ICC Under 19 World Cup: 11 ಸಿಕ್ಸರ್, 20 ಬೌಂಡರಿ, 278 ರನ್; ವಿಂಡೀಸ್​ ಎದುರು ಗೆದ್ದು ಬೀಗಿದ ಭಾರತ ಯುವ ಪಡೆ..!

ICC Under 19 World Cup: ಭಾರತದ ಅಂಡರ್-19 ತಂಡವು ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಎದುರಿಸಿತು. 4 ಬಾರಿಯ ಚಾಂಪಿಯನ್ ವಾರ್ಮ್ ಅಪ್ ಮ್ಯಾಚ್​ನಲ್ಲಿ ಧೂಳೆಬ್ಬಿಸಿ ವಿಂಡೀಸ್​ಗೆ ಸೋಲಿನ ರುಚಿ ತೋರಿಸಿತು.

ICC Under 19 World Cup: 11 ಸಿಕ್ಸರ್, 20 ಬೌಂಡರಿ, 278 ರನ್; ವಿಂಡೀಸ್​ ಎದುರು ಗೆದ್ದು ಬೀಗಿದ ಭಾರತ ಯುವ ಪಡೆ..!
ಭಾರತ ಯುವ ಪಡೆ
Follow us
TV9 Web
| Updated By: ಪೃಥ್ವಿಶಂಕರ

Updated on: Jan 10, 2022 | 2:37 PM

U19 ವಿಶ್ವಕಪ್ ಜನವರಿ 14 ರಂದು ಪ್ರಾರಂಭವಾಗಲಿದೆ. ಪ್ರಸ್ತುತ ಪಂದ್ಯಾವಳಿಯಲ್ಲಿ ವಾರ್ಮಪ್ ಪಂದ್ಯಗಳು ನಡೆಯುತ್ತಿವೆ. ಭಾನುವಾರದಂದು ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನ ಕೈಚಳಕ ತೋರಿದೆ. ಭಾರತದ ಅಂಡರ್-19 ತಂಡವು ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು ಎದುರಿಸಿತು. 4 ಬಾರಿಯ ಚಾಂಪಿಯನ್ ವಾರ್ಮ್ ಅಪ್ ಮ್ಯಾಚ್​ನಲ್ಲಿ ಧೂಳೆಬ್ಬಿಸಿ ವಿಂಡೀಸ್​ಗೆ ಸೋಲಿನ ರುಚಿ ತೋರಿಸಿತು. ಭಾರತದ ಇನ್ನಿಂಗ್ಸ್ ಬೌಂಡರಿ ಮತ್ತು ಸಿಕ್ಸರ್‌ಗಳಿಂದ ತುಂಬಿದ್ದಲ್ಲದೆ ಪ್ರತಿಯೊಬ್ಬ ಆಟಗಾರನು ತನ್ನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದನು.

ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 278 ರನ್ ಗಳಿಸಿತು. ಈ ಪಂದ್ಯದಲ್ಲಿ ಭಾರತ 11 ಸಿಕ್ಸರ್ ಹಾಗೂ 20 ಬೌಂಡರಿಗಳನ್ನು ಬಾರಿಸಿತ್ತು. ಇದು ವೆಸ್ಟ್ ಇಂಡೀಸ್ ಸಿಡಿಸಿದ ಬೌಂಡರಿ/ ಸಿಕ್ಸರ್​ಗಳಿಗಿಂತ ಮೂರು ಪಟ್ಟು ಹೆಚ್ಚಿತ್ತು.

ನಾಯಕ ಧೂಲ್, ಸಿಂಧು ಅದ್ಭುತ ಇನ್ನಿಂಗ್ಸ್ ಭಾರತದ ಬ್ಯಾಟಿಂಗ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಹರ್ನೂರ್ ಮತ್ತು ರಘುವಂಶಿ ಇಬ್ಬರೂ ಕೇವಲ 17 ರನ್ ಗಳಿಸಿದರು. ಆದರೆ, ಇದಾದ ಬಳಿಕ ನಾಯಕ ಯಶ್ ಧೂಲ್ ತಂಡವನ್ನು ಮುನ್ನಡೆಸಲು ಆರಂಭಿಸಿದರು. ಮೂರನೇ ವಿಕೆಟ್‌ಗೆ ರಶೀದ್ ಜೊತೆ ಶಾಹಿಕ್ ಅರ್ಧಶತಕದ ಜೊತೆಯಾಟ ನಡೆಸಿದರು. ನಾಯಕ ಧೂಲ್ 67 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 52 ರನ್ ಗಳಿಸಿದರು. ಭಾರತ ಪರ ಆರಾಧ್ಯ ಯಾದವ್ 42 ಎಸೆತಗಳಲ್ಲಿ 5 ಸಿಕ್ಸರ್‌ಗಳೊಂದಿಗೆ 40 ರನ್ ಗಳಿಸಿದರು. ನಿಶಾಂತ್ ಸಿಂಧು 76 ಎಸೆತಗಳಲ್ಲಿ 78 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಸಿಂಧು ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿಗಳಿದ್ದವು.

ವೆಸ್ಟ್ ಇಂಡೀಸ್ 43 ಓವರ್‌ಗಳಲ್ಲಿ 108 ಕೆ ಆಲೌಟ್ ಆಯಿತು. ಕೆರಿಬಿಯನ್ ತಂಡ ಕೇವಲ 43 ಓವರ್​ಗಳಲ್ಲಿ 170 ರನ್ ಗಳಿಗೆ ಆಲೌಟ್ ಆಯಿತು. ಮ್ಯಾಥ್ಯೂ 52 ರನ್ ಗಳಿಸಿ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಪರಿಣಾಮ ವೆಸ್ಟ್ ಇಂಡೀಸ್ 108 ರನ್ ಗಳಿಂದ ಸೋಲು ಕಂಡಿತು. ಭಾರತದ ಮೊದಲ ಅಭ್ಯಾಸ ಪಂದ್ಯದಲ್ಲಿಯೇ ಬೌಲರ್‌ಗಳು ಮಿಂಚಿದ್ದರು. ಮಾನವ್ ಪ್ರಕಾಶ್ ಮತ್ತು ಕೌಶಲ್ ತಾಂಬೆ ತಲಾ 3 ವಿಕೆಟ್ ಪಡೆದರೆ, ಗಾರ್ಗ್ ಸಾಂಗ್ವಾನ್ ಮತ್ತು ಅನೀಶ್ವರ್ ಗೌತಮ್ ಚೆರೋ ತಲಾ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