ಹಾರ್ದಿಕ್ ಪಾಂಡ್ಯ ರಿಎಂಟ್ರಿಗೆ ಒಪ್ಪಿಗೆ, ಷರತ್ತಿಗೆ ನೋ ಎಂದ ಗುಜರಾತ್ ಟೈಟಾನ್ಸ್!

Hardik Pandya: ಐಪಿಎಲ್ ಜಗತ್ತಿನಲ್ಲಿ ಹೊಸದಾಗಿ ಹೆಜ್ಜೆ ಇಟ್ಟ ತಂಡವೊಂದನ್ನು ಮೊದಲ ಸೀಸನ್‌ನಲ್ಲೇ ಚಾಂಪಿಯನ್ ಪಟ್ಟಕ್ಕೇರಿಸಿದ ಹೆಗ್ಗಳಿಕೆ ಹಾರ್ದಿಕ್ ಪಾಂಡ್ಯ ಅವರದ್ದು. 2022ರಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಮುನ್ನಡೆಸಿದ್ದ ಪಾಂಡ್ಯ ಚೊಚ್ಚಲ ಸೀಸನ್​ನಲ್ಲೇ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಇನ್ನು 2023 ರಲ್ಲಿ ತಂಡವನ್ನು ಫೈನಲ್​ಗೆ ಕೊಂಡೊಯ್ದಿದ್ದರು.

ಹಾರ್ದಿಕ್ ಪಾಂಡ್ಯ ರಿಎಂಟ್ರಿಗೆ ಒಪ್ಪಿಗೆ, ಷರತ್ತಿಗೆ ನೋ ಎಂದ ಗುಜರಾತ್ ಟೈಟಾನ್ಸ್!
Hardik Pandya
Image Credit source: x.com

Updated on: Aug 12, 2026 | 12:14 PM

ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ‘ಗುಜರಾತ್ ಟೈಟಾನ್ಸ್’ (GT) ವಾಪಸಾತಿ ಆಸೆ ಸದ್ಯಕ್ಕೆ ಕಮರಿಹೋಗಿದೆ. ಹಾರ್ದಿಕ್ ಪಾಂಡ್ಯ ವಿಧಿಸಿದ ಕಠಿಣ ಷರತ್ತೊಂದಕ್ಕೆ ಗುಜರಾತ್ ಫ್ರಾಂಚೈಸಿ ಒಪ್ಪಿಗೆ ನೀಡದ ಕಾರಣ, ಈ ಬಹುದೊಡ್ಡ ಟ್ರೇಡಿಂಗ್ ಡೀಲ್ ಮುರಿದುಬಿದ್ದಿದೆ ಎಂದು ವರದಿಯಾಗಿದೆ.

ಹಾರ್ದಿಕ್ ಪಾಂಡ್ಯ ಐಪಿಎಲ್ 2022 ಮತ್ತು 2023ರ ಎರಡು ಸೀಸನ್‌ಗಳಲ್ಲಿ ಗುಜರಾತ್ ಟೈಟನ್ಸ್ ತಂಡದ ಪರ ನಾಯಕನಾಗಿ ಆಡಿದ್ದರು. 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದ ಪಾಂಡ್ಯ, ಇದೀಗ ಮತ್ತೆ ಗುಜರಾತ್ ಟೈಟನ್ಸ್ ತಂಡದ ಕದ ತಟ್ಟಿದ್ದಾರೆ. ಆದರೆ, ಪಾಂಡ್ಯ ಇಟ್ಟಿರುವ ನಾಯಕತ್ವದ ಷರತ್ತಿಗೆ ಜಿಟಿ ಫ್ರಾಂಚೈಸಿ ಒಪ್ಪಿಗೆ ನೀಡಿಲ್ಲ.

ಡೀಲ್ ಮುರಿದು ಬೀಳಲು ಕಾರಣವೇನು?

