Virat Kohli vs Jonny Bairstow: ಭಯಂಕರ ಬೈರ್​ಸ್ಟೋವ್:​ ಕೊಹ್ಲಿ ಕೆಣಕಿದ್ದೇ ತಪ್ತಾಯ್ತಾ?

Virat Kohli vs Jonny Bairstow: ಟೀಮ್ ಇಂಡಿಯಾ ಬೌಲರ್​ಗಳ ಮುಂದೆ ಎಚ್ಚರಿಕೆಯಿಂದ ಆಡುತ್ತಿದ್ದ ಬೈರ್​ಸ್ಟೋವ್​ರನ್ನು ಬೇಗನೆ ಔಟ್ ಮಾಡಿದ್ದರೆ ಟೀಮ್ ಇಂಡಿಯಾ ಬೃಹತ್ ಮುನ್ನಡೆ ಪಡೆಯುತ್ತಿತ್ತು. ಆದರೆ ಬೈರ್​ಸ್ಟೋವ್ ಅಂತಿಮ ಹಂತದಲ್ಲಿ ಅಬ್ಬರಿಸುವ ಮೂಲಕ ಈ ಅಂತರವನ್ನು 132 ರನ್​ಗಳಿಗೆ ಇಳಿಸಿದರು.

Virat Kohli vs Jonny Bairstow: ಭಯಂಕರ ಬೈರ್​ಸ್ಟೋವ್:​ ಕೊಹ್ಲಿ ಕೆಣಕಿದ್ದೇ ತಪ್ತಾಯ್ತಾ?
Virat Kohli vs Jonny Bairstow
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jul 04, 2022 | 10:29 AM

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ (India vs England) ನಡುವಣ 5ನೇ ಟೆಸ್ಟ್​ ಪಂದ್ಯದ 3ನೇ ದಿನದಾಟದಲ್ಲಿ ರೋಚಕ ಹೋರಾಟ ಕಂಡು ಬಂತು. ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ಜಾನಿ ಬೈರ್​ಸ್ಟೋವ್ ನಡುವಣ ವಾಕ್ಸಮರಕ್ಕೆ ಪಂದ್ಯವು ಸಾಕ್ಷಿಯಾಗಿತ್ತು. ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್​ನ 32ನೇ ಓವರ್​ನಲ್ಲಿ ಕೊಹ್ಲಿ ಹಾಗೂ ಬೈರ್​ಸ್ಟೋವ್ ನಡುವೆ ಮಾತಿಕ ಚಕಮಕಿ ನಡೆಯಿತು. ಇಬ್ಬರ ನಡುವಿನ ವಾಗ್ವಾದವನ್ನು ಅಂಪೈರ್​ಗಳು ಮಧ್ಯಪ್ರವೇಶಿಸುವ ಮೂಲಕ ತಣ್ಣಗಾಗಿಸಿದ್ದರು. ಆದರೆ ಇತ್ತ ವಿರಾಟ್ ಕೊಹ್ಲಿ ತಮ್ಮ ಕೋಪವನ್ನು ಅದುಮಿಟ್ಟುಕೊಂಡರೆ, ಬೈರ್​ಸ್ಟೋವ್ ಬ್ಯಾಟ್ ಮೂಲಕ ಟೀಮ್ ಇಂಡಿಯಾ ಬೌಲರ್​ಗಳ ಮೇಲೆ ಗದಾಪ್ರಹಾರ ನಡೆಸಿದರು. ಏಕೆಂದರೆ ಕೊಹ್ಲಿ ಜೊತೆಗಿನ ವಾಕ್ಸಮರದ ವೇಳೆ ಬೈರ್​ಸ್ಟೋವ್ ಕಲೆಹಾಕಿದ್ದು ಕೇವಲ 13 ರನ್​​. ಈ ಹದಿಮೂರು ರನ್ ಕಲೆಹಾಕಲು ಬರೋಬ್ಬರಿ 61 ಎಸೆತಗಳನ್ನು ಎದುರಿಸಿದ್ದರು.

ಆದರೆ ಕೆಣಕಿದ ಬಳಿಕ ಕೆಂಡವಾದ ಬೈರ್​ಸ್ಟೋವ್ ಅಕ್ಷರಶಃ ಅಬ್ಬರಿಸಿದರು. ಟೀಮ್ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ ಜಾನಿ ಬಿ ಬೀಸ್ಟ್ ಮೋಡ್​ಗೆ ಬದಲಾದರು. ಪರಿಣಾಮ ಕೇವಲ 119 ಎಸೆತಗಳಲ್ಲಿ ಶತಕ ಪೂರೈಸಿದರು. ವಿಶೇಷ ಎಂದರೆ ವಾಕ್ಸಮರದ ಬಳಿಕ ಕೇವಲ 58 ಎಸೆತಗಳಲ್ಲಿ ಬೈರ್​ಸ್ಟೋವ್ 87 ರನ್​ಗಳನ್ನು ಚಚ್ಚಿ ಬಿಸಾಕಿದ್ದರು. ಈ ವೇಳೆ 14 ಫೋರ್ ಹಾಗೂ 2 ಸಿಕ್ಸರ್​ಗಳನ್ನು ಸಹ ಸಿಡಿಸಿದ್ದರು.

ಇದನ್ನೂ ಓದಿ
Image
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
Image
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Image
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Image
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

ಅಂದರೆ ಕೆಣಕುವ ಮುನ್ನ ಇದ್ದ ಬೈರ್​ಸ್ಟೋವ್ ಆ ಬಳಿಕ ಭಯಂಕರ ಬೈರ್​ಸ್ಟೋವ್ ಬದಲಾಗಿದ್ದರು. ತನ್ನೆಲ್ಲಾ ಕೋಪಗಳನ್ನು ಟೀಮ್ ಇಂಡಿಯಾ ಬೌಲರ್​ಗಳ ಮೇಲೆ ತೀರಿಸಿಕೊಂಡಿದ್ದರು. ಇಲ್ಲಿ ಮತ್ತೊಂದು ವಿಶೇಷ ಎಂದರೆ ಬೈರ್​ಸ್ಟೋವ್ ಬದಲಾಗಿ ಇಂಗ್ಲೆಂಡ್ ತಂಡದ ಯಾವುದೇ ಬ್ಯಾಟ್ಸ್​ಮನ್ ಅರ್ಧಶತಕ ಕೂಡ ಬಾರಿಸಿಲ್ಲ. ಅಂತಿಮವಾಗಿ ಇಂಗ್ಲೆಂಡ್​ ತಂಡವು ಮೊದಲ ಇನಿಂಗ್ಸ್​ನಲ್ಲಿ 284 ರನ್​ಗಳಿಗೆ ಆಲೌಟ್ ಆಯಿತು. ತಂಡದ ಒಟ್ಟು ಮೊತ್ತದಲ್ಲಿ ಬೈರ್​ಸ್ಟೋವ್ ಅವರ 106 ರನ್​ಗಳಿರುವುದು ವಿಶೇಷ.

ಹೀಗಾಗಿ ವಿರಾಟ್ ಕೊಹ್ಲಿ ಜಾನಿ ಬೈರ್​ಸ್ಟೋವ್​ರನ್ನು ಕೆಣಕಿ ತಪ್ಪು ಮಾಡಿದ್ರು ಎಂದು ವಿಶ್ಲೇಷಿಸಲಾಗುತ್ತಿದೆ. ಆರಂಭದಲ್ಲಿ ಟೀಮ್ ಇಂಡಿಯಾ ಬೌಲರ್​ಗಳ ಮುಂದೆ ಎಚ್ಚರಿಕೆಯಿಂದ ಆಡುತ್ತಿದ್ದ ಬೈರ್​ಸ್ಟೋವ್​ರನ್ನು ಬೇಗನೆ ಔಟ್ ಮಾಡಿದ್ದರೆ ಟೀಮ್ ಇಂಡಿಯಾ ಬೃಹತ್ ಮುನ್ನಡೆ ಪಡೆಯುತ್ತಿತ್ತು. ಆದರೆ ಬೈರ್​ಸ್ಟೋವ್ ಅಂತಿಮ ಹಂತದಲ್ಲಿ ಅಬ್ಬರಿಸುವ ಮೂಲಕ ಈ ಅಂತರವನ್ನು 132 ರನ್​ಗಳಿಗೆ ಇಳಿಸಿದರು. ಒಟ್ಟಿನಲ್ಲಿ ವಿರಾಟ್ ಕೊಹ್ಲಿ-ಜಾನಿ ಬೈರ್​ಸ್ಟೋವ್ ನಡುವಿನ ಜಗಳಕ್ಕೆ ಬೆಲೆ ತೆತ್ತಿದ್ದು ಮಾತ್ರ ಟೀಮ್ ಇಂಡಿಯಾ ಬೌಲರ್​ಗಳು.

Published On - 10:28 am, Mon, 4 July 22

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