ಮಹಿಳಾ ಏಕದಿನ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ

ICC Women's ODI World Cup 2025: ಈ ಬಾರಿಯ ಮಹಿಳಾ ಏಕದಿನ ವಿಶ್ವಕಪ್​ಗೆ ಭಾರತ ಮತ್ತು ಶ್ರೀಲಂಕಾ ಆತಿಥ್ಯವಹಿಸಲಿದೆ. ಇಲ್ಲಿ ಬಹುತೇಕ ಪಂದ್ಯಗಳು ಭಾರತದಲ್ಲಿ ನಡೆದರೆ, ಪಾಕಿಸ್ತಾನ್ ತಂಡದ ಪಂದ್ಯಗಳು ಸೇರಿದಂತೆ ಕೆಲ ಮ್ಯಾಚ್​ಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಇನ್ನು ಪಾಕಿಸ್ತಾನ್ ತಂಡ ಫೈನಲ್​ಗೇರಿದರೆ ಅಂತಿಮ ಪಂದ್ಯ ಕೊಲಂಬೊದಲ್ಲಿ ಜರುಗಲಿದೆ.

ಮಹಿಳಾ ಏಕದಿನ ವಿಶ್ವಕಪ್ ಸಂಪೂರ್ಣ ವೇಳಾಪಟ್ಟಿ
Women's ODI World Cup 2025

Updated on: Sep 28, 2025 | 10:32 AM

ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 30 ರಿಂದ ಶುರುವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ.  ಇನ್ನು ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯವು ಅಕ್ಟೋಬರ್ 5 ರಂದು ನಡೆಯಲಿದ್ದು, ಈ ಪಂದ್ಯಕ್ಕೆ ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ವೇಳಾಪಟ್ಟಿ:

