AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭುವನೇಶ್ವರ್ ಔಟ್, ಟೀಂ ಇಂಡಿಯಾಕ್ಕೆ ಕೃನಾಲ್ ಪಾಂಡ್ಯ ನಾಯಕ..!

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಗೆ ಭುವನೇಶ್ವರ್ ಕುಮಾರ್ ಬದಲಿಗೆ ಕೃನಾಲ್ ಪಾಂಡ್ಯ ಭಾರತ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ನಡೆಯುವ ಈ ಪಂದ್ಯಾವಳಿಯಿಂದ ಭುವಿ ನ್ಯೂಜಿಲೆಂಡ್ ಪ್ರವಾಸಕ್ಕೆ ಆಯ್ಕೆಯಾದ ಕಾರಣ ಹೊರಗುಳಿದಿದ್ದಾರೆ. ಕುಲ್ವಂತ್ ಖೇಜ್ರೋಲಿಯಾ ತಂಡ ಸೇರಿದ್ದಾರೆ. ಐಪಿಎಲ್‌ನಲ್ಲಿ ನಾಯಕತ್ವದ ಅನುಭವ ಹೊಂದಿರುವ ಕೃನಾಲ್, ಅಭಿಮಾನಿಗಳನ್ನು ತಂಡಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ.

ಭುವನೇಶ್ವರ್ ಔಟ್, ಟೀಂ ಇಂಡಿಯಾಕ್ಕೆ ಕೃನಾಲ್ ಪಾಂಡ್ಯ ನಾಯಕ..!
ಕೃನಾಲ್ ಪಾಂಡ್ಯ
ಪೃಥ್ವಿಶಂಕರ
|

Updated on: Oct 17, 2026 | 4:37 PM

Share

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್‌ ಇದೇ ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ನಡೆಯಲಿದೆ. ಈ ಟೂರ್ನಿಗಾಗಿ ಭುವನೇಶ್ವರ್ ಕುಮಾರ್ ನಾಯಕತ್ವದ ಟೀಂ ಇಂಡಿಯಾವನ್ನು ಸಹ ಬಿಸಿಸಿಐ ಪ್ರಕಟಿಸಿತ್ತು. ಆದರೆ ಈ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಟೀಂ ಇಂಡಿಯಾದ ನಾಯಕನ ಬದಲಾವಣೆಯಾಗಿದೆ. ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾದ ಕಾರಣದಿಂದಾಗಿ ಅವರನ್ನು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್​ನಿಂದ ಕೈಬಿಡಲಾಗಿದೆ. ಹೀಗಾಗಿ ಭುವನೇಶ್ವರ್ ಕುಮಾರ್ ಬದಲಿಗೆ ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ಟೀಂ ಇಂಡಿಯಾದ ಹೊಸ ನಾಯಕನನ್ನಾಗಿ ನೇಮಿಸಲಾಗಿದೆ.

ಕೃನಾಲ್ ನಾಯಕ, ಬದಲಿ ಆಟಗಾರನ ಆಯ್ಕೆ

ಭಾರತದ ನ್ಯೂಜಿಲೆಂಡ್ ಪ್ರವಾಸವು ಅಕ್ಟೋಬರ್ 22 ರಂದು ಆರಂಭವಾಗಲಿದೆ. ಇತ್ತ ಅಕ್ಟೋಬರ್ 30 ರಿಂದ ಹಾಂಗ್ ಕಾಂಗ್ ಸಿಕ್ಸಸ್‌ ಟೂರ್ನಿ ಕೂಡ ಶುರುವಾಗಲಿದೆ. ಇದರಿಂದಾಗಿ ಭುವಿ ಈ ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಾಯಿತು. ಭುವನೇಶ್ವರ್ ಕುಮಾರ್ ಬದಲಿಗೆ ಗುಜರಾತ್ ಟೈಟಾನ್ಸ್ ತಂಡದ ವೇಗಿ ಕುಲ್ವಂತ್ ಖೇಜ್ರೋಲಿಯಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ನಾಯಕತ್ವ ವಹಿಸಿಕೊಂಡ ನಂತರ ಕೃನಾಲ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ‘ಹಾಂಗ್ ಕಾಂಗ್ ಸಿಕ್ಸಸ್‌ನಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಇನ್ನು ಕೃನಾಲ್ ಪಾಂಡ್ಯಗೆ ನಾಯಕತ್ವದ ಅನುಭವವೂ ಇದ್ದು, ಐಪಿಎಲ್​ನಲ್ಲಿ 6 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಎರಡು ಪಂದ್ಯಗಳಲ್ಲಿ ಸೋತಿದೆ.

