IPL 2022: ಮೆಗಾ ಹರಾಜಿಗೂ ಮುನ್ನ ಹೊಸ ಫ್ರಾಂಚೈಸಿ 3 ಆಟಗಾರರನ್ನು ಹೇಗೆ ಆಯ್ಕೆ ಮಾಡಲಿದೆ?
IPL 2022 Mega Auction Rules: ಈ ವಿಶೇಷ ಆಯ್ಕೆ ಇದೀಗ ಹೊಸ ಫ್ರಾಂಚೈಸಿಗಳಿಗೆ ವರದಾನವಾಗಲಿದೆ. ಏಕೆಂದರೆ ಇದೀಗ ಹರಾಜು ಪಟ್ಟಿಯಲ್ಲಿ ಸ್ಟಾರ್ ಆಟಗಾರರೇ ತುಂಬಿದ್ದಾರೆ. ಅವರಲ್ಲಿ ಮೂವರು ಆಟಗಾರರನ್ನು ಒಪ್ಪಿಸಿ ತಂಡಕ್ಕೆ ಸೇರಿಸಿಕೊಳ್ಳಬಹುದು.
ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ (IPL 2022 Mega Auction) ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ಉಳಿಸಿಕೊಂಡಿದೆ. ಈ ಬಾರಿ ಹಳೆಯ ಫ್ರಾಂಚೈಸಿಗಳ ಎರಡು ಹೊಸ ಫ್ರಾಂಚೈಸಿ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದೆ. ಆದರೆ ಹಳೆಯ 8 ತಂಡಗಳಿಗೆ ರಿಟೈನ್ ಅವಕಾಶ ನೀಡಿರುವ ಕಾರಣ, ಹೊಸ ತಂಡಗಳಾದ ಲಕ್ನೋ ಹಾಗೂ ಅಹಮದಾಬಾದ್ ತಂಡಗಳಿಗೆ ಬಿಸಿಸಿಐ ಸ್ಪೇಷಲ್ ಪಿಕ್ ಆಯ್ಕೆ ನೀಡಿದೆ. ಅಂದರೆ 8 ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಆಟಗಾರರನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಈ ಎರಡು ಹೊಸ ತಂಡಗಳಿಗೆ ಇರಲಿದೆ. ಅದರಂತೆ ಇದೀಗ ರಿಲೀಸ್ ಆಗಿರುವ ಯಾವುದೇ ಆಟಗಾರರನ್ನು ಬೇಕಿದ್ದರೂ ಹೊಸ ಫ್ರಾಂಚೈಸಿಗಳು ಸಂಪರ್ಕಿಸಬಹುದು. ಆ ಮೂಲಕ ಮೆಗಾ ಹರಾಜಿಗಿಂತ ಮೊದಲೇ ಒಪ್ಪಂದ ಮಾಡಿಕೊಳ್ಳಬಹುದು. ಆದರೆ ಇಲ್ಲೂ ಕೂಡ ಕೆಲ ನಿಯಮಗಳು ಅನ್ವಯವಾಗಲಿದೆ.
ಅಂದರೆ ಈ ಬಾರಿಯ ಮೆಗಾ ಹರಾಜು ಮೊತ್ತವನ್ನು 90 ಕೋಟಿ ಎಂದು ನಿಗದಿಪಡಿಸಲಾಗಿದೆ. ಈ ಮೊತ್ತದಿಂದ ರಿಟೈನ್ ಮಾಡಿಕೊಳ್ಳಲು 4 ಆಟಗಾರರಿಗೆ 42 ಕೋಟಿ, 3 ಆಟಗಾರರಿಗೆ 32 ಕೋಟಿ, 2 ಆಟಗಾರರಿಗೆ 24 ಕೋಟಿ ಹಾಗೂ ಒಬ್ಬ ಆಟಗಾರನಿಗೆ 14 ಕೋಟಿ ನಿಗದಿ ಮಾಡಲಾಗಿತ್ತು. ಅದರಂತೆ ಈ ಮೊತ್ತದೊಳಗೆ ಬಹುತೇಕ ಫ್ರಾಂಚೈಸಿಗಳು 4 ಮತ್ತು 3 ಆಟಗಾರರನ್ನು ಉಳಿಸಿಕೊಂಡಿದೆ. ಇದೀಗ ಹೊಸ ಫ್ರಾಂಚೈಸಿಗಳಿಗೂ ವಿಶೇಷ ಆಯ್ಕೆಗೂ ಮೊತ್ತ ನಿಗದಿ ಮಾಡಲಾಗಿದೆ.
