AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂದು ಧೋನಿ.. ಇಂದು ಹರ್ಮನ್‌ಪ್ರೀತ್; ಭಾರತೀಯರಿಗೆ ಆಘಾತ ನೀಡಿದ 2 ರನೌಟ್​ಗಳ ವಿಡಿಯೋ ಹಂಚಿಕೊಂಡ ಐಸಿಸಿ

ICC Women's T20 World Cup 2023: ಹರ್ಮನ್‌ಪ್ರೀತ್ ಮತ್ತು ಎಂಎಸ್ ಧೋನಿ ರನೌಟ್ ಆಗಿದ್ದು ಕೋಟಿಗಟ್ಟಲೆ ಜನರ ಹೃದಯ ಒಡೆಯುವಂತೆ ಮಾಡಿದೆ ಎಂದು ಐಸಿಸಿ ಬರೆದುಕೊಂಡಿದೆ.

ಅಂದು ಧೋನಿ.. ಇಂದು ಹರ್ಮನ್‌ಪ್ರೀತ್; ಭಾರತೀಯರಿಗೆ ಆಘಾತ ನೀಡಿದ 2 ರನೌಟ್​ಗಳ ವಿಡಿಯೋ ಹಂಚಿಕೊಂಡ ಐಸಿಸಿ
ಧೋನಿ, ಹರ್ಮನ್​ಪ್ರೀತ್ ರನೌಟ್
ಪೃಥ್ವಿಶಂಕರ
|

Updated on:Feb 24, 2023 | 10:13 AM

Share

ಮತ್ತೊಮ್ಮೆ ವಿಶ್ವ ಚಾಂಪಿಯನ್ ಆಗುವ ಭಾರತದ ಮಹಾ ಕನಸು ಭಗ್ನಗೊಂಡಿದೆ. ಮಹಿಳಾ ಟಿ20 ವಿಶ್ವಕಪ್‌ನ (Women’s T20 World Cup) ಸೆಮಿಫೈನಲ್‌ನಲ್ಲಿ ಭಾರತ ತಂಡವನ್ನು 5 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ (India Vs Australia) ಫೈನಲ್​ಗೇರಿದೆ. ಈ ಮೂಲಕ ವಿಶ್ವಕಪ್ ಗೆಲ್ಲಬೇಕೆನ್ನುವ ಹರ್ಮನ್‌ಪ್ರೀತ್ ಕೌರ್ ಮಹದಾಸೆಗೆ ಆಸೀಸ್ ವನಿತೆಯರು ತಣ್ಣೀರೆರಚ್ಚಿದ್ದಾರೆ. ವಾಸ್ತವವಾಗಿ ಆಸೀಸ್ ನೀಡಿದ 173 ರನ್‌ಗಳ ಗುರಿಯನ್ನು ಸುಲಭವಾಗಿ ಸಾಧಿಸುವ ಹಂತದಲ್ಲಿದ್ದ ಟೀಂ ಇಂಡಿಯಾ ನಾಯಕಿಯ ಅದೊಂದು ಅಜಾಗರೂಕತೆಯಿಂದ ಸೋಲನನುಭವಿಸಿತು. ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಗೆಲುವಿಗಾಗಿ ಹೋರಾಟ ನಡೆಸಿದರಾದರೂ, ತಾವು ಮಾಡಿದ ತಪ್ಪಿನಿಂದಲೇ ತಂಡದ ಸೋಲಿಗೆ ಕಾರಣರಾದರು. ಭಾರತದ ಪರ ಗರಿಷ್ಠ 52 ರನ್ ಗಳಿಸಿ, ತಂಡಕ್ಕೆ ಗೆಲುವು ತರಲು ತುದಿಗಾಲಿನಲ್ಲಿ ನಿಂತಿದ್ದ ಹರ್ಮನ್​ಪ್ರೀತ್ ವಿಕೆಟ್ ಒಪ್ಪಿಸಿದ ರೀತಿ ಮಾತ್ರ ಸಾವಿರಾರು ಅಭಿಮಾನಿಗಳಿಗೆ ಶಾಕ್ ನೀಡಿತು. ಇದೀಗ ಕೌರ್ ರನ್ ಔಟ್ ಆದ ರೀತಿ, ಈ ಹಿಂದೆ, ವಿಶ್ವಕಪ್ ಸೆಮಿಫೈನಲ್​ನಲ್ಲಿ ಎಂಎಸ್ ಧೋನಿ (Ms Dhoni) ಆಗಿದ್ದ ರನೌಟ್ ನೆನಪಿಸುತ್ತಿದ್ದು, ಈ ಎರಡು ರನೌಟ್​ಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಾಸ್ತವವಾಗಿ ಆಸೀಸ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಟಾಪ್ ಆರ್ಡರ್ ಅಂದರೆ, ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ಆದರೆ ತಂಡದ ಜವಬ್ದಾರಿವಹಿಸಿಕೊಂಡ ನಾಯಕಿ ಹರ್ಮನ್‌ಪ್ರೀತ್ ತಂಡದ ಗೆಲುವಿನ ಭರವಸೆಯನ್ನು ಜೀವಂತವಾಗಿಡಲು ಏಕಾಂಗಿ ಹೋರಾಟ ನಡೆಸಿದರು. ಆದರೆ ಪಂದ್ಯವು ನಿರ್ಣಾಯಕ ಹಂತವನ್ನು ತಲುಪಿದಾಗ ಹರ್ಮನ್​ಪ್ರೀತ್ ವಿಕೆಟ್ ಒಪ್ಪಿಸಿದ ರೀತಿ ಮಾತ್ರ ಕೋಟ್ಯಾಂತರ ಅಭಿಮಾನಿಗಳ ಹೃದಯ ಒಡೆಯುವಂತೆ ಮಾಡಿತು.

