IND vs SL ICC World Cup 2023: ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ
India vs Sri Lanka, ICC world Cup 2023: ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ 168 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡ 99 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಶ್ರೀಲಂಕಾ ಗೆದ್ದಿರುವುದು 57 ಪಂದ್ಯಗಳನ್ನು ಮಾತ್ರ. ಇನ್ನು 11 ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ, ಒಂದು ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿತ್ತು.

ಏಕದಿನ ವಿಶ್ವಕಪ್ನ 33ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ಹಂಗಾಮಿ ನಾಯಕ ಕುಸಾಲ್ ಮೆಂಡಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್ಗಳಲ್ಲಿ8 ವಿಕೆಟ್ ಕಳೆದುಕೊಂಡು 357 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ತಂಡವನ್ನು 19.4 ಓವರ್ಗಳಲ್ಲಿ ಕೇವಲ 55 ರನ್ಗಳಿಗೆ ಟೀಮ್ ಇಂಡಿಯಾ ಆಲೌಟ್ ಮಾಡಿದೆ. ಈ ಮೂಲಕ 302 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ವಿಶ್ವಕಪ್ 2023ರ ಸೆಮಿಫೈನಲ್ಗೆ ಪ್ರವೇಶಿಸಿದೆ. ಇನ್ನು ಈ ಪಂದ್ಯದಲ್ಲಿ 5 ಓವರ್ಗಳಲ್ಲಿ 18 ರನ್ ನೀಡಿ 5 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ 168 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ ತಂಡ 99 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಶ್ರೀಲಂಕಾ ಗೆದ್ದಿರುವುದು 57 ಪಂದ್ಯಗಳನ್ನು ಮಾತ್ರ. ಇನ್ನು 11 ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ, ಒಂದು ಮ್ಯಾಚ್ ಟೈನಲ್ಲಿ ಅಂತ್ಯ ಕಂಡಿತ್ತು.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ದುಶನ್ ಹೇಮಂತ, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.
LIVE Cricket Score & Updates
-
IND vs SL ICC World Cup 2023 Live Score: ಭಾರತಕ್ಕೆ ಭರ್ಜರಿ ಜಯ
ಶ್ರೀಲಂಕಾ ತಂಡವನ್ನು 19.4 ಓವರ್ಗಳಲ್ಲಿ 55 ರನ್ಗಳಿಗೆ ಆಲೌಟ್ ಮಾಡಿದ ಟೀಮ್ ಇಂಡಿಯಾ
ಭಾರತ– 357/8 (50)
ಶ್ರೀಲಂಕಾ– 55 (19.4)
ಭಾರತ ತಂಡಕ್ಕೆ 302 ರನ್ಗಳ ಅಮೋಘ ಗೆಲುವು.
5 ಓವರ್ಗಳಲ್ಲಿ 18 ರನ್ ನೀಡಿ 5 ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿಗೆ ಒಲಿದ ಪಂದ್ಯ ಶ್ರೇಷ್ಠ ಪ್ರಶಸ್ತಿ.
-
IND vs SL ICC World Cup 2023 Live Score: ಶ್ರೀಲಂಕಾದ 9ನೇ ವಿಕೆಟ್ ಪತನ
ಮೊಹಮ್ಮದ್ ಶಮಿ ಎಸೆದ 18ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಕಸುನ್ ರಜಿತ.
ಟೀಮ್ ಇಂಡಿಯಾಗೆ 9ನೇ ಯಶಸ್ಸು.
ಭಾರತ ತಂಡದ ಗೆಲುವಿಗೆ ಒಂದು ವಿಕೆಟ್ನ ಅವಶ್ಯಕತೆ.
ಕ್ರೀಸ್ನಲ್ಲಿ ದಿಲ್ಶನ್ ಮಧುಶಂಕ ಹಾಗೂ ಮಹೀಶ್ ತೀಕ್ಷಣ ಬ್ಯಾಟಿಂಗ್.
SL 49/9 (18)
-
-
IND vs SL ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳ ಮುಕ್ತಾಯದ ವೇಳೆಗೆ ಕೇವಲ 37 ರನ್ ಕಲೆಹಾಕಿದ ಶ್ರೀಲಂಕಾ.
