ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಎರಡೂ ತಂಡಗಳು ಇದೀಗ ಕಾನ್ಪುರ ತಲುಪಿವೆ. ಟೀಂ ಇಂಡಿಯಾ ಮಂಗಳವಾರ ಕಾನ್ಪುರದ ನೆಲಕ್ಕೆ ಕಾಲಿಟ್ಟಿದ್ದು, ಎಲ್ಲಾ ಆಟಗಾರರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಆ ಬಳಿಕ ತಂಡದ ಆಟಗಾರರು ಹೋಟೆಲ್ಗೆ ತೆರಳಿದರು. ಈ ವೇಳೆ ಹೋಟೆಲ್ಗೆ ಬಂದ ಆಟಗಾರರಿಗೆ ಹೋ ಗುಚ್ಛ ನೀಡಿ ಸ್ವಾಗತಿಸಲಾಯಿತು. ಅದರಂತೆ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೂ ಅದೇ ರೀತಿಯ ಸ್ವಾಗತ ಸಿಕ್ಕಿತು. ಆದರೆ, ಈ ವೇಳೆ ಕೊಹ್ಲಿಗೆ ಕೈಕುಲಕಲು ಮುಂದಾದ ಹೋಟೆಲ್ ಸಿಬ್ಬಂದಿ ಬಳಿ ಕೊಹ್ಲಿ ನಡೆದುಕೊಂಡ ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಲಾಗುತ್ತಿದೆ. ಕೊಹ್ಲಿ ನಡೆಯನ್ನು ನೆಟ್ಟಿಗರು ಖಂಡಿಸಿದ್ದು, ತರಹೆವಾರಿ ಕಾಮೆಂಟ್ಗಳ ಮೂಲಕ ಕೊಹ್ಲಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನೆಂದರೆ ಹೋಟೆಲ್ಗೆ ಬಂದ ಕೊಹ್ಲಿಗೆ ಅಲ್ಲಿನ ಹೋಟೆಲ್ ಸಿಬ್ಬಂದಿಯೊಬ್ಬರು ಹೂ ಗುಚ್ಛ ನೀಡಿ ಸ್ವಾಗತಿಸಿದ್ದಾರೆ. ಅದೇ ವೇಳೆಗೆ ಇನ್ನೊಬ್ಬ ಸಿಬ್ಬಂದಿ ಕೊಹ್ಲಿಗೆ ಕೈ ಕುಲುಕಲು ಮುಂದಾಗಿದ್ದಾರೆ. ಆದರೆ ಕೊಹ್ಲಿ ‘ಸರ್, ನನಗಿರುವುದು ಕೇವಲ ಎರಡು ಕೈ ಮಾತ್ರ. ಎಲ್ಲರಿಗೂ ಥ್ಯಾಂಕ್ಸ್ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ವಿರಾಟ್ ಆ ಹೂ ಗುಚ್ಛವನ್ನು ಬೇರೆ ಅಧಿಕಾರಿಗೆ ಕೊಟ್ಟು ಅಲ್ಲಿಂದ ಹೊರಟು ಹೋಗಿದ್ದಾರೆ.
Virat Kohli’s welcome at the team’s hotel in Kanpur. 🇮🇳pic.twitter.com/Fqt7QkNfkX
— Mufaddal Vohra (@mufaddal_vohra) September 24, 2024
ವಿರಾಟ್ ಕೊಹ್ಲಿಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅನೇಕ ಅಭಿಮಾನಿಗಳು ಅವರ ಈ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ. ಕೊಹ್ಲಿಯ ವರ್ತನೆಯನ್ನು ಕೆಲವರು ಟೀಕಿಸಿದ್ದು, ಅವರಲ್ಲಿ ಒಬ್ಬ ಅಭಿಮಾನಿ, ‘ಹಣ ಬಂದ ನಂತರ ಎಲ್ಲರೂ ತಮ್ಮನ್ನು ತಾವು ದೇವರೆಂದು ಭಾವಿಸಲು ಪ್ರಾರಂಭಿಸುತ್ತಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.
He was not humble he was quite sarcastic. Actualy paise aane ke baad sab apne ko bhagwan hi samajhne lagte hain.
— Shashi (@Shashigen) September 25, 2024
ವಾಸ್ತವವಾಗಿ, ವಿರಾಟ್ ಕೊಹ್ಲಿ ಈ ರೀತಿಯಾಗಿ ಹೇಳುವುದಕ್ಕೆ ಕಾರಣವೂ ಇದೆ. ಸಿಬ್ಬಂದಿಯೊಬ್ಬರು, ಕೊಹ್ಲಿಗೆ ಕೈ ಕುಲುಕಲು ಬಂದಾಗ ಕೊಹ್ಲಿ ಒಂದು ಕೈಯಲ್ಲಿ ತಮ್ಮ ಬ್ಯಾಗ್ ಮತ್ತು ಇನ್ನೊಂದು ಕೈಯಲ್ಲಿ ಹೂವಿನ ಬೊಕೆಯನ್ನು ಹಿಡಿದಿದ್ದರು. ಇದರಿಂದಾಗಿ ಕೊಹ್ಲಿಗೆ ಹೋಟೆಲ್ ಅಧಿಕಾರಿಯೊಂದಿಗೆ ಕೈಕುಲುಕಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Wed, 25 September 24