Eng Vs Pak: 10 ಎಸೆತಗಳಲ್ಲಿ 5 ರನ್ ಬೇಕು; 3 ವಿಕೆಟ್ ಕೈಲ್ಲಿದ್ದರು ಪಾಕ್ ಎದುರು ಸೋತ ಇಂಗ್ಲೆಂಡ್..!
Eng Vs Pak: ಎರಡನೆಯ ಎಸೆತದಲ್ಲಿ ಸ್ಟ್ರೈಕ್ನಲ್ಲಿದ ಟೋಪ್ಲಿ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಶಾರ್ಟ್ ಮಿಡ್ ವಿಕೆಟ್ನಲ್ಲಿ ನಿಂತಿದ್ದ ಶಾನ್ ಮಸೂದ್ ಅದ್ಭುತ ಫೀಲ್ಡಿಂಗ್ ಮಾಡಿ ನೇರವಾಗಿ ವಿಕೆಟ್ಗೆ ಬಾಲನ್ನು ಎಸೆಯುವ ಮೂಲಕ ಟೋಪ್ಲಿಯನ್ನು ರನ್ ಔಟ್ ಮಾಡಿದರು.
ಕ್ರಿಕೆಟ್ ಒಂದು ಅನ್ಪ್ರೆಡಿಕ್ಟೇಬಲ್ ಗೇಮ್ ಎನ್ನುವುದಕ್ಕೆ ನಿನ್ನೆ ನಡೆದ ಪಾಕಿಸ್ತಾನ ಹಾಗೂ ಇಂಗ್ಲೆಂಡ್ (England and Pakistan) ನಡುವಿನ 4ನೇ ಟಿ20 ಪಂದ್ಯವೇ ತಾಜಾ ಉದಾಹರಣೆಯಾಗಿದೆ. ಕೊನೆಯ ಓವರ್ವರೆಗೂ ಗೆಲ್ಲುವ ಫೆವರೇಟ್ ಎನಿಸಿಕೊಂಡಿದ್ದ ಇಂಗ್ಲೆಂಡ್ ತಂಡ ಯಾರೂ ಊಹಿಸದ ರೀತಿಯಲ್ಲಿ ಪಾಕ್ ಬೌಲರ್ ಪರಾಕ್ರಮಕ್ಕೆ ಸೋತು ಸುಣ್ಣವಾಯಿತು. ಒಂದೆಡೆ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿ ಸರಣಿ ಗೆದ್ದರೆ, ಇನ್ನೊಂದೆಡೆ 7 ಪಂದ್ಯಗಳ ಟಿ20 ಸರಣಿಯಲ್ಲಿ 4ನೇ ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡ ಸರಣಿಯಲ್ಲಿ 3-1 ರಿಂದ ಮುನ್ನಡೆ ಕಾಯ್ದುಕೊಳ್ಳುವ ಎಲ್ಲಾ ಲಕ್ಷಣಗಳೊಂದಿಗೆ ಪಾಕಿಸ್ತಾನ ನೀಡಿದ 164 ರನ್‌ಗಳ ಗುರಿ ಬೆನ್ನಟ್ಟಿತ್ತು. ಆದರೆ ಕೊನೆಯ 10 ಎಸೆತಗಳಲ್ಲಿ ಪಂದ್ಯದ ಗತ್ತಿಯೇ ಬದಲಾಯಿತು. ಅಷ್ಟಕ್ಕೂ ಕೊನೆಯ 10 ಎಸೆತಗಳಲ್ಲಿ ಆಂಗ್ಲ ತಂಡಕ್ಕೆ ಬೇಕಾಗಿದಿದ್ದು ಕೇವಲ 5 ರನ್ ಅಷ್ಟೇ. ಈ ಗುರಿ ವಿಶ್ವ ಚಾಂಪಿಯನ್ ಆಂಗ್ಲ ತಂಡಕ್ಕೆ ಅಷ್ಟೇನೂ ಕಷ್ಟವಾಗಿರಲಿಲ್ಲ. ಏಕೆಂದರೆ ಇಂಗ್ಲೆಂಡ್ ತಂಡದ ಕೈಯಲ್ಲಿ ಇನ್ನು 3 ವಿಕೆಟ್ಳು ಉಳಿದಿದ್ದವು. ಹೀಗಾಗಿ ಇಂಗ್ಲೆಂಡ್ ತಂಡ ಕೊನೆಯ 10 ಎಸೆತಗಳಲ್ಲಿ 5 ರನ್ ಬಾರಿಸಿ ಜಯ ತನ್ನದಾಗಿಸಿಕೊಳ್ಳುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯ ಹಂತದಲ್ಲಿ ಪಂದ್ಯ ರೋಚಕತೆಯ ತಿರುವು ಪಡೆದುಕೊಂಡು ಎಲ್ಲರ ನಿರೀಕ್ಷೆಯನ್ನು ಬುಡಮೇಲು ಮಾಡಿತ್ತು.
