AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ತಂಡ ಕಣಕ್ಕಿಳಿದಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ನಿಯಮಗಳೇನು?

Hong Kong Sixes 2025: ನವೆಂಬರ್ 7 ರಿಂದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಗೆ ಚಾಲನೆ ನೀಡಲಾಗಿದೆ. 12 ತಂಡಗಳು ಭಾಗವಹಿಸುವ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಕೂಡ ಕಣಕ್ಕಿಳಿದಿರುವುದು ವಿಶೇಷ. ಅದರಂತೆ ದಿನೇಶ್ ಕಾರ್ತಿಕ್ ನೇತೃತ್ವದ 7 ಆಟಗಾರರನ್ನು ಒಳಗೊಂಡ ಭಾರತ ತಂಡ ಹಾಂಗ್ ಕಾಂಗ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿದೆ.

ಭಾರತ ತಂಡ ಕಣಕ್ಕಿಳಿದಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯ ನಿಯಮಗಳೇನು?
Hong Kong Sixes
ಝಾಹಿರ್ ಯೂಸುಫ್
|

Updated on: Nov 08, 2025 | 11:05 AM

Share

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ಶುರುವಾಗಿದೆ. 6 ಓವರ್​ಗಳ ಈ ಟೂರ್ನಿಯಲ್ಲಿ ಕೇವಲ 6 ಆಟಗಾರರು ಮಾತ್ರ ಕಣಕ್ಕಿಳಿಯಲಿದ್ದಾರೆ. ಈ ಟೂರ್ನಿಯ ನಿಯಮಗಳೇನು? ಟೀಮ್ ಇಂಡಿಯಾ ಪರ ಕಣಕ್ಕಿಳಿಯುವವರು ಯಾರೆಲ್ಲಾ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ನಿಯಮಗಳು:

  • ಒಂದು ತಂಡದ ಆಡುವ ಬಳಗದಲ್ಲಿ ಕೇವಲ 6 ಆಟಗಾರರಿಗೆ ಮಾತ್ರ ಅವಕಾಶ.
  • ಪ್ರತಿ ಪಂದ್ಯದ ಇನಿಂಗ್ಸ್​ವೊಂದರಲ್ಲಿ 6 ಓವರ್​ಗಳನ್ನು ಆಡಲಾಗುತ್ತದೆ.
  • ಪ್ರತಿ ಓವರ್​ನಲ್ಲಿ 6 ಎಸೆತಗಳು ಇರಲಿದೆ. ಫೈನಲ್ ಪಂದ್ಯಗಳಲ್ಲಿ ಒಂದು ಓವರ್​ಗೆ 8 ಬಾಲ್​ ಇರಲಿದೆ.
  • ವೈಡ್ ಮತ್ತು ನೋಬಾಲ್​ಗೆ 2 ರನ್​ಗಳನ್ನು ನೀಡಲಾಗುತ್ತದೆ.
  • ವಿಕೆಟ್-ಕೀಪರ್ ಹೊರತುಪಡಿಸಿ, ಫೀಲ್ಡಿಂಗ್ ತಂಡದ ಪ್ರತಿಯೊಬ್ಬ ಸದಸ್ಯರು ಬೌಲಿಂಗ್ ಮಾಡಬೇಕು.
  • ಒಬ್ಬ ಬ್ಯಾಟ್ಸ್​ಮನ್ ಗರಿಷ್ಠ 16 ಎಸೆತಗಳನ್ನು ಮಾತ್ರ ಎದುರಿಸಬಹುದು. ಇದಾದ ಬಳಿಕ ನಿವೃತ್ತಿ ಘೋಷಿಸಬೇಕು.
  • ಬ್ಯಾಟ್ಸ್‌ಮನ್‌ 50ರನ್​ಗಳಿಸಿದರೆ ಬ್ಯಾಟಿಂಗ್ ನಿಲ್ಲಿಸಿ ಪೆವಿಲಿಯನ್​ಗೆ ಮರಳಬೇಕು. ಇದಾದ ಬಳಿಕ ಇತರೆ ಬ್ಯಾಟ್ಸ್‌ಮನ್‌ಗಳು ಔಟಾದರೆ, ನಿವೃತ್ತರಾದ ಬ್ಯಾಟರ್​ ಮತ್ತೆ ಬ್ಯಾಟಿಂಗ್ ಮಾಡಬಹುದು.

ಕಣಕ್ಕಿಳಿಯುವ ತಂಡಗಳಾವುವು?

  • ಭಾರತ
  • ಪಾಕಿಸ್ತಾನ್
  • ಆಸ್ಟ್ರೇಲಿಯಾ
  • ಬಾಂಗ್ಲಾದೇಶ್
  • ಹಾಂಗ್​ ಕಾಂಗ್
  • ಇಂಗ್ಲೆಂಡ್
  • ನೇಪಾಳ
  • ನ್ಯೂಝಿಲೆಂಡ್
  • ಒಮಾನ್
  • ಸೌತ್ ಆಫ್ರಿಕಾ
  • ಶ್ರೀಲಂಕಾ
  • ಯುಎಇ

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಸ್ವರೂಪವೇನು?

