SA vs NZ, ICC World Cup: ಸಂಕಷ್ಟಕ್ಕೆ ಸಿಲುಕಿಕೊಂಡ ನ್ಯೂಝಿಲೆಂಡ್ ತಂಡ: ಸೆಮಿ ಫೈನಲ್ ತಲುಪಲು ಏನು ಮಾಡಬೇಕು?
ICC Cricket World Cup 2023 Semifinal Qualification Scenarios: ನ್ಯೂಝಿಲೆಂಡ್‌ಗೆ ಇನ್ನು ಒಟ್ಟು ಎರಡು ಪಂದ್ಯಗಳು ಉಳಿದಿವೆ. ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧ ಮತ್ತು ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೆಮಿಸ್‌ನಲ್ಲಿನ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡ ಬಹುತೇಕ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿದೆ. ಇಲ್ಲಿದೆ ನೋಡಿ ಎಲ್ಲಾ ತಂಡಗಳ ಸೆಮಿಫೈನಲ್ ಲೆಕ್ಕಚಾರ.

ಬುಧವಾರ ಪುಣೆಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 190 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತ ನಂತರ, ನ್ಯೂಝಿಲೆಂಡ್ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ (ICC ODI World Cup) ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗೆ ದೊಡ್ಡ ಹೊಡೆತ ಬಿದ್ದಿದೆ. ಕಿವೀಸ್ ಆಡಿರುವ 7 ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆದ್ದು, ಮೂರರಲ್ಲಿ ಸೋತು ಎಂಟು ಅಂಕ ಸಂಪಾದಿಸಿ ನಾಲ್ಕನೇ ಸ್ಥಾನದಲ್ಲಿದೆ. ನ್ಯೂಝಿಲೆಂಡ್‌ಗೆ ಇನ್ನು ಒಟ್ಟು ಎರಡು ಪಂದ್ಯಗಳು ಉಳಿದಿವೆ. ಚೆನ್ನೈನಲ್ಲಿ ಪಾಕಿಸ್ತಾನದ ವಿರುದ್ಧ ಮತ್ತು ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೆಮಿಸ್‌ನಲ್ಲಿನ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡ ಬಹುತೇಕ ಸೆಮಿ ಫೈನಲ್ಗೆ ಲಗ್ಗೆಯಿಟ್ಟಿದೆ. ಇಲ್ಲಿದೆ ನೋಡಿ ಎಲ್ಲಾ ತಂಡಗಳ ಸೆಮಿಫೈನಲ್ ಲೆಕ್ಕಚಾರ.
ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾ ತಂಡ ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್‌ಗೆ ಏರಲಿದೆ. ಆಫ್ರಿಕಾ ತನ್ನ ಮುಂದಿನ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನವನ್ನು ಎದುರಿಸಲಿದೆ.
ಭಾರತ: ಭಾರತಕ್ಕೆ ಮೂರು ಪಂದ್ಯಗಳು ಬಾಕಿಯಿದೆ. ಸೆಮಿಸ್ ಸ್ಥಾನವನ್ನು ಭದ್ರಪಡಿಸಲು ಒಂದು ಗೆಲುವಿನ ಅಗತ್ಯವಿದೆ. ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ವಿರುದ್ಧ ಪಂದ್ಯ ಆಡಲಿದೆ.
IND vs SL, ICC World Cup: ವಿಶ್ವಕಪ್ನಲ್ಲಿಂದು ಭಾರತ-ಶ್ರೀಲಂಕಾ ಮುಖಾಮುಖಿ: ಏಳನೇ ಗೆಲುವಿನ ಮೇಲೆ ರೋಹಿತ್ ಕಣ್ಣು
ಆಸ್ಟ್ರೇಲಿಯಾ: ಸೆಮಿಸ್ ಪ್ರವೇಶಕ್ಕಾಗಿ, ಆಸ್ಟ್ರೇಲಿಯಾವು 14 ಅಂಕಗಳನ್ನು ಗಳಿಸಲು ಇಂಗ್ಲೆಂಡ್, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕು. ಇದರಲ್ಲಿ ಯಾವುದಾದರೂ ಒಂದು ಅಥವಾ ಎರಡರಲ್ಲಿ ಸೋತರೆ, ರನ್-ರೇಟ್ ಆಧಾರದ ಮೇಲೆ ಆಸೀಸ್ ಭವಿಷ್ಯ ನಿಲ್ಲುತ್ತದೆ.
ನ್ಯೂಝಿಲೆಂಡ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿದರೆ, ನ್ಯೂಝಿಲೆಂಡ್ ಸೆಮಿಫೈನಲ್‌ಗೆ ಪ್ರವೇಶಿಸುವುದು ಖಚಿತವಾಗುತ್ತದೆ. ಆದಾಗ್ಯೂ, ಒಂದು ಸೋಲು ಕಂಡರೆ ಕಿವೀಸ್ ಸೆಮಿಶ್ ಹಾದಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ರನ್ ರೇಟ್ ಮೇಲೆ ನಿರ್ಧಾರವಾಗುತ್ತದೆ.
ಪಾಕಿಸ್ತಾನ: ಪಾಕಿಸ್ತಾನವು ತನ್ನ ಉಳಿದಿರುವ ಎರಡೂ ಪಂದ್ಯಗಳನ್ನು ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಗೆಲ್ಲಬೇಕು. ಇದರ ಜೊತೆಗೆ ಆಸ್ಟ್ರೇಲಿಯಾ, ನ್ಯೂಝಿಲೆಂಡ್ ತಂಡಗಳ ಸೋಲು-ಗೆಲುವಿನ ಲೆಕ್ಕಚಾರದ ಮೇಲೆ ಬಾಬರ್ ಪಡೆಯ ಭವಿಷ್ಯ ನಿಂತಿದೆ.
ಅಫ್ಘಾನಿಸ್ತಾನ: ಅಫ್ಘಾನಿಸ್ತಾನಕ್ಕೆ ಕೂಡ ಸೆಮೀಸ್ ಪ್ರವೇಶಿಸುವ ಅವಕಾಶವಿದೆ. ಅವರ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರೆ 12 ಅಂಕ ಪಡೆಯುತ್ತಾರೆ. ನಂತರ ರನ್-ರೇಟ್ ಆಧಾರದ ಮೇಲೆ ಸೆಮೀಸ್ ಹಾದಿ ನಿರ್ಧಾರವಾಗುತ್ತದೆ.
ಶ್ರೀಲಂಕಾ: ಶ್ರೀಲಂಕಾ ಅವರು ತಮ್ಮ ಉಳಿದಿರುವ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದರೆ 10 ಅಂಕಗಳನ್ನು ಹೊಂದಿ ಕೊನೆಯ ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೊಂದಿದೆ. ಆದರೆ, ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ತಮ್ಮ ಉಳಿದಿರುವ ಎರಡು ಪಂದ್ಯಗಳನ್ನು ಸೋಲಬೇಕು.
ನೆದರ್ಲೆಂಡ್ಸ್: ನೆದರ್ಲೆಂಡ್ಸ್ ತಂಡದ ಸ್ಥಿತಿ ಕೂಡ ಶ್ರೀಲಂಕಾದಂತೆಯೇ ಇದೆ. 4 ಅಂಕಗಳ ಹೊಂದಿದ್ದು, ತಮ್ಮ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವ ಮೂಲಕ 10 ಅಂಕಗಳನ್ನು ಸಂಪಾದಿಸಬಹುದು. ಜೊತೆಗೆ ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ರನ್-ರೇಟ್ಗಾಗಿ ಹೋರಾಡಬೇಕು.
ಇಂಗ್ಲೆಂಡ್: ಇಂಗ್ಲೆಂಡ್ ತನ್ನ ಉಳಿದ ಮೂರು ಪಂದ್ಯಗಳನ್ನು ಕೇವಲ ಗೆದ್ದರೆ ಸಾಲದು. ದೊಡ್ಡ ಮೊತ್ತಗಳ ಅಂತರದಲ್ಲಿ ಗೆಲ್ಲಬೇಕು. ಮತ್ತು ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ತಮ್ಮ ಉಳಿದಿರುವ ಎಲ್ಲಾ ಪಂದ್ಯಗಳನ್ನು ಸೋಲಬೇಕು. ಇದು ಕಷ್ಟ ಆಗಿರುವುದರಿಂದ ಹಾಲಿ ಚಾಂಪಿಯನ್ನರು ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ. ಇದರ ನಡುವೆ ಬಾಂಗ್ಲಾದೇಶ ಎಲಿಮಿನೇಟ್ ಆದ ಮೊದಲ ತಂಡವಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




