ಡಿಆರ್‌ಎಸ್ ದುರ್ಬಳಕೆಗೆ ಬ್ರೇಕ್; ಸ್ಟಂಪಿಂಗ್ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿದ ಐಸಿಸಿ..!

Cricket Rules 2024: ಐಸಿಸಿಯ ಹೊಸ ನಿಯಮದ ಪ್ರಕಾರ, ಯಾವುದೇ ತಂಡವು ಸ್ಟಂಪಿಂಗ್‌ಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಿದರೆ, ಅದು ಮೂರನೇ ಅಂಪೈರ್‌ಗೆ ಹೋದಾಗ, ಅವರು ಸೈಡ್-ಆನ್ ರಿಪ್ಲೇಗಳನ್ನು ನೋಡುವ ಮೂಲಕ ಅದನ್ನು ಪರಿಶೀಲಿಸುತ್ತಾರೆ. ಇದಲ್ಲದೆ, ಫೀಲ್ಡಿಂಗ್ ತಂಡವು ಕ್ಯಾಚ್ ಔಟ್​ಗೆ ಮನವಿ ಮಾಡಬೇಕಾದರೆ ಅವರು ಮತ್ತೆ ಡಿಆರ್ಎಸ್ ತೆಗೆದುಕೊಳ್ಳಬೇಕಾಗುತ್ತದೆ.

ಡಿಆರ್‌ಎಸ್ ದುರ್ಬಳಕೆಗೆ ಬ್ರೇಕ್; ಸ್ಟಂಪಿಂಗ್ ನಿಯಮದಲ್ಲಿ ಪ್ರಮುಖ ಬದಲಾವಣೆ ಮಾಡಿದ ಐಸಿಸಿ..!
ಐಸಿಸಿ ಹೊಸ ನಿಯಮ
Follow us
|

Updated on: Jan 04, 2024 | 3:42 PM

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಕಳೆದ ತಿಂಗಳು ಆಟದ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿತ್ತು. ಅದರಂತೆ ಈ ಎಲ್ಲಾ ನಿಯಮಗಳು 2024 ರ ಹೊಸ ವರ್ಷದ ಆರಂಭದೊಂದಿಗೆ ಜಾರಿಗೆ ಬಂದಿದ್ದರೂ ಅವುಗಳ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಮಾಡಲಾಗಿಲ್ಲ. ಈ ಎಲ್ಲಾ ನಿಯಮಗಳು ಜನವರಿ 3 ರಿಂದ ಆರಂಭವಾದ ಭಾರತ vs ದಕ್ಷಿಣ ಆಫ್ರಿಕಾ (India vs South Africa) ಹಾಗೂ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Australia vs Pakistan) ನಡುವಿನ ಟೆಸ್ಟ್ ಪಂದ್ಯಕ್ಕೆ ಅನ್ವಯಿಸುತ್ತವೆ ಎಂದು ಹೇಳಲಾಗಿತ್ತು. ಆದರೆ ಆ ಬಗ್ಗೆ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ. ಆದರೆ ಐಸಿಸಿ ಬದಲಾಯಿಸಿರುವ ನಿಯಮಗಳಲ್ಲಿ ಪ್ರಮುಖವಾದದ್ದು ಸ್ಟಂಪಿಂಗ್ ನಿಯಮ. ವಾಸ್ತವವಾಗಿ, ವಿಕೆಟ್ ಕೀಪರ್ ಮನವಿ ಮೇರೆಗೆ ಮೂರನೇ ಅಂಪೈರ್ ಸ್ಟಂಪಿಂಗ್ ಅನ್ನು ಪರಿಶೀಲಿಸುವ ಮೊದಲು ಕ್ಯಾಚ್ ಅನ್ನು ಪರಿಶೀಲಿಸುತ್ತಿದ್ದರು. ಆದರೆ ಬದಲಾಗಿರುವ ಹೊಸ ನಿಯಮಗಳ ಪ್ರಕಾರ, ಸ್ಟಂಪಿಂಗ್ ವಿಮರ್ಶೆಯಲ್ಲಿ ಸ್ಟಂಪಿಂಗ್ ಅನ್ನು ಮಾತ್ರ ಪರಿಶೀಲಿಸಲಾಗುತ್ತದೆ.

