ವಾಂಖೆಡೆಯಲ್ಲಿ ಇತಿಹಾಸ ನಿರ್ಮಿಸಿದ ರೋಹಿತ್; ಬ್ಯಾಟಿಂಗ್ನಲ್ಲಿ 4 ರನ್ಗಳಿಗೆ ಸುಸ್ತು..! ವಿಡಿಯೋ ನೋಡಿ
Rohit Sharma, ICC World Cup 2023: ಲಂಕಾ ಬೌಲರ್ ಎಡಗೈ ಸೀಮರ್ ದಿಲ್ಶಾನ್ ಮಧುಶಂಕ ಬೌಲ್ ಮಾಡಿದ ಇನ್ನಿಂಗ್ಸ್ನ ಮೊದಲ ಓವರ್ನ ಎರಡನೇ ಎಸೆತದಲ್ಲಿ ಹಿಟ್ಮ್ಯಾನ್ ರೋಹಿತ್ ಕ್ಲೀನ್ ಬೌಲ್ಡ್ ಆಗುವ ಮೂಲಕ ಕೇವಲ 4 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ಈ ಮೂಲಕ ತವರು ಮೈದಾನದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿರುವ ಶ್ರೀಲಂಕಾ (Sri Lanka) ತಂಡಕ್ಕೆ ಶುಭಾರಂಭ ಸಿಕ್ಕಿದೆ. ಟೀಂ ಇಂಡಿಯಾ (Team India) ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ (Rohit Sharma) ಕೇವಲ ಎರಡೇ ಎಸೆತಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ಲಂಕಾ ತಂಡದ ಎಡಗೈ ಸೀಮರ್ ದಿಲ್ಶಾನ್ ಮಧುಶಂಕ (Dilshan Madushanka) ಬೌಲ್ ಮಾಡಿದ ಇನ್ನಿಂಗ್ಸ್ನ ಮೊದಲ ಓವರ್ನ ಎರಡನೇ ಎಸೆತದಲ್ಲಿ ಹಿಟ್ಮ್ಯಾನ್ ರೋಹಿತ್ ಕ್ಲೀನ್ ಬೌಲ್ಡ್ ಆಗುವ ಮೂಲಕ ಕೇವಲ 4 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದ್ದಾರೆ. ಈ ಮೂಲಕ ತವರು ಮೈದಾನದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಇತಿಹಾಸ ನಿರ್ಮಿಸಿದ ರೋಹಿತ್
ವಾಸ್ತವವಾಗಿ ಇಡೀ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ನಾಯಕ ರೋಹಿತ್ ಶರ್ಮಾಗೆ ಏಕದಿನ ವಿಶ್ವಕಪ್ನಲ್ಲಿ ನಾಯಕನಾಗಿ ತವರು ಮೈದಾನದಲ್ಲಿ ಅಂದರೆ ಮುಂಬೈನ ವಾಂಖೆಡೆ ಮೈದಾನದಲ್ಲಿ ಇದು ಮೊದಲ ಪಂದ್ಯವಾಗಿತ್ತು. ವಿಶ್ವಕಪ್ನಲ್ಲಿ ನಾಯಕನಾಗಿ ತವರಿನಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಮೊದಲ ಟೀಂ ಇಂಡಿಯಾ ನಾಯಕ ಎಂಬ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ, ಬ್ಯಾಟಿಂಗ್ನಲ್ಲಿ ಮಾತ್ರ ತೀರ ನಿರಾಸೆ ಮೂಡಿಸಿದರು.
