T20 World Cup 2022: ರಾಯಲ್ ಬೆಂಗಾಲ್ ಟೈಗರ್: ಹೊಸ ಜೆರ್ಸಿ ಅನಾವರಣಗೊಳಿಸಿದ ಬಾಂಗ್ಲಾದೇಶ್
ICC T20 World Cup 2022: ಈ ಮಹತ್ವದ ಟೂರ್ನಿಗೆ ಬಾಂಗ್ಲಾ ತಂಡವನ್ನು ಪ್ರಕಟಿಸಲಾಗಿದ್ದು, ಯುವ ಪಡೆಯನ್ನು ಒಳಗೊಂಡ ಟೀಮ್ ಅನ್ನು ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಮುನ್ನಡೆಸಲಿದ್ದಾರೆ.
T20 World Cup 2022: ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ 2022 ಗಾಗಿ ಬಾಂಗ್ಲಾದೇಶ್ (Bangladesh) ತಂಡವು ತಮ್ಮ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಹಿಂದಿನಂತೆ ಹಸಿರು ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿರುವ ಈ ಜೆರ್ಸಿಯ ಮುಂಭಾಗದಲ್ಲಿ ಹುಲಿಯ ಚಿತ್ರವನ್ನು ನೀಡಿರುವುದು ವಿಶೇಷ. ರಾಯಲ್ ಬೆಂಗಾಲ್ ಟೈಗರ್ ಮತ್ತು ಸುಂದರಬನ್‌ನಿಂದ ಸ್ಪೂರ್ತಿ ಪಡೆದು ಈ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದ್ದು, ಅದರ ಜೊತೆಗೆ ಬಾಂಗ್ಲಾದೇಶದ ಧ್ವಜದ ಬಣ್ಣಗಳಾದ ಹಸಿರು ಮತ್ತು ಕೆಂಪು ಬಣ್ಣವನ್ನು ಹಾಗೆಯೇ ಉಳಿಸಲಾಗಿದೆ. ಈ ಹೊಸ ಜೆರ್ಸಿಯ ವಿಡಿಯೋವನ್ನು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ್ ತಂಡವು ಗ್ರೂಪ್ 2 ನಲ್ಲಿ ಸ್ಥಾನ ಪಡೆದಿದೆ. ವಿಶೇಷ ಎಂದರೆ ಇದೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳಿವೆ. ಅಂದರೆ ಏಷ್ಯಾದ ಮೂರು ತಂಡಗಳು ಒಂದೇ ಗ್ರೂಪ್ನಲ್ಲಿರುವುದು ವಿಶೇಷ. ಇನ್ನು ಬಾಂಗ್ಲಾದೇಶ್ ತಂಡವು ತನ್ನ ಮೊದಲ ಸೂಪರ್ 12 ಪಂದ್ಯವನ್ನು ಅಕ್ಟೋಬರ್ 24 ರಂದು ಆಡಲಿದೆ.
The grand revealing!
This year’s Men’s World Cup 2022 jersey for the Bangladesh Cricket Team has been created using the essence of Bangladesh.#BCB #Cricket pic.twitter.com/sONjignwYL
— Bangladesh Cricket (@BCBtigers) September 30, 2022
ಈಗಾಗಲೇ ಈ ಮಹತ್ವದ ಟೂರ್ನಿಗೆ ಬಾಂಗ್ಲಾ ತಂಡವನ್ನು ಪ್ರಕಟಿಸಲಾಗಿದ್ದು, ಯುವ ಪಡೆಯನ್ನು ಒಳಗೊಂಡ ಟೀಮ್ ಅನ್ನು ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಮುನ್ನಡೆಸಲಿದ್ದಾರೆ.
ಟಿ20 ವಿಶ್ವಕಪ್ಗೆ ಬಾಂಗ್ಲಾದೇಶ ತಂಡ ಹೀಗಿದೆ:
ಶಕೀಬ್ ಅಲ್ ಹಸನ್, ಸಬ್ಬೀರ್ ರೆಹಮಾನ್, ಮೆಹಿದಿ ಹಸನ್ ಮಿರಾಜ್, ಅಫೀಫ್ ಹೊಸೈನ್, ಮೊಸಾದೆಕ್ ಹೊಸೈನ್, ಲಿಟನ್ ದಾಸ್, ಯಾಸಿರ್ ಅಲಿ, ನೂರುಲ್ ಹಸನ್, ಮುಸ್ತಾಫಿಜುರ್ ರೆಹಮಾನ್, ಸೈಫುದ್ದೀನ್, ತಸ್ಕಿನ್ ಅಹ್ಮದ್, ಎಬಾದತ್ ಹೊಸೈನ್, ಹಸನ್ ಮಹ್ಮದ್, ನಾಸುಂ ಅಹ್ಮದ್.
