IND vs AFG: 6,6,6; ದುಬೆ ಸಿಡಿಸಿದ ಹ್ಯಾಟ್ರಿಕ್ ಸಿಕ್ಸರ್ಗಳಿಗೆ ದಂಗಾದ ರೋಹಿತ್- ಕೊಹ್ಲಿ! ವಿಡಿಯೋ ವೈರಲ್
Shivam Dube: ನಬಿ ಬೌಲ್ ಮಾಡಿದ ಓವರ್ನ ಎರಡನೇ ಎಸೆತವನ್ನು ಡೀಪ್ ಫಾರ್ವರ್ಡ್‌ನಲ್ಲಿ ಸಿಕ್ಸರ್ಗಟ್ಟಿದ ದುಬೆ, ಮುಂದಿನ ಎಸೆತವನ್ನು ಮೊಣಕಾಲಿನ ಮೇಲೆ ಕುಳಿತು ಮತ್ತೊಮ್ಮೆ ಅದೇ ದಿಕ್ಕಿನಲ್ಲಿ ಬಲವಾದ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ ನೋಡಿದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಬೆಚ್ಚಿ ಬಿದರು. ಈ ವೇಳೆ ಕೊಹ್ಲಿ ಹಾಗೂ ರೋಹಿತ್ ನೀಡಿದ ಅಚ್ಚರಿಯ ಪ್ರತಿಕ್ರಿಯೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ನಡೆಯುತ್ತಿರುವ ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ (Shivam Dube) ಸದ್ಯ ಕ್ರಿಕೆಟ್ ಲೋಕದಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ದುಬೆ ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಇರಾದೆಯಲ್ಲಿದ್ದರೆ, ಇತ್ತ ಆಯ್ಕೆ ಮಂಡಳಿ ಕೂಡ ಯುವರಾಜ್ ಸಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ನಂತರ ಟೀಂ ಇಂಡಿಯಾಕ್ಕೆ ಒಬ್ಬ ಬೆಸ್ಟ್ ಆಲ್‌ರೌಂಡರ್ ಸಿಕ್ಕ ಎಂಬ ನಿಟ್ಟುಸಿರು ಬಿಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಆಡಿರುವ ಎರಡೂ ಪಂದ್ಯಗಳಲ್ಲಿ ಶಿವಂ ದುಬೆ ಅವರ ಆಲ್‌ರೌಂಡರ್ ಪ್ರದರ್ಶನ. ಬೌಲಿಂಗ್ನಲ್ಲಿ ಸಮಾಧಾನಕರ ಪ್ರದರ್ಶನ ನೀಡುತ್ತಿರುವ ದುಬೆ, ಬ್ಯಾಟಿಂಗ್ನಲ್ಲಿ ಮಾತ್ರ ವಿಶ್ವ ಕ್ರಿಕೆಟ್ ದಿಗ್ಗಜರ ಹೃದಯ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಭಾನುವಾರ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ದುಬೆ ಬ್ಯಾಕ್ ಟು ಬ್ಯಾಕ್ 3 ಸಿಕ್ಸರ್ ಸಿಡಿಸಿ, ಪ್ರೇಕ್ಷಕರನ್ನು ಮಾತ್ರವಲ್ಲದೆ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ (Virat Kohli)ಯಂತಹ ಸ್ಟಾರ್ ಕ್ರಿಕೆಟಿಗರನ್ನು ಮಂತ್ರಮುಗ್ದರನ್ನಾಗಿಸಿದರು.
173 ರನ್ಗಳ ಗುರಿ
ಅಫ್ಘಾನಿಸ್ತಾನ ನೀಡಿದ 173 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರೋಹಿತ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಆ ಬಳಿಕ ಬಂದ ವಿರಾಟ್ ಕೊಹ್ಲಿ ಕೂಡ 29 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಯಶಸ್ವಿ ಜೊತೆಯಾದ ಶಿವಂ ದುಬೆ ತಮ್ಮ ಹೊಡಿಬಡಿ ಆಟದಿಂದ ತಂಡವನ್ನು ಸಂಕಷ್ಟದಿಂದ ಹೊರತಂದರು. ಅದರಲ್ಲೂ 10ನೇ ಓವರ್ ಬೌಲ್ ಮಾಡಲು ಬಂದ ಮೊಹಮ್ಮದ್ ನಬಿ ಅವರ ಎರಡನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ದುಬೆ ಪ್ರೇಕ್ಷಕರು ಹುಚ್ಚೆದು ಕುಣಿಯುವಂತೆ ಮಾಡಿದರು.
Up, Up and Away!