IND vs SL: ಟಾಸ್ ಗೆದ್ದ ಲಂಕಾ, ಭಾರತ ಮೊದಲು ಬ್ಯಾಟಿಂಗ್; ಉಭಯ ತಂಡಗಳು ಹೀಗಿವೆ
ಈ ಹಿಂದೆ ಈ ಘಟನೆ ಸಂಭವಿಸಿರಲಿಲ್ಲ
ನಾಲ್ಕನೇ ಬಾರಿಗೆ ಭಾರತದಲ್ಲಿ ವಿಶ್ವಕಪ್ ಆಯೋಜಿಸಲಾಗುತ್ತಿದ್ದು, 1987 ರಲ್ಲಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿ ಕಪಿಲ್ ದೇವ್ ಟೀಂ ಇಂಡಿಯಾದ ನಾಯಕರಾಗಿದ್ದರು. ಆದರೆ ಆ ಸಮಯದಲ್ಲಿ ಕಪಿಲ್ ತವರು ಮೈದಾನವಾದ ಚಂಡೀಗಢದಲ್ಲಿ ಭಾರತದ ವಿಶ್ವಕಪ್ ಪಂದ್ಯ ನಡೆದಿರಲಿಲ್ಲ. ಬಳಿಕ 1996 ರಲ್ಲಿ ನಡೆದಿದ್ದ ವಿಶ್ವಕಪ್ನಲ್ಲಿ ಅಜರುದ್ದೀನ್ ಟೀಂ ಇಂಡಿಯಾದ ನಾಯಕರಾಗಿದ್ದರು. ಆದರೆ ಅಜರ್ ತವರು ನೆಲವಾದ ಹೈದರಾಬಾದ್‌ನಲ್ಲಿ ಟೀಂ ಇಂಡಿಯಾದ ಯಾವುದೇ ಪಂದ್ಯ ಇರಲಿಲ್ಲ. 2011 ರ ವಿಶ್ವಕಪ್ನಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕಿಳಿದಿತ್ತು. ಆದರೆ ಆಗಲೂ ಸಹ ಧೋನಿ ತವರಾದ ರಾಂಚಿಯಲ್ಲಿ ಯಾವುದೇ ಪಂದ್ಯ ನಡೆದಿರಲಿಲ್ಲ. ಆದರೆ ಈ ಬಾರಿಯ ವಿಶ್ವಕಪ್ ಪಂದ್ಯವನ್ನು ರೋಹಿತ್ ಶರ್ಮಾ ಅವರ ತವರು ನೆಲ ವಾಂಖೆಡೆಯಲ್ಲಿ ಆಯೋಜಿಸಲಾಗಿದೆ.
View this post on Instagram
ಬೌಂಡರಿಗೆ ಸುಸ್ತಾದ ರೋಹಿತ್
ಟಾಸ್ ಸೋತ ಬಳಿಕ ಖುಷಿಯಿಂದಲೇ ನಾವು ಕೂಡ ಬ್ಯಾಟಿಂಗ್ ಮಾಡಲು ಬಯಸಿದ್ದೇವು ಎಂದು ರೋಹಿತ್ ಹೇಳಿದ್ದರು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್, ತಮ್ಮ ಎಂದಿನ ಶೈಲಿಯಲ್ಲಿ ಮೊದಲ ಎಸೆತವನ್ನೇ ಫೈನ್ ಲೆಗ್ ಕಡೆಗೆ ಬೌಂಡರಿಗಟ್ಟುವ ಮೂಲಕ ಅದ್ಭುತ ಆರಂಭ ಪಡೆದುಕೊಂಡರು. ಆದರೆ ಲಂಕಾ ವೇಗಿ ಎಸೆದ ಓವರ್ನ ಎರಡನೇ ಇನ್ಸ್ವಿಂಗರ್ ಎಸೆತವನ್ನು ರೋಹಿತ್ ಎದುರಿಸುವಲ್ಲಿ ವಿಫಲರಾದರು. ಹೀಗಾಗಿ ಚೆಂಡು ಸೀದಾ ಸ್ಟಂಪ್ಗೆ ಬಡಿಯಿತು. ತವರಿನಲ್ಲಿ ಶತಕ ಸಿಡಿಸುವ ತವಕದಲ್ಲಿದ್ದ ನಾಯಕ ರೋಹಿತ್, ಕೇವಲ 4 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Thu, 2 November 23