ಎದುರಾಳಿ ತಂಡಕ್ಕೆ ಲಾಭ

ಡಿಆರ್​ಎಸ್​ಗೆ ಸಂಬಂಧಿಸಿದ ಕೆಲವು ನಿಯಮಗಳು ಡಿಸೆಂಬರ್ 2023 ರಲ್ಲಿ ಜಾರಿಗೆ ಬಂದಿದ್ದವು. ಅದರಂತೆ ಎದುರಾಳಿ ತಂಡವು ಬ್ಯಾಟರ್​ನ ಸ್ಟಂಪಿಂಗ್‌ಗಾಗಿ ಮನವಿ ಮಾಡಿದರೆ, ಫೀಲ್ಡ್ ಅಂಪೈರ್, ಮೂರನೇ ಅಂಪೈರ್​ಗೆ ಮನವಿ ಕಳುಹಿಸುತ್ತಿದ್ದರು. ಮೊದಲು ಕ್ಯಾಚ್ ಔಟ್ ಅನ್ನು ಪರಿಶೀಲಿಸುತ್ತಿದ್ದ ಮೂರನೇ ಅಂಪೈರ್, ಆ ಬಳಿಕ ಸ್ಟಂಪಿಂಗ್‌ ಅನ್ನು ಪರಿಶೀಲಿಸುತ್ತಿದ್ದರಯ. ಎದುರಾಳಿ ತಂಡಗಳು ಹಲವು ಬಾರಿ ಇದರ ಲಾಭ ಪಡೆದು ಸ್ಟಂಪಿಂಗ್‌ಗೆ ಡಿಆರ್‌ಎಸ್ ಬಳಸಿ ಬ್ಯಾಟ್ಸ್‌ಮನ್‌ಗಳನ್ನು ಕ್ಯಾಚ್ ಔಟ್ ಮಾಡಿರುವ ಹಲವು ನಿದರ್ಶನಗಳಿವೆ.

ಕ್ಯಾಚ್ ಔಟ್​ಗೆ ಪ್ರತ್ಯೇಕ ಮನವಿ

ಈಗ ಐಸಿಸಿಯ ಹೊಸ ನಿಯಮದ ಪ್ರಕಾರ, ಯಾವುದೇ ತಂಡವು ಸ್ಟಂಪಿಂಗ್‌ಗೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಿದರೆ, ಅದು ಮೂರನೇ ಅಂಪೈರ್‌ಗೆ ಹೋದಾಗ, ಅವರು ಸೈಡ್-ಆನ್ ರಿಪ್ಲೇಗಳನ್ನು ನೋಡುವ ಮೂಲಕ ಅದನ್ನು ಪರಿಶೀಲಿಸುತ್ತಾರೆ. ಇದಲ್ಲದೆ, ಫೀಲ್ಡಿಂಗ್ ತಂಡವು ಕ್ಯಾಚ್ ಔಟ್​ಗೆ ಮನವಿ ಮಾಡಬೇಕಾದರೆ ಅವರು ಮತ್ತೆ ಡಿಆರ್ಎಸ್ ತೆಗೆದುಕೊಳ್ಳಬೇಕಾಗುತ್ತದೆ.

ಈ ನಿಯಮಗಳಲ್ಲಿ ಬದಲಾವಣೆ

ಇದರ ಹೊರತಾಗಿ, ಮೈದಾನದ ಗಾಯದ ಸಮಯದಲ್ಲಿ ಆಟವನ್ನು ನಿಲ್ಲಿಸಲು ಐಸಿಸಿ ಈಗ ಸಮಯ ಮಿತಿಯನ್ನು ನಿಗದಿಪಡಿಸಿದೆ. ಇದರಲ್ಲಿ ಆಟಗಾರನು ಮೈದಾನದಲ್ಲಿ ಗಾಯಗೊಂಡರೆ, ಆಟವನ್ನು ಕೇವಲ 4 ನಿಮಿಷಗಳ ಕಾಲ ನಿಲ್ಲಿಸಲಾಗುತ್ತದೆ. ಇದಲ್ಲದೆ, ಈಗ ಮೂರನೇ ಅಂಪೈರ್‌ಗೆ ಮುಂಭಾಗದ ಪಾದವನ್ನು ಹೊರತುಪಡಿಸಿ ಎಲ್ಲಾ ರೀತಿಯ ನೋ-ಬಾಲ್‌ಗಳನ್ನು ಪರಿಶೀಲಿಸುವ ಅಧಿಕಾರವಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ರಾಮಲೀಲಾ ವೇಳೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ರಾಮ -ರಾವಣ; ವಿಡಿಯೋ ವೈರಲ್
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ಐಶ್ವರ್ಯಾ, ಅನುಷಾ ರೈ ನಡುವೆ ಜೋರು ಜಗಳ; ಬಿಗ್​ ಬಾಸ್​ ಮನೆಯಲ್ಲಿ ರಂಪಾಟ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ರಸ್ತೆಯಲ್ಲೇ ಯುವಕನಿಗೆ ಹೊಡೆದು ಕೊಲೆ; ಮಗನ ಮೇಲೆ ಮಲಗಿ ಬೇಡಿಕೊಂಡ ತಾಯಿ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ದರ್ಶನ್ ಬೇಲ್ ಅರ್ಜಿ ತಿರಸ್ಕೃತ, ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ನಿರಾಶೆ
ದರ್ಶನ್ ಜಾಮೀನು ಅರ್ಜಿ ವಜಾ: ರೇಣುಕಾಸ್ವಾಮಿ ತಂದೆಯ ಮೊದಲ ಪ್ರತಿಕ್ರಿಯೆ
ದರ್ಶನ್ ಜಾಮೀನು ಅರ್ಜಿ ವಜಾ: ರೇಣುಕಾಸ್ವಾಮಿ ತಂದೆಯ ಮೊದಲ ಪ್ರತಿಕ್ರಿಯೆ
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಮೌಖಿಕ ಆದೇಶಗಳಿಗೆ ಕಿಮ್ಮತ್ತಿರಲ್ಲ ಅಂತ ಜಮೀರ್​​​ಗೆ ಗೊತ್ತಿಲ್ಲ: ಯತ್ನಾಳ್
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