PAK vs BAN: ಸೆಮಿ ಫೈನಲ್ ರೇಸ್ಗೆ ರೋಚಕ ಕಾದಟ: ಪಾಕಿಸ್ತಾನಕ್ಕೆ ಗೆಲ್ಲಲು 128 ರನ್ಗಳ ಟಾರ್ಗೆಟ್ ನೀಡಿದ ಬಾಂಗ್ಲಾದೇಶ
Pakistan vs Bangladesh: ಮೊದಲು ಬ್ಯಾಟಿಂಗ್ ಮಾಡಿರುವ ಬಾಂಗ್ಲಾದೇಶ ತಂಡ ನಜ್ಮುಲ್ ಹುಸೈನ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 127 ರನ್ ಗಳಿಸಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಗ್ರೂಪ್ 2 ರಲ್ಲಿ ದ್ವಿತೀಯ ತಂಡವಾಗಿ ಸೆಮಿ ಫೈನಲ್ಗೆ ಪ್ರವೇಶಿಸಲಿದೆ.

ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup) ನಡೆಯುತ್ತಿರುವ ಸೂಪರ್ 12 ಹಂತದ ಕೊನೆಯ ದಿನದ ಮೊದಲ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಕಂಡುಬಂತು. ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ (South Africa vs Netherlands) ಸೋಲು ಕಾಣುವ ಮೂಲಕ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಇದೀಗ ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ (Pakistan vs Bangladesh) ನಡುವಣ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಮೊದಲು ಬ್ಯಾಟಿಂಗ್ ಮಾಡಿರುವ ಬಾಂಗ್ಲಾದೇಶ ತಂಡ ನಜ್ಮುಲ್ ಹುಸೈನ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 127 ರನ್ ಗಳಿಸಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಗ್ರೂಪ್ 2 ರಲ್ಲಿ ದ್ವಿತೀಯ ತಂಡವಾಗಿ ಸೆಮಿ ಫೈನಲ್ಗೆ ಪ್ರವೇಶಿಸಲಿದೆ. ಈಗಾಗಲೇ ಭಾರತ ಮೊದಲ ತಂಡವಗಿ ಸೆಮೀಸ್ಗೆ ಲಗ್ಗೆಯಿಟ್ಟಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಆರಂಭ ಪಡೆದುಕೊಂಡಿಲ್ಲವಾದರೂ ಓಪನರ್ ನಜ್ಮುಲ್ ಹುಸೈನ್ ಏಕಾಂಗಿಯಾಗಿ ರನ್ ಕಲೆಹಾಕಿದರು. ಅನುಭವಿ ಲಿಟನ್ ದಾಸ್ (10) ಪ್ರಮುಖ ಪಂದ್ಯದಲ್ಲಿ ತಂಡಕ್ಕೆ ನೆರವಾಗಲಿಲ್ಲ. ಸೌಮ್ಯ ಸರ್ಕಾರ್ 17 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರೆ, ನಾಯಕ ಶಕಿಬ್ ಅಲ್ ಹಸನ್ ಸೊನ್ನೆ ಸುತ್ತಿದರು. ನುರುಲ್ ಹುಸೈನ್ ಕೂಡ ಶೂನ್ಯಕ್ಕೆ ನಿರ್ಗಮಿಸಿದರು.
ಇದರ ನಡುವೆ ಏಕಾಂಗಿಯಾಗಿ ರನ್ ಕಲೆಹಾಕುತ್ತಿದ್ದ ನಜ್ಮುಲ್ 48 ಎಸೆತಗಳಲ್ಲಿ 7 ಫೋರ್ ಬಾರಿಸಿ 54 ರನ್ಗೆ ನಿರ್ಗಮಿಸಿದರು. ಅಸಿಫ್ ಹುಸೈನ್ 20 ಎಸೆತಗಳಲ್ಲಿ ಅಜೇಯ 24 ರನ್ ಬಾರಿಸಿದರು. ಅಂತಿಮವಾಗಿ ಬಾಂಗ್ಲಾದೇಶ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದೆ. ಪಾಕ್ ಪರ ಶಾಹಿನ್ ಅಫ್ರಿದಿ 4 ಓವರ್ಗೆ 22 ರನ್ ನೀಡಿ 4 ವಿಕೆಟ್ ಕಿತ್ತರೆ, ಶದಾಬ್ ಖಾನ್ 2, ಹ್ಯಾರಿಸ್ ರೌಫ್ ಹಾಗೂ ಇಫ್ತಿಖರ್ ಅಹ್ಮದ್ ತಲಾ 1 ವಿಕೆಟ್ ಪಡೆದರು.
ಪಾಯಿಂಟ್ ಟೇಬಲ್ ಲೆಕ್ಕಚಾರ:
ಭಾರತ ಈವರೆಗೆ ಆಡಿದ 4 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಒಂದರಲ್ಲಿ ಸೋತು 6 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ. +0.730 ರನ್ರೇಟ್ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ಆಡಿದ ಐದು ಪಂದ್ಯಗಳ ಪೈಕಿ ಒಂದು ಮಳೆಯಿಂದ ರದ್ದಾದರೆ ತಲಾ ಎರಡು-ಸೋಲು ಗೆಲುವಿನಿಂದ 5 ಅಂಕ ಪಡೆದು +0.864 ರನ್ರೇಟ್ನಿಂದ ದ್ವಿತೀಯ ಸ್ಥಾನದಲ್ಲಿದೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡು ಸೋಲು ಗೆಲುವು ಪಡೆದು ರನ್ರೇಟ್ ಆಧಾರದ ಮೇಲೆ ಪಾಕ್ ಮೂರನೇ ಸ್ಥಾನದಲ್ಲಿದ್ದರೆ ಬಾಂಗ್ಲಾ ಐದನೇ ಸ್ಥಾನದಲ್ಲಿದೆ. ಹೀಗಾಗಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯ ಮೂರು ತಂಡಗಳ ಸೆಮೀಸ್ ಭವಿಷ್ಯ ನಿರ್ಧರಿಸಲಿದೆ.
Published On - 11:37 am, Sun, 6 November 22




