FIH World Cup: ಮೊದಲ ಪಂದ್ಯದಲ್ಲಿಯೇ ಇಂಗ್ಲೆಂಡ್ ವಿರುದ್ಧ ಡ್ರಾಗೆ ತೃಪ್ತಿಪಟ್ಟ ಭಾರತ ಮಹಿಳಾ ಹಾಕಿ ತಂಡ
FIH World Cup: ಭಾರತೀಯ ಮಹಿಳಾ ಹಾಕಿ ತಂಡ ಎಫ್‌ಐಎಚ್ ಹಾಕಿ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಡ್ರಾದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿಯೇ ಇಂಗ್ಲೆಂಡ್ ವಿರುದ್ಧ ಡ್ರಾಕ್ಕೆ ತೃಪ್ತಿಪಡಬೇಕಾಯಿತು.
ಭಾರತೀಯ ಮಹಿಳಾ ಹಾಕಿ ತಂಡ ಎಫ್‌ಐಎಚ್ ಹಾಕಿ ವಿಶ್ವಕಪ್ (FIH Hockey World Cup)ನ ಮೊದಲ ಪಂದ್ಯದಲ್ಲಿ ಡ್ರಾದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯದಲ್ಲಿಯೇ ಇಂಗ್ಲೆಂಡ್ ವಿರುದ್ಧ ಡ್ರಾಕ್ಕೆ ತೃಪ್ತಿಪಡಬೇಕಾಯಿತು. ನೆದರ್ಲೆಂಡ್ಸ್‌ನ ಆಮ್‌ಸ್ಟೆಲ್‌ವೀನ್‌ನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು 1-1 ಗೋಲು ಗಳಿಸಲಷ್ಟೇ ಶಕ್ತವಾಗಿದ್ದವು. ಮೊದಲ ಗೋಲು ಗಳಿಸುವ ಮೂಲಕ ಇಂಗ್ಲೆಂಡ್ ಮುನ್ನಡೆ ಸಾಧಿಸಿತು, ಆದರೆ ಭಾರತ ಸಮಬಲಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಆದರೆ, ಬಳಿಕ ಎರಡೂ ತಂಡಗಳಿಗೆ ಗೆಲುವಿನ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಕೊನೆಯ ಕ್ಷಣಗಳಲ್ಲಿ ಟೀಂ ಇಂಡಿಯಾಗೆ ಸುವರ್ಣಾವಕಾಶವಿತ್ತು, ಆದರೆ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದ ಕಾರಣ ತಂಡವು ಇಂಗ್ಲೆಂಡ್‌ನೊಂದಿಗೆ ಅಂಕಗಳನ್ನು ಹಂಚಿಕೊಳ್ಳಬೇಕಾಯಿತು.
ಟೋಕಿಯೋ ಒಲಿಂಪಿಕ್ಸ್‌ನ ಪ್ರಬಲ ಅಭಿಯಾನದ ನಂತರ, ಭಾರತ ತಂಡವು ಅತಿದೊಡ್ಡ ಪಂದ್ಯಾವಳಿಗೆ ಪ್ರವೇಶಿಸಿದೆ. ಈ ಬಾರಿ ತನ್ನ ದಂತಕಥೆ ಮತ್ತು ಸ್ಟಾರ್ ಆಟಗಾರ್ತಿ ರಾಣಿ ರಾಂಪಾಲ್ ಇಲ್ಲದೆ ಪಂದ್ಯಾವಳಿಗೆ ಪ್ರವೇಶಿಸಿದೆ. ಅನುಭವಿ ಗೋಲ್‌ಕೀಪರ್ ಸವಿತಾ ಪೂನಿಯಾ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ. ತಮ್ಮ ನಾಯಕತ್ವದಲ್ಲಿ ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ಆಡಿದ ಅವರು ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ಅನ್ನು ಎದುರಿಸಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನ ನೀಡಿತ್ತು. ಆದರೆ, ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಇದು ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಅತ್ಯುತ್ತಮ ಪ್ರದರ್ಶನವಾಗಿದೆ. ಆದರೆ, ಪದಕದೊಂದಿಗೆ ಮರಳಲು ಸಾಧ್ಯವಾಗದಿರುವುದು ನಿರಾಸೆ ತಂದಿದೆ. ಭಾರತ ವಿಶ್ವಕಪ್‌ನ ಬಿ ಪೂಲ್‌ನಲ್ಲಿದೆ. ಇಂಗ್ಲೆಂಡ್ ಜೊತೆಗೆ ಭಾರತ ತಂಡ ನ್ಯೂಜಿಲೆಂಡ್ ಮತ್ತು ಚೀನಾ ನಂತರದ ಸ್ಥಾನದಲ್ಲಿದೆ. ಅಗ್ರ ನಾಲ್ಕು ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲಿವೆ. ಪ್ರತಿ ಗುಂಪಿನಲ್ಲಿ ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಕ್ರಾಸ್ ಓವರ್ ಪಂದ್ಯವನ್ನು ಆಡುವ ಮೂಲಕ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆಯಬೇಕು. ಪೂಲ್ ಬಿ ಅನ್ನು ಸಾವಿನ ಪೂಲ್ ಎಂದೂ ಕರೆಯುತ್ತಾರೆ.
ಗೋಲ್‌ಕೀಪರ್ ಸಬಿತಾ ಪೂನಿಯಾ ಭಾರತವನ್ನು ವಿಶ್ವಕಪ್‌ನಲ್ಲಿ ಮುನ್ನಡೆಸುತ್ತಿದ್ದು, ಎಕ್ಕಾ ಜೊತೆಗೆ ಡಿಫೆಂಡರ್ ದೀಪ್ ಗ್ರೇಸ್ ನಾಯಕರಾಗಿದ್ದಾರೆ. ಭಾರತೀಯ ಮಹಿಳಾ ಹಾಕಿ ತಂಡ ಇತ್ತೀಚೆಗೆ ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಮೂರನೇ ಸ್ಥಾನ ಗಳಿಸಿದೆ.
ಈ ವರ್ಷದ ವಿಶ್ವಕಪ್‌ನ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡ ನಂತರ ನಾಯಕಿ ಮತ್ತು ಗೋಲ್‌ಕೀಪರ್ ಸಬಿತಾ ಪೂನಿಯಾ ಮಾತನಾಡಿ, ‘ಇಂಗ್ಲೆಂಡ್ ಉತ್ತಮ ತಂಡವಾಗಿದೆ. ನಾವೂ ಚೆನ್ನಾಗಿ ಆಡಿದೆವು. ಆದಾಗ್ಯೂ, ನಾವು ಹಲವಾರು ಅವಕಾಶಗಳನ್ನು ವ್ಯರ್ಥ ಮಾಡಿದ್ದೇವೆ. ಈಗ ಮುಂದಿನ ಪಂದ್ಯದಲ್ಲಿ ಗಮನಹರಿಸಬೇಕಿದೆ. ನಾವು ಕೆಲವು ಕ್ಷೇತ್ರಗಳಲ್ಲಿ ಸುಧಾರಿಸಬೇಕಾಗಿದೆ ಎಂದರು
Published On - 10:16 pm, Sun, 3 July 22