IND vs PAK: ಟಿ20 ವಿಶ್ವಕಪ್​ನಲ್ಲಿ ಪಾಕ್ ತಂಡಕ್ಕೆ ಮಣ್ಣು ಮುಕ್ಕಿಸಿ 5 ದಾಖಲೆ ನಿರ್ಮಿಸಿದ ಟೀಂ ಇಂಡಿಯಾ..!

ಹರ್ಮನ್‌ಪ್ರೀತ್ ರನ್ ಔಟ್‌ನಿಂದ ಕನಸು ಭಗ್ನ

ವಾಸ್ತವವಾಗಿ ಭಾರತದ ಇನ್ನಿಂಗ್ಸ್​ನ 15ನೇ ಓವರ್​ನ 5ನೇ ಎಸೆತವನ್ನು ಆಡಿದ ಹರ್ಮನ್‌ಪ್ರೀತ್‌ ಎರಡು ರನ್ ಕದಿಯಲು ಓಡಿದರು. ಈ ವೇಳೆ ಒಂದು ರನ್​ ಅನ್ನು ಸುಲಭವಾಗಿ ತೆಗೆದುಕೊಂಡ ಕೌರ್, ಎರಡನೇ ರನ್​ ಅನ್ನು ಸುಲಭವಾಗಿ ತೆಗೆದುಕೊಳ್ಳುವ ಸಲುವಾಗಿ ಓಡಲಾರಂಭಿಸಿದರು. ಆದರೆ ಅವರು ಕ್ರೀಸ್​ ಬಳಿಕ ಬರುವಷ್ಟರಲ್ಲೇ ಚೆಂಡು ವಿಕೆಟ್ ಕೀಪರ್ ಹತ್ತಿರ ಬಂದಿತ್ತು. ಇದನ್ನು ಗಮನಿಸಿದ ಕೌರ್ ತಮ್ಮ ಬ್ಯಾಟನ್ನು ಕ್ರೀಸ್​ ಒಳಗೆ ಜಾರಿಸಲು ಪ್ರಯತ್ನಿಸಿದರು. ಆದರೆ ನೆಲಕ್ಕೆ ಕಚ್ಚಿಕೊಂಡ ಬ್ಯಾಟ್‌ ಮುಂದಕ್ಕೆ ಜಾರಲೇ ಇಲ್ಲ. ಹೀಗಾಗಿ ಸಮಯಕ್ಕೆ ಸರಿಯಾಗಿ ಕ್ರೀಸ್‌ ತಲುಪಲು ಸಾಧ್ಯವಾಗದೆ ಕೌರ್ ರನೌಟ್ ಆಗಿ ಪೆವಿಲಿಯನ್‌ಗೆ ಮರಳಬೇಕಾಯಿತು. ಹರ್ಮನ್‌ಪ್ರೀತ್ ರೂಪದಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಹರ್ಮನ್‌ಪ್ರೀತ್‌ ಔಟಾದ ಬಳಿಕ ಮತ್ತೊಮ್ಮೆ ಭಾರತದ ಇನ್ನಿಂಗ್ಸ್‌ ತತ್ತರಿಸಿತು. ಪೆವಿಲಿಯನ್‌ಗೆ ಹಿಂತಿರುಗುವಾಗ ಅವರ ಮುಖದಲ್ಲಿ ಔಟಾದ ನಿರಾಸೆ ಸ್ಪಷ್ಟವಾಗಿ ಕಾಣುತ್ತಿತ್ತು.

