
ಈ ಬಾರಿ ಮೊದಲ ಬಾರಿಗೆ 2025 ರ ಏಷ್ಯಾಕಪ್‌ನಲ್ಲಿ (Asia Cup 2025) 6 ತಂಡಗಳ ಬದಲು 8 ತಂಡಗಳು ಕಣಕ್ಕಿಳಿಯುತ್ತಿವೆ. ಬದಲಾದ ನಿಯಮಗಳಿಂದಾಗಿ, 1 ತಂಡಕ್ಕೆ ಬದಲಾಗಿ 3 ತಂಡಗಳು ಎಸಿಸಿ ಪ್ರೀಮಿಯರ್ ಟೂರ್ನಮೆಂಟ್‌ನಿಂದ ಏಷ್ಯಾಕಪ್‌ಗೆ ಅರ್ಹತೆ ಪಡೆದಿವೆ. ಇತರ 5 ತಂಡಗಳು ಐಸಿಸಿ ಶ್ರೇಯಾಂಕದ ಆಧಾರದ ಮೇಲೆ ಪ್ರವೇಶ ಪಡೆದಿವೆ. ಈ 5 ತಂಡಗಳಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸೇರಿವೆ. ಉಳಿದಂತೆ ಹಾಂಗ್ ಕಾಂಗ್, ಯುಎಇ ಮತ್ತು ಓಮನ್ ಎಂಬ 3 ತಂಡಗಳು ಅರ್ಹತಾ ಸುತ್ತಿನ ಮೂಲಕ ಏಷ್ಯಾಕಪ್ ಟೂರ್ನಮೆಂಟ್‌ಗೆ ಟಿಕೆಟ್ ಪಡೆದಿವೆ.
ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲಿಟ್ಟುಕೊಂಡು ಈ ಪಂದ್ಯಾವಳಿಯನ್ನು ಟಿ20 ಸ್ವರೂಪದಲ್ಲಿ ಆಡಲಾಗುತ್ತಿದೆ. ಟಿ20 ಏಷ್ಯಾಕಪ್ ಟೂರ್ನಮೆಂಟ್ ನಡೆಯುತ್ತಿರುವುದು ಇದು ಮೂರನೇ ಬಾರಿ. ಇದಕ್ಕೂ ಮೊದಲು, 2016 ಮತ್ತು 2022 ರಲ್ಲಿ ಏಷ್ಯಾಕಪ್ ಟೂರ್ನಮೆಂಟ್ ಅನ್ನು ಟಿ20 ಸ್ವರೂಪದಲ್ಲಿ ಆಡಲಾಗಿತ್ತು. 2022ರಲ್ಲಿ ಟಿ20 ಏಷ್ಯಾಕಪ್ ನಡೆದಿದ್ದಾಗ ಟೀಂ ಇಂಡಿಯಾದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ದಾಖಲೆಯ ಜೊತೆಯಾಟ ನಿರ್ಮಿಸಿದ್ದರು. ಇವರಿಬ್ಬರ ಆ ದಾಖಲೆಯನ್ನು ಈ ವರ್ಷ ಯಾರು ಮುರಿಯುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.
ಟಿ20 ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ಆರಂಭಿಕ ಜೊತೆಯಾಟ ನಡೆಸಿದ ದಾಖಲೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಹೆಸರಿನಲ್ಲಿದೆ. ಸೆಪ್ಟೆಂಬರ್ 8, 2022 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಮತ್ತು ರಾಹುಲ್ 119 ರನ್‌ಗಳ ಆರಂಭಿಕ ಜೊತೆಯಾಟ ಕಟ್ಟಿದ್ದರು. ಆ ಪಂದ್ಯದಲ್ಲಿ ವಿರಾಟ್ ಶತಕ ಗಳಿಸಿದರು. ಇದರೊಂದಿಗೆ ಟಿ20 ಏಷ್ಯಾಕಪ್‌ನಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಮತ್ತು ಒಟ್ಟಾರೆಯಾಗಿ ಎರಡನೇ ಆಟಗಾರ ಎನಿಸಿಕೊಂಡಿದ್ದರು. ಭಾರತ ಆ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು. ಇವರಿಬ್ಬರನ್ನು ಹೊರತುಪಡಿಸಿ, ಟಿ20 ಏಷ್ಯಾಕಪ್‌ನಲ್ಲಿ ಇತರ 4 ದೊಡ್ಡ ಜೊತಯಾಟಗಳು ಇಲ್ಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Wed, 3 September 25