Harshal Patel: 5 ಫೋರ್, 3 ಸಿಕ್ಸ್, 2 ವಿಕೆಟ್: ಹರ್ಷಲ್ ಪಟೇಲ್ ಸ್ಫೋಟಕ ಆಟದ ವಿಡಿಯೋ ನೋಡಿ

| Updated By: Vinay Bhat

Updated on: Jul 04, 2022 | 11:37 AM

Northamptonshire vs India: ನಾರ್ತ್‌ಹ್ಯಾಂಪ್ಟನ್‌ಶೈರ್‌ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಹರ್ಷಲ್ ಪಟೇಲ್ ಬ್ಯಾಟಿಂಗ್​ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದದರೆ ಬೌಲಿಂಗ್​ನಲ್ಲೂ ಮಾರಕ ದಾಳಿ ಸಂಘಟಿಸಿದರು.

Harshal Patel: 5 ಫೋರ್, 3 ಸಿಕ್ಸ್, 2 ವಿಕೆಟ್: ಹರ್ಷಲ್ ಪಟೇಲ್ ಸ್ಫೋಟಕ ಆಟದ ವಿಡಿಯೋ ನೋಡಿ
Harshal Patel INDS vs NHNTS
Follow us on

ಭಾರತ ಹಾಗೂ ಇಂಗ್ಲೆಂಡ್ (IND vs ENG) ನಡುವಣ ಐದನೇ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಎರಡನೇ ಇನ್ನಿಂಗ್ಸ್​​ನಲ್ಲಿ ಬುಮ್ರಾ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದ್ದು 257 ರನ್ ಗಳ ಮುನ್ನಡೆ ಪಡೆದುಕೊಂಡಿದೆ. ಇದೀಗ ನಾಲ್ಕನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಹೀಗಿರುವಾಗ ಅತ್ತ ಭಾರತ ಯುವ ತಂಡ ಟಿ20 ಅಭ್ಯಾಸ ಪಂದ್ಯದಲ್ಲಿ ನಿರತವಾಗಿದ್ದು ಹರ್ಷಲ್ ಪಟೇಲ್ ಭಾರೀ ಸುದ್ದಿಯಲ್ಲಿದ್ದಾರೆ. ಭಾನುವಾರ ರಾತ್ರಿ ನಡೆದ ನಾರ್ತ್‌ಹ್ಯಾಂಪ್ಟನ್‌ಶೈರ್‌ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಇಂಡಿಯನ್ಸ್ (Indians) ತಂಡ 10 ರನ್​ಗಳ ರೋಚಕ ಜಯ ಸಾಧಿಸಿದೆ. ಇಲ್ಲಿ ಭಾರತ ಗೆಲ್ಲಲು ಮುಖ್ಯ ಕಾರಣವಾಗಿದ್ದು ಹರ್ಷಲ್ ಪಟೇಲ್ (Harshal Patel). ಭರ್ಜರಿ ಆಲ್ರೌಂಡರ್ ಪ್ರದರ್ಶನ ತೋರಿದ ಹರ್ಷಲ್ ಹೀರೋ ಎನಿಸಿಕೊಂಡಿದ್ದಾರೆ.

ಹರ್ಷಲ್ ಪಟೇಲ್ ಬ್ಯಾಟಿಂಗ್​ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದದರೆ ಬೌಲಿಂಗ್​ನಲ್ಲೂ ಮಾರಕ ದಾಳಿ ಸಂಘಟಿಸಿದರು. ಓಪನರ್​ಗಳು, ಮಧ್ಯಮ ಕ್ರಮಾಂಕ ಕೈಕೊಟ್ಟ ಸಂದರ್ಭ ಕ್ರೀಸ್​ಗೆ ಬಂದ ಹರ್ಷಲ್ 150 ಸ್ಟ್ರೈಕ್​​ರೇಟ್​ನಲ್ಲಿ ಬ್ಯಾಟ್ ಬೀಸಿ ಕೇವಲ 36 ಎಸೆತಗಳಲ್ಲಿ 5 ಫೋರ್‌ ಮತ್ತು 3 ಸಿಕ್ಸರ್​​ಗಳೊಂದಿಗೆ 54 ರನ್‌ ಸಿಡಿಸಿದರು. ಇದರಿಂದ ತಂಡದ ಮೊತ್ತ 20 ಓವರ್‌ಗಳಲ್ಲಿ 149/8 ಕ್ಕೆ ಬಂದು ನಿಂತಿತು. ಬೌಲಿಂಗ್​ನಲ್ಲೂ ಕೊಡುಗೆ ನೀಡಿದ ಇವರು 3.3 ಓವರ್ ಬೌಲಿಂಗ್ ಮಾಡಿ ಕೇವಲ 23 ರನ್ ನೀಡಿ 2 ಮುಖ್ಯ ವಿಕೆಟ್ ಕಿತ್ತರು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಜಿಕೊಂಡರು.

ಇದನ್ನೂ ಓದಿ
Harshal Patel: ಹರ್ಷಲ್ ಪಟೇಲ್ ಸ್ಫೋಟಕ ಅರ್ಧಶತಕ: ಭಾರತಕ್ಕೆ ರೋಚಕ ಜಯ ತಂದುಕೊಟ್ಟ ಆರ್​​​ಸಿಬಿ ಪ್ಲೇಯರ್
Cheteshwar Pujara: ಪೂಜಾರ ಅರ್ಧಶತಕ, ಪಂತ್ ಭರ್ಜರಿ ಆಟ: ಬೃಹತ್ ಮುನ್ನಡೆಯತ್ತ ಟೀಮ್ ಇಂಡಿಯಾ
FIH World Cup: ಮೊದಲ ಪಂದ್ಯದಲ್ಲಿಯೇ ಇಂಗ್ಲೆಂಡ್ ವಿರುದ್ಧ ಡ್ರಾಗೆ ತೃಪ್ತಿಪಟ್ಟ ಭಾರತ ಮಹಿಳಾ ಹಾಕಿ ತಂಡ
IND vs ENG: ಮೊದಲು ಬ್ಯಾಟಿಂಗ್, ನಂತರ ಬೌಲಿಂಗ್.. ಈಗ ಅದ್ಭುತ ಫೀಲ್ಡಿಂಗ್; ಇದು ಬುಮ್ರಾ ಹೊಸ ಅವತಾರ

ENG vs IND: ಇಂದು ಟೀಮ್ ಇಂಡಿಯಾ ತಪ್ಪು ಮಾಡಿದ್ರೆ, ಸೋಲು ಕಟ್ಟಿಟ್ಟ ಬುತ್ತಿ..!

 

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ದಿನೇಶ್‌ ಕಾರ್ತಿಕ್‌ ಸಾರ್ಥ್ಯದ ಭಾರತ ತಂಡ ಮೊದಲ ಓವರ್​​ನಲ್ಲೇ ಸಂಜು ಸ್ಯಾಮ್ಸನ್‌ ಸೊನ್ನೆಗೆ ನಿರ್ಗಮಿಸಿದರು. ಭರ್ಜರಿ ಫಾರ್ಮ್​ನಲ್ಲಿದ್ದ ಸಂಜು ಔಟಾದ ಬಳಿಕ ಕ್ರೀಸ್​ಗೆ ಬಂದ ರಾಹುಲ್ ತ್ರಿಪಾಠಿ 7 ರನ್​ಗೆ ಸುಸ್ತಾದರೆ, ಇಶಾನ್‌ ಕಿಶನ್‌ (16), ಮತ್ತು ಸೂರ್ಯಕುಮಾರ್‌ ಯಾದವ್‌ (0) ವಿಕೆಟ್‌ ಕೂಡ ಬೇಗನೆ ಕಳೆದುಕೊಂಡಿತು. ಇಂಡಿಯನ್ಸ್ ತಂಡ 51 ರನ್‌ ಗಳಿಸುವ ಹೊತ್ತಿಗೆ ಅಗ್ರ ಕ್ರಮಾಂಕದ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

 

ಈ ಸಂದರ್ಭ ಕ್ರೀಸ್​ಗೆ ಇಳಿದ ನಾಯಕ ದಿನೇಶ್‌ ಕಾರ್ತಿಕ್‌ ತಂಡಕ್ಕೆ ಆಸರೆಯಾಗಿ ನಿಂತರು. 26 ಎಸೆತಗಳಲ್ಲಿ 34 ರನ್‌ ಸಿಡಿಸಿ ತಂಡವನ್ನು ಕೊಂಚ ಮೇಲೆತ್ತಿದರು. ಬಳಿಕ ಬಂದ ವೆಂಕಟೇಶ್‌ ಅಯ್ಯರ್‌ 20 ರನ್ ಗಳಿಸಿ ನೆರವಾದರು. ಇದರ ನಡುವೆ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಹರ್ಷಲ್ ಪಟೇಲ್ ಬ್ಯಾಟಿಂಗ್. ಮನಬಂದಂತೆ ಬ್ಯಾಟ್ ಬೀಸಿದ ಹರ್ಷಲ್ ಆಕರ್ಷಕ ಅರ್ಧಶತಕ ಸಿಡಿಸಿ ಎದುರಾಳಿಗೆ ಸವಾಲಿನ ಟಾರ್ಗೆಟ್ ನೀಡಿದರು.

ಗುರಿ ಬೆನ್ನಟ್ಟಿದ ನಾರ್ತ್‌ಹ್ಯಾಂಪ್ಟನ್‌ಶೈರ್‌ ತಂಡ ಭಾರತದ ಸಂಘಟಿತ ದಾಳಿಗೆ ನಲುಗಿ ಹೋಯಿತು. ಎಮಿಲೋ ಗೇ (22) ಮತ್ತು ಸೈಫ್‌ ಝೈಬ್‌ (33) ಭರವಸೆ ಮೂಡಿಸಿದರೂ ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ಪರಿಣಾಮ ನಾರ್ತ್‌ಹ್ಯಾಂಪ್ಟನ್‌ಶೈರ್‌ ತಂಡ 19.3 ಓವರ್‌ಗಳಲ್ಲಿ 139 ರನ್‌ಗಳಿಗೆ ಆಲ್‌ಔಟ್‌ ಆಯಿತು. ಭಾರತದ ಪರ ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌, ಯುಜ್ವೇಂದ್ರ ಚಹಲ್‌ ಮತ್ತು ಹರ್ಷಲ್‌ ಪಟೇಲ್‌ ತಲಾ ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದರು.

Virat Kohli vs Jonny Bairstow: ಭಯಂಕರ ಬೈರ್​ಸ್ಟೋವ್:​ ಕೊಹ್ಲಿ ಕೆಣಕಿದ್ದೇ ತಪ್ತಾಯ್ತಾ?

Published On - 11:37 am, Mon, 4 July 22