IND vs ENG: ಇಂಜುರಿಯಿಂದ ಗುಣಮುಖರಾಗದ ಕೊಹ್ಲಿ; 2ನೇ ಏಕದಿನ ಪಂದ್ಯದಿಂದಲೂ ಔಟ್..!

IND vs ENG: ವಿರಾಟ್ ಇನ್ನೂ ಚೇತರಿಸಿಕೊಂಡಿಲ್ಲದಿರುವುದರಿಂದ ಗುರುವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಎಎನ್‌ಐ ವರದಿ ಮಾಡಿದೆ.

IND vs ENG: ಇಂಜುರಿಯಿಂದ ಗುಣಮುಖರಾಗದ ಕೊಹ್ಲಿ; 2ನೇ ಏಕದಿನ ಪಂದ್ಯದಿಂದಲೂ ಔಟ್..!
ವಿರಾಟ್ ಕೊಹ್ಲಿ
Follow us
| Updated By: ಪೃಥ್ವಿಶಂಕರ

Updated on:Jul 13, 2022 | 4:58 PM

ಗಾಯದ ಸಮಸ್ಯೆಯಿಂದಾಗಿ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ (Virat Kohli)ಗೆ ಸಂಕಷ್ಟ ಕಡಿಮೆಯಾಗುತ್ತಿಲ್ಲ. ಮೂರನೇ ಟಿ20 ಪಂದ್ಯದ ವೇಳೆ ವಿರಾಟ್ ಕೊಹ್ಲಿ ಗಾಯಗೊಂಡಿದ್ದರು. ಹೀಗಾಗಿ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ತಂಡದ ಭಾಗವಾಗುವುದಿಲ್ಲ ಎಂಬ ಸುದ್ದಿ ಬಂದಿತ್ತು. ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ (Shreyas Iyer) ಆಯ್ಕೆಯಾಗಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಬಗ್ಗೆ ಮತ್ತೊಂದು ಅಪ್‌ಡೇಟ್ ಬಂದಿದ್ದು, ಅವರ ಗಾಯ ಇನ್ನೂ ವಾಸಿಯಾಗದಿರುವುದರಿಂದ ಅವರು ಎರಡನೇ ಏಕದಿನದಲ್ಲಿ ಆಡಲು ಸಾಧ್ಯವಿಲ್ಲ. ವಿರಾಟ್ ಇನ್ನೂ ಚೇತರಿಸಿಕೊಂಡಿಲ್ಲದಿರುವುದರಿಂದ ಗುರುವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಎಎನ್‌ಐ ವರದಿ ಮಾಡಿದೆ.

ಆಯ್ಕೆ ಸಮಿತಿ ಈಗಾಗಲೇ ಸೂಚಿಸಿದೆ

ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಪ್ರಮುಖ ಆಟಗಾರರಾಗಿದ್ದು, ಈ ಸರಣಿಯಲ್ಲಿ ಅವರು ಫಾರ್ಮ್​ಗೆ ಬರಲೇಬೇಕಿದೆ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧದ ಮೂರು ODIಗಳಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ. ವಿಂಡೀಸ್ ವಿರುದ್ಧದ ಐದು ಟಿ20 ಪಂದ್ಯಗಳಿಗೆ ತಂಡವನ್ನು ಇನ್ನೂ ಆಯ್ಕೆ ಮಾಡಿಲ್ಲ. ಈ ಸರಣಿಗೆ ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವ ಸಾಧ್ಯತೆ ಇದೆ. ಏಕೆಂದರೆ ಈ ಹಿಂದೆ ಆಯ್ಕೆ ಸಮಿತಿಯ ಸದಸ್ಯರು ಇದೇ ಸುಳಿವು ನೀಡಿದ್ದರು. ಹಾಗಾಗಿ ಇಂಗ್ಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳು ವಿರಾಟ್​ಗೆ ಮಹತ್ವದ್ದಾಗಿದ್ದವು.

ಬುಮ್ರಾ ಮತ್ತು ಶಮಿ ಮಾರಕ ದಾಳಿ

ಮೊದಲ ಏಕದಿನ ಪಂದ್ಯಕ್ಕೆ ಸಂಬಂಧಿಸಿದಂತೆ, ಭಾರತವು ಮೊದಲ ODI ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಏಕಪಕ್ಷೀಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದ ನಂತರ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಭಾರತದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ನಾಯಕನ ನಿರ್ಧಾರವನ್ನು ಸಮರ್ಥಿಸಿ ಇಂಗ್ಲೆಂಡ್ ತಂಡವನ್ನು 110 ರನ್‌ಗಳಿಗೆ ಆಲೌಟ್ ಮಾಡಿದರು.

ಭಾರತಕ್ಕೆ 10 ವಿಕೆಟ್‌ ಜಯ

ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಒಂದೂ ವಿಕೆಟ್ ನಷ್ಟವಿಲ್ಲದೆ 10 ವಿಕೆಟ್​ಗಳ ಜಯ ಸಾಧಿಸಿತು. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ 76 ರನ್ ಗಳಿಸಿದ್ದರು. ಶಿಖರ್ ಧವನ್ 31 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು. ಇವರಿಬ್ಬರು 18ನೇ ಬಾರಿ 100ಕ್ಕೂ ಹೆಚ್ಚು ರನ್​ಗಳ ಜೊತೆಯಾಟ ಆಡಿದರು.

ಬುಮ್ರಾ ಮತ್ತು ಶಮಿ ವಿಶೇಷ ದಾಖಲೆ

ಈ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ 19 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ODI ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು. ಇದರ ಹೊರತಾಗಿ ಮೊಹಮ್ಮದ್ ಶಮಿ ಈ ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಗಳಿಸಿ ODI ವೃತ್ತಿಜೀವನದ 150 ವಿಕೆಟ್‌ಗಳನ್ನು ಪೂರೈಸಿದರು.

Published On - 4:58 pm, Wed, 13 July 22