AUS vs WI: ವೆಸ್ಟ್ ಇಂಡೀಸ್ ಮಣಿಸಿ 9ನೇ ಬಾರಿಗೆ ವಿಶ್ವಕಪ್ ಫೈನಲ್ಗೇರಿದ ಆಸ್ಟ್ರೇಲಿಯಾ.!
AUS vs WI: ವೆಸ್ಟ್ ಇಂಡೀಸ್ ತಂಡವನ್ನು 157 ರನ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಒಂಬತ್ತನೇ ಬಾರಿಗೆ ಐಸಿಸಿ ಮಹಿಳಾ ವಿಶ್ವಕಪ್ 2022 ರ ಫೈನಲ್ ತಲುಪಿತು.

ವೆಸ್ಟ್ ಇಂಡೀಸ್ ತಂಡವನ್ನು 157 ರನ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಒಂಬತ್ತನೇ ಬಾರಿಗೆ ಐಸಿಸಿ ಮಹಿಳಾ ವಿಶ್ವಕಪ್ 2022 (ICC Women’s World Cup 2022)ರ ಫೈನಲ್ ತಲುಪಿತು. ಬುಧವಾರ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಸೆಮಿಫೈನಲ್ ಮಳೆಯಿಂದಾಗಿ ತಡವಾಯಿತು. ಮಳೆಯಿಂದಾಗಿ ಪಂದ್ಯವನ್ನು 45 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 45 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 305 ರನ್ ಗಳ ಬೃಹತ್ ಮೊತ್ತ ಪೇರಿಸಿತು. ವೆಸ್ಟ್ ಇಂಡೀಸ್ 37 ಓವರ್ ಗಳಲ್ಲಿ 148 ರನ್ ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾದ ಹೀಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಮೂಲಕ ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಅತಿ ಹೆಚ್ಚು ಬಾರಿ ವಿಶ್ವಕಪ್ ಫೈನಲ್ ತಲುಪಿದ ತಂಡ ಎನಿಸಿಕೊಂಡಿದೆ.
ಆಸ್ಟ್ರೇಲಿಯಾದ ಮೊದಲ ವಿಕೆಟ್ 216ಕ್ಕೆ ಪತನಗೊಂಡಿತು. ಹೀಲಿ 107 ಎಸೆತಗಳಲ್ಲಿ 129 ರನ್ ಗಳಿಸಿ ಔಟಾದರು. ಅವರು ಔಟಾದ ನಂತರ, ಹೇನ್ಸ್ ಕೂಡ ಸ್ಕೋರ್ 231 ರಲ್ಲಿ ಪೆವಿಲಿಯನ್ ತಲುಪಿದರು. ಹೇನ್ಸ್ 100 ಎಸೆತಗಳಲ್ಲಿ 85 ರನ್ ಗಳಿಸಿದರು. ಆ ನಂತರ ನಾಯಕಿ ಲೆನ್ನಿಂಗ್ 26, ಮೂನಿ 31 ಎಸೆತಗಳಲ್ಲಿ 43 ರನ್ ಗಳಿಸಿ ತಂಡದ ಸ್ಕೋರ್ ಅನ್ನು 300ರ ಗಡಿ ದಾಟಿಸಿದರು. ವೆಸ್ಟ್ ಇಂಡೀಸ್ ಪರ ಹೆನ್ರಿ ಎರಡು ಮತ್ತು ಕಾನೆಲ್ ಒಂದು ವಿಕೆಟ್ ಪಡೆದರು. ಇವರಿಬ್ಬರನ್ನು ಬಿಟ್ಟರೆ ಯಾವ ಬೌಲರ್‌ಗಳೂ ಅಷ್ಟು ಪರಿಣಾಮಕಾರಿಯಾಗಲಿಲ್ಲ.
ವೆಸ್ಟ್ ಇಂಡೀಸ್ ಆರಂಭ ಕಳಪೆ… ವೆಸ್ಟ್ ಇಂಡೀಸ್ ತಂಡದ ಆರಂಭ ಅಷ್ಟೊಂದು ಚೆನ್ನಾಗಿರಲಿಲ್ಲ. 12 ರನ್‌ಗಳಿಗೆ ಮೊದಲ ವಿಕೆಟ್ ಪತನವಾಯಿತು. ವಿಲಿಯಮ್ಸ್ ಖಾತೆ ತೆರೆಯದೆ ಪೆವಿಲಿಯನ್‌ಗೆ ತೆರಳಿದರು. 44 ರನ್‌ಗಳಾಗುವಷ್ಟರಲ್ಲಿ ವೆಸ್ಟ್ ಇಂಡೀಸ್ ಎರಡನೇ ವಿಕೆಟ್ ಪತನವಾಯಿತು. ದಾಟಿನ್ 44 ರನ್ ಗಳಿಸಿ ಔಟಾದರು. ಅವರು ಔಟಾದ ನಂತರ, ಕ್ಯಾಪ್ಟನ್ ಟೇಲರ್ ಇನ್ನಿಂಗ್ಸ್ ಅನ್ನು ಅಚ್ಚುಕಟ್ಟಾಗಿ ಮಾಡಲು ಪ್ರಯತ್ನಿಸಿದರು. 75 ಎಸೆತಗಳಲ್ಲಿ 48 ರನ್ ಗಳಿಸಿ ಔಟಾದರು. ಅವರು ಔಟಾದ ನಂತರ ಯಾವುದೇ ಬ್ಯಾಟರ್ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ 37 ಓವರ್ ಗಳಲ್ಲಿ 148 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ ಪರ ಜಾನ್ಸನ್ 2 ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಫೈನಲ್‌ಗೆ ಹೋಗುವ ಹಾದಿಯಲ್ಲಿ ಆಸ್ಟ್ರೇಲಿಯಾ ಒಂದೇ ಒಂದು ಪಂದ್ಯವನ್ನು ಕಳೆದುಕೊಂಡಿಲ್ಲ. ಸೆಮಿಫೈನಲ್‌ಗೂ ಮುನ್ನ ನಡೆದ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯ ಎಲ್ಲ ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಇದೇ ವೇಳೆ ವೆಸ್ಟ್ ಇಂಡೀಸ್ ತಂಡಕ್ಕೆ ಸೆಮಿ ಫೈನಲ್ ತಲುಪುವ ಅದೃಷ್ಟ ಒಲಿದಿತ್ತು. ಸೆಮಿಫೈನಲ್‌ಗೂ ಮುನ್ನ ನಡೆದ ಪಂದ್ಯದಲ್ಲಿ ಭಾರತ ಸೋತ ನಂತರ ವೆಸ್ಟ್ ಇಂಡೀಸ್‌ಗೆ ಅದೃಷ್ಟದ ಅವಕಾಶ ಸಿಕ್ಕಿತು. ಆದರೆ, ಈ ಅವಕಾಶವನ್ನು ಅವರು ಸದುಪಯೋಗಪಡಿಸಿಕೊಳ್ಳಲಿಲ್ಲ.

#TeamAustralia beat West Indies by 157 runs to secure their spot in the #CWC22 final. pic.twitter.com/cKdCNiebn8
— ICC (@ICC) March 30, 2022

ಇದನ್ನೂ ಓದಿ:ICC Rankings: ಮೊದಲೆರಡು ಸ್ಥಾನದಲ್ಲಿ ಜಡೇಜಾ- ಅಶ್ವಿನ್! ರ್ಯಾಂಕಿಂಗ್ನಲ್ಲಿ ಕುಸಿದ ಕೊಹ್ಲಿ- ರೋಹಿತ್ ಸ್ಥಾನ