ICC T20 rankings: ಬದ್ಧವೈರಿ ಎದುರು ಅಬ್ಬರ: ಆಲ್‌ರೌಂಡರ್ ಕೋಟಾದಲ್ಲಿ 5ನೇ ಸ್ಥಾನಕ್ಕೇರಿದ ಹಾರ್ದಿಕ್

Hardik Pandya: ಪಾಂಡ್ಯ ಟಿ20 ಆಲ್ ರೌಂಡರ್ ರ ್ಯಾಂಕಿಂಗ್​ನಲ್ಲಿ ದೈತ್ಯ ಮುನ್ನಡೆ ಸಾಧಿಸಿದ್ದು, ಇದೀಗ 5ನೇ ಸ್ಥಾನಕ್ಕೆ ತಲುಪಿದ್ದಾರೆ. ಪಾಂಡ್ಯ ಅವರ ರೇಟಿಂಗ್ ಪಾಯಿಂಟ್‌ 167 ಆಗಿದ್ದು, ಇದು ಅವರ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವಾಗಿದೆ.

ICC T20 rankings: ಬದ್ಧವೈರಿ ಎದುರು ಅಬ್ಬರ: ಆಲ್‌ರೌಂಡರ್ ಕೋಟಾದಲ್ಲಿ 5ನೇ ಸ್ಥಾನಕ್ಕೇರಿದ ಹಾರ್ದಿಕ್
Hardik Pandya
Follow us
TV9 Web
| Updated By: ಪೃಥ್ವಿಶಂಕರ

Updated on:Aug 31, 2022 | 4:10 PM

ಏಷ್ಯಾಕಪ್‌ನಲ್ಲಿ (Asia Cup) ಪಾಕ್ ವಿರುದ್ಧ ಆಲ್​ರೌಂಡರ್ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಐಸಿಸಿ ಟಿ20 ರ್ಯಾಂಕಿಂಗ್​​ನಲ್ಲಿ ಮುಂಬಡ್ತಿ ಪಡೆದಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಇಂತಹ ವಿಶೇಷ ಸಾಧನೆ ಮಾಡಿರುವ ಭಾರತದ ಸ್ಟಾರ್ ಆಲ್‌ರೌಂಡರ್ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ವಿರುದ್ಧ 3 ವಿಕೆಟ್ ಪಡೆದಿದ್ದರು. ನಂತರ ಬ್ಯಾಟ್‌ನಿಂದ ಅಬ್ಬರಿಸಿದ್ದ ಪಾಂಡ್ಯ 17 ಎಸೆತಗಳಲ್ಲಿ 33 ರನ್ ಗಳಿಸಿದ್ದರು. ಈ ಅಜೇಯ ಇನ್ನಿಂಗ್ಸ್ ಸಂಕಷ್ಟಕ್ಕೆ ಟೀಂ ಇಂಡಿಯಾದಲ್ಲಿ ನೆರವಿಗೆ ಬಂದಿತ್ತು. ಈ ಮೂಲಕ ಟೀಂ ಇಂಡಿಯಾ ಬದ್ಧವೈರಿಯ ಎದುರು 5 ವಿಕೆಟ್ ಜಯ ಸಾಧಿಸಿತ್ತು. ಈ ಅದ್ಭುತ ಪ್ರದರ್ಶನಕ್ಕೆ ಲಾಭ ಪಡೆದಿರುವ ಹಾರ್ದಿಕ್, ಇತ್ತೀಚಿನ ಐಸಿಸಿ ಟಿ20 ಶ್ರೇಯಾಂಕದ ಆಲ್​ರೌಂಡರ್ ಕೋಟಾದಲ್ಲಿ 5ನೇ ಸ್ಥಾನಕ್ಕೆ ಎಂಟ್ರಿಕೊಟ್ಟಿದ್ದಾರೆ.

5ನೇ ಸ್ಥಾನದಲ್ಲಿ ಪಾಂಡ್ಯ

ಇದನ್ನೂ ಓದಿ
Image
ಹಾರ್ದಿಕ್, ಸ್ಟೋಕ್ಸ್, ರಸೆಲ್; ಈ ಮೂವರಲ್ಲಿ ಯಾರು ಬೆಸ್ಟ್ ಆಲ್​ರೌಂಡರ್? ಪಾಕ್ ಲೆಜೆಂಡ್ ನೀಡಿದ ಉತ್ತರವಿದು
Image
IND vs PAK: ಫಾಸ್ಟ್ ಬೌಲರ್ಸ್​ ಪರಾಕ್ರಮ; ಪಾಕ್ ವಿರುದ್ಧ ಐತಿಹಾಸಿಕ ದಾಖಲೆ ಬರೆದ ಟೀಂ ಇಂಡಿಯಾ ವೇಗಿಗಳು..!
Image
Asia Cup: ಹಾರ್ದಿಕ್- ಜಡೇಜಾ ದಾಳಿಗೆ ಹೀನಾಯವಾಗಿ ಮಂಡಿಯೂರಿತ್ತು ಪಾಕಿಸ್ತಾನ..!

