AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಸರಣಿಗೂ ಮುನ್ನ ಯುವ ಆಟಗಾರನಿಗೆ ಉಪನಾಯಕತ್ವ ನೀಡಿದ ಇಂಗ್ಲೆಂಡ್

India vs England: ಭಾರತದ ವಿರುದ್ಧದ ಸರಣಿಗೂ ಮುನ್ನ ಇಂಗ್ಲೆಂಡ್ ತಂಡದ ಉಪನಾಯಕ ಬದಲಾಗಿದ್ದಾರೆ. ಈ ಹಿಂದೆ ಇಂಗ್ಲೆಂಡ್ ತಂಡದ ವೈಸ್ ಕ್ಯಾಪ್ಟನ್ ಆಗಿ ಆಲ್​ರೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ 25 ವರ್ಷದ ಹ್ಯಾರಿ ಬ್ರೂಕ್​ಗೆ ಉಪನಾಯಕ ಪಟ್ಟ ನೀಡಲಾಗಿದೆ. ಇನ್ನು ಜೋಸ್ ಬಟ್ಲರ್ ನಾಯಕನಾಗಿ ಮುಂದುವರೆದಿದ್ದಾರೆ.

ಟೀಮ್ ಇಂಡಿಯಾ ಸರಣಿಗೂ ಮುನ್ನ ಯುವ ಆಟಗಾರನಿಗೆ ಉಪನಾಯಕತ್ವ ನೀಡಿದ ಇಂಗ್ಲೆಂಡ್
England
ಝಾಹಿರ್ ಯೂಸುಫ್
|

Updated on: Jan 21, 2025 | 9:53 AM

Share

ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಯು ಜನವರಿ 22 ರಿಂದ ಶುರುವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನ ಯುವ ದಾಂಡಿಗ ಹ್ಯಾರಿ ಬ್ರೂಕ್ ಅವರನ್ನು ಇಂಗ್ಲೆಂಡ್ ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ಅದರಂತೆ ಮುಂಬರುವ ಸರಣಿಗಳಲ್ಲಿ ಹಾಗೂ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡದ ವೈಸ್ ಕ್ಯಾಪ್ಟನ್ ಆಗಿ 25 ವರ್ಷದ ಬ್ರೂಕ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಇಂಗ್ಲೆಂಡ್ ತಂಡದ ಸೀಮಿತ ಓವರ್​​ಗಳ ತಂಡದ ನಾಯಕರಾಗಿ ಜೋಸ್ ಬಟ್ಲರ್ ಅವರನ್ನು ಮುಂದುವರೆಸಲಾಗಿದೆ. ಇದಾಗ್ಯೂ ಅವರು ಭಾರತದ ವಿರುದ್ಧದ ಸರಣಿಯಲ್ಲಿ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ.

ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ ಅವರಿಗೆ ವಿಕೆಟ್ ಕೀಪಿಂಗ್ ಜವಾಬ್ದಾರಿ ನೀಡಲು ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕಲಂ ನಿರ್ಧರಿಸಿದ್ದಾರೆ. ಹಾಗಾಗಿ ಜೋಸ್ ಬಟ್ಲರ್ ಕ್ಯಾಪ್ಟನ್ ಜವಾಬ್ದಾರಿಯೊಂದಿಗೆ ಫೀಲ್ಡಿಂಗ್ ಮಾಡಲಿದ್ದಾರೆ.

ಇಂಗ್ಲೆಂಡ್ ಏಕದಿನ ತಂಡ: ಜೋಸ್ ಬಟ್ಲರ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪನಾಯಕ), ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜಾಮಿ ಸ್ಮಿತ್, ಲಿಯಾಮ್ ಲಿವಿಂಗ್​ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

ಇಂಗ್ಲೆಂಡ್ ಟಿ20 ತಂಡ: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪನಾಯಕ), ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜಾಮಿ ಸ್ಮಿತ್, ಲಿಯಾಮ್ ಲಿವಿಂಗ್​ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

ಭಾರತ ಮತ್ತು ಇಂಗ್ಲೆಂಡ್ ಸರಣಿ ವೇಳಾಪಟ್ಟಿ:

  • ಜನವರಿ 22, ಬುಧವಾರ: ಭಾರತ vs ಇಂಗ್ಲೆಂಡ್, 1ನೇ ಟಿ20, ಈಡನ್ ಗಾರ್ಡನ್ಸ್, ಕೋಲ್ಕತ್ತಾ
  • ಜನವರಿ 25, ಶನಿವಾರ: ಭಾರತ vs ಇಂಗ್ಲೆಂಡ್, 2ನೇ ಟಿ20, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
  • ಜನವರಿ 28, ಮಂಗಳವಾರ: ಭಾರತ vs ಇಂಗ್ಲೆಂಡ್, 3ನೇ ಟಿ20, ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ರಾಜ್‌ಕೋಟ್
  • ಜನವರಿ 31, ಶುಕ್ರವಾರ: ಭಾರತ vs ಇಂಗ್ಲೆಂಡ್, 4ನೇ ಟಿ20, ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ಪುಣೆ
  • ಫೆಬ್ರವರಿ 02, ಭಾನುವಾರ: ಭಾರತ vs ಇಂಗ್ಲೆಂಡ್, 5ನೇ ಟಿ20, ವಾಂಖೆಡೆ ಸ್ಟೇಡಿಯಂ, ಮುಂಬೈ

ಇದನ್ನೂ ಓದಿ: ದುಬಾರಿ ಬೆಲೆಯ ಕವಾಸಕಿ ನಿಂಜಾ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್

  • ಫೆಬ್ರವರಿ 06, ಗುರುವಾರ: ಭಾರತ vs ಇಂಗ್ಲೆಂಡ್, 1ನೇ ಏಕದಿನ, ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ, ನಾಗ್ಪುರ
  • ಫೆಬ್ರವರಿ 09, ಭಾನುವಾರ: ಭಾರತ vs ಇಂಗ್ಲೆಂಡ್, 2ನೇ ಏಕದಿನ, ಬಾರಾಬತಿ ಸ್ಟೇಡಿಯಂ, ಕಟಕ್
  • ಫೆಬ್ರವರಿ 12, ಬುಧವಾರ: ಭಾರತ vs ಇಂಗ್ಲೆಂಡ್, 3ನೇ ಏಕದಿಕ ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.