ಕ್ಯಾಪ್ಟನ್ಸಿ ಬೇಡಿಕೆ: ಹಾರ್ದಿಕ್ ಪಾಂಡ್ಯ ತಾವು ಗುಜರಾತ್ ಟೈಟಾನ್ಸ್​ ತಂಡಕ್ಕೆ ಮರಳಬೇಕಾದರೆ ತಮಗೇ ‘ನಾಯಕತ್ವ’ ನೀಡಬೇಕು ಎಂಬ ಷರತ್ತನ್ನು ಮ್ಯಾನೇಜ್‌ಮೆಂಟ್ ಮುಂದೆ ಇಟ್ಟಿದ್ದರು ಎನ್ನಲಾಗಿದೆ.

ಗಿಲ್ ಬೆಂಬಲಕ್ಕೆ ನಿಂತ ಜಿಟಿ: ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿರುವ ಶುಭ್‌ಮನ್ ಗಿಲ್ ಸದ್ಯ ಗುಜರಾತ್ ಟೈಟಾನ್ಸ್​ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಫ್ರಾಂಚೈಸಿಯ ದೀರ್ಘಕಾಲದ ಭವಿಷ್ಯದ ದೃಷ್ಟಿಯಿಂದ ಗಿಲ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ಜಿಟಿ ಆಡಳಿತ ಮಂಡಳಿ ಒಪ್ಪಲಿಲ್ಲ.

ಅಂದರೆ ಹಾರ್ದಿಕ್ ಪಾಂಡ್ಯರನ್ನು ಖರೀದಿಸಲು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಆಸಕ್ತಿ ತೋರಿದೆ. ಆದರೆ ಅತ್ತ ಪಾಂಡ್ಯ ಮುಂದಿಟ್ಟಿರುವ ನಾಯಕತ್ವದ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಪಾಂಡ್ಯ ರಿಎಂಟ್ರಿ ಕೊಡುವ ಡೀಲ್ ಮುರಿದು ಬಿದ್ದಿದೆ ಎಂದು ವರದಿಯಾಗಿದೆ.

ಮುಂಬೈ ಇಂಡಿಯನ್ಸ್‌ನಲ್ಲಿ ಭವಿಷ್ಯ ಅನಿಶ್ಚಿತ!

2026ರ ಐಪಿಎಲ್ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವು 9ನೇ ಸ್ಥಾನಕ್ಕೆ ಕುಸಿದ ಹಿನ್ನೆಲೆಯಲ್ಲಿ, ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಮೇಲೆ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಹೀಗಾಗಿ ಮುಂಬೈ ತಂಡ ಕೂಡ ಮುಂಬರುವ ಸೀಸನ್‌ಗೆ ಹಾರ್ದಿಕ್ ಅವರನ್ನು ನಾಯಕನಾಗಿ ಮುಂದುವರಿಸಲು ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದ್ದು, ಇದು ಪಾಂಡ್ಯ ಬೇರೆ ತಂಡದ ಹುಡುಕಾಟ ನಡೆಸಲು ಕಾರಣ ಎನ್ನಲಾಗಿದೆ.

ಇದನ್ನೂ ಓದಿ: 9, 8, 7… ಟೀಮ್ ಇಂಡಿಯಾದ WTC ಫೈನಲ್ ಲೆಕ್ಕಾಚಾರ ಹೀಗಿದೆ

ಸದ್ಯ ಗುಜರಾತ್ ಟೈಟಾನ್ಸ್​ ಬಾಗಿಲು ಮುಚ್ಚಿರುವುದರಿಂದ, ಕೊಲ್ಕತ್ತಾ ನೈಟ್ ರೈಡರ್ಸ್ (KKR) ಅಥವಾ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಈ ಸ್ಟಾರ್ ಆಲ್ ರೌಂಡರ್ ಅನ್ನು ಖರೀದಿಸಲು ಆಸಕ್ತಿ ತೋರುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

 

Published On - 12:11 pm, Wed, 12 August 26

Loading...
Unable to load recommendations.
Follow Us