ಧೋನಿ ರನೌಟ್ ನೆನಪಾಯ್ತು

ಹರ್ಮನ್‌ಪ್ರೀತ್ ಅವರ ರನ್ ಔಟ್ ಎಲ್ಲರಿಗೂ ಎಂಎಸ್ ಧೋನಿಯನ್ನು ನೆನಪಿಸಿತು. ಇದರ ವಿಡಿಯೋವನ್ನು ಐಸಿಸಿ ಹಂಚಿಕೊಂಡಿದ್ದು, ಹರ್ಮನ್‌ಪ್ರೀತ್ ಮತ್ತು ಎಂಎಸ್ ಧೋನಿ ರನೌಟ್ ಆಗಿದ್ದು ಕೋಟಿಗಟ್ಟಲೆ ಜನರ ಹೃದಯ ಒಡೆಯುವಂತೆ ಮಾಡಿದೆ ಎಂದು ಬರೆದುಕೊಂಡಿದೆ. ವಾಸ್ತವವಾಗಿ, 2019 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ ಧೋನಿ ಆಸರೆಯಾಗಿದ್ದರು.

View this post on Instagram

A post shared by ICC (@icc)

ಕಣ್ಣೀರಿಟ್ಟಿದ್ದ ಅಭಿಮಾನಿಗಳು

ಈ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಧೋನಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಈ ವೇಳೆ 50 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಧೋನಿ, ಡೀಪ್‌ನಿಂದ ಮಾರ್ಟಿನ್ ಗಪ್ಟಿಲ್ ಎಸೆದ ನೇರ ಎಸೆತದಲ್ಲಿ ರನೌಟ್ ಆದರು. ಸ್ವಲ್ಪದರಲ್ಲೇ ಧೋನಿ ರನೌಟ್​ ಆಗಿದ್ದನ್ನು ನೋಡಿದ ತಕ್ಷಣ ಭಾರತೀಯ ಡ್ರೆಸ್ಸಿಂಗ್ ಸೇರಿದಂತೆ ಇಡೀ ದೇಶವೇ ಕಣ್ಣೀರಿಟ್ಟಿತ್ತು. ಸ್ವತಃ ಧೋನಿ ಕೂಡ ಕಣ್ಣಲ್ಲಿ ನೀರು ತುಂಬಿಕೊಂಡು ಪೆವಿಲಿಯನ್​ಗೆ ಮರಳಿದರು. ಇದೀಗ ಧೋನಿ ರನೌಟ್ ಜೊತೆಗೆ ಹರ್ಮನ್‌ಪ್ರೀತ್ ಆದ ರನ್ ಔಟ್ ವಿಡಿಯೋ ಮತ್ತೊಮ್ಮೆ ಕೋಟ್ಯಂತರ ಭಾರತೀಯರ ಹೃದಯ ಒಡೆಯುವಂತೆ ಮಾಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:10 am, Fri, 24 February 23

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