಲೆ ಆಸ್ಟ್ರೇಲಿಯಾ ಪರ ಟೆಸ್ಟ್ ಪಂದ್ಯಗಳನ್ನು ಆಡಿದರು. 2015 ರ ಆಶಸ್‌ನಲ್ಲಿ ಬ್ರಾಡ್ ಹ್ಯಾಡಿನ್ ಬದಲಿಗೆ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದರು. ನಿರಂತರವಾಗಿ 17 ಪಂದ್ಯಗಳನ್ನು ಆಡುವುದರೊಂದಿಗೆ ಅತ್ಯುತ್ತಮ ವಿಕೆಟ್ ಕೀಪಿಂಗ್ ಕೂಡ ಮಾಡಿದರು. ಈ ಸಮಯದಲ್ಲಿ ಅವರ ಸರಾಸರಿ 22.28 ಆಗಿತ್ತು. ಅಲ್ಲದೆ ಮೂರು ಅರ್ಧಶತಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.

ಮ್ಯಾಥ್ಯೂ ವೇಡ್‌ನಿಂದ ಪೀಟರ್​ಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಪೀಟರ್ ಆಸ್ಟ್ರೇಲಿಯಾ ಪರ ಒಂಬತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 2016ರ ಟಿ20 ವಿಶ್ವಕಪ್ ಕೂಡ ಸೇರಿತ್ತು. ಈ ವಿಶ್ವಕಪ್‌ನಲ್ಲಿ, ಅವರು ಪಂದ್ಯವೊಂದರಲ್ಲಿ 10 ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಟೆಸ್ಟ್‌ನಲ್ಲಿ 468 ರನ್ ಗಳಿಸಿದರೆ, ಟಿ 20 ನಲ್ಲಿ ಕೇವಲ 25 ರನ್‌ಗಳು ಅವರ ಬ್ಯಾಟ್‌ನಿಂದ ಬಂದವು. ಆದರೆ ಪೀಟರ್ ಅವರಿಗೆ ಆಸ್ಟ್ರೇಲಿಯಾದ ODI ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ.

ನಿವೃತ್ತಿಯ ನಂತರ ಹೇಳಿದ್ದಿದು ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ವೆಬ್‌ಸೈಟ್ ನೆವಿಲ್ಲೆ ಅವರ ಹೇಳಿಕೆಯನ್ನು ಉಲ್ಲೇಖಿಸಿ, “ನನ್ನನ್ನಿ ಸಾಕಷ್ಟು ಸಾಮರ್ಥ್ಯವಿದೆ. ಇಷ್ಟು ದೀರ್ಘ ಕಾಲ ಆಡಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ನನ್ನ ವೃತ್ತಿಜೀವನವನ್ನು ಶಾರ್ಟ್ ಅಂಡ್ ಸ್ವೀಟ್ ಎಂದು ಕರೆಯುವುದು ಕಷ್ಟ. ಆದರೆ, ನನ್ನ ವೃತ್ತಿಜೀವನದಲ್ಲಿ ಹಲುವ ಏರಿಳಿತಗಳಿವೆ. ಈ ಜರ್ನಿ ತುಂಬಾ ವಿಭಿನ್ನ ಮತ್ತು ವಿಶೇಷವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:Ayush Badoni IPL 2022: ಅಂದು ಜೀರೋ.. ಇಂದು ಹೀರೋ; ಐಪಿಎಲ್​ನ ಬೇಬಿ ಎಬಿಡಿ ಆಯುಷ್ ಬದೋನಿ

Follow us on

Related Stories

Most Read Stories

Click on your DTH Provider to Add TV9 Kannada