ಪಾಂಡ್ಯ ಟಿ20 ಆಲ್ ರೌಂಡರ್ ರ ್ಯಾಂಕಿಂಗ್​ನಲ್ಲಿ ದೈತ್ಯ ಮುನ್ನಡೆ ಸಾಧಿಸಿದ್ದು, ಇದೀಗ 5ನೇ ಸ್ಥಾನಕ್ಕೆ ತಲುಪಿದ್ದಾರೆ. ಪಾಂಡ್ಯ ಅವರ ರೇಟಿಂಗ್ ಪಾಯಿಂಟ್‌ 167 ಆಗಿದ್ದು, ಇದು ಅವರ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವಾಗಿದೆ. ಅಗ್ರಸ್ಥಾನವನ್ನು ಅಫ್ಘಾನಿಸ್ತಾನದ ಮೊಹಮ್ಮದ್ ನಬಿ 257 ರೇಟಿಂಗ್ ಅಂಕಗಳೊಂದಿಗೆ ಆಕ್ರಮಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾದ ಅಪಾಯಕಾರಿ ಬ್ಯಾಟ್ಸ್‌ಮನ್ ಮತ್ತು ಅರೆಕಾಲಿಕ ಆಫ್ ಸ್ಪಿನ್ನರ್ ಗ್ಲೆನ್ ಮ್ಯಾಕ್ಸ್‌ವೆಲ್ ಪಾಂಡ್ಯಗಿಂತ ಒಂದು ಹಂತ ಮೇಲಿದ್ದಾರೆ.

ರಿಜ್ವಾನ್ ದ್ವಿತೀಯ ಸ್ಥಾನ

ಅದೇ ಸಮಯದಲ್ಲಿ, ಟಿ20 ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಯಾವುದೇ ಹೊಸ ಆಟಗಾರ ಪ್ರವೇಶಿಸಿಲ್ಲ, ಆದರೆ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಬಾಬರ್ ಅಜಮ್‌ಗೆ ಹತ್ತಿರವಾಗಿದ್ದಾರೆ. ಭಾರತದ ವಿರುದ್ಧ 43 ರನ್ ಗಳಿಸಿದ್ದ ಆರಂಭಿಕ ಆಟಗಾರ ರಿಜ್ವಾನ್ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅಗ್ರಸ್ಥಾನದಲ್ಲಿ ಉಳಿದಿದ್ದಾರೆ. ಅಂದರೆ, ಅಗ್ರ 2 ಪಾಕಿಸ್ತಾನ ಆಕ್ರಮಿಸಿಕೊಂಡಿದೆ.

ಪಾಂಡ್ಯ ಭರ್ಜರಿ ಪುನರಾಗಮನ

ಪಾಂಡ್ಯ ಅವರ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಈ ವರ್ಷ ಅವರಿಗೆ ಅದ್ಭುತವಾಗಿದೆ. ಇಂಜುರಿಯಿಂದ ಭರ್ಜರಿ ಪುನರಾಗಮನ ಮಾಡಿದ ಪಾಂಡ್ಯ ಮೊದಲು ಗುಜರಾತ್ ಟೈಟಾನ್ಸ್ ತಂಡವನ್ನು ಐಪಿಎಲ್ ಚಾಂಪಿಯನ್ ಆಗಿ ಮಾಡಿದರು. ನಂತರ ಟೀಮ್ ಇಂಡಿಯಾದ ನಾಯಕತ್ವವನ್ನೂ ವಹಿಸಿಕೊಂಡಿದ್ದರು. ವಾಸ್ತವವಾಗಿ, 4 ವರ್ಷಗಳ ಹಿಂದೆ ಏಷ್ಯಾಕಪ್ ಸಂದರ್ಭದಲ್ಲಿ, ಪಾಂಡ್ಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು. ಬೆನ್ನುನೋವಿನ ಕಾರಣ ಅವರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಆ ಗಾಯದಿಂದ ಚೇತರಿಸಿಕೊಂಡು ತಮ್ಮ ಹಳೆಯ ಲಯವನ್ನು ಮರಳಿ ಪಡೆಯಲು ಪಾಂಡ್ಯ ಬಹಳ ಸಮಯ ತೆಗೆದುಕೊಂಡರು. ಆದರೆ ಅದ್ಭುತ ಫಾರ್ಮ್​ನೊಂದಿಗೆ ಕ್ರಿಕೆಟ್ ಅಖಾಡಕ್ಕೆ ಮರಳಿರುವ ಪಾಂಡ್ಯ ಟೀಂ ಇಂಡಿಯಾ ಗೆಲುವಿನ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

Published On - 3:43 pm, Wed, 31 August 22