T20 World Cup: ವಿಂಡೀಸ್ ವಿರುದ್ಧ 3 ರನ್​ಗಳಿಂದ ಸೋತ ಪಾಕಿಸ್ತಾನ! ಭಾರತಕ್ಕೆ ಲಾಭ

T20 World Cup 2023: ಪಾಕ್ ಸೆಮಿಸ್ ಆಡಬೇಕೆಂದರೆ ಮೊದಲನೆಯದಾಗಿ ಭಾರತ (4 ಅಂಕ) ಐರ್ಲೆಂಡ್ ವಿರುದ್ಧ ಸೋಲಬೇಕು. ಎರಡನೆಯದಾಗಿ, ಪಾಕಿಸ್ತಾನವೇ ಹೇಗಾದರೂ ಸರಿ ಇಂಗ್ಲೆಂಡ್ ತಂಡವನ್ನು ಸೋಲಿಸಲೇಬೇಕು. ಹಾಗದರೆ ಮಾತ್ರ ಪಾಕ್ ಸೆಮಿಸ್ ಆಡಬಹುದಾಗಿದೆ.

T20 World Cup: ವಿಂಡೀಸ್ ವಿರುದ್ಧ 3 ರನ್​ಗಳಿಂದ ಸೋತ ಪಾಕಿಸ್ತಾನ! ಭಾರತಕ್ಕೆ ಲಾಭ
ವೆಸ್ಟ್ ಇಂಡೀಸ್- ಪಾಕಿಸ್ತಾನ್
Follow us
ಪೃಥ್ವಿಶಂಕರ
|

Updated on:Feb 20, 2023 | 11:06 AM

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನ (Women’s T20 World Cup 2023) ಲೀಗ್ ಸುತ್ತು ಮುಗಿಯುವ ಹಂತದಲ್ಲಿದೆ. ಈಗಾಗಲೇ ಬಲಿಷ್ಠ ತಂಡಗಳು ನಾಕೌಟ್​ನತ್ತ ಹೆಜ್ಜೆ ಇಟ್ಟಿವೆ. ಇತ್ತ ಟೀಂ ಇಂಡಿಯಾ (Team India) ಕೂಡ ಟೂರ್ನಿಯ ಮೊದಲ ಸೋಲಿನೊಂದಿಗೆ ಕೊಂಚ ಆತಂಕಕ್ಕೊಳಗಾಗಿದೆ. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಭಾರತಕ್ಕೆ ಕಂಟಕವಾಗಿದ್ದ ಪಾಕ್ ಸೋತಿರುವುದು ಹರ್ಮನ್ ಪಡೆಗೆ ಕೊಂಚ ನೆಮ್ಮದಿ ತಂದಿದೆ. ವಾಸ್ತವವಾಗಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ (West Indies vs Pakistan) ನಡುವೆ ಭಾನುವಾರ ನಡೆದ ಪಂದ್ಯದಲ್ಲಿ ಅಲ್ಪ ಸ್ಕೋರ್ ಮುಂದೆಯೂ ಪಾಕ್ ಪಡೆ ಮೂರು ರನ್​ಗಳ ರೋಚಕ ಸೋಲು ಅನುಭವಿಸಿದೆ. ಈ ಮೂಲಕ ಪಾಕ್ ತಂಡ ಟೂರ್ನಿಯಲ್ಲಿ ತನ್ನ ಎರಡನೇ ಸೋಲು ಅನುಭವಿಸಿದೆ. ಇತ್ತ ವಿಂಡೀಸ್ ಕೂಡ ತನ್ನ ಎರಡನೇ ಗೆಲುವು ದಾಖಲಿಸಿದೆ.

ಗುಂಪು 2 ರ ಈ ಪಂದ್ಯದಲ್ಲಿ, ಸೆಮಿಫೈನಲ್‌ಗೆ ಪ್ರವೇಶಿಸುವ ಭರವಸೆಯನ್ನು ಜೀವಂತವಾಗಿಡಲು ಎರಡೂ ತಂಡಗಳು ಗೆಲುವು ದಾಖಲಿಸುವುದು ಅನಿವಾರ್ಯವಾಗಿತ್ತು. ಆದರೆ ಪಾರ್ಲ್​ನಲ್ಲಿ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳ ರನ್ ರೇಟ್ ಪ್ರತಿ ಓವರ್​ಗೆ 6 ರನ್ ಕೂಡ ಮುಟ್ಟಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನದ ಬಿಗಿ ಬೌಲಿಂಗ್ ಮುಂದೆ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 116 ರನ್ ಗಳಿಸಲಷ್ಟೇ ಶಕ್ತವಾಯಿತು.

