IND vs BAN: ಬಾಂಗ್ಲಾ ಮಣಿಸಲು ಚೆನ್ನೈನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ

IND vs BAN: ಗೌತಮ್ ಗಂಭೀರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಸರಣಿಯಾಗಿರುವುದರಿಂದ ಗಂಭೀರ್​ ಅವರಿಗೂ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ತಂಡದ ಎಲ್ಲಾ ಆಟಗಾರರೊಂದಿಗೆ ಸಮಯ ಕಳೆಯುವ ಮೂಲಕ ಗಂಭೀರ್, ಆಟಗಾರರ ಅಭ್ಯಾಸವನ್ನು ಗಮನಿಸಿದರು

IND vs BAN: ಬಾಂಗ್ಲಾ ಮಣಿಸಲು ಚೆನ್ನೈನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on: Sep 13, 2024 | 5:51 PM

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇದೇ ಸೆಪ್ಟೆಂಬರ್ 19 ರಂದು ಚೆನ್ನೈನ MA ಚಿದಂಬರಂ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಸರಣಿಯು ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ಎರಡೂ ತಂಡಗಳು ಗೆಲುವಿನ ಗುರಿಯೊಂದಿಗೆ ಸಮರಾಭ್ಯಾಸ ಶುರು ಮಾಡಿವೆ. ಸರಣಿ ಆರಂಭಕ್ಕೆ ಇನ್ನು ಒಂದು ವಾರ ಇರುವಾಗಲೇ ಟೀಂ ಇಂಡಿಯಾ ಇಂದಿನಿಂದ ಚೆನ್ನೈನಲ್ಲಿ ತನ್ನ ಅಭ್ಯಾಸ ಶಿಬಿರವನ್ನು ಆರಂಭಿಸಿದೆ.

ಗೌತಮ್ ಗಂಭೀರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಸರಣಿಯಾಗಿರುವುದರಿಂದ ಗಂಭೀರ್​ ಅವರಿಗೂ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಹೀಗಾಗಿ ತಂಡದ ಎಲ್ಲಾ ಆಟಗಾರರೊಂದಿಗೆ ಸಮಯ ಕಳೆಯುವ ಮೂಲಕ ಗಂಭೀರ್, ಆಟಗಾರರ ಅಭ್ಯಾಸವನ್ನು ಗಮನಿಸಿದರು. ಇನ್ನು ಈ ಅಭ್ಯಾಸ ಶಿಬಿರಕ್ಕೆ ನಾಯಕ ರೋಹಿತ್ ಶರ್ಮಾ ಮಾತ್ರವಲ್ಲದೆ ವಿರಾಟ್ ಕೊಹ್ಲಿ ಕೂಡ ಲಂಡನ್​ನಿಂದ ನಿಗದಿತ ಸಮಯಕ್ಕೆ ಚೆನ್ನೈಗೆ ಬಂದಿಳಿದಿದ್ದಾರೆ. ಈ ಅಭ್ಯಾಸದ ಶಿಬಿರದ ಪ್ರಮುಖ ಸುದ್ದಿಯಿಂದರೇ ವಿರಾಟ್ ಕೊಹ್ಲಿ ಮತ್ತು ಬುಮ್ರಾ ನೆಟ್ಸ್‌ನಲ್ಲಿ ಬರೋಬ್ಬರಿ 45 ಕ್ಕೂ ಹೆಚ್ಚು ನಿಮಿಷಗಳ ಕಾಲ ಬೆವರಿಳಿಸಿದ್ದಾರೆ.

45 ನಿಮಿಷಗಳ ಅಭ್ಯಾಸ

ಪಿಟಿಐ ವರದಿ ಪ್ರಕಾರ, ಸುಮಾರು 45 ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿದ ವಿರಾಟ್, ಸ್ಪಿನ್ನರ್ ಮತ್ತು ವೇಗದ ಬೌಲರ್‌ಗಳನ್ನು ಚೆನ್ನಾಗಿ ಎದುರಿಸಿದರು. ಶ್ರೀಲಂಕಾ ಸರಣಿಯ ನಂತರ ವಿರಾಟ್ ಕೊಹ್ಲಿ ಲಂಡನ್‌ಗೆ ತೆರಳಿದ್ದರು ಮತ್ತು ಅಂದಿನಿಂದ ಅವರು ಕ್ರಿಕೆಟ್‌ನಿಂದ ದೂರವಿದ್ದರು. ದುಲೀಪ್ ಟ್ರೋಫಿಯಲ್ಲೂ ವಿರಾಟ್ ಭಾಗವಹಿಸಿರಲಿಲ್ಲ. ವಿರಾಟ್ ಮಾತ್ರವಲ್ಲ, ಬುಮ್ರಾ ಕೂಡ ಅಭ್ಯಾಸದಲ್ಲಿ ಭಾಗವಹಿಸಿದ್ದು, ಅವರು ಕೂಡ ದೀರ್ಘಕಾಲ ಬೌಲಿಂಗ್ ಅಭ್ಯಾಸ ಮಾಡಿದರು. ಬುಮ್ರಾ ಕೂಡ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಪರ ಯಾವುದೇ ಪಂದ್ಯಗಳನ್ನಾಡಿಲ್ಲ. ಹೀಗಾಗಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಬುಮ್ರಾ ಲಯ ಕಂಡುಕೊಳ್ಳುವುದು ಮುಖ್ಯವಾಗಿದೆ.

ಟೀಂ ಇಂಡಿಯಾಗೆ ಬಾಂಗ್ಲಾ ಕಠಿಣ ಸವಾಲು

ಟೀಂ ಇಂಡಿಯಾ ಇದುವರೆಗೆ ಬಾಂಗ್ಲಾದೇಶದ ವಿರುದ್ಧ ಯಾವುದೇ ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಆದರೆ ಸದ್ಯದ ಬಾಂಗ್ಲಾದೇಶ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಏಕೆಂದರೆ ಈ ತಂಡ, ಪಾಕಿಸ್ತಾನವನ್ನು ಅವರ ನೆಲದಲ್ಲೇ 2-0 ಅಂತರದಲ್ಲಿ ಸೋಲಿಸಿತ್ತು. ಹೀಗಾಗಿ ಬಾಂಗ್ಲಾದೇಶ ತಂಡ ಅತ್ಯಂತ ಸಮತೋಲಿತವಾಗಿದೆ. ತಂಡ ಉತ್ತಮ ಬೌಲಿಂಗ್ ದಾಳಿ ಹೊಂದಿದೆ. ಸ್ಪಿನ್​ ವಿಭಾಗದಲ್ಲೂ ತಂಡ ಸಾಕಷ್ಟು ಬಲಿಷ್ಠವಾಗಿದೆ. ಹೀಗಾಗಿ ಟೀಂ ಇಂಡಿಯಾ, ಬಾಂಗ್ಲಾದೇಶವನ್ನು ಕಡೆಗಣಿಸಿದರೆ, ಪಾಕಿಸ್ತಾನಕ್ಕೆ ಎದುರಾದ ಸೋಲೇ ಭಾರತಕ್ಕೂ ಎದುರಾಗಲಿದೆ.

ಉಭಯ ತಂಡಗಳು

ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್, ಕೆಎಲ್ ರಾಹುಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಮತ್ತು ಯಶ್ ದಯಾಳ್.

ಬಾಂಗ್ಲಾದೇಶ ಟೆಸ್ಟ್ ತಂಡ: ನಜ್ಮುಲ್ ಹಸನ್ ಶಾಂಟೊ (ನಾಯಕ), ಝಾಕಿರ್ ಹಸನ್, ಶದ್ಮನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹಮಾನ್, ಮಹಮ್ಮದುಲ್ ಹಸನ್ ಜಾಯ್, ಲಿಟನ್ ದಾಸ್ (ವಿಕೆಟ್ ಕೀಪರ್), ಜಾಕಿರ್ ಅಲಿ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ಮೆಹಿದಿ ಹಸನ್ ಮಿರಾಜ್, ನಯೀಮ್ ಹಸನ್, ಹಸನ್ ಮಹಮೂದ್, ಸೈಯದ್ ಖಾಲಿದ್ ಅಹ್ಮದ್, ನಹಿದ್ ರಾಣಾ, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