ಕಳೆದ ಆವೃತ್ತಿಯಲ್ಲಿ ಭಾರತದ ಪ್ರದರ್ಶನ

2025 ರ ಹಾಂಗ್ ಕಾಂಗ್ ಸಿಕ್ಸಸ್ ಸೀಸನ್ ಭಾರತಕ್ಕೆ ನಿರಾಶಾದಾಯಕವಾಗಿತ್ತು. ರಾಬಿನ್ ಉತ್ತಪ್ಪ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಟಗಾರರನ್ನು ಒಳಗೊಂಡ ಭಾರತೀಯ ತಂಡವು ಗುಂಪು ಹಂತದಲ್ಲಿ ದುರ್ಬಲ ಕುವೈತ್ ವಿರುದ್ಧ ಸೋತಿತು. ನಂತರ ತಂಡವು ಬೌಲ್ ಫೈನಲ್‌ನಲ್ಲಿ ನೇಪಾಳ, ಯುಎಇ ಮತ್ತು ಶ್ರೀಲಂಕಾ ವಿರುದ್ಧ ಸೋತು ಕೊನೆಯ ಸ್ಥಾನ ಗಳಿಸಿತು. ಇತ್ತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಭಾರತ ತಂಡ: ಕೃನಾಲ್ ಪಾಂಡ್ಯ, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ, ಟಿ.ನಟರಾಜನ್ ಮತ್ತು ಕುಲ್ವಂತ್ ಖೆಜ್ರೋಲಿಯಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
2 ನಿಮಿಷದಲ್ಲಿ 12 ಇಡ್ಲಿ ತಿಂದು ಕಮಾಲ್ ಮಾಡಿದ ಸಂಚಾರಿ ಪೊಲೀಸ್ ಪ್ರವೀಣ್
2 ನಿಮಿಷದಲ್ಲಿ 12 ಇಡ್ಲಿ ತಿಂದು ಕಮಾಲ್ ಮಾಡಿದ ಸಂಚಾರಿ ಪೊಲೀಸ್ ಪ್ರವೀಣ್
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತರಕಾರಿ ಮೂಟೆಗಳ ಕಾರಬಾರು
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತರಕಾರಿ ಮೂಟೆಗಳ ಕಾರಬಾರು
ಬೆಂಗಳೂರಿನಲ್ಲಿ ಎಐ ಕ್ಯಾಮರಾಗಳ ಸರಣಿ ಎಡವಟ್ಟು
ಬೆಂಗಳೂರಿನಲ್ಲಿ ಎಐ ಕ್ಯಾಮರಾಗಳ ಸರಣಿ ಎಡವಟ್ಟು
ಮೂರು ಆಯಾಮಗಳಲ್ಲಿ ಸಿದ್ದರಾಮಯ್ಯ ದೂರಿನ ತನಿಖೆ ಶುರು
ಮೂರು ಆಯಾಮಗಳಲ್ಲಿ ಸಿದ್ದರಾಮಯ್ಯ ದೂರಿನ ತನಿಖೆ ಶುರು
ರಾಯಚೂರಿನಲ್ಲಿ ಈರುಳ್ಳಿ ತುಂಬಿದ ಲಾರಿ ಪಲ್ಟಿ: ಈರುಳ್ಳಿ ಹೊತ್ತೊಯ್ದ ಜನರು
ರಾಯಚೂರಿನಲ್ಲಿ ಈರುಳ್ಳಿ ತುಂಬಿದ ಲಾರಿ ಪಲ್ಟಿ: ಈರುಳ್ಳಿ ಹೊತ್ತೊಯ್ದ ಜನರು
ಕೊಡಗಿನಲ್ಲಿ ತೀರ್ಥೋದ್ಭವ ಸಂಭ್ರಮ: ಜಿಲ್ಲಾಡಳಿತದಿಂದ ವ್ಯಾಪಕ ಸಿದ್ಧತೆ
ಕೊಡಗಿನಲ್ಲಿ ತೀರ್ಥೋದ್ಭವ ಸಂಭ್ರಮ: ಜಿಲ್ಲಾಡಳಿತದಿಂದ ವ್ಯಾಪಕ ಸಿದ್ಧತೆ
ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಪ್ರಶಾಂತ್ ಹಾಗೂ ಗಾನವಿಗೆ ತರಾಟೆ
ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಪ್ರಶಾಂತ್ ಹಾಗೂ ಗಾನವಿಗೆ ತರಾಟೆ
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿಕೆ
ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿಕೆ
ಕಬ್ಬು ಬೆಳೆಗೆ ಎಂಎಸ್​ಪಿ ನಿಗದಿ ಬಗ್ಗೆ ರೈತರಿಗೆ ಗುಡ್​ನ್ಯೂಸ್ ಕೊಟ್ಟ ಜೋಶಿ
ಕಬ್ಬು ಬೆಳೆಗೆ ಎಂಎಸ್​ಪಿ ನಿಗದಿ ಬಗ್ಗೆ ರೈತರಿಗೆ ಗುಡ್​ನ್ಯೂಸ್ ಕೊಟ್ಟ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ
ಮೋದಿ ಸರ್ಕಾರ ರೈತರ ಪರ, ಎಥೆನಾಲ್ ಖರೀದಿಯಲ್ಲಿ ಹೊಸ ದಾಖಲೆ: ಪ್ರಲ್ಹಾದ್ ಜೋಶಿ