8 ವಿಕೆಟ್ ಕಬಳಿಸಿ ಗೆಲುವಿನತ್ತ ಮುನ್ನಡೆಯುತ್ತಿರುವ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಕಸುನ್ ರಜಿತ ಹಾಗೂ ಮಹೀಶ್ ತೀಕ್ಷಣ ಬ್ಯಾಟಿಂಗ್.
SL 37/8 (15)
-
IND vs SL ICC World Cup 2023 Live Score: ಮೊಹಮ್ಮದ್ ಶಮಿಗೆ ಮತ್ತೊಂದು ವಿಕೆಟ್
ಮೊಹಮ್ಮದ್ ಶಮಿ ಎಸೆದ 14ನೇ ಓವರ್ನ ಮೊದಲ ಎಸೆತದಲ್ಲೇ ಏಂಜೆಲೊ ಮ್ಯಾಥ್ಯೂಸ್ ಕ್ಲೀನ್ ಬೌಲ್ಡ್.
25 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಏಂಜೆಲೊ ಮ್ಯಾಥ್ಯೂಸ್.
ಕ್ರೀಸ್ನಲ್ಲಿ ಕಸುನ್ ರಜಿತ ಹಾಗೂ ಮಹೀಶ್ ತೀಕ್ಷಣ ಬ್ಯಾಟಿಂಗ್.
SL 36/8 (14)
-
IND vs SL ICC World Cup 2023 Live Score: 7ನೇ ವಿಕೆಟ್ ಪತನ
ಮೊಹಮ್ಮದ್ ಶಮಿ ಎಸೆದ 12ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ದುಷ್ಮಂತ ಚಮೀರಾ. ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಕೆಎಲ್ ರಾಹುಲ್. ಟೀಮ್ ಇಂಡಿಯಾಗೆ 7ನೇ ಯಶಸ್ಸು.
ಕ್ರೀಸ್ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಹಾಗೂ ಮಹೀಶ್ ತೀಕ್ಷಣ ಬ್ಯಾಟಿಂಗ್.
SL 22/7 (12)
-
-
IND vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್
ಮೊಹಮ್ಮದ್ ಶಮಿ ಎಸೆದ 10ನೇ ಓವರ್ನ 3ನೇ ಎಸೆತದಲ್ಲಿ ಜಡೇಜಾಗೆ ಕ್ಯಾಚ್ ನೀಡಿದ ಚರಿತ್ ಅಸಲಂಕಾ.
24 ಎಸೆತಗಳಲ್ಲಿ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಸಲಂಕಾ.
4ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರ ನಡೆದ ದಶುನ್ ಹೇಮಂತ (0).
ಕ್ರೀಸ್ನಲ್ಲಿ ಏಂಜೆಲೊ ಮ್ಯಾಥ್ಯೂಸ್ ಹಾಗೂ ದುಷ್ಮಂತ ಚಮೀರಾ ಬ್ಯಾಟಿಂಗ್.
SL 14/6 (10)
-
IND vs SL ICC World Cup 2023 Live Score: ಟೀಮ್ ಇಂಡಿಯಾ ಭರ್ಜರಿ ಬೌಲಿಂಗ್
7 ಓವರ್ಗಳಲ್ಲಿ ಕೇವಲ 12 ರನ್ ಮಾತ್ರ ನೀಡಿರುವ ಟೀಮ್ ಇಂಡಿಯಾ ಬೌಲರ್ಗಳು.
ಮೊಹಮ್ಮದ್ ಸಿರಾಜ್ಗೆ 3 ವಿಕೆಟ್ಗಳು.
1 ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್.
SL 12/4 (7)
-
IND vs SL ICC World Cup 2023 Live Score: 5 ಓವರ್ಗಳು ಮುಕ್ತಾಯ
5 ಓವರ್ಗಳಲ್ಲಿ ಕೇವಲ 7 ರನ್ ಮಾತ್ರ ಕಲೆಹಾಕಿದ ಶ್ರೀಲಂಕಾ.
4 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿರುವ ಟೀಮ್ ಇಂಡಿಯಾ ಬೌಲರ್ಗಳು.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್.
SL 7/4 (5)
-
IND vs SL ICC World Cup 2023 Live Score: ಶ್ರೀಲಂಕಾದ 4ನೇ ವಿಕೆಟ್ ಪತನ
ಮೊಹಮ್ಮದ್ ಸಿರಾಜ್ ಎಸೆದ 4ನೇ ಓವರ್ನ ಮೊದಲ ಎಸೆತದಲ್ಲೇ ಕುಸಾಲ್ ಮೆಂಡಿಸ್ (1) ಕ್ಲೀನ್ ಬೌಲ್ಡ್.
