Hardik Pandya: ಅತ್ತೆಯ ಕಾಯುವಿಕೆ…ಪಾಂಡ್ಯ ಟೀಮ್ ಇಂಡಿಯಾದಿಂದ ಹೊರಗುಳಿಯಲು ಇದುವೇ ಕಾರಣ..!

Hardik Pandya: ಸೌತ್ ಆಫ್ರಿಕಾ ವಿರುದ್ಧದ ಸರಣಿಯ ವೇಳೆ ರಜೆ ಪಡೆದು ಹಾರ್ದಿಕ್ ಪಾಂಡ್ಯ ಕುಟುಂಬಸ್ಥರನ್ನು ಭೇಟಿಯಾಗಲು ತೆರಳಿದ್ದಾರೆ. ಅಲ್ಲದೆ ಟಿ20 ವಿಶ್ವಕಪ್​ ವೇಳೆಗೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.

Hardik Pandya: ಅತ್ತೆಯ ಕಾಯುವಿಕೆ...ಪಾಂಡ್ಯ ಟೀಮ್ ಇಂಡಿಯಾದಿಂದ ಹೊರಗುಳಿಯಲು ಇದುವೇ ಕಾರಣ..!
Hardik Pandya
TV9kannada Web Team

| Edited By: Zahir PY

Sep 27, 2022 | 1:32 PM

ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ಟಿ20 ಸರಣಿಯು ಸೆಪ್ಟೆಂಬರ್ 28 ರಿಂದ ಶುರುವಾಗಲಿದೆ. ಆದರೆ ಈ ಸರಣಿಗೆ ಟೀಮ್ ಇಂಡಿಯಾದ (Team India) ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅಲಭ್ಯರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಪಾಂಡ್ಯ ಸೌತ್ ಆಫ್ರಿಕಾ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಪಾಂಡ್ಯ ಕುಟುಂಬಸ್ಥರ ಭೇಟಿಯಾಗಲು ಇದೀಗ ದಿಢೀರ್ ವಿಶ್ರಾಂತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಅಂದರೆ  ಹಾರ್ದಿಕ್ ಪಾಂಡ್ಯ ಬರೋಬ್ಬರಿ 2 ವರ್ಷಗಳ ಬಳಿಕ ಮೊದಲ ಬಾರಿಗೆ ತಮ್ಮ ಅತ್ತೆಯನ್ನು ಭೇಟಿಯಾಗಿದ್ದಾರೆ.

2020 ರಲ್ಲಿ ಸರ್ಬಿಯಾ ಮೂಲದ ನಟಿ ನತಾಸಾ ಸ್ಟಾಂಕೋವಿಕ್ ಅವರನ್ನು ವಿವಾಹವಾಗಿದ್ದರು. ಆದರೆ ಇದಾದ ಬಳಿಕ ಅವರು ಒಮ್ಮೆಯೂ ಅತ್ತೆಯನ್ನು ಭೇಟಿಯಾಗಿರಲಿಲ್ಲ ಎಂಬುದೇ ಅಚ್ಚರಿ. ಇದೀಗ 2 ವರ್ಷಗಳ ದೀರ್ಘ ಕಾಯುವಿಕೆಯ ಬಳಿಕ ಹಾರ್ದಿಕ್ ಪಾಂಡ್ಯ ನತಾಸಾ ಅವರ ಕುಟುಂಬಸ್ಥರನ್ನು ಭೇಟಿಯಾಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

“ವೀಡಿಯೋ ಮತ್ತು ಫೋನ್ ಕರೆಗಳಲ್ಲಿ ಮಾತನಾಡುವುದರಿಂದ ಹಿಡಿದು ಇದೀಗ ಭೇಟಿಯಾಗುವ ತನಕ. ನತಾಸಾ ಅವರ ಕುಟುಂಬವನ್ನು (ಈಗ ನನ್ನದು ಕೂಡ) ಮೊದಲ ಬಾರಿಗೆ ಭೇಟಿಯಾದ ಕ್ಷಣ ಅದ್ಭುತವಾಗಿದೆ ಎಂದು ಹಾರ್ದಿಕ್ ಪಾಂಡ್ಯ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ನತಾಸಾ ಅವರ ತಾಯಿ ಪಾಂಡ್ಯರನ್ನು ತಬ್ಬಿಕೊಳ್ಳುತ್ತಾ, ನೀನು ಖಂಡಿತ ಬರುತ್ತೀಯಾ ಅಂತ ಗೊತ್ತಿತ್ತು ಎಂದು ಖುಷಿ ವ್ಯಕ್ತಪಡಿಸುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.  ಕಾರಣಾಂತರಗಳಿಂದ ಕಳೆದ 2 ವರ್ಷಗಳಲ್ಲಿ ಪಾಂಡ್ಯ ಪತ್ನಿಯ ಕುಟುಂಬಸ್ಥರನ್ನು ಭೇಟಿಯಾಗಿರಲಿಲ್ಲ.

ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಯ ವೇಳೆ ರಜೆ ಪಡೆದು ಹಾರ್ದಿಕ್ ಪಾಂಡ್ಯ ಕುಟುಂಬಸ್ಥರನ್ನು ಭೇಟಿಯಾಗಲು ತೆರಳಿದ್ದಾರೆ. ಅಲ್ಲದೆ ಟಿ20 ವಿಶ್ವಕಪ್​ ವೇಳೆಗೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada