Harshal Patel: ಹರ್ಷಲ್ ಪಟೇಲ್ ಸ್ಫೋಟಕ ಅರ್ಧಶತಕ: ಭಾರತಕ್ಕೆ ರೋಚಕ ಜಯ ತಂದುಕೊಟ್ಟ ಆರ್​​​ಸಿಬಿ ಪ್ಲೇಯರ್

Northamptonshire vs Indians, 2nd T20 Warm-up Match: ಭಾನುವಾರ ರಾತ್ರಿ ನಡೆದ ನಾರ್ತ್‌ಹ್ಯಾಂಪ್ಟನ್‌ಶೈರ್‌ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲೂ ಇಂಡಿಯನ್ಸ್ ತಂಡ 10 ರನ್​ಗಳ ರೋಚಕ ಜಯ ಸಾಧಿಸಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಆರ್​ಸಿಬಿ ಆಟಗಾರ ಹರ್ಷಲ್ ಪಟೇಲ್.

Harshal Patel: ಹರ್ಷಲ್ ಪಟೇಲ್ ಸ್ಫೋಟಕ ಅರ್ಧಶತಕ: ಭಾರತಕ್ಕೆ ರೋಚಕ ಜಯ ತಂದುಕೊಟ್ಟ ಆರ್​​​ಸಿಬಿ ಪ್ಲೇಯರ್
Harshal Patel INDS vs NHNTS
TV9kannada Web Team

| Edited By: Vinay Bhat

Jul 04, 2022 | 9:01 AM

ಭಾರತ ಕ್ರಿಕೆಟ್ ತಂಡದ ಬಹುತೇಕ ಎಲ್ಲ ಆಟಗಾರರು ಆಂಗ್ಲರ ನಾಡಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ಜಸ್​​ಪ್ರೀತ್ ಬುಮ್ರಾ (Jasprit Bumrah) ನಾಯಕತ್ವದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿರುವ ಐದನೇ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯ ರೋಚಕ ಘಟ್ಟದತ್ತ ತಲುಪುತ್ತಿದೆ. ಇತ್ತ ದಿನೇಶ್ ಕಾರ್ತಿಕ್ (Dinesh Karthik) ನೇತೃತ್ವದ ಭಾರತ ಯುವ ತಂಡ ಟಿ20 ಸರಣಿಗೋಸ್ಕರ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಜುಲೈ 1 ರಂದು ಡರ್ಬಿಶೈರ್ ವಿರುದ್ಧ ನಡೆದ ಪಂದ್ಯದಲ್ಲಿ ಕಾರ್ತಿಕ್ ಪಡೆ 7 ವಿಕೆಟ್​ಗಳ ಭರ್ಜರಿ ಗೆಲುವು ಕಂಡಿತ್ತು. ಇದೀಗ ಭಾನುವಾರ ರಾತ್ರಿ ನಡೆದ ನಾರ್ತ್‌ಹ್ಯಾಂಪ್ಟನ್‌ಶೈರ್‌ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲೂ ಇಂಡಿಯನ್ಸ್ ತಂಡ 10 ರನ್​ಗಳ ರೋಚಕ ಜಯ ಸಾಧಿಸಿದೆ. ಇದಕ್ಕೆ ಪ್ರಮುಖ ಕಾರಣವಾಗಿದ್ದು ಆರ್​ಸಿಬಿ ಆಟಗಾರ ಹರ್ಷಲ್ ಪಟೇಲ್ (Harshal Patel).

ಹೌದು, ನಾರ್ತ್‌ಹ್ಯಾಂಪ್ಟನ್‌ಶೈರ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಅರ್ಧಶತಕ ಸಿಡಿಸಿ ಮತ್ತು ಬೌಲಿಂಗ್​ನಲ್ಲೂ ಮಾರಕ ದಾಳಿ ಸಂಘಟಿಸಿ ಹರ್ಷಲ್ ಪಟೇಲ್ ಇಂಡಿಯನ್ಸ್ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಲೋ ಸ್ಕೋರಿಂಗ್ ಗೇಮ್​ನಲ್ಲಿ ಬೊಂಬಾಟ್ ಬೌಲಿಂಗ್ ಪ್ರದರ್ಶನ ತೋರಿದ ಭಾರತ ಆಡಿದ ಎರಡೂ ಅಭ್ಯಾಸ ಪಂದ್ಯದಲ್ಲಿ ಗೆದ್ದು ಬೀಗಿದೆ.