Three consecutive monstrous SIXES from Shivam Dube 🔥 🔥🔥#INDvAFG @IDFCFIRSTBank pic.twitter.com/3y40S3ctUW
— BCCI (@BCCI) January 14, 2024
ಬೆಚ್ಚಿದ ರೋಹಿತ್, ಕೊಹ್ಲಿ
ನಬಿ ಬೌಲ್ ಮಾಡಿದ ಓವರ್ನ ಎರಡನೇ ಎಸೆತವನ್ನು ಡೀಪ್ ಫಾರ್ವರ್ಡ್‌ನಲ್ಲಿ ಸಿಕ್ಸರ್ಗಟ್ಟಿದ ದುಬೆ, ಮುಂದಿನ ಎಸೆತವನ್ನು ಮೊಣಕಾಲಿನ ಮೇಲೆ ಕುಳಿತು ಮತ್ತೊಮ್ಮೆ ಅದೇ ದಿಕ್ಕಿನಲ್ಲಿ ಬಲವಾದ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ ನೋಡಿದ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಬೆಚ್ಚಿ ಬಿದರು. ಈ ವೇಳೆ ಕೊಹ್ಲಿ ಹಾಗೂ ರೋಹಿತ್ ನೀಡಿದ ಅಚ್ಚರಿಯ ಪ್ರತಿಕ್ರಿಯೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Virat Kohli and Rohit Sharma enjoying the Dube Jaiswal show. pic.twitter.com/kV93c6krTG
— Mufaddal Vohra (@mufaddal_vohra) January 14, 2024
ಓವರ್‌ನಿಂದ ಒಟ್ಟು 21 ರನ್
ಶಿವಂ ದುಬೆ ಮತ್ತೊಮ್ಮೆ ಮೂರನೇ ಎಸೆತವನ್ನು ಫುಲ್ ಟಾಸ್ ಮಾಡಿ ಅದೇ ದಿಕ್ಕಿನಲ್ಲಿ ಮೂರನೇ ಸಿಕ್ಸರ್ ಬಾರಿಸಿದರು. ದುಬೆ ಸಿಡಿಸಿದ ಮೂರು ಬ್ಯಾಕ್ ಟು ಬ್ಯಾಕ್ ಸಿಕ್ಸರ್ಗಳನ್ನು ಕಂಡು ಕ್ರೀಡಾಂಗಣದಲ್ಲಿ ಚಪ್ಪಾಳೆ ಮೊಳಗಿತು. ಆದಾಗ್ಯೂ, ಮೊಹಮ್ಮದ್ ನಬಿ ಮುಂದಿನ ಎಸೆತದಲ್ಲಿ ಒಂದು ರನ್ ಮತ್ತು ಮುಂದಿನ ಎಸೆತದಲ್ಲಿ ಒಂದು ರನ್ ನೀಡುವ ಮೂಲಕ ಹೇಗೋ ಓವರ್ ಮುಗಿಸಿದರು. ನಬಿ ಅವರ ಈ ಓವರ್‌ನಿಂದ ಒಟ್ಟು 21 ರನ್‌ಗಳು ಬಂದವು. ವಿಶೇಷವೆಂದರೆ ಇದಾದ ಬಳಿಕ ಒಂದೇ ಒಂದು ಓವರ್ ಬೌಲಿಂಗ್ ಮಾಡುವ ರಿಸ್ಕ್ ಅನ್ನು ನಬಿ ತೆಗೆದುಕೊಳ್ಳಲಿಲ್ಲ.
Virat Kohli got pumped up on Shivam Dube’s 3 consecutive sixes. pic.twitter.com/gGwJMjm4IO
— Mufaddal Vohra (@mufaddal_vohra) January 14, 2024
32 ಎಸೆತಗಳಲ್ಲಿ ಅಜೇಯ 63 ರನ್
ಈ ಪಂದ್ಯದಲ್ಲಿ ಶಿವಂ ದುಬೆ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ ಅಜೇಯ 63 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಇವರೊಂದಿಗೆ ಮತ್ತೊಂದು ತುದಿಯಲ್ಲಿ ಯಶಸ್ವಿ ಜೈಸ್ವಾಲ್ ಕೂಡ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿದರು. ಜೈಸ್ವಾಲ್ 5 ಸಿಕ್ಸರ್ ಮತ್ತು 6 ಸಿಕ್ಸರ್ ಬಾರಿಸಿ 35 ಎಸೆತಗಳಲ್ಲಿ 68 ರನ್ ಗಳಿಸಿದರು. ರಿಂಕು ಸಿಂಗ್ ಅಜೇಯ 9 ರನ್ ಗಳಿಸಿದರು. ಟೀಂ ಇಂಡಿಯಾದ ಬಿರುಸಿನ ಬ್ಯಾಟಿಂಗ್‌ನಿಂದಾಗಿ ಭಾರತ ಕೇವಲ 15.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
#TeamIndia win the 2nd T20I by 6 wickets, take an unassailable lead of 2-0 in the series.
Scorecard – https://t.co/CWSAhSZc45 #INDvAFG@IDFCFIRSTBank pic.twitter.com/OQ10nOPFs7
— BCCI (@BCCI) January 14, 2024
ಮೊದಲ ಪಂದ್ಯದಲ್ಲೂ ಅರ್ಧಶತಕ
ಇದು ಶಿವಂ ದುಬೆ ಅವರ ಸತತ ಎರಡನೇ ಅರ್ಧಶತಕ. ಇದಕ್ಕೂ ಮುನ್ನ ಮೊದಲ ಟಿ20ಯಲ್ಲಿ ದುಬೆ ಅಜೇಯ 60 ರನ್ ಗಳಿಸಿದ್ದರು. ಅಲ್ಲದೆ ಒಂದು ವಿಕೆಟ್ ಕೂಡ ಪಡೆದಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿರುವ ದುಬೆ 20 ಪಂದ್ಯಗಳಲ್ಲಿ 3 ಅರ್ಧ ಶತಕಗಳನ್ನು ಹೊಂದಿದ್ದಾರೆ. ಅವರ ಸರಾಸರಿ 35 ಕ್ಕಿಂತ ಹೆಚ್ಚಿದ್ದು, ಸ್ಟ್ರೈಕ್ ರೇಟ್ ಸುಮಾರು 140 ಆಗಿದೆ. ಶಿವಂ ದುಬೆ ಭವಿಷ್ಯದಲ್ಲಿ ಟೀಂ ಇಂಡಿಯಾದ ಯುವರಾಜ್ ಸಿಂಗ್ ಆಗಲಿದ್ದಾರೆ ಎಂದು ಅನುಭವಿಗಳು ಭವಿಷ್ಯ ನುಡಿಯುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