AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸಿಸಿ ಹೊಸ ನಿಯಮ: ಗಾಯಗೊಂಡು ಹೊರನಡೆದ ಆಟಗಾರನಿಗೆ 7 ದಿನಗಳ ನಿಷೇಧ

ICC New Rules: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ 2027ರ ಸೀಸನ್​ನೊಂದಿಗೆ ಕ್ರಿಕೆಟ್‌ನ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಈ ಬದಲಾವಣೆ ಜೊತೆಗೆ ಇದೀಗ ಕನ್ಕ್ಯುಶನ್ ಸಬ್​ ಆಟಗಾರರ ಪಟ್ಟಿಯನ್ನೂ ಸಹ ಸಲ್ಲಿಸಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸೂಚಿಸಿದೆ.

ಐಸಿಸಿ ಹೊಸ ನಿಯಮ: ಗಾಯಗೊಂಡು ಹೊರನಡೆದ ಆಟಗಾರನಿಗೆ 7 ದಿನಗಳ ನಿಷೇಧ
Icc - Team India
ಝಾಹಿರ್ ಯೂಸುಫ್
|

Updated on:Jun 28, 2025 | 9:05 AM

Share

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಕೆಲವು ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಜೂನ್ 17 ರಿಂದ ಪ್ರಾರಂಭವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ 4ನೇ ಆವೃತ್ತಿಯೊಂದಿಗೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಕ್ಯಾಚ್, ಸ್ಟಾಪ್ ಗಡಿಯಾರ ಮತ್ತು 2 ಚೆಂಡುಗಳ ಬಳಕೆಯಂತಹ ಬದಲಾವಣೆಗಳು ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇದರ ಜೊತೆಗೆ ಇದೀಗ ಕನ್ಕ್ಯುಶನ್‌ಗೆ ಸಂಬಂಧಿಸಿದ ನಿಯಮದಲ್ಲೂ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, ಪಂದ್ಯದ ನಡುವೆ ಗಾಯಗೊಂಡು ಹೊರನಡೆದ ಆಟಗಾರ ಮುಂದಿನ 7 ದಿನಗಳವರೆಗೆ ಕಣಕ್ಕಿಳಿಯುವಂತಿಲ್ಲ.

ನಿಖರವಾಗಿ 6 ​​ವರ್ಷಗಳ ಹಿಂದೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನ್ಕ್ಯುಶನ್ ನಿಯಮವನ್ನು ಜಾರಿಗೆ ತರಲು ಐಸಿಸಿ ನಿರ್ಧರಿಸಿತ್ತು. ಅಲ್ಲದೆ ಈಗಾಗಲೇ ಈ ನಿಯಮವನ್ನು ಪ್ರಯೋಗಾತ್ಮಕವಾಗಿ ಜಾರಿಗೆ ತರಲಾಗಿದೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2027ರ ಸರಣಿಯೊಂದಿಗೆ ಕನ್ಕ್ಯುಶನ್‌ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ.

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಫಿಲ್ ಹ್ಯೂಸ್ ತಲೆಗೆ ಚೆಂಡು ಬಡಿದು ಸಾವನ್ನಪ್ಪಿದಾಗಿನಿಂದ, ಕ್ರಿಕೆಟ್‌ನಲ್ಲಿ ಕನ್ಕ್ಯುಶನ್ ಬದಲಿ ನಿಯಮವನ್ನು ಜಾರಿಗೆ ತರುವ ಬೇಡಿಕೆ ಇತ್ತು. ಈ ನಿಯಮದಡಿಯಲ್ಲಿ, ಯಾವುದೇ ಆಟಗಾರನಿಗೆ ತಲೆ ಅಥವಾ ಕುತ್ತಿಗೆಯಲ್ಲಿ ಗಾಯಗೊಂಡ ನಂತರ ತಲೆತಿರುಗುವಿಕೆ, ಮಸುಕಾದ ದೃಷ್ಟಿ ಅಥವಾ ತಲೆನೋವಿನ ಲಕ್ಷಣಗಳು ಕಂಡುಬಂದರೆ, ಆ ತಂಡವು ಆ ಆಟಗಾರನ ಬದಲಿಗೆ ಮತ್ತೋರ್ವ ಆಟಗಾರನನ್ನು ಕಣಕ್ಕಿಳಿಸಬಹುದು.

7 ದಿನಗಳ ನಿಷೇಧ ಹೇಗೆ?

ಪಂದ್ಯದ ನಡುವೆ ಯಾವುದೇ ಆಟಗಾರನ ತಲೆಗೆ ಅಥವಾ ಕುತ್ತಿಗೆ ಚೆಂಡು ಬಡಿದು, ಅವರು ಹೊರ ನಡೆದರೆ ಅವರ ಬದಲಿಗೆ ಮತ್ತೋರ್ವ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಆದರೆ ಹೀಗೆ ಹೊರ ನಡೆದ ಆಟಗಾರ 7 ದಿನಗಳವರೆಗೆ ಯಾವುದೇ ಪಂದ್ಯವಾಡುವಂತಿಲ್ಲ ಎಂದು ಐಸಿಸಿ ತಿಳಿಸಿದೆ. ಆಟಗಾರರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.

ಈ ಹಿಂದೆ ಕನ್ಕ್ಯುಶನ್ ಸಬ್ ಆಯ್ಕೆ ಇದ್ದರೂ, ಕೆಲ ತಂಡಗಳು ನಿರ್ಣಾಯಕ ಹಂತದಲ್ಲಿ ಬ್ಯಾಟರ್​ ಬದಲಿಗೆ ಬೌಲರ್​ನ ಬಳಸಿಕೊಂಡ ನಿದರ್ಶನಗಳಿವೆ. ಇಂತಹ ಮೋಸದಾಟಕ್ಕೆ ಕಡಿವಾಣ ಹಾಕಲು ಕೂಡ ಈ 7 ದಿನಗಳ ನಿಷೇಧ ಸಹಕಾರಿಯಾಗಲಿದೆ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ.

5 ಆಟಗಾರರು ಕಡ್ಡಾಯ:

ಕನ್ಕ್ಯುಶನ್ ಸಬ್​ಗಾಗಿ ತಂಡವು ಪ್ಲೇಯಿಂಗ್ ಇಲೆವೆನ್​ ಜೊತೆ 5 ಆಟಗಾರರ ಪಟ್ಟಿಯನ್ನು ಸಲ್ಲಿಸುವುದು ಕೂಡ ಕಡ್ಡಾಯ ಮಾಡಲಾಗಿದೆ. ಈಗಾಗಲೇ ಐಪಿಎಲ್​​​ನಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯಂತೆಯೇ ಇಲ್ಲಿ ಕನ್ಕ್ಯುಶನ್ ಸಬ್​ ಆಯ್ಕೆ ನೀಡಲಾಗಿದೆ. ಅದರಂತೆ ಪ್ರತಿ ತಂಡಗಳು ಪ್ಲೇಯಿಂಗ್ ಇಲೆವೆನ್ ಜೊತೆ, ಹೆಚ್ಚುವರಿಯಾಗಿ  ಒಬ್ಬ ಬ್ಯಾಟ್ಸ್‌ಮನ್, ಒಬ್ಬ ವಿಕೆಟ್ ಕೀಪರ್, ಒಬ್ಬ ಸ್ಪಿನ್ನರ್, ಒಬ್ಬ ಆಲ್-ರೌಂಡರ್ ಮತ್ತು ಒಬ್ಬ ವೇಗದ ಬೌಲರ್​ನನ್ನು ಹೆಸರಿಸಬೇಕು.

ಇದನ್ನೂ ಓದಿ: 6,6,6,6,6,6,6,6: ಪೂರನ್ ಪವರ್​ಫುಲ್ ಶತಕ

ಇಲ್ಲಿ ಬೌಲರ್​ ಬದಲಿಗೆ ಬೌಲರ್​ನನ್ನು, ಬ್ಯಾಟ್ಸ್​ಮನ್ ಬದಲಿಗೆ ಬ್ಯಾಟ್ಸ್​ಮನ್​ನನ್ನು ಹಾಗೂ ಆಲ್​ರೌಂಡರ್ ಬದಲಿಗೆ ಆಲ್​ರೌಂಡರ್​ನನ್ನು ಕಣಕ್ಕಿಳಿಸಬೇಕು ಎಂದು ಐಸಿಸಿ ಸ್ಪಷ್ಟಪಡಿಸಿದೆ. ಈ ನಿಯಮಗಳು ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸರಣಿಯೊಂದಿಗೆ ಜಾರಿಗೆ ಬರಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ.

Published On - 9:03 am, Sat, 28 June 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