ಅದ್ಭುತ ಫೀಲ್ಡಿಂಗ್
ಕೊನೆಯ 10 ಎಸೆತಗಳಲ್ಲಿ 5 ರನ್ ಗಳಿಸುವುದು ಕಷ್ಟದ ಕೆಲಸವಾಗಿರಲಿಲ್ಲ, ಅದೂ ಕೈಯಲ್ಲಿ 3 ವಿಕೆಟ್ ಇದ್ದುಕೊಂಡು ಕೂಡ ಈ ರನ್ ಗಳಿಸುವುದು ಕಷ್ಟವಾಗಿರಲಿಲ್ಲ. ಆದರೆ, ಇದೆಲ್ಲ ಗೊತ್ತಿದ್ದೂ ಕೂಡ ಗೆಲ್ಲುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲನುಭವಿಸಿತು. ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಕಳಪೆ ಫೀಲ್ಡಿಂಗ್ ಮೂಲಕ ಕಳೆದ ಬಾರಿಯ ವಿಶ್ವಕಪ್ನಲ್ಲಿ ಸೋತು ಮನೆಗೆ ವಾಪಸ್ಸಾಗಿದ್ದ ಪಾಕಿಸ್ತಾನ, ಈ ಪಂದ್ಯದಲ್ಲಿ ಅಚ್ಚರಿಯೆಂಬಂತೆ ಅದ್ಭುತ ಫೀಲ್ಡಿಂಗ್ ಮಾಡಿ ರನೌಟ್ ಮಾಡುವುದರೊಂದಿಗೆ ಪಂದ್ಯದ ದಿಕ್ಕನೇ ಬದಲಾಯಿಸಿತು.
19ನೇ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಹ್ಯಾರಿಸ್ ರೌಫ್
ಕೊನೆಯ 2 ಓವರ್‌ಗಳ ಅಂದರೆ 19ನೇ ಮತ್ತು 20ನೇ ಓವರ್‌ಗಳ ರೋಚಕತೆಯನ್ನು ಒಂದೊಂದಾಗಿ ಗಮನಿಸುವುದಾದರೆ, ಇಂಗ್ಲೆಂಡ್‌ಗೆ 12 ಎಸೆತಗಳಲ್ಲಿ 9 ರನ್‌ಗಳ ಅಗತ್ಯವಿತ್ತು. 19ನೇ ಓವರ್ ಬೌಲ್ ಮಾಡಲು ಬಂದ ಹ್ಯಾರಿಸ್ ರೌಫ್, ಮೊದಲ ಎಸೆತ ಎಸೆದ ಬಳಿಕ ಎರಡನೇ ಎಸೆತದಲ್ಲಿ ಬೌಂಡರಿ ತಿಂದರು. ಅಂದರೆ, ಈಗ ಇಂಗ್ಲೆಂಡ್‌ಗೆ ಮುಂದಿನ 10 ಎಸೆತಗಳಲ್ಲಿ 5 ರನ್ ಗಳಿಸಲು ಬಾಕಿಯಿತ್ತು ಮತ್ತು ಕೈಯಲ್ಲಿ 3 ವಿಕೆಟ್ ಇತ್ತು. ಆದರೆ ಈ ಕ್ರಿಕೆಟ್ ಕಥೆಯಲ್ಲಿ ಟ್ವಿಸ್ಟ್ ಬಂದಿದ್ದು ಇಲ್ಲೇ. ಹ್ಯಾರಿಸ್ ರೌಫ್ ಮೂರನೇ ಎಸೆತದಲ್ಲಿ ಲಿಯಾಮ್ ಡಾಸನ್ ಮತ್ತು ನಾಲ್ಕನೇ ಎಸೆತದಲ್ಲಿ ಸ್ಟೋನ್ ಅವರನ್ನು ಬ್ಯಾಕ್ ಟು ಬ್ಯಾಕ್ ಔಟ್ ಮಾಡಿದರು. ಆದ್ದರಿಂದ ಈಗ 8 ಎಸೆತಗಳಲ್ಲಿ 5 ರನ್ ಗಳಿಸುವ ಗುರಿ ಇಂಗ್ಲೆಂಡಿನ ಮುಂದೆ ಉಳಿದಿತ್ತು. ಆದರೆ ಇಂಗ್ಲೆಂಡ್ ಪಾಳಯದಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಉಳಿದಿತ್ತು. ರೌಫ್ ಅವರ 5 ನೇ ಎಸೆತದಲ್ಲಿ ಟೋಪ್ಲಿ ಲೆಗ್ ಬೈನಿಂದ ಸಿಂಗಲ್ ಪಡೆದರು. ಬಳಿಕ ಓವರ್‌ನ ಕೊನೆಯ ಎಸೆತವು ಡಾಟ್ ಆಗಿತ್ತು.
