IND vs AUS: ಸಾವಿರಾರು ಜನರ ಮುಂದೆ ಗಿಲ್ ಖಾಸಗಿ ಭಾಗಕ್ಕೆ ಪಂಚ್ ಕೊಟ್ಟ ಕೊಹ್ಲಿ! ವಿಡಿಯೋ ವೈರಲ್
Virat Kohli: ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಟೀಂ ಇಂಡಿಯಾದೊಂದಿಗೆ ಅಭ್ಯಾಸದಲ್ಲಿ ನಿರತರಾಗಿದ್ದ ಕೊಹ್ಲಿ, ಶುಭ್ಮನ್ ಗಿಲ್ ಬಳಿ ಬಂದು ಅವರ ಖಾಸಗಿ ಭಾಗಕ್ಕೆ ತಮ್ಮ ಕೈನಿಂದ ಪಂಚ್ ನೀಡಿದ್ದಾರೆ.
ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಮೊದಲೆರಡು ಟೆಸ್ಟ್ ಪಂದ್ಯ ಮುಕ್ತಾಯಗೊಂಡಿದೆ. ಈ ಎರಡೂ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಅಲ್ಲದೆ ಬಾರ್ಡರ್- ಗವಾಸ್ಕರ್ (Border Gavaskar Trophy) ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಇದೀಗ ಮೂರನೇ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿದ್ದು, ಈ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯ (Virat Kohli) ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೊಹ್ಲಿ ಮಾಡಿದ ಈ ಚೇಷ್ಟೆಯಿಂದ ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ (Shubman Gill) ಸ್ವಲ್ಪ ಸಮಯ ನೋವಿನಿಂದ ನರಳುವಂತ್ತಾಗಿದೆ.
ವಾಸ್ತವವಾಗಿ ವಿರಾಟ್ ಕೊಹ್ಲಿ ಆಟದ ವೇಳೆ ಅಥವಾ ಅಭ್ಯಾಸದ ವೇಳೆ ಮಾಡುವ ಕೆಲವು ಚೇಷ್ಟೆಗಳಿಂದ ಅಥವಾ ತನ್ನ ಆಕ್ರಮಣಕಾರಿ ಪ್ರವೃತ್ತಿಯಿಂದ ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ವಾಸ್ತವವಾಗಿ ಆಟದ ಸಮಯದಲ್ಲಿ ಎದುರಾಳಿ ಆಟಗಾರರನ್ನು ತನ್ನ ಆಕ್ರಮಣಶೀಲತೆಯಿಂದ ಕೆಣಕುವ ಕೊಹ್ಲಿ, ಆಟದ ನಂತರ ಎಲ್ಲರೊಂದಿಗೆ ಜಾಲಿಮೂಡ್ನಲ್ಲಿರುತ್ತಾರೆ.
IND vs AUS: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25000 ರನ್! ಸಚಿನ್ ಹಿಂದಿಕ್ಕಿದ ಕಿಂಗ್ ಕೊಹ್ಲಿ
ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಟೀಂ ಇಂಡಿಯಾದೊಂದಿಗೆ ಅಭ್ಯಾಸದಲ್ಲಿ ನಿರತರಾಗಿದ್ದ ಕೊಹ್ಲಿ, ಶುಭ್ಮನ್ ಗಿಲ್ ಬಳಿ ಬಂದು ಅವರ ಖಾಸಗಿ ಭಾಗಕ್ಕೆ ತಮ್ಮ ಕೈನಿಂದ ಪಂಚ್ ನೀಡಿದ್ದಾರೆ. ಇದರಿಂದ ಶುಭ್ಮನ್ ಸ್ವಲ್ಪ ಸಮಯ ನೋವಿನಿಂದ ನರಳಿದ್ದಾರೆ. ಅಲ್ಲೆ ಇದ್ದ ಇತರೆ ಆಟಗಾರರು ಕೊಹ್ಲಿಯ ಕಪಿ ಚೇಷ್ಟೆಯನ್ನು ನೋಡಿ ನಕ್ಕಿದ್ದಾರೆ. ಇತ್ತ ಪೆಟ್ಟು ತಿಂದ ಗಿಲ್ ಸ್ಥಿತಿ, ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬಂತ್ತಾಗಿದೆ. ವಿರಾಟ್ ಕೊಹ್ಲಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರು ಕೂಡ ಈ ವಿಡಿಯೋವನ್ನು ಶೇರ್ ಮಾಡುವುದರ ಜೊತೆಗೆ ತರೆವಾರಿ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
Anna kuda mana batch aa?? Ayanaki avad aina chepandi ra #ViratKohli India lo ne most followed celebrity ani nka chinna pillodu anukutundu ????? pic.twitter.com/SOy1Ymye9y
— Aggressive (@bad__Boy15) February 19, 2023
Virat Kohli’s reaction is so cute on seeing chole bhature pic.twitter.com/H4sl8ZCKnh
— leishaa ✨ (@katyxkohli17) February 18, 2023
ಈ ವಿಡಿಯೋ ಕೂಡ ವೈರಲ್
2 ದಿನಗಳ ಹಿಂದೆ, ಪಂದ್ಯದ ವೇಳೆ ವಿರಾಟ್ ಅವರ ತಮಾಷೆಯ ವೀಡಿಯೋವೊಂದು ವೈರಲ್ ಆಗಿತ್ತು. ವಾಸ್ತವವಾಗಿ ದೆಹಲಿ, ವಿರಾಟ್ ಕೊಹ್ಲಿಯ ತವರು ನೆಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಹೀಗಾಗಿ ದೆಹಲಿಯ ಸ್ಥಳೀಯ ಖಾದ್ಯಗಳೆಂದರೆ ಕೊಹ್ಲಿಗೆ ಬಹಳ ಅಚ್ಚುಮೆಚ್ಚು. ಅದರಲ್ಲೂ ದೆಹಲಿಯ ರಾಮ್ ಭಾಯ್ ಅವರ ಚೋಲೆ ಭಟೂರ್ ಅವರಿಗೆ ತುಂಬಾ ಇಷ್ಟ ಎಂಬುದನ್ನು ಈ ಹಿಂದೆ ಕೊಹ್ಲಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಹೀಗಾಗಿ ದೆಹಲಿ ಟೆಸ್ಟ್ ಆಡಲು ಬಂದ ಕೊಹ್ಲಿಗೆ ಮರುದಿನ ಚೋಲೆ ಭಟೂರ್ ಖಾದ್ಯವನ್ನು ಪಂದ್ಯದ ಸಮಯದಲ್ಲಿ ಅದೇ ಅಂಗಡಿಯಿಂದ ಪಾರ್ಸೆಲ್ ತರಿಸಲಾಗಿದೆ. ರಾಹುಲ್ ದ್ರಾವಿಡ್ ಅವರೊಂದಿಗಿನ ಚರ್ಚೆಯ ಸಮಯದಲ್ಲಿ, ಒಬ್ಬ ಸಿಬ್ಬಂದಿ ಆ ಪಾರ್ಸೆಲ್ ಅನ್ನು ಕೊಹ್ಲಿಗೆ ನೀಡಿದ್ದಾರೆ. ಚೋಲೆ ಭಟೂರ್ ಪಾರ್ಸೆಲ್ ನೋಡಿದ ವಿರಾಟ್ ಕೊಹ್ಲಿ ಖುಷಿಯಾಗಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:29 pm, Mon, 20 February 23