Cheteshwar Pujara: ಪೂಜಾರ ಅರ್ಧಶತಕ, ಪಂತ್ ಭರ್ಜರಿ ಆಟ: ಬೃಹತ್ ಮುನ್ನಡೆಯತ್ತ ಟೀಮ್ ಇಂಡಿಯಾ

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ದಿನೇಶ್‌ ಕಾರ್ತಿಕ್‌ ಸಾರ್ಥ್ಯದ ಭಾರತ ತಂಡ ಮೊದಲ ಓವರ್​​ನಲ್ಲೇ ಸಂಜು ಸ್ಯಾಮ್ಸನ್‌ ಸೊನ್ನೆಗೆ ನಿರ್ಗಮಿಸಿದರು. ಭರ್ಜರಿ ಫಾರ್ಮ್​ನಲ್ಲಿದ್ದ ಸಂಜು ಔಟಾದ ಬಳಿಕ ಕ್ರೀಸ್​ಗೆ ಬಂದ ರಾಹುಲ್ ತ್ರಿಪಾಠಿ 7 ರನ್​ಗೆ ಸುಸ್ತಾದರೆ, ಇಶಾನ್‌ ಕಿಶನ್‌ (16), ಮತ್ತು ಸೂರ್ಯಕುಮಾರ್‌ ಯಾದವ್‌ (0) ವಿಕೆಟ್‌ ಕೂಡ ಬೇಗನೆ ಕಳೆದುಕೊಂಡಿತು. ಇಂಡಿಯನ್ಸ್ ತಂಡ 51 ರನ್‌ ಗಳಿಸುವ ಹೊತ್ತಿಗೆ ಅಗ್ರ ಕ್ರಮಾಂಕದ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಸಂದರ್ಭ ಕ್ರೀಸ್​ಗೆ ಇಳಿದ ನಾಯಕ ದಿನೇಶ್‌ ಕಾರ್ತಿಕ್‌ ತಂಡಕ್ಕೆ ಆಸರೆಯಾಗಿ ನಿಂತರು. 26 ಎಸೆತಗಳಲ್ಲಿ 34 ರನ್‌ ಸಿಡಿಸಿ ತಂಡವನ್ನು ಕೊಂಚ ಮೇಲೆತ್ತಿದರು. ಬಳಿಕ ಬಂದ ವೆಂಕಟೇಶ್‌ ಅಯ್ಯರ್‌ 20 ರನ್ ಗಳಿಸಿ ನೆರವಾದರು. ಇದರ ನಡುವೆ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಹರ್ಷಲ್ ಪಟೇಲ್ ಬ್ಯಾಟಿಂಗ್. ಮನಬಂದಂತೆ ಬ್ಯಾಟ್ ಬೀಸಿದ ಹರ್ಷಲ್ ಕೇವಲ 36 ಎಸೆತಗಳಲ್ಲಿ 5 ಫೋರ್‌ ಮತ್ತು 3 ಸಿಕ್ಸರ್​​ಗಳೊಂದಿಗೆ 54 ರನ್‌ ಸಿಡಿಸಿದರು. ಇದರಿಂದ ತಂಡದ ಮೊತ್ತ 20 ಓವರ್‌ಗಳಲ್ಲಿ 149/8 ಕ್ಕೆ ಬಂದು ನಿಂತಿತು.

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ನಾರ್ತ್‌ಹ್ಯಾಂಪ್ಟನ್‌ಶೈರ್‌ ತಂಡ ಭಾರತದ ಸಂಘಟಿತ ದಾಳಿಗೆ ನಲುಗಿ ಹೋಯಿತು. ಎಮಿಲೋ ಗೇ (22) ಮತ್ತು ಸೈಫ್‌ ಝೈಬ್‌ (33) ಭರವಸೆ ಮೂಡಿಸಿದರೂ ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ಪರಿಣಾಮ ನಾರ್ತ್‌ಹ್ಯಾಂಪ್ಟನ್‌ಶೈರ್‌ ತಂಡ 19.3 ಓವರ್‌ಗಳಲ್ಲಿ 139 ರನ್‌ಗಳಿಗೆ ಆಲ್‌ಔಟ್‌ ಆಯಿತು. ಭಾರತದ ಪರ ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌, ಯುಜ್ವೇಂದ್ರ ಚಹಲ್‌ ಮತ್ತು ಹರ್ಷಲ್‌ ಪಟೇಲ್‌ ತಲಾ ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಬ್ಯಾಟಿಂಗ್ – ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿದ ಹರ್ಷಲ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಇದನ್ನೂ ಓದಿ

FIH World Cup: ಮೊದಲ ಪಂದ್ಯದಲ್ಲಿಯೇ ಇಂಗ್ಲೆಂಡ್ ವಿರುದ್ಧ ಡ್ರಾಗೆ ತೃಪ್ತಿಪಟ್ಟ ಭಾರತ ಮಹಿಳಾ ಹಾಕಿ ತಂಡ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada