Harmanpreet Kaur: ಭಾರತ ದೇಶ ನಾನು ಅಳುವುದನ್ನು ನೋಡಲು ಬಯಸಲ್ಲ, ಅದಕ್ಕೆ ಸನ್​ಗ್ಲಾಸ್ ಹಾಕಿದ್ದೇನೆ: ಹರ್ಮನ್ ಭಾವುಕ ನುಡಿ

India Women vs Australia Women, T20 World Cup: ಐಸಿಸಿ ಮಹಿಳಾ ಟಿ20 ವಿಶ್ವಕಪ್​ 2023ರ ಸೆಮಿ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮಹಿಳಾ ತಂಡ ಸೋಲು ಕಂಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕಿ ಹರ್ಮನ್​ಪ್ರೀತ್ ಕೌರ್ ಏನು ಹೇಳಿದರು ನೋಡಿ.

Harmanpreet Kaur: ಭಾರತ ದೇಶ ನಾನು ಅಳುವುದನ್ನು ನೋಡಲು ಬಯಸಲ್ಲ, ಅದಕ್ಕೆ ಸನ್​ಗ್ಲಾಸ್ ಹಾಕಿದ್ದೇನೆ: ಹರ್ಮನ್ ಭಾವುಕ ನುಡಿ
Harmanpreet Kaur Post Match
Follow us
Vinay Bhat
|

Updated on:Feb 24, 2023 | 8:04 AM

ಐಸಿಸಿ ಮಹಿಳಾ ಟಿ20 ವಿಶ್ವಕಪ್​ನಲ್ಲಿ (ICC Womens T20 World Cup) ಚೊಚ್ಚಲ ಬಾರಿಗೆ ಕಪ್ ಎತ್ತಿ ಹಿಡಿಯುವ ಭಾರತೀಯ ವನಿತೆಯರ ಕನಸು ಈ ಬಾರಿ ಕೂಡ ನನಸಾಗಲಿಲ್ಲ. ಈ ಹಿಂದೆ ಎರಡು ಬಾರಿ ಫೈನಲ್​ ತಲುಪಿದ್ದ ಟೀಮ್ ಇಂಡಿಯಾ ಈ ಬಾರಿ ಸೆಮಿ ಫೈನಲ್​ನಲ್ಲಿ ನಿರ್ಗಮಿಸಿತು. ಆಸ್ಟ್ರೇಲಿಯಾ ಮಹಿಳೆಯರ ವಿರುದ್ಧ ಸೋಲಿನ ಕೆಟ್ಟ ದಾಖಲೆ ಹೊಂದಿರುವ ಭಾರತ ಮತ್ತದೆ ತಪ್ಪು ಎಸಗಿ ನಿರಾಸೆ ಮೂಡಿಸಿತು. ನಾಯಕಿ ಹರ್ಮನ್​ಪ್ರೀತ್ ಕೌರ್ (Harmanpreet Kaur) ಹಾಗೂ ಜೆಮಿಮಾ ರೋಡ್ರಿಗಸ್ (Jemimah Rodrigues) ಹೋರಾಟಕ್ಕೆ ಫಲ ಸಿಗಲಿಲ್ಲ. ಕೊನೆಯ ಓವರ್ ವರೆಗೂ ತುದಿಗಾಲಿನಲ್ಲಿ ನಿಲ್ಲಿಸಿದ್ದ ಪಂದ್ಯದಲ್ಲಿ ಕಾಂಗರೂ ಪಡೆ 5 ರನ್​ಗಳ ರೋಚಕ ಜಯ ಸಾಧಿಸಿ ಫೈನಲ್​ಗೆ ಪ್ರವೇಶ ಪಡೆದಿದೆ. ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ನಾಯಕಿ ಹರ್ಮನ್​ಪ್ರೀತ್ ಭಾವುಕರಾದ ಘಟನೆ ಕೂಡ ನಡೆಯಿತು.