T20 World Cup 2023:ಕೇವಲ 14 ಎಸೆತಗಳಲ್ಲಿ 56 ರನ್! ಟಿ20ಯಲ್ಲಿ ಪಾಕ್ ಪರ ಸಿಡಿಯಿತು ಮೊದಲ ಶತಕ

ನಿಧಾನಗತಿಯ ಬ್ಯಾಟಿಂಗ್, ಕಡಿಮೆ ಸ್ಕೋರ್

ವೆಸ್ಟ್ ಇಂಡೀಸ್ ಪರ ರಶಾದಾ ವಿಲಿಯಮ್ಸ್ ಗರಿಷ್ಠ 30 ರನ್ ಗಳಿಸಿದರು. ಆದರೆ ಇದಕ್ಕಾಗಿ ಅವರು ಬರೋಬ್ಬರಿ 34 ಎಸೆತಗಳನ್ನು ಆಡಬೇಕಾಯಿತು. ಅಷ್ಟೇ ಅಲ್ಲ, ವಿಂಡೀಸ್ ತಂಡದ ಭಾಗಶಃ ಬ್ಯಾಟರ್​ಗಳ ಸ್ಟ್ರೈಕ್ ರೇಟ್ 100ಕ್ಕಿಂತ ಕಡಿಮೆ ಇತ್ತು. ತಂಡದ ಅಗ್ರ 6 ಬ್ಯಾಟರ್​ಗಳಲ್ಲಿ ಇಬ್ಬರಿಗೆ ಮಾತ್ರ 100 ಸ್ಟ್ರೈಕ್ ರೇಟ್ ದಾಟಲು ಸಾಧ್ಯವಾಯಿತು. ಶಿನ್ನೆಲ್ ಹೆನ್ರಿ 10 ಎಸೆತಗಳಲ್ಲಿ 11 ರನ್ ಗಳಿಸಿದರೆ, ಆಲಿಯಾ ಅಲೆನ್ 9 ಎಸೆತಗಳಲ್ಲಿ 9 ರನ್ ಗಳಿಸಿದರು. ಪಾಕಿಸ್ತಾನ ಪರ ಅನುಭವಿ ಸ್ಪಿನ್ ಆಲ್ ರೌಂಡರ್ ನಿದಾ ದಾರ್ 4 ಓವರ್​ಗಳಲ್ಲಿ ಕೇವಲ 13 ರನ್ ನೀಡಿ 2 ವಿಕೆಟ್ ಪಡೆದರು.

ಪಾಕ್ ಸ್ಥಿತಿಯೂ ಇದೇ ಆಗಿತ್ತು

ವಿಂಡೀಸ್ ನೀಡಿದ ಅಲ್ಪ ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಕೂಡ ಮಂದಗತಿಯ ಬ್ಯಾಟಿಂಗ್ ಮಾಡಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಆರಂಭಿಕ ಆಟಗಾರ್ತಿ ಮುನೀಬಾ ಅಲಿ 11 ಎಸೆತಗಳಲ್ಲಿ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ನಾಯಕಿ ಬಿಸ್ಮಾ ಮರೂಫ್ ಮತ್ತು ನಿದಾ ದಾರ್ ನಡುವೆ 44 ರನ್ ಜೊತೆಯಾಟವಿತ್ತು. ಆದರೆ ಇಬ್ಬರೂ ಇದಕ್ಕಾಗಿ 53 ಎಸೆತಗಳನ್ನು ವ್ಯಯಿಸಿದರು. ಇವರಿಬ್ಬರ ನಿಧಾನಗತಿಯ ಬ್ಯಾಟಿಂಗ್ ಪಾಕಿಸ್ತಾನಕ್ಕೆ ದುಬಾರಿಯಾಯಿತು.

ಈ ನಿದಾನಗತಿಯ ಬ್ಯಾಟಿಂಗ್‌ನ ಪರಿಣಾಮದಿಂದಾಗಿ ಪಾಕಿಸ್ತಾನಕ್ಕೆ ಕೊನೆಯ ಓವರ್‌ನಲ್ಲಿ 18 ರನ್‌ಗಳ ಅಗತ್ಯವಿತ್ತು. ಅಲಿಯಾ ರಿಯಾಜ್ ಮತ್ತು ಫಾತಿಮಾ ಸನಾ 3 ಬೌಂಡರಿಗಳನ್ನು ಹೊಡೆದರೂ ಇದು ಸಾಕಾಗಲಿಲ್ಲ. ಪಾಕಿಸ್ತಾನದ ಪರವಾಗಿ ಈ ಇಬ್ಬರು ಬ್ಯಾಟರ್​ಗಳು 100 ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ಅಂತಿಮವಾಗಿ 5 ವಿಕೆಟ್ ಕಳೆದುಕೊಂಡ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 113 ರನ್ ಗಳಿಸಿ, 3 ರನ್​ಗಳ ರೋಚಕ ಸೋಲನುಭವಿಸಿತು.

