ಕೋಟಿಗಟ್ಟಲೆ ದುಡಿಯುವವನು ಮಗಳಿಗೆ 100 ರೂ. ಡ್ರೆಸ್ ಕಳಿಸಿದ್ದಾನೆ: ಶಮಿ ವಿರುದ್ದ ಪತ್ನಿ ಗಂಭೀರ ಆರೋಪ..!

Mohammed Shami: ಟೀಮ್ ಇಂಡಿಯಾ ಪರ ಭರ್ಜರಿ ಪ್ರದರ್ಶನ ನೀಡುತ್ತಿದ್ದ ಕಾಲದಲ್ಲೇ ಮೊಹಮ್ಮದ್ ಶಮಿ ಅವರ ವೈಯಕ್ತಿಕ ಜೀವನದ ಏರಿಳಿತಗಳನ್ನು ಕಂಡಿತ್ತು.

ಕೋಟಿಗಟ್ಟಲೆ ದುಡಿಯುವವನು ಮಗಳಿಗೆ 100 ರೂ. ಡ್ರೆಸ್ ಕಳಿಸಿದ್ದಾನೆ: ಶಮಿ ವಿರುದ್ದ ಪತ್ನಿ ಗಂಭೀರ ಆರೋಪ..!
Mohammed Shami With Daughter
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 14, 2022 | 12:54 PM

ಕಳೆದ ಕೆಲವು ವರ್ಷಗಳಿಂದ ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಅವರ ವೈಯಕ್ತಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ. ಶಮಿ ವಿರುದ್ದ ದೌರ್ಜನ್ಯದ ಆರೋಪ ಹೊರಿಸಿರುವ ಪತ್ನಿ ಹಸಿನ್ ಜಹಾನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಇದರ ನಡುವೆ ಮತ್ತೊಮ್ಮೆ ಹಸಿನ್ ಟೀಮ್ ಇಂಡಿಯಾ ಆಟಗಾರನ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.

ಟೀಮ್ ಇಂಡಿಯಾ ಪರ ಭರ್ಜರಿ ಪ್ರದರ್ಶನ ನೀಡುತ್ತಿದ್ದ ಕಾಲದಲ್ಲೇ ಮೊಹಮ್ಮದ್ ಶಮಿ ಅವರ ವೈಯಕ್ತಿಕ ಜೀವನದ ಏರಿಳಿತಗಳನ್ನು ಕಂಡಿತ್ತು. ಈ ಎಲ್ಲಾ ವಿವಾದಗಳ ನಂತರ ಶಮಿ ಇನ್ನಷ್ಟು ಅಪಾಯಕಾರಿ ಬೌಲರ್ ಆಗಿ ಹೊರಹೊಮ್ಮಿದರು. ಅಲ್ಲದೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು.

ಇದಾಗ್ಯೂ ಪತ್ನಿ ಜೊತೆಗಿನ ವಿವಾದ ಮುಂದುವರೆದಿತ್ತು. ಈ ವಿವಾದದತ್ತ ಗಮನ ಹರಿಸಲು ಶಮಿ ಬಯಸದಿದ್ದರೂ ಇದೀಗ ಅವರ ಪತ್ನಿಯು ಮಗಳ ಮತ್ತು ಅವರ ನಡುವಿನ ಸಂಬಂಧದ ಬಗ್ಗೆ ನೀಡಿರುವ ಹೇಳಿಕೆ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಮೊಹಮ್ಮದ್ ಶಮಿ ಮಗಳ ಜೊತೆ ಮಾತನಾಡುತ್ತಿಲ್ಲ. ಅಲ್ಲದೆ ಮಗಳಿಗೆ ಕಳಪೆ ಗುಣಮಟ್ಟದ ಡ್ರೆಸ್ ಕಳುಹಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ
Image
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
Image
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Image
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಮಾಡೆಲಿಂಗ್ ಹಾಗೂ ಬಂಗಾಳಿ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಹಸಿನ್ ಜಹಾನ್ ಇತ್ತೀಚೆಗೆ ನೀಡಿದ ಟಿವಿ ಸಂದರ್ಶನವೊಂದರಲ್ಲಿ ಶಮಿ ಬಗ್ಗೆ ಮಾತನಾಡಿದ್ದರು. ಈ ವೇಳೆ ನನ್ನ ಮಗಳಿಗೆ ಈಗ ತಂದೆಯ ಪ್ರೀತಿಯ ಅವಶ್ಯಕತೆಯಿದೆ. ಅವರನ್ನು ಪದೇ ಪದೇ ಕೇಳುತ್ತಿರುತ್ತಾಳೆ. ಆದರೆ ಶಮಿ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು.

ಮಗಳು ಶಾಲೆಗೆ ಹೋಗುತ್ತಾಳೆ. ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ. ಎಲ್ಲರೂ ತಮ್ಮ ತಂದೆಯೊಂದಿಗೆ ಇರುವುದನ್ನು ಅವಳು ಎಲ್ಲೆಡೆ ನೋಡುತ್ತಾಳೆ. ಈಗ ಅವಳು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾಳೆ. ಅಲ್ಲದೆ ಅವಳು ಶಮಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾಳೆ. ಇದಾಗ್ಯೂ ಶಮಿ ತನ್ನ ಮಗಳೊಂದಿಗೆ ಮಾತನಾಡುವುದಿಲ್ಲ ಎಂದು ಹಸಿನ್ ಆರೋಪಿಸಿದ್ದಾರೆ.

ಇದೇ ವೇಳೆ ಇಷ್ಟು ವರ್ಷಗಳಲ್ಲಿ ಶಮಿ ಮಗಳಿಗೆ ಯಾವುದೇ ಉಡುಗೊರೆ ನೀಡಿಲ್ಲ ಎಂದು ಆರೋಪಿಸಿದ ಹಸಿನ್, ಹಬ್ಬದ ಸಂದರ್ಭಗಳಲ್ಲೂ ಮಗಳಿಗೆ ಬಟ್ಟೆಯನ್ನು ಕಳುಹಿಸುವುದಿಲ್ಲ. ಕಳೆದ ತಿಂಗಳು ತನ್ನ ಹುಟ್ಟುಹಬ್ಬದಂದು ಮಗಳು ತಂದೆಗೆ ಉಡುಗೊರೆಯನ್ನು ಕಳುಹಿಸಲು ಹೇಳಿದ್ದಳು. ಈ ವೇಳೆ ಶಮಿ ಪಾದಚಾರಿ ಮಾರ್ಗದಲ್ಲಿ ಸಿಗುವ 50, 100 ರೂ.ಗೆ ಮಾರಾಟವಾದ ಡ್ರೆಸ್ ಕಳುಹಿಸಿದ್ದಾರೆ ಹಸಿನ್ ಗಂಭೀರ ಆರೋಪ ಮಾಡಿದ್ದಾರೆ.

ಕೋಟ್ಯಂತರ ರೂಪಾಯಿ ಗಳಿಸುವ ಆಟಗಾರ, ಶಾಪಿಂಗ್‌ಗೆ ದಿನಕ್ಕೆ 2.5 ಲಕ್ಷ ಖರ್ಚು ಮಾಡುವ ಕ್ರಿಕೆಟಿಗನೊಬ್ಬ ತನ್ನ ಮಗಳಿಗೆ ಇಷ್ಟು ಕಳಪೆ ಗುಣಮಟ್ಟದ ಬಟ್ಟೆಗಳನ್ನು ಕಳುಹಿಸಲು ಹೇಗೆ ಸಾಧ್ಯ ಎಂದು ನಾನು ಆಶ್ಚರ್ಯಪಟ್ಟೆ. ತನ್ನ ಕೆಲಸಗಾರರ ಮಕ್ಕಳಿಗೂ ಇಂತಹ ಕಳಪೆ ಗುಣಮಟ್ಟದ ಬಟ್ಟೆಗಳನ್ನು ನೀಡುವುದಿಲ್ಲ ಎಂದು ಇದೇ ವೇಳೆ ಹಸಿನ್ ಜಹಾನ್ ಹೇಳಿದ್ದಾರೆ.

ಒಟ್ಟಿನಲ್ಲಿ ಶಮಿ ಬದುಕಿನಲ್ಲಿ ಬಿರುಗಾಳಿ ಎಬ್ಬಿಸಿದ್ದ ಹಸಿನ್ ಜಹಾನ್ ಇದೀಗ ಮತ್ತೊಮ್ಮೆ ಗಂಭೀರ ಆರೋಪಗಳೊಂದಿಗೆ ಸುದ್ದಿಯಾಗಿದ್ದಾರೆ. ಇತ್ತ ಮೊಹಮ್ಮದ್ ಶಮಿ ಕೂಡ ಹಸಿನ್ ಜಹಾನ್ ಜೊತೆಗಿನ ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆಯಲು ಬಯಸಿದ್ದಾರೆ ಎಂದು ವರದಿಯಾಗಿದೆ.