ಅದರಂತೆ ಹೊಸ ಫ್ರಾಂಚೈಸಿಗಳು 33 ಕೋಟಿಯೊಳಗೆ ಮೂವರು ಆಟಗಾರರನ್ನು ಆಯ್ಕೆ ಮಾಡಬಹುದು. ಈ ಮೂಲಕ ಇಬ್ಬರು ಭಾರತೀಯ ಆಟಗಾರರು+ ಒಬ್ಬ ವಿದೇಶಿ ಆಟಗಾರನನ್ನು ಮೆಗಾ ಹರಾಜು ಪಟ್ಟಿಯಿಂದ ಹೊಸ ಫ್ರಾಂಚೈಸಿಗಳು ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಫ್ರಾಂಚೈಸಿ ಮೊದಲ ಆಟಗಾರನಿಗೆ 15 ಕೋಟಿ, 2ನೇ ಆಟಗಾರನಿಗೆ 11 ಕೋಟಿ ಹಾಗೂ 3ನೇ ಆಟಗಾರನಿಗೆ 7 ಕೋಟಿ ವ್ಯಯಿಸಬೇಕಾಗುತ್ತದೆ. ಈ ಮೊತ್ತ ನೀಡಿ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡಬಹುದು.
ಈ ವಿಶೇಷ ಆಯ್ಕೆ ಇದೀಗ ಹೊಸ ಫ್ರಾಂಚೈಸಿಗಳಿಗೆ ವರದಾನವಾಗಲಿದೆ. ಏಕೆಂದರೆ ಇದೀಗ ಹರಾಜು ಪಟ್ಟಿಯಲ್ಲಿ ಸ್ಟಾರ್ ಆಟಗಾರರೇ ತುಂಬಿದ್ದಾರೆ. ಅವರಲ್ಲಿ ಮೂವರು ಆಟಗಾರರನ್ನು ಒಪ್ಪಿಸಿ ತಂಡಕ್ಕೆ ಸೇರಿಸಿಕೊಳ್ಳಬಹುದು. ಹಳೆಯ ಫ್ರಾಂಚೈಸಿಗಳು ರಿಟೈನ್ ಪಟ್ಟಿ ಸಲ್ಲಿಸುತ್ತಿದ್ದಂತೆ ಇತ್ತ ಹೊಸ ಫ್ರಾಂಚೈಸಿಗಳ ವಿಶೇಷ ಆಯ್ಕೆ ಕೂಡ ಓಪನ್ ಆಗಿದೆ. ಅದರಂತೆ ಡಿಸೆಂಬರ್ 24 ರೊಳಗೆ ತಮಗೆ ಬೇಕಾದ ಆಟಗಾರರನ್ನು ಸಂಪರ್ಕಿಸಿ ಒಪ್ಪಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಡಿಸೆಂಬರ್ 25 ರೊಳಗೆ ಹೊಸ ಫ್ರಾಂಚೈಸಿಗಳು ಆಯ್ಕೆ ಮಾಡಿದ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗುತ್ತದೆ. ಇದರಿಂದ ಮೆಗಾ ಹರಾಜು ಪಟ್ಟಿಯಲ್ಲಿ 6 ಪ್ರಮುಖ ಆಟಗಾರರು ಲಕ್ನೋ ಹಾಗೂ ಅಹಮದಾಬಾದ್ ತಂಡಗಳ ಪಾಲಾಗುವುದರಲ್ಲಿ ಡೌಟೇ ಇಲ್ಲ ಎನ್ನಬಹುದು.
ಇದನ್ನೂ ಓದಿ: IPL 2022: ದುಡ್ಡಿಗಿಂತ RCB ತಂಡವೇ ಮುಖ್ಯ: ವಿರಾಟ್ ಕೊಹ್ಲಿಗೆ ಅಭಿಮಾನಿಗಳಿಂದ ಬಹುಪರಾಕ್
ಇದನ್ನೂ ಓದಿ: 8 ಫ್ರಾಂಚೈಸಿ ಉಳಿಸಿಕೊಂಡ ಆಟಗಾರರ ಪಟ್ಟಿ ಹೀಗಿದೆ
ಇದನ್ನೂ ಓದಿ: 27 ಆಟಗಾರರು ರಿಟೈನ್: ಬಿಡುಗಡೆಯಾದ ಆಟಗಾರರ ಪಟ್ಟಿ ಇಲ್ಲಿದೆ
(How can the two new IPL teams sign players ahead of the auction?)