ಈ 12 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಇದರಲ್ಲಿ ಅತ್ಯಧಿಕ ಪಂದ್ಯಗಳನ್ನು ಗೆಲ್ಲುವ ಅಗ್ರ ನಾಲ್ಕು ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸುತ್ತದೆ. ದ್ವಿತೀಯ ಸುತ್ತಿನಲ್ಲಿ ಸೆಮಿಫೈನಲ್ ಇರಲಿದ್ದು, ಇದಾದ ಬಳಿಕ ಫೈನಲ್ ಮ್ಯಾಚ್ ನಡೆಯಲಿದೆ.

ಈ ಪಂದ್ಯಾವಳಿ ಶುರುವಾಗಿದ್ದು ಯಾವಾಗ?

ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯು 1993 ರಲ್ಲೇ ಪ್ರಾರಂಭವಾಗಿತ್ತು. 1997 ರವರೆಗೆ ಪ್ರತಿ ವರ್ಷ ಆಯೋಜನೆಗೊಂಡಿದ್ದ ಈ ಟೂರ್ನಿಯನ್ನು ಆ ಬಳಿಕ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.

ಇದಾದ ಬಳಿಕ 2001 ರಲ್ಲಿ ಮತ್ತೆ ಶುರುವಾದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಸತತ 12 ಸೀಸನ್​ಗಳನ್ನು ಆಡಲಾಗಿದೆ. ಆದರೆ 2012 ರಲ್ಲಿ ಮತ್ತೆ ನಿಂತು ಹೋದ ಟೂರ್ನಿಯನ್ನು 2017 ರಲ್ಲಿ ಮತ್ತೆ ಆಯೋಜಿಸಲಾಗಿತ್ತು. ಅದುವೇ ಕೊನೆ, ಇದಾದ ಬಳಿಕ ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿ ನಡೆದಿರಲಿಲ್ಲ.

ಆದರೆ 2024 ರಲ್ಲಿ ಈ ಟೂರ್ನಿಗೆ ಮತ್ತೆ ಚಾಲನೆ ನೀಡಲಾಗಿದ.ಎ ಅದರಂತೆ ಇದೀಗ 12 ತಂಡಗಳ ನಡುವಣ 6 ಓವರ್​ಗಳ ಪಂದ್ಯಾವಳಿ ಹಾಂಗ್ ಕಾಂಗ್​ನಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: RCB ಖರೀದಿಗೆ ಮುಂದಾದ ಕನ್ನಡಿಗರು..!

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಗೆ ಭಾರತ ತಂಡ:

ಭರತ್ ಚಿಪ್ಲಿ , ಪ್ರಿಯಾಂಕ್ ಪಾಂಚಾಲ್ , ದಿನೇಶ್ ಕಾರ್ತಿಕ್ (ನಾಯಕ) , ಸ್ಟುವರ್ಟ್ ಬಿನ್ನಿ , ಅಭಿಮನ್ಯು ಮಿಥುನ್ , ಶಹಬಾಝ್ ನದೀಮ್, ರಾಬಿನ್ ಉತ್ತಪ್ಪ.

Follow Us
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ವಿವಾದಿತ ‘ದಿ ಕೇರಳ ಸ್ಟೋರಿ 2’ ಸಿನಿಮಾ ವೀಕ್ಷಿಸಿದ ಬಿಜೆಪಿ ಶಾಸಕರು
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ನಿಜವಾದ ಕೇರಳ ಸ್ಟೋರಿ: ಮುಸ್ಲಿಂ ಯುವಕನ ಜತೆ ಮದುವೆ ಆದ ಕುಂಭಮೇಳದ ಹುಡುಗಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಕೊಪ್ಪಳದ ಗ್ರಾಮವೊಂದರಲ್ಲಿ ಹಾಡಹಗಲೇ ಚಿರತೆ ಓಡಾಟ: ವಿಡಿಯೋ ನೋಡಿ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಉದ್ಘಾಟನೆಯಾದ 6 ತಿಂಗಳೊಳಗೆ ಬಂಗಾಳದ ಫ್ಲೈಓವರ್ ಗೋಡೆ ಕುಸಿತ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಮುಜುರಾಯಿ ದೇಗುಲಗಳಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಲು ಗ್ಯಾಸ್ ಸಮಸ್ಯೆ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯಾದಗಿರಿ ಭೂಗರ್ಭದಲ್ಲಿ ಅಡಗಿದೆಯಾ ಖನಿಜ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ಶೋಧ
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು