ICC Player of the Month: ಐಸಿಸಿ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದ ಎಜಾಜ್ ಪಟೇಲ್! ಮಯಾಂಕ್ ಕೈತಪ್ಪಿದ ಅವಕಾಶ
ICC Player of the Month: ನ್ಯೂಜಿಲೆಂಡ್ ಸ್ಪಿನ್ನರ್ ಎಜಾಜ್ ಪಟೇಲ್ ಅವರು ಡಿಸೆಂಬರ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಜಾಜ್ ಪಟೇಲ್ ಅವರೊಂದಿಗೆ ಭಾರತದ ಮಯಾಂಕ್ ಅಗರ್ವಾಲ್ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ನಾಮನಿರ್ದೇಶನಗೊಂಡಿದ್ದರು.

ನ್ಯೂಜಿಲೆಂಡ್ ಸ್ಪಿನ್ನರ್ ಎಜಾಜ್ ಪಟೇಲ್ ಅವರು ಡಿಸೆಂಬರ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಜಾಜ್ ಪಟೇಲ್ ಅವರೊಂದಿಗೆ ಭಾರತದ ಮಯಾಂಕ್ ಅಗರ್ವಾಲ್ ಮತ್ತು ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ನಾಮನಿರ್ದೇಶನಗೊಂಡಿದ್ದರು. ಆದರೆ ಎಡಗೈ ಸ್ಪಿನ್ನರ್ ಎಜಾಜ್ ಪಟೇಲ್ ಈ ಇಬ್ಬರನ್ನು ಹಿಮ್ಮೆಟ್ಟಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಭಾರತ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅವರು ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಟೆಸ್ಟ್ ಕ್ರಿಕೆಟ್‌ನ ಒಂದು ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇದಕ್ಕೂ ಮುನ್ನ ಜಿಮ್ ಲೇಕರ್ ಮತ್ತು ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು.
ಎಜಾಜ್ ಪಟೇಲ್ ಭಾರತೀಯ ಮೂಲದ ಕ್ರಿಕೆಟಿಗ. ಅವರು ಮುಂಬೈನಲ್ಲಿ ಜನಿಸಿದರು ಆದರೆ ಅವರ ಕುಟುಂಬವು ಜೀವನ ನಿರ್ವಾಹಣೆಗಾಗಿ ನ್ಯೂಜಿಲೆಂಡ್‌ಗೆ ಸ್ಥಳಾಂತರಗೊಂಡಿತು. ಭಾರತ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ಟೆಸ್ಟ್ ತಂಡದಲ್ಲಿ ಎಜಾಜ್ ಪಟೇಲ್ ಭಾರತ ಪ್ರವಾಸ ಮಾಡಿದ್ದರು. ಈ ವೇಳೆ ಭಾರತ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಎಜಾಜ್ ಪಟೇಲ್ ಅವರು ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಕಬಳಿಸಿ ಐತಿಹಾಸಿಕ ದಾಖಲೆ ಮಾಡಿದ್ದರು. ಈ ನಿಟ್ಟಿನಲ್ಲಿ ಮಯಾಂಕ್ ಅಗರ್ವಾಲ್ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ಹಿಂದಿಕ್ಕಿ ಎಜಾಜ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮುಂಬೈ ಟೆಸ್ಟ್‌ನಲ್ಲಿ ಮಯಾಂಕ್ ಶತಕ ಬಾರಿಸಿದ್ದು, ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮತ್ತೊಂದೆಡೆ, ಮಿಚೆಲ್ ಸ್ಟಾರ್ಕ್, ಆಶಸ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮಾಡಿ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
? Jim Laker? Anil Kumble ? Ajaz Patel
Remember the names! #WTC23 | #INDvNZ | https://t.co/EdvFj8yST5 pic.twitter.com/xDVImIifM6
— ICC (@ICC) December 4, 2021
10 ವಿಕೆಟ್ ಪಡೆದ ನಂತರ ಮುಂದಿನ ಸರಣಿಯಿಂದ ಹೊರಬಿದ್ದ ಎಜಾಜ್ ಎಜಾಜ್ ಪಟೇಲ್ ಇದುವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 43 ವಿಕೆಟ್ ಪಡೆದಿದ್ದಾರೆ. ಅವರು 2018 ರಲ್ಲಿ ಪಾಕಿಸ್ತಾನದ ವಿರುದ್ಧ ಪಾದಾರ್ಪಣೆ ಮಾಡಿದರು. ಭಾರತದ ವಿರುದ್ಧ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ನಂತರ, ಎಜಾಜ್ ಪಟೇಲ್ ನ್ಯೂಜಿಲೆಂಡ್‌ನ ಮುಂದಿನ ಟೆಸ್ಟ್ ಸರಣಿಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಕಿವೀ ತಂಡ ಪ್ರಸ್ತುತ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಟೆಸ್ಟ್ ಆಡುತ್ತಿದೆ ಆದರೆ ಎಜಾಜ್ ಇಲ್ಲಿ ಆಡುತ್ತಿಲ್ಲ. ನ್ಯೂಜಿಲೆಂಡ್‌ನಲ್ಲಿ ಪಿಚ್ ಕಡಿಮೆ ಸ್ಪಿನ್‌ಗೆ ಸಹಾಯ ಮಾಡುವ ಕಾರಣ ಅವರನ್ನು ಆಯ್ಕೆ ಮಾಡಲಾಗಿಲ್ಲ.
ಎಜಾಜ್ ಹೊಗಳಿದ ಜೆಪಿ ಡುಮಿನಿ ಐಸಿಸಿ ವೋಟಿಂಗ್ ಅಕಾಡೆಮಿಯ ಸದಸ್ಯ ಜೆಪಿ ಡುಮಿನಿ, ಏಜಾಜ್ ಪಟೇಲ್ ತಿಂಗಳ ಆಟಗಾರನಾಗಿ ಆಯ್ಕೆಯಾದ ಬಗ್ಗೆ, ಪ್ರತಿಕ್ರಿಯೆ ನೀಡಿದ್ದಾರೆ. ಇನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ ಅದ್ಭುತ ಸಾಧನೆಯನ್ನು ಸಂಭ್ರಮಿಸಲೇಬೇಕು. ಎಜಾಜ್ ಅವರ ಪ್ರದರ್ಶನವು ಮುಂದಿನ ಹಲವು ವರ್ಷಗಳವರೆಗೆ ನೆನಪಿನಲ್ಲಿ ಉಳಿಯುವ ಮೈಲಿಗಲ್ಲು ಎಂಬುದರಲ್ಲಿ ಸಂದೇಹವಿಲ್ಲ.
Published On - 2:46 pm, Mon, 10 January 22
