ವಿರಾಟ್ ಕೊಹ್ಲಿ (Virat Kohli) ನಾಯಕತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸತತ ಐದು ವರ್ಷಗಳಿಂದ ಐಸಿಸಿ ಟೆಸ್ಟ್ ರ್ಯಾಕಿಂಗ್ (ICC Test rankings)ನಲ್ಲಿ ನಂ.1 ಆಗಿತ್ತು. ಆದರೆ ಈ ವರ್ಷ ಆ ಸ್ಥಾನದಿಂದ ಟೀಂ ಇಂಡಿಯಾ ಕೆಳಗಿಳಿಯಬೇಕಾಗಿದೆ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆಲ್ಲದಿದ್ದರು. ರ್ಯಾಕಿಂಗ್ನಲ್ಲಿ ತನ್ನ ಸ್ಥಾನವನ್ನು ಮೇಲ್ಪಂಕ್ತಿಯಲ್ಲೇ ಭದ್ರ ಪಡಿಸಿಕೊಂಡಿತ್ತು. ಆದರೆ ಈ ವರ್ಷ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ನಲ್ಲಿದ್ದ ನಂ.1 ಸ್ಥಾನವನ್ನು ಆಸ್ಟ್ರೇಲಿಯಕ್ಕೆ ಬಿಟ್ಟುಕೊಡಬೇಕಿದೆ. ಈ ವರ್ಷದ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ನಂಬರ್ 1 ಟೆಸ್ಟ್ ತಂಡವಾಗಿ ಹೊರಹೊಮ್ಮಿದೆ. ಭಾರತವು 2016 ರಿಂದ 2021 ರವರೆಗೆ ಸತತ ಐದು ವರ್ಷಗಳ ಕಾಲ ಐಸಿಸಿ ಟೆಸ್ಟ್ ನಂ.1 ತಂಡವಾಗಿತ್ತು. ಆದರೆ ಈಗ ಟೀಂ ಇಂಡಿಯಾ 119 ಅಂಕಗಳೊಂದಿಗೆ ಟೆಸ್ಟ್ ವಾರ್ಷಿಕ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೆರ ಕುಸಿದಿದೆ. ನ್ಯೂಜಿಲೆಂಡ್ 111 ಅಂಕಗಳೊಂದಿಗೆ ವಾರ್ಷಿಕ ಶ್ರೇಯಾಂಕದಲ್ಲಿ ಮೂರನೇ ಮತ್ತು ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನದಲ್ಲಿದೆ. ಪಾಕಿಸ್ತಾನ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಟೀಮ್ ಇಂಡಿಯಾ ನಂ. 1
ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ಒಂದು ಸ್ಥಾನ ಕುಸಿದಿರಬಹುದು ಆದರೆ ಸಮಾಧಾನಕರ ಸಂಗತಿಯೆಂದರೆ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ನಂ.1 ಸ್ಥಾನವನ್ನು ಪಡೆದುಕೊಂಡಿದೆ. 2019 ರಿಂದ ಎಲ್ಲಾ ಟಿ20 ಸರಣಿಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನ ಅತ್ಯುತ್ತಮವಾಗಿದೆ. ಹಾಗಾಗಿ 270 ರೇಟಿಂಗ್ ಪಾಯಿಂಟ್ಗಳೊಂದಿಗೆ ನಂ.1 ಸ್ಥಾನದಲ್ಲಿದೆ. ಇಂಗ್ಲೆಂಡ್ 265 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ODI ಶ್ರೇಯಾಂಕದಲ್ಲಿ ಯಾರು ನಂಬರ್ 1?
ನ್ಯೂಜಿಲೆಂಡ್ ತಂಡ ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದೆ. ಮೇ 2019 ರಿಂದ 2022 ರವರೆಗೆ, ನ್ಯೂಜಿಲೆಂಡ್ ಅತ್ಯುತ್ತಮ ಪ್ರದರ್ಶನವನ್ನು ತೊರಿದೆ. ಕಿವೀಸ್ ತಂಡ ಇಂಗ್ಲೆಂಡ್‌ಗಿಂತ ಕೇವಲ ಒಂದು ರೇಟಿಂಗ್ ಪಾಯಿಂಟ್ ಮುಂದೆ ಇದ್ದಾರೆ. ಭಾರತ ತಂಡ ನಾಲ್ಕನೇ ಮತ್ತು ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ. ಏಕದಿನ ಶ್ರೇಯಾಂಕದಲ್ಲಿ ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ಕೆಟ್ಟ ಸ್ಥಿತಿಯಲ್ಲಿವೆ. ಶ್ರೀಲಂಕಾ 8ನೇ. ವೆಸ್ಟ್ ಇಂಡೀಸ್ 9 ಮತ್ತು ಅಫ್ಘಾನಿಸ್ತಾನ 10 ನೇ ಸ್ಥಾನದಲ್ಲಿದೆ. ಏಕದಿನ ಶ್ರೇಯಾಂಕದಲ್ಲಿ ಪಪುವಾ ನ್ಯೂಗಿನಿ ತಂಡ 20 ನೇ ಸ್ಥಾನದೊಂದಿಗೆ ಪಟ್ಟಿಯಲ್ಲಿ ಕೊನೆಯವರಾಗಿದ್ದಾರೆ.
Australia hold onto a solid lead as annual update to @MRFWorldwide ICC Men’s Test Team Rankings is announced ?
More ?https://t.co/KDEMiJUIrn
— ICC (@ICC) May 4, 2022