ಸಾಮಾನ್ಯವಾಗಿ ಪಂದ್ಯ ಮುಗಿದ ಬಳಿಕ ಉಭಯ ತಂಡಗಳ ಕ್ಯಾಪ್ಟನ್ ಅನ್ನು ಕರೆಸಿ ಮಾತನಾಡಿಸುವುದು ವಾಡಿಕೆ. ಅದರಂತೆ ಭಾರತದ ನಾಯಕಿ ಹರ್ಮನ್​ಪ್ರೀತ್ ಕೌರ್ ಮಾತನಾಡಲು ಬಂದಾಗ ಸನ್​ಗ್ಲಾಸ್ ಹಾಕಿದ್ದರು. ಇದಕ್ಕೆ ಅವರು ನೀಡಿದ ಕಾರಣ ಭಾರತೀಯರನ್ನು ಮತ್ತಷ್ಟು ಭಾವುಕರನ್ನಾಗಿ ಮಾಡಿತು. ”ನನ್ನ ದೇಶ ನಾನು ಅಳುವುದನ್ನು ನೋಡಲು ಬಯಸುವುದಿಲ್ಲ, ಅದಕ್ಕಾಗಿ ಸನ್​ಗ್ಲಾಸ್ ಧರಿಸಿದ್ದೇನೆ. ನಾವು ಮಾಡಿದ ತಪ್ಪುಗಳನ್ನು ತಿದ್ದಿ ಇನ್ನಷ್ಟು ಬಲಿಷ್ಠವಾಗಿ ಬರುತ್ತೇವೆ. ನಮ್ಮ ದೇಶ ಪುನಃ ಈರೀತಿ ನಿರಾಸೆ ಅನುಭವಿಸುವಂತೆ ಮಾಡುವುದಿಲ್ಲ, ಇದು ನಾನು ನೀಡುತ್ತಿರುವ ಭರವಸೆ,” ಎಂದು ಹರ್ಮನ್ ಹೇಳಿದ್ದಾರೆ.

IND vs AUS ODI Series: ಭಾರತ ವಿರುದ್ಧದ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಗ್ಲೆನ್ ಮ್ಯಾಕ್ಸ್​ವೆಲ್ ಕಮ್​ಬ್ಯಾಕ್

ಇದನ್ನೂ ಓದಿ
Image
INDW vs AUSW: ಹರ್ಮನ್-ಜೆಮಿಮಾ ಕೆಚ್ಚೆದೆಯ ಹೋರಾಟಕ್ಕೆ ಮನಸೋತ ಭಾರತೀಯರು: ಫೋಟೋ ನೋಡಿ
Image
Rohit Sharma: ರೋಹಿತ್ ಶರ್ಮಾ ಫಿಟ್​ನೆಸ್ ಬಗ್ಗೆ ಪ್ರಶ್ನೆಗಳನ್ನೆತ್ತಿದ ಕಪಿಲ್ ದೇವ್
Image
IPL 2023: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್ ನೀಡಿದ ಸ್ಟಾರ್ ಆಟಗಾರ
Image
T20 World Cup 2023: ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಕನಸು ಭಗ್ನ

ಮಾತು ಮುಂದುವರೆಸಿದ ಅವರು, ”ಇದು ನಮ್ಮ ದುರದೃಷ್ಟಕರ ಎಂದು ಹೇಳಬಹುದು. ನಾನು ಮತ್ತು ಜೆಮಿಮಾ ಸಾಕಷ್ಟು ಪ್ರಯತ್ನ ಪಟ್ಟು ಮೂಮೆಂಟಮ್ ಅನ್ನು ತಂದಿದ್ದೆವು. ಆದರೆ, ಇಷ್ಟಾಗಿಯು ನಾವು ಸೋಲು ಕಂಡಿದ್ದೇವೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಾನು ರನ್ ಔಟ್ ಆದ ರೀತಿ, ಅದಕ್ಕಿಂತ ದುರದೃಷ್ಟಕರವಾಗಿರಲು ಸಾಧ್ಯವಿಲ್ಲ. ಒಂದು ಪಂದ್ಯಕ್ಕಾಗಿ ಶ್ರಮ ವಹಿಸುವುದು ಮುಖ್ಯ. ಕೊನೆಯ ಎಸೆತದ ವರೆಗೂ ಹೋರಾಡುವ ಬಗ್ಗೆ ನಾವು ಮಾತನಾಡಿಕೊಂಡಿದ್ದೆವು. ಫಲಿತಾಂಶ ನಮ್ಮ ಕಡೆ ಆಗಲಿಲ್ಲ ನಿಜ. ಆದರೆ, ನಾವು ಈ ಟೂರ್ನಮೆಂಟ್​ನಲ್ಲಿ ಆಡಿದ ರೀತಿ ಖುಷಿ ತಂದಿದೆ.”

