ಐಸಿಸಿ ಮಹಿಳಾ ಟಿ20 ವಿಶ್ವಕಪ್ ಸೆಮಿ ಫೈನಲ್ನ ಭಾರತ ಹಾಗೂ ಆಸ್ಟ್ರೇಲಿಯಾ (India Women vs Australia Women) ನಡುವಣ ಪಂದ್ಯ ತುದಿಗಾಲಿನಲ್ಲಿ ನಿಲ್ಲಿಸಿತ್ತು. ಕೊನೆಯ ಎಸೆತದ ವರೆಗೂ ರೋಚಕತೆ ಸೃಷ್ಟಿಸಿದ್ದ ಮ್ಯಾಚ್ನಲ್ಲಿ ಆಸ್ಟ್ರೇಲಿಯಾ 5 ರನ್ಗಳ ಜಯ ಸಾಧಿಸಿ ಫೈನಲ್ಗೆ ಲಗ್ಗೆಯಿಟ್ಟಿತು. ಟೀಮ್ ಇಂಡಿಯಾಕ್ಕೆ ದೊಡ್ಡ ಮೊತ್ತದ ಟಾರ್ಗೆಟ್ ಇದ್ದರೂ ಗೆಲುವು ಅಸಾಧ್ಯವಾಗಿರಲಿಲ್ಲ. ಹರ್ಮನ್ಪ್ರೀತ್ ಕೌರ್ ಹಾಗೂ ಜೆಮಿಮಾ ರೋಡ್ರಿಗಸ್ (Jemimah Rodrigues) ನಡುವಣ ಜೊತೆಯಾಟ ಮುಂದುವರೆದಿದ್ದರೆ ಭಾರತೀಯ ವನಿತೆಯರು ಸುಲಭ ಜಯ ಸಾಧಿಸುತ್ತಿದ್ದರು. ಜೆಮಿಯಾ ನಿರ್ಗಮನ ಹಾಗೂ ಹರ್ಮನ್ ರನೌಟ್ ಪಂದ್ಯದ ಗತಿಯನ್ನೇ ಬದಲಾಯಿಸಿತು. ಅದರಲ್ಲೂ ಕೌರ್ ಔಟಾಗಿದ್ದು ದುರದೃಷ್ಟಕರ ಎಂದೇ ಹೇಳಬಹುದು. ಇದರಿಂದ ಕೋಪಗೊಂಡ ಹರ್ಮನ್ (Harmanpreet Kaur) ಮೈದಾನದಲ್ಲೇ ಬ್ಯಾಟ್ ಎಸೆತದ ಘಟನೆ ಕೂಡ ನಡೆಯಿತು.
ಜೆಮಿಮಾ ಔಟಾದ ಬಳಿಕ ಕ್ರೀಸ್ಗೆ ಬಂದ ರಿಚ್ಚಾ ಘೋಷ್ ಜೊತೆ ಹರ್ಮನ್ ಇನ್ನಿಂಗ್ಸ್ ಕಟ್ಟಲು ಹೊರಟಿದ್ದರು. ಕೊನೆಯ 5 ಓವರ್ಗಳಲ್ಲಿ ಭಾರತದ ಗೆಲುವಿಗೆ 49 ರನ್ಗಳ ಅವಶ್ಯತೆಯಿತ್ತು. 15ನೇ ಓವರ್ನಲ್ಲಿ ಸ್ಫೋಟಕ ಬ್ಯಾಟಿಂಗ್ಗೆ ಮುಂದಾದ ಕೌರ್ ಅವರು ಜಾರ್ಜಿಯಾ ವೇರ್ಹ್ಯಾಮ್ ಬೌಲಿಂಗ್ನ ಮೊದಲ ಎರಡು ಎಸೆತಗಳಲ್ಲಿ ಸತತವಾಗಿ ಚೆಂಡನ್ನು ಬೌಂಡರಿಗೆ ಅಟ್ಟಿ ಅರ್ಧಶತಕ ಸಿಡಿಸಿದರು. ಈ ಸಂದರ್ಭ ಭಾರತದ ಗೆಲುವು ಮತ್ತಷ್ಟು ಸನಿಹವಾಯಿತು. ಆದರೆ, 4ನೇ ಎಸೆತದಲ್ಲಿ 2 ರನ್ ಕಲೆಹಾಕಲು ಹೋಗಿ ಕೌರ್ ರನೌಟ್ಗೆ ಬಲಿಯಾಗಬೇಕಾಯಿತು.
SRH All Captains List: SRH ತಂಡವನ್ನು ಮುನ್ನಡೆಸಿದ 8 ನಾಯಕರುಗಳು ಯಾರು ಗೊತ್ತಾ?
ಡೀಪ್ ಮಿಡ್ ವಿಕೆಟ್ ಕಡೆ ಚೆಂಡನ್ನು ಅಟ್ಟಿದ ಕೌರ್ ಎರಡು ರನ್ ಸುಲಭವಾಗಿ ಕಲೆಹಾಕಬಹುದಾಗಿತ್ತು. ಆದರೆ, ಎರಡನೇ ರನ್ ಕಂಪ್ಲೀಟ್ ಮಾಡಲು ಗೆರೆ ಮುಟ್ಟುವ ಸಂದರ್ಭ ಕೌರ್ ಅವರ ಬ್ಯಾಟ್ ನೆಲದಲ್ಲಿ ಸ್ಟ್ರಕ್ ಆದ ಕಾರಣ ಕಾಲನ್ನು ಕ್ರೀಸ್ ಒಳಗೆ ಇಡಲು ಕೊಂಚ ತಡವಾಯಿತು. ಈ ಸಂದರ್ಭ ವಿಕೆಟ್ ಕೀಪರ್ ಚೆಂಡನ್ನು ವಿಕೆಟ್ಗೆ ಬಡಿದಾಗಿತ್ತು. ಹೀಗೆ ದುರದೃಷ್ಟಕರವಾಗಿ ಔಟಾದ ಹರ್ಮನ್ ಪೆವಿಲಿಯನ್ ಕಡೆ ಸಾಗುವಾಗ ಮೈದಾನದಲ್ಲೇ ಕೋಪಗೊಂಡು ಬ್ಯಾಟ್ ಅನ್ನು ಎಸೆದ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರ ನಡುವೆ ಕೆಲವರು ಕೌರ್ ಔಟಾಗಿದ್ದನ್ನು 2019 ಏಕದಿನ ವಿಶ್ವಕಪ್ನಲ್ಲಿ ಎಂಎಸ್ ಧೋನಿ ಔಟಾದ ರೀತಿಗೆ ಹೋಲಿಸುತ್ತಿದ್ದಾರೆ.
Different year, different tournament, same old heartbreak!??
A billion hopes shattered#INDWvAUSW #T20WorldCup2023#HarmanpreetKaur pic.twitter.com/Bel89ncBJt— Vikash PANDIT (@vikashpandit__) February 24, 2023
ಪಂದ್ಯ ಮುಗಿದ ಬಳಿಕ ತಾನು ಔಟಾದ ಬಗ್ಗೆ ಮಾತನಾಡಿದ ಕೌರ್, ”ಇದು ನಮ್ಮ ದುರದೃಷ್ಟಕರ ಎಂದು ಹೇಳಬಹುದು. ನಾನು ರನ್ ಔಟ್ ಆದ ರೀತಿ, ಅದಕ್ಕಿಂತ ದುರದೃಷ್ಟಕರವಾಗಿರಲು ಸಾಧ್ಯವಿಲ್ಲ. ನಾನು ಮತ್ತು ಜೆಮಿಮಾ ಸಾಕಷ್ಟು ಪ್ರಯತ್ನ ಪಟ್ಟು ಮೂಮೆಂಟಮ್ ಅನ್ನು ತಂದಿದ್ದೆವು. ಆದರೆ, ಇಷ್ಟಾಗಿಯು ನಾವು ಸೋಲು ಕಂಡಿದ್ದೇವೆ. ಫಲಿತಾಂಶ ನಮ್ಮ ಕಡೆ ಆಗಲಿಲ್ಲ ನಿಜ. ಆದರೆ, ನಾವು ಈ ಟೂರ್ನಮೆಂಟ್ನಲ್ಲಿ ಆಡಿದ ರೀತಿ ಖುಷಿ ತಂದಿದೆ. ಕೆಲ ಸುಲಭ ಕ್ಯಾಚ್ಗಳನ್ನು ಬಿಟ್ಟುಕೊಟ್ಟಿದ್ದೇವೆ. ಫೀಲ್ಡಿಂಗ್ನಲ್ಲಿ ತಪ್ಪು ಮಾಡಿದ್ದೇವೆ. ಇದೆಲ್ಲವನ್ನು ಸರಿಪಡಿಸಿ ಇನ್ನಷ್ಟು ಶ್ರಮವಹಿಸಿ ಬಲಿಷ್ಠವಾಗಿ ಬರುತ್ತೇವೆ,” ಎಂದು ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:21 am, Fri, 24 February 23