Rauftaar Humara Superstar ?
Scorecard ? https://t.co/mGfd5sJZjj#PAKvENG #UKsePK #CricketTwitterpic.twitter.com/toVoPk0I8n
— CricWick (@CricWick) September 25, 2022
ಶಾನ್ ಮಸೂದ್ ಸ್ಟ್ರೈಟ್ ಹಿಟ್
ಅಂತಿಮವಾಗಿ ಇಂಗ್ಲೆಂಡ್‌ಗೆ ಕೊನೆಯ ಓವರ್‌ನಲ್ಲಿ 4 ರನ್ ಗಳಿಸುವ ಗುರಿ ಇದ್ದರೆ, 1 ವಿಕೆಟ್ ಮಾತ್ರ ಅವರ ಕೈಯಲ್ಲಿತ್ತು. ಕೊನೆಯ ಓವರ್ ಎಸೆತಯಲು ಬಂದ ಮೊಹಮ್ಮದ್ ವಾಸಿಂ, ಓವರ್‌ನ ಮೊದಲ ಎಸೆತವನ್ನು ಡಾಟ್ ಮಾಡಿದರು. ಎರಡನೆಯ ಎಸೆತದಲ್ಲಿ ಸ್ಟ್ರೈಕ್ನಲ್ಲಿದ ಟೋಪ್ಲಿ ಸಿಂಗಲ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಶಾರ್ಟ್ ಮಿಡ್ ವಿಕೆಟ್ನಲ್ಲಿ ನಿಂತಿದ್ದ ಶಾನ್ ಮಸೂದ್ ಅದ್ಭುತ ಫೀಲ್ಡಿಂಗ್ ಮಾಡಿ ನೇರವಾಗಿ ವಿಕೆಟ್ಗೆ ಬಾಲನ್ನು ಎಸೆಯುವ ಮೂಲಕ ಟೋಪ್ಲಿಯನ್ನು ರನ್ ಔಟ್ ಮಾಡಿದರು.
Top throw from Shan Masood in clutch finish ?
Incredible scenes in Karachi! ??#PAKvENG | #UKSePK pic.twitter.com/1MeKn5sijn
— Pakistan Cricket (@TheRealPCB) September 25, 2022
ಈ ರೀತಿಯಾಗಿ ಪಾಕ್ ತಂಡ ಯಾರೂ ಊಹಿಸದ ರೀತಿಯಲ್ಲಿ 3 ರನ್‌ಗಳಿಂದ ರೋಚಕ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್ ತಂಡ 167 ರನ್‌ಗಳ ಗುರಿ ನೀಡಿತ್ತು. ಉತ್ತರವಾಗಿ ಇಂಗ್ಲೆಂಡ್ ತಂಡ 19.2 ಓವರ್‌ಗಳಲ್ಲಿ 163 ರನ್ ಗಳಿಸಲಷ್ಟೇ ಶಕ್ತವಾಯಿತು. ಪಾಕಿಸ್ತಾನದ ಈ ಗೆಲುವಿನೊಂದಿಗೆ 7 ಪಂದ್ಯಗಳ ಟಿ20 ಸರಣಿ 2-2 ರಲ್ಲಿ ಸಮಬಲಗೊಂಡಿದೆ.
Published On - 3:14 pm, Mon, 26 September 22