AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG 2nd Test: ಭಾರತ- ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಯಾವಾಗ ಆರಂಭ?, ಎಲ್ಲಿ?

India vs England 2nd Test: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಭಾರತ ತಂಡದ ಪರ ನಾಲ್ವರು ಆಟಗಾರರು ಶತಕ ಗಳಿಸಿದರು. ರಿಷಭ್ ಪಂತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದರು. ಆದರೆ, ತಂಡವನ್ನು ಪಂದ್ಯ ಗೆಲ್ಲಲು ಇದು ಸಾಕಾಗಲಿಲ್ಲ. ಇದೀಗ ಎರಡನೇ ಟೆಸ್ಟ್