ಟಿ-20 ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ:
ಸೂಪರ್ 12: ಗ್ರೂಪ್ 1 ಪಂದ್ಯಗಳ ವೇಳಾಪಟ್ಟಿ
- ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ – 23 ಅಕ್ಟೋಬರ್ – 3:30 PM
- ಇಂಗ್ಲೆಂಡ್ vs ವೆಸ್ಟ್ ಇಂಡೀಸ್ – 23 ಅಕ್ಟೋಬರ್ – 7:30 PM
- A1 vs B2 – 24 ಅಕ್ಟೋಬರ್ – 3:30 PM
- ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್ – ಅಕ್ಟೋಬರ್ 26 – 3:30 PM
- ಇಂಗ್ಲೆಂಡ್ vs B2 – ಅಕ್ಟೋಬರ್ 24 – 3:30 PM
- ಆಸ್ಟ್ರೇಲಿಯಾ vs A2 – ಅಕ್ಟೋಬರ್ 28 – 7:30 PM
- ವೆಸ್ಟ್ ಇಂಡೀಸ್ vs B2 – ಅಕ್ಟೋಬರ್ 29 – 3:30 PM
- ದಕ್ಷಿಣ ಆಫ್ರಿಕಾ vs A1 – ಅಕ್ಟೋಬರ್ 30 – 3:30 PM
- ಇಂಗ್ಲೆಂಡ್ vs ಆಸ್ಟ್ರೇಲಿಯಾ – ಅಕ್ಟೋಬರ್ 30 – 7:30 PM
- ಇಂಗ್ಲೆಂಡ್ vs A1 – ನವೆಂಬರ್ 01 – 7:30 PM
- ದಕ್ಷಿಣ ಆಪ್ರಿಕಾ vs B2 – ನವೆಂಬರ್ 02 – 3:30 PM
- ಆಸ್ಟ್ರೇಲಿಯಾ vs B2 – ನವೆಂಬರ್ 04 – 3:30 PM
- ವೆಸ್ಟ್ ಇಂಡೀಸ್ vs A1 – ನವೆಂಬರ್ 04- 7:30 PM
- ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ – ನವೆಂಬರ್ 06 – 3:30 PM
- ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ – ನವೆಂಬರ್ 06 – 7:30 PM
ಸೂಪರ್ 12: ಗ್ರೂಪ್ 2 ಪಂದ್ಯಗಳ ವೇಳಾಪಟ್ಟಿ:
- ಭಾರತ vs ಪಾಕಿಸ್ತಾನ – ಅಕ್ಟೋಬರ್ 24 – 1:30 PM
- ಬಾಂಗ್ಲಾದೇಶ್ vs A2- ಅಕ್ಟೋಬರ್ 24- 7.30 PM
- ಅಫ್ಘಾನಿಸ್ತಾನ vs B1 – ಅಕ್ಟೋಬರ್ 25 – 7:30 PM
- ಪಾಕಿಸ್ತಾನ vs ನ್ಯೂಜಿಲೆಂಡ್ – ಅಕ್ಟೋಬರ್ 26 – 7:30 PM
- B1 vs A2 – 27 ಅಕ್ಟೋಬರ್ – 7:30 PM
- ಅಫ್ಘಾನಿಸ್ತಾನ vs ಪಾಕಿಸ್ತಾನ – 29 ಅಕ್ಟೋಬರ್ – 7:30 PM
- ಬಾಂಗ್ಲಾದೇಶ್ vs B1- 30 ಅಕ್ಟೋಬರ್- 4.30 PM
- ಅಫ್ಘಾನಿಸ್ತಾನ vs A2 – 31 ಅಕ್ಟೋಬರ್ – 3:30 PM
- ಭಾರತ vs ನ್ಯೂಜಿಲೆಂಡ್ – 31 ಅಕ್ಟೋಬರ್ – 7:30 PM
- ಪಾಕಿಸ್ತಾನ vs A2 – 2 ನವೆಂಬರ್ – 7:30 PM
- ನ್ಯೂಜಿಲೆಂಡ್ vs B1 – 3 ನವೆಂಬರ್ – 3:30 PM
- ಬಾಂಗ್ಲಾದೇಶ್ vs ಸೌತ್ ಆಫ್ರಿಕಾ- 30 ಅಕ್ಟೋಬರ್- 4.30 PM
- ನ್ಯೂಜಿಲೆಂಡ್ vs A2 – 5 ನವೆಂಬರ್ – 3:30 PM
- ಭಾರತ vs B1 – 5 ನವೆಂಬರ್ – 7:30 PM
- ನ್ಯೂಜಿಲೆಂಡ್ vs ಅಫ್ಘಾನಿಸ್ತಾನ – 7 ನವೆಂಬರ್ – 3:30 PM
- ಪಾಕಿಸ್ತಾನ vs B1 – 7 ನವೆಂಬರ್ – 7:30 PM
- ಭಾರತ vs A2 – 8 ನವೆಂಬರ್ – 7:30 PM
- ಬಾಂಗ್ಲಾದೇಶ್ vs ಸೌತ್ ಆಫ್ರಿಕಾ- 30 ಅಕ್ಟೋಬರ್- 4.30 PM
ಸೆಮಿ ಫೈನಲ್ ಪಂದ್ಯ:
- ಸೆಮಿ ಫೈನಲ್ 1 – A1 vs B2 – 10 ನವೆಂಬರ್
- ಸೆಮಿ ಫೈನಲ್ 2- A2 vs B1 – 11 ನವೆಂಬರ್
ಫೈನಲ್ ಪಂದ್ಯ: ನವೆಂಬರ್ 14, 2022