”ನಾವು ಆರಂಭದಲ್ಲಿ ಕೆಲವು ವಿಕೆಟ್​ಗಳನ್ನು ಕಳೆದುಕೊಂಡರೂ ನಮ್ಮ ಬ್ಯಾಟಿಂಗ್ ಸರದಿ ದೊಡ್ಡದಿದೆ. ಜೆಮಿಮಾ ಅವರಿಗೆ ಇಂದು ಕ್ರೆಡಿಟ್ ನೀಡಬೇಕು. ಕಷ್ಟದ ಸಂದರ್ಭದಲ್ಲಿ ನೆರವಾಗಿದ್ದಾರೆ. ಈರೀತಿಯ ಆಟವನ್ನು ನೋಡಲು ಖುಷಿ ಆಗುತ್ತದೆ. ನಾವು ಇಂದು ನಮ್ಮ ನೈಜ್ಯ ಆಟ ಆಡಲಿಲ್ಲ ಎಂದೆನಿಸುತ್ತದೆ. ಆದರೂ ಸೆಮಿ ಫೈನಲ್ ವರೆಗೂ ತಲುಪಿದೆವು. ಕೆಲ ಸುಲಭ ಕ್ಯಾಚ್​ಗಳನ್ನು ಬಿಟ್ಟುಕೊಟ್ಟಿದ್ದೇವೆ. ನಾವು ಗೆಲ್ಲಬೇಕು ಎಂದಾದಾಗ ಇವುಗಳ ಪಡೆದುಕೊಳ್ಳಬೇಕು. ಮಿಸ್ ಫೀಲ್ಡ್ ಕೂಡ ನಮ್ಮಿಂದಾಗಿದೆ. ಈ ಎಲ್ಲ ತಪ್ಪುಗಳು ಮರುಕಳಿಸದಂತೆ ಸರಿ ಪಡಿಸಿ ಮುಂದು ಸಾಗುತ್ತೇವೆ,” ಎಂದು ಹರ್ಮನ್​ಪ್ರೀತ್ ಕೌರ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಆಸ್ಟ್ರೇಲಿಯಾ ಪರ ಓಪನರ್​ಗಳಾದ ಬೆತ್ ಮೂನಿ (54) ಮತ್ತು ಅಲಿಸ್ಸಾ ಹೀಲಿ (25) ಭರ್ಜರಿ ಆರಂಭ ಒದಗಿಸಿದರು. ನಾಯಕಿ ಮೆಗ್ ಲ್ಯಾನಿಂಗ್ (49) ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ಆಶ್ಲೀಗ್ ಗಾರ್ಡ್ನರ್ ಕೇವಲ 18 ಎಸೆತಗಳಲ್ಲಿ 31 ರನ್ ಕಲೆಹಾಕಿದರುಆಸ್ಟ್ರೇಲಿಯಾ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೂರನೇ ವಿಕೆಟ್​ಗೆ ಹರ್ಮನ್ (54) ಹಾಗೂ ಜೆಮಿಮಾ (43) ಜೊತೆಯಾಗಿ ಗೆಲುವಿಗೆ ಹೋರಾಡಿದರು. ಆದರೆ, ಭಾರತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:04 am, Fri, 24 February 23

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