4ನೇ ಓವರ್ನ ಕೊನೆಯ ಎಸೆತದಲ್ಲಿ ಲೆಗ್ ಸೈಡ್ನತ್ತ ಫೋರ್ ಬಾರಿಸಿದ ಏಂಜೆಲೊ ಮ್ಯಾಥ್ಯೂಸ್.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್.
SL 7/4 (4)
-
IND vs SL ICC World Cup 2023 Live Score: 3 ಓವರ್ 3 ರನ್ 3 ವಿಕೆಟ್
3 ಓವರ್ ಮುಕ್ತಾಯದ ವೇಳೆಗೆ 3 ರನ್ಗಳಿಸಿದ ಶ್ರೀಲಂಕಾ.
3 ವಿಕೆಟ್ ಕಬಳಿಸಿ ಲಂಕಾ ಪಡೆಗೆ ಆರಂಭಿಕ ನೀಡಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
SL 3/3 (3)
-
IND vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ವಿಕೆಟ್
ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್ನ ಮೊದಲ ಎಸೆತದಲ್ಲೇ ದಿಮುತ್ ಕರುಣರತ್ನೆ (0) ಎಲ್ಬಿಡಬ್ಲ್ಯೂ..ಅಂಪೈರ್ ತೀರ್ಪು ಔಟ್.
ಮೊದಲ ಓವರ್ನ ಮೊದಲ ಎಸೆತದಲ್ಲೇ ಪಾತುಮ್ ನಿಸ್ಸಂಕಾ (0) ವಿಕೆಟ್ ಪಡೆದಿದ್ದ ಬುಮ್ರಾ. ಇದೀಗ 2ನೇ ಓವರ್ನ ಮೊದಲ ಎಸೆತದಲ್ಲೇ ಸಿರಾಜ್ಗೆ ವಿಕೆಟ್.
5ನೇ ಎಸೆತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ ಸದೀರ ಸಮರವಿಕ್ರಮ.
ಮೇಡನ್ ಓವರ್ ಮಾಡಿ 2 ವಿಕೆಟ್ ಕಬಳಿಸಿದ ಸಿರಾಜ್.
SL 2/3 (2)
-
IND vs SL ICC World Cup 2023 Live Score: ಶ್ರೀಲಂಕಾದ ಮೊದಲ ವಿಕೆಟ್ ಪತನ
ಮೊದಲ ಓವರ್ನ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ ಜಸ್ಪ್ರೀತ್ ಬುಮ್ರಾ.
ಬುಮ್ರಾ ಎಸೆದ ಮೊದಲ ಓವರ್ನ ಪ್ರಥಮ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರ ನಡೆದ ಪಾತುಮ್ ನಿಸ್ಸಂಕಾ (0).
ಟೀಮ್ ಇಂಡಿಯಾ ಮೊದಲ ಯಶಸ್ಸು.
ಮೊದಲ ಓವರ್ನಲ್ಲಿ ಕೇವಲ 2 ರನ್ ನೀಡಿದ ಬುಮ್ರಾ
SL 2/1 (1)
-
IND vs SL ICC World Cup 2023 Live Score: ಶ್ರೀಲಂಕಾಗೆ ಕಠಿಣ ಗುರಿ ನೀಡಿದ ಟೀಮ್ ಇಂಡಿಯಾ
ಕೊನೆಯ ಓವರ್ನಲ್ಲಿ ಕೇವಲ 5 ರನ್ ಮಾತ್ರ ನೀಡಿದ ಕಸುನ್ ರಜಿತ.
50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 357 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಭಾರತ– 357/8 (50)
ಶ್ರೀಲಂಕಾ ತಂಡಕ್ಕೆ 358 ರನ್ಗಳ ಕಠಿಣ ಗುರಿ ನೀಡಿದ ಟೀಮ್ ಇಂಡಿಯಾ.
-
IND vs SL ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಜಡ್ಡು
ದುಷ್ಮಂತ ಚಮೀರಾ ಎಸೆದ 49ನೇ ಓವರ್ನ ಮೊದಲ ಎಸೆತದಲ್ಲಿ ಫೋರ್ ಬಾರಿಸಿದ ಜಡೇಜಾ.
4ನೇ ಎಸೆತದಲ್ಲಿ ಜಡೇಜಾ ಬ್ಯಾಟ್ನಿಂದ ಸ್ಟ್ರೈಟ್ ಹಿಟ್ ಸಿಕ್ಸ್.
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಬ್ಯಾಟಿಂಗ್.
IND 352/6 (49)
-
IND vs SL ICC World Cup 2023 Live Score: ಬ್ಯಾಕ್ ಟು ಬ್ಯಾಕ್ ಸಿಕ್ಸ್ – ಔಟ್
ದಿಲ್ಶನ್ ಮಧುಶಂಕ ಎಸೆದ 48ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದ ಶ್ರೇಯಸ್ ಅಯ್ಯರ್.
ಮೂರನೇ ಎಸೆತದಲ್ಲಿ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾಗಿ ಫ್ರಂಟ್ ಫೀಲ್ಡರ್ಗೆ ಕ್ಯಾಚ್ ನೀಡಿದ ಅಯ್ಯರ್.
56 ಎಸೆತಗಳಲ್ಲಿ 82 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೇಯಸ್ ಅಯ್ಯರ್.
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಬ್ಯಾಟಿಂಗ್.
IND 339/6 (48)
-
IND vs SL ICC World Cup 2023 Live Score: 45 ಓವರ್ಗಳು ಮುಕ್ತಾಯ
45 ಓವರ್ಗಳ ಮುಕ್ತಾಯದ ವೇಳೆಗೆ 304 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕೊನೆಯ ಐದು ಓವರ್ಗಳಲ್ಲಿ ಬೃಹತ್ ಮೊತ್ತ ಪೇರಿಸುವ ನಿರೀಕ್ಷೆಯಲ್ಲಿ ಭಾರತ.
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 304/5 (45)
-
IND vs SL ICC World Cup 2023 Live Score: ಅರ್ಧಶತಕ ಪೂರೈಸಿದ ಅಯ್ಯರ್
ಮಹೀಶ್ ತೀಕ್ಷಣ ಎಸೆದ 43ನೇ ಓವರ್ನ 3ನೇ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಶ್ರೇಯಸ್ ಅಯ್ಯರ್,
ಈ ಫೋರ್ನೊಂದಿಗೆ 36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶ್ರೇಯಸ್ ಅಯ್ಯರ್.
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 288/5 (43)
-
IND vs SL ICC World Cup 2023 Live Score: ಟೀಮ್ ಇಂಡಿಯಾದ 5ನೇ ವಿಕೆಟ್ ಪತನ
ದಿಲ್ಶನ್ ಮಧುಶಂಕ ಎಸೆದ 42ನೇ ಓವರ್ನ 3ನೇ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಸೂರ್ಯಕುಮಾರ್ ಯಾದವ್.
9 ಎಸೆತಗಳಲ್ಲಿ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸೂರ್ಯಕುಮಾರ್ ಯಾದವ್.
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 276/5 (41.3)
-
IND vs SL ICC World Cup 2023 Live Score: ಟೀಮ್ ಇಂಡಿಯಾದ 4ನೇ ವಿಕೆಟ್ ಪತನ
ದುಷ್ಮಂತ ಚಮೀರಾ ಎಸೆದ 40ನೇ ಓವರ್ನ 2ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ಕೆಎಲ್ ರಾಹುಲ್.
19 ಎಸೆತಗಳಲ್ಲಿ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್.
ಕ್ರೀಸ್ನಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 264/4 (40)
-
IND vs SL ICC World Cup 2023 Live Score: ಆಕರ್ಷಕ ಬೌಂಡರಿ
ದುಷ್ಮಂತ ಚಮೀರಾ ಎಸೆದ 38ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಶ್ರೇಯಸ್ ಅಯ್ಯರ್.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 248/3 (38)
-
IND vs SL ICC World Cup 2023 Live Score: ಅಯ್ಯರ್ ಅಬ್ಬರ ಶುರು
ದಶುನ್ ಹೇಮಂತ ಎಸೆದ 35ನೇ ಓವರ್ನ ಕೊನೆಯ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಬಾರಿಸಿದ ಶ್ರೇಯಸ್ ಅಯ್ಯರ್.
35 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 225 ರನ್ಗಳು.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 225/3 (35)
ರೋಹಿತ್ ಶರ್ಮಾ (4), ಶುಭ್ಮನ್ ಗಿಲ್ (92) ಹಾಗೂ ವಿರಾಟ್ ಕೊಹ್ಲಿ (88) ಔಟ್.
-
IND vs SL ICC World Cup 2023 Live Score: ಟೀಮ್ ಇಂಡಿಯಾದ 3ನೇ ವಿಕೆಟ್ ಪತನ
ದಿಲ್ಶನ್ ಮಧುಶಂಕ ಎಸೆದ 32ನೇ ಓವರ್ನ 3ನೇ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ.
94 ಎಸೆತಗಳಲ್ಲಿ 88 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ.
ಶ್ರೀಲಂಕಾ ತಂಡಕ್ಕೆ 3ನೇ ಯಶಸ್ಸು ತಂದುಕೊಟ್ಟ ಎಡಗೈ ವೇಗಿ ದಿಲ್ಶನ್ ಮಧುಶಂಕ.
IND 199/3 (32)
-
IND vs SL ICC World Cup 2023 Live Score: 30 ಓವರ್ಗಳು ಮುಕ್ತಾಯ
ದಿಲ್ಶನ್ ಮಧುಶಂಕ ಎಸೆದ 30ನೇ ಓವರ್ನ 4ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್.
ಕೊನೆಯ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದ ಗಿಲ್.
92 ಎಸೆತಗಳಲ್ಲಿ 92 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶುಭ್ಮನ್ ಗಿಲ್.
30 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾದ ಸ್ಕೋರ್ 193 ರನ್ಗಳು.
ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 193/2 (30)
-
IND vs SL ICC World Cup 2023 Live Score: ಮೊದಲ ಸಿಕ್ಸ್ ಸಿಡಿಸಿದ ಶುಭ್ಮನ್
ದುಷ್ಮಂತ ಚಮೀರಾ ಎಸೆದ 28ನೇ ಓವರ್ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್.
ಇದು ಟೀಮ್ ಇಂಡಿಯಾ ಇನಿಂಗ್ಸ್ನ ಮೊದಲ ಸಿಕ್ಸರ್.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 172/1 (28)
-
IND vs SL ICC World Cup 2023 Live Score: 150 ರನ್ ಪೂರೈಸಿದ ಟೀಮ್ ಇಂಡಿಯಾ
ಮಹೀಶ್ ತೀಕ್ಷಣ ಎಸೆದ 25ನೇ ಓವರ್ನ 5ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಶುಭ್ಮನ್ ಗಿಲ್.
ಈ ಫೋರ್ನೊಂದಿಗೆ 150 ರನ್ ಪೂರೈಸಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 151/1 (25)
-
IND vs SL ICC World Cup 2023 Live Score: 20 ಓವರ್ಗಳು ಮುಕ್ತಾಯ
20 ಓವರ್ಗಳ ಮುಕ್ತಾಯದ ವೇಳೆಗೆ 120 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ (53) ಹಾಗೂ ವಿರಾಟ್ ಕೊಹ್ಲಿ (54) ಬ್ಯಾಟಿಂಗ್.
IND 120/1 (20)
ರೋಹಿತ್ ಶರ್ಮಾ (4) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಶ್ರೀಲಂಕಾ.
-
IND vs SL ICC World Cup 2023 Live Score: ಅರ್ಧಶತಕ ಪೂರೈಸಿದ ಗಿಲ್
ದುಶನ್ ಹೇಮಂತ ಎಸೆದ 19ನೇ ಓವರ್ನ 3ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಶುಭ್ಮನ್ ಗಿಲ್.
ಈ ಫೋರ್ನೊಂದಿಗೆ 55 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶುಭ್ಮನ್ ಗಿಲ್.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 119/1 (19)
-
IND vs SL ICC World Cup 2023 Live Score: ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ
51 ಎಸೆತಗಳಲ್ಲಿ 8 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ.
17ನೇ ಓವರ್ನಲ್ಲಿ ಶತಕದ ಗಡಿದಾಟಿದ ಟೀಮ್ ಇಂಡಿಯಾ ಸ್ಕೋರ್.
ವಿರಾಟ್ ಕೊಹ್ಲಿ ಹಾಗೂ ಶುಭ್ಮನ್ ಗಿಲ್ ನಡುವೆ ಶತಕದ ಜೊತೆಯಾಟ.
IND 106/1 (17)
-
IND vs SL ICC World Cup 2023 Live Score: ಶುಭ್ಮನ್-ಕೊಹ್ಲಿ ಭರ್ಜರಿ ಬ್ಯಾಟಿಂಗ್
ದಿಲ್ಶನ್ ಮಧುಶಂಕ ಎಸೆದ 16ನೇ ಓವರ್ನ ಮೊದಲ ಎಸೆತದಲ್ಲೇ ಆಫ್ ಸೈಡ್ನತ್ತ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.
4ನೇ ಎಸೆತದಲ್ಲಿ ಮುನ್ನುಗ್ಗಿ ಬಂದು ಡೀಪ್ ಎಕ್ಸ್ಟ್ರಾ ಕವರ್ನತ್ತ ಫೋರ್ ಸಿಡಿಸಿದ ಶುಭ್ಮನ್ ಗಿಲ್.
IND 97/1 (16)
-
IND vs SL ICC World Cup 2023 Live Score: 15 ಓವರ್ಗಳು ಮುಕ್ತಾಯ
15 ಓವರ್ಗಳ ಮುಕ್ತಾಯದ ವೇಳೆಗೆ 88 ರನ್ ಕಲೆಹಾಕಿರುವ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ (35) ಹಾಗೂ ವಿರಾಟ್ ಕೊಹ್ಲಿ (41) ಬ್ಯಾಟಿಂಗ್.
IND 88/1 (15)
ರೋಹಿತ್ ಶರ್ಮಾ (4) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಶ್ರೀಲಂಕಾ ತಂಡ.
-
IND vs SL ICC World Cup 2023 Live Score: ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್
81 ರನ್ಗಳ ಜೊತೆಯಾಟದೊಂದಿಗೆ ಭರ್ಜರಿ ಬ್ಯಾಟಿಂಗ್ ಮುಂದುವರೆಸಿರುವ ವಿರಾಟ್ ಕೊಹ್ಲಿ-ಶುಭ್ಮನ್ ಗಿಲ್.
14 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 85 ರನ್ಗಳು.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 85/1 (14)
-
IND vs SL ICC World Cup 2023 Live Score: 10 ಓವರ್ಗಳು ಮುಕ್ತಾಯ
10 ಓವರ್ಗಳಲ್ಲಿ 60 ರನ್ ಕಲೆಹಾಕಿರುವ ಟೀಮ್ ಇಂಡಿಯಾ.
ರೋಹಿತ್ ಶರ್ಮಾ (4) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಶ್ರೀ;ಲಂಕಾ ವೇಗಿ ದಿಲ್ಶನ್ ಮಧುಶಂಕ.
2ನೇ ವಿಕೆಟ್ಗೆ ವಿರಾಟ್ ಕೊಹ್ಲಿ ಹಾಗೂ ಶುಭ್ಮನ್ ಗಿಲ್ ನಡುವೆ 56 ರನ್ಗಳ ಜೊತೆಯಾಟ.
IND 60/1 (10)
ಕ್ರೀಸ್ನಲ್ಲಿ ಶುಭ್ಮನ್ ಗಿಲ್ (22) ಹಾಗೂ ವಿರಾಟ್ ಕೊಹ್ಲಿ (28) ಬ್ಯಾಟಿಂಗ್.
-
IND vs SL ICC World Cup 2023 Live Score: ಶುಭ್ಮನ್ ಸೂಪರ್ ಶಾಟ್
ಕಸುನ್ ರಜಿತ ಎಸೆದ 9ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಶುಭ್ಮನ್ ಗಿಲ್.
ಈ ಫೋರ್ನೊಂದಿಗೆ ಅರ್ಧಶತಕ ಪೂರೈಸಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 57/1 (9)
-
IND vs SL ICC World Cup 2023 Live Score: ವಾಟ್ ಎ ಕಟ್ ಶಾಟ್
ಏಂಜೆಲೊ ಮ್ಯಾಥ್ಯೂಸ್ ಎಸೆದ 8ನೇ ಓವರ್ನ 4ನೇ ಎಸೆತದಲ್ಲಿ ಆಕರ್ಷಕ ಸ್ಕ್ವೇರ್ ಕಟ್ ಶಾಟ್ ಬೌಂಡರಿ ಬಾರಿಸಿದ ಶುಭ್ಮನ್ ಗಿಲ್.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 47/1 (8)
-
IND vs SL ICC World Cup 2023 Live Score: ಆಕರ್ಷಕ ಬೌಂಡರಿ
ದುಷ್ಮಂತ ಚಮೀರಾ ಎಸೆದ 6ನೇ ಓವರ್ನ 3ನೇ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.