ದಿನಾಂಕ ದಿನ ತಂಡ 1 ತಂಡ 2 ಸ್ಥಳ ಸಮಯ (IST)
ಸೆಪ್ಟೆಂಬರ್ 30 ಮಂಗಳವಾರ ಭಾರತ ಶ್ರೀಲಂಕಾ ಗುವಾಹಟಿ ಮಧ್ಯಾಹ್ನ 3:00
ಅಕ್ಟೋಬರ್ 1 ಬುಧವಾರ ಆಸ್ಟ್ರೇಲಿಯಾ ನ್ಯೂಝಿಲೆಂಡ್ ಇಂದೋರ್ ಮಧ್ಯಾಹ್ನ 3:00
ಅಕ್ಟೋಬರ್ 2 ಗುರುವಾರ ಬಾಂಗ್ಲಾದೇಶ್ ಪಾಕಿಸ್ತಾನ್ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 3 ಶುಕ್ರವಾರ ಇಂಗ್ಲೆಂಡ್ ಸೌತ್ ಆಫ್ರಿಕಾ ಗುವಾಹಟಿ ಮಧ್ಯಾಹ್ನ 3:00
ಅಕ್ಟೋಬರ್ 4 ಶನಿವಾರ ಶ್ರೀಲಂಕಾ ಆಸ್ಟ್ರೇಲಿಯಾ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 5 ಭಾನುವಾರ ಭಾರತ ಪಾಕಿಸ್ತಾನಗ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 6 ಸೋಮವಾರ ನ್ಯೂಝಿಲೆಂಡ್ ಸೌತ್ ಆಫ್ರಿಕಾ ಇಂದೋರ್ ಮಧ್ಯಾಹ್ನ 3:00
ಅಕ್ಟೋಬರ್ 7 ಮಂಗಳವಾರ ಇಂಗ್ಲೆಂಡ್ ಬಾಂಗ್ಲಾದೇಶ್ ಗುವಾಹಟಿ ಮಧ್ಯಾಹ್ನ 3:00
ಅಕ್ಟೋಬರ್ 8 ಬುಧವಾರ ಆಸ್ಟ್ರೇಲಿಯಾ ಪಾಕಿಸ್ತಾನ್ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 9 ಗುರುವಾರ ಭಾರತ ಸೌತ್ ಆಫ್ರಿಕಾ ವಿಶಾಖಪಟ್ಟಣಂ ಮಧ್ಯಾಹ್ನ 3:00
ಅಕ್ಟೋಬರ್ 10 ಶುಕ್ರವಾರ ನ್ಯೂಝಿಲೆಂಡ್ ಬಾಂಗ್ಲಾದೇಶ್ ಗುವಾಹಟಿ ಮಧ್ಯಾಹ್ನ 3:00
ಅಕ್ಟೋಬರ್ 11 ಶನಿವಾರ ಇಂಗ್ಲೆಂಡ್ ಶ್ರೀಲಂಕಾ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 12 ಭಾನುವಾರ ಭಾರತ ಆಸ್ಟ್ರೇಲಿಯಾ ವಿಶಾಖಪಟ್ಟಣಂ ಮಧ್ಯಾಹ್ನ 3:00
ಅಕ್ಟೋಬರ್ 13 ಸೋಮವಾರ ಸೌತ್ ಆಫ್ರಿಕಾ ಬಾಂಗ್ಲಾದೇಶ್ ವಿಶಾಖಪಟ್ಟಣಂ ಮಧ್ಯಾಹ್ನ 3:00
ಅಕ್ಟೋಬರ್ 14 ಮಂಗಳವಾರ ಶ್ರೀಲಂಕಾ ನ್ಯೂಝಿಲೆಂಡ್ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 15 ಬುಧವಾರ ಇಂಗ್ಲೆಂಡ್ ಪಾಕಿಸ್ತಾನ್ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 16 ಗುರುವಾರ ಆಸ್ಟ್ರೇಲಿಯಾ ಬಾಂಗ್ಲಾದೇಶ್ ವಿಶಾಖಪಟ್ಟಣಂ ಮಧ್ಯಾಹ್ನ 3:00
ಅಕ್ಟೋಬರ್ 17 ಶುಕ್ರವಾರ ಶ್ರೀಲಂಕಾ ಸೌತ್ ಆಫ್ರಿಕಾ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 18 ಶನಿವಾರ ನ್ಯೂಝಿಲೆಂಡ್ ಪಾಕಿಸ್ತಾನ್ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 19 ಭಾನುವಾರ ಭಾರತ ಇಂಗ್ಲೆಂಡ್ ಇಂದೋರ್ ಮಧ್ಯಾಹ್ನ 3:00
ಅಕ್ಟೋಬರ್ 20 ಸೋಮವಾರ ಶ್ರೀಲಂಕಾ ಬಾಂಗ್ಲಾದೇಶ್ ನವಿ ಮುಂಬೈ ಮಧ್ಯಾಹ್ನ 3:00
ಅಕ್ಟೋಬರ್ 21 ಮಂಗಳವಾರ ಸೌತ್ ಆಫ್ರಿಕಾ ಪಾಕಿಸ್ತಾನ್ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 22 ಬುಧವಾರ ಆಸ್ಟ್ರೇಲಿಯಾ ಇಂಗ್ಲೆಂಡ್ ಇಂದೋರ್ ಮಧ್ಯಾಹ್ನ 3:00
ಅಕ್ಟೋಬರ್ 23 ಗುರುವಾರ ಭಾರತ ನ್ಯೂಝಿಲೆಂಡ್ ನವಿ ಮುಂಬೈ ಮಧ್ಯಾಹ್ನ 3:00
ಅಕ್ಟೋಬರ್ 24 ಶುಕ್ರವಾರ ಶ್ರೀಲಂಕಾ ಪಾಕಿಸ್ತಾನ್ ಕೊಲಂಬೊ ಮಧ್ಯಾಹ್ನ 3:00
ಅಕ್ಟೋಬರ್ 25 ಶನಿವಾರ ಆಸ್ಟ್ರೇಲಿಯಾ ಸೌತ್ ಆಫ್ರಿಕಾ ಇಂದೋರ್ ಮಧ್ಯಾಹ್ನ 3:00
ಅಕ್ಟೋಬರ್ 26 ಭಾನುವಾರ ಇಂಗ್ಲೆಂಡ್ ನ್ಯೂಝಿಲೆಂಡ್ ವಿಶಾಖಪಟ್ಟಣಂ ಬೆಳಿಗ್ಗೆ 11:00
ಅಕ್ಟೋಬರ್ 26 ಭಾನುವಾರ ಭಾರತ ಬಾಂಗ್ಲಾದೇಶ್ ನವಿ ಮುಂಬೈ ಮಧ್ಯಾಹ್ನ 3:00
ಅಕ್ಟೋಬರ್ 29 ಬುಧವಾರ ಸೆಮಿಫೈನಲ್ 1   TBA ಮಧ್ಯಾಹ್ನ 3:00
ಅಕ್ಟೋಬರ್ 30 ಗುರುವಾರ ಸೆಮಿಫೈನಲ್ 2 ನವಿ ಮುಂಬೈ ಮಧ್ಯಾಹ್ನ 3:00
ನವೆಂಬರ್ 2 ಭಾನುವಾರ ಫೈನಲ್ TBA ಮಧ್ಯಾಹ್ನ 3:00