ಭಾರತದ ಸೋಲಿನ ಮೇಲಿನ ಪಾಕ್ ಭವಿಷ್ಯ

ಈ ಗೆಲುವಿನ ಹೊರತಾಗಿಯೂ, ವೆಸ್ಟ್ ಇಂಡೀಸ್ ಸೆಮಿಫೈನಲ್ ತಲುಪುವುದು ಕಷ್ಟಕರವಾಗಿದೆ. ಏಕೆಂದರೆ ವಿಂಡೀಸ್ ತಂಡ ಆಡಿರುವ ಪಂದ್ಯಗಳಲ್ಲಿ 4 ಅಂಕಗಳನ್ನು ಹೊಂದಿದ್ದು, ನಿವ್ವಳ ರನ್​ ರೇಟ್​ ಕೂಡ ತುಂಬಾ ಕೆಟ್ಟದಾಗಿದೆ. ಮತ್ತೊಂದೆಡೆ, ಪಾಕಿಸ್ತಾನದ ನಿವ್ವಳ ರನ್​ ರೇಟ್ ಅದ್ಭುತವಾಗಿದೆ ಆದರೆ ಅಂಕಪಟ್ಟಿಯಲ್ಲಿ ಕೇವಲ 2 ಅಂಕಗಳನ್ನು ಮಾತ್ರ ಹೊಂದಿದೆ. ಹೀಗಾಗಿ ಪಾಕ್ ತಂಡ ಸೆಮಿಫೈನಲ್ ತಲುಪಬೇಕಾದರೆ ಇತರ ತಂಡಗಳ ಸೋಲಿನ ಮೇಲೆ ಅವಲಂಬಿತವಾಗಿದೆ. ಪಾಕ್ ಸೆಮಿಸ್ ಆಡಬೇಕೆಂದರೆ ಮೊದಲನೆಯದಾಗಿ ಭಾರತ (4 ಅಂಕ) ಐರ್ಲೆಂಡ್ ವಿರುದ್ಧ ಸೋಲಬೇಕು. ಎರಡನೆಯದಾಗಿ, ಪಾಕಿಸ್ತಾನವೇ ಹೇಗಾದರೂ ಸರಿ ಇಂಗ್ಲೆಂಡ್ ತಂಡವನ್ನು ಸೋಲಿಸಲೇಬೇಕು. ಹಾಗದರೆ ಮಾತ್ರ ಪಾಕ್ ಸೆಮಿಸ್ ಆಡಬಹುದಾಗಿದೆ.

ಭಾರತಕ್ಕೆ ಲಾಭ

ಭಾರತ ಮಹಿಳಾ ತಂಡ ಸದ್ಯ ಆಡಿರುವ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು ಒಂದರಲ್ಲಿ ಸೋತು 4 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಹಾಗೆಯೆ ವೆಸ್ಟ್ ಇಂಡೀಸ್ ತನಗಿದ್ದ ಎಲ್ಲ 4 ಪಂದ್ಯಗಳಲ್ಲಿ ಆಡಿದ್ದು 4 ಪಾಯಿಂಟ್ ಸಂಪಾದಿಸಿದೆ. ಅತ್ತ ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಒಂದು ಗೆಲುವು, ಎರಡು ಸೋಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಈಗ ಪಾಕ್ ಸೋತಿರುವುದರಿಂದ ಭಾರತ ಇಂದಿನ ಪಂದ್ಯ ಗೆದ್ದರೆ 6 ಅಂಕದೊಂದಿಗೆ ಸೆಮೀಸ್​ಗೆ ಲಗ್ಗೆ ಇಡಲಿದೆ. ಎಲ್ಲಾದರು ಟೀಮ್ ಇಂಡಿಯಯಾ ಸೋತರೆ ಅತ್ತ ಪಾಕ್ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲಬೇಕಿದೆ. ಭಾರತ ಸೋತು ಪಾಕ್ ಗೆದ್ದರೆ ರನ್​ರೇಟ್ ಆಧಾರದ ಮೇಲೆ ಪಾಕಿಸ್ತಾನ ಸೆಮಿ ಫೈನಲ್​ಗೆ ಏರುವುದು ಬಹುತೇಕ ಖಚಿತ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:03 am, Mon, 20 February 23

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