ಕೊನೆಯ ಎಸೆತದಲ್ಲಿ ಕೊಹ್ಲಿ ಬ್ಯಾಟ್ನಿಂದ ಮಿಡ್ ಆನ್ನತ್ತ ಮತ್ತೊಂದು ಫೋರ್.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 33/1 (6)
-
IND vs SL ICC World Cup 2023 Live Score: 5 ಓವರ್ಗಳು ಮುಕ್ತಾಯ
ದಿಲ್ಶನ್ ಮಧುಶಂಕ ಎಸೆದ 5ನೇ ಓವರ್ನ ಮೊದಲ ಮತ್ತು 2ನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ಶುಭ್ಮನ್ ಗಿಲ್.
5 ಓವರ್ಗಳ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ ಸ್ಕೋರ್ 25 ರನ್ಗಳು.
ರೋಹಿತ್ ಶರ್ಮಾ (4) ವಿಕೆಟ್ ಪಡೆಯುವಲ್ಲಿ ಶ್ರೀಲಂಕಾ ಯಶಸ್ವಿ.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 25/1 (5)
-
IND vs SL ICC World Cup 2023 Live Score: ಮತ್ತೊಂದು ಮೇಡನ್ ಓವರ್
4ನೇ ಓವರ್ ಅನ್ನು ಕೂಡ ಮೇಡನ್ ಮಾಡಿದ ದುಷ್ಮಂತ ಚಮೀರಾ.
2 ಓವರ್ಗಳಲ್ಲೂ ಚಮೀರಾ ಯಾವುದೇ ರನ್ ನೀಡಿಲ್ಲ.
ಶ್ರೀಲಂಕಾ ತಂಡದಿಂದ ಉತ್ತಮ ಬೌಲಿಂಗ್.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 14/1 (4)
-
IND vs SL ICC World Cup 2023 Live Score: ಕಿಂಗ್ ಕೊಹ್ಲಿ ಕ್ಲಾಸ್ ಶಾಟ್
ಎಡಗೈ ವೇಗಿ ದಿಲ್ಶನ್ ಮಧುಶಂಕ ಎಸೆದ 3ನೇ ಓವರ್ನ 2ನೇ ಎಸೆತದಲ್ಲಿ ಲೆಗ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 14/1 (3)
-
IND vs SL ICC World Cup 2023 Live Score: ಶ್ರೀಲಂಕಾ ಉತ್ತಮ ಬೌಲಿಂಗ್
2ನೇ ಓವರ್ ಅನ್ನು ಮೇಡನ್ ಮಾಡಿದ ದುಷ್ಮಂತ ಚಮೀರಾ.
ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 8/1 (2)
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (4) ಔಟ್.
-
IND vs SL ICC World Cup 2023 Live Score: ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ
ದಿಲ್ಶನ್ ಮಧುಶಂಕ ಎಸೆದ ಮೊದಲ ಓವರ್ನ ಮೊದಲ ಎಸೆತದಲ್ಲೇ ಫೋರ್ ಬಾರಿಸಿದ ರೋಹಿತ್ ಶರ್ಮಾ.
2ನೇ ಎಸೆತದಲ್ಲಿ ವಿಕೆಟ್ ಎಗರಿಸಿದ ಎಡಗೈ ವೇಗಿ ದಿಲ್ಶನ್ ಮಧುಶಂಕ…ರೋಹಿತ್ ಶರ್ಮಾ (4) ಕ್ಲೀನ್ ಬೌಲ್ಡ್.
ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ.
IND 8/1 (1)
-
IND vs SL ICC World Cup 2023 Live Score: ಭಾರತ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್.
-
IND vs SL ICC World Cup 2023 Live Score: ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ (ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ದುಶನ್ ಹೇಮಂತ, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
-
IND vs SL ICC World Cup 2023 Live Score: ಟಾಸ್ ಗೆದ್ದ ಶ್ರೀಲಂಕಾ
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ಹಂಗಾಮಿ ನಾಯಕ ಕುಸಾಲ್ ಮೆಂಡಿಸ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - Nov 02,2023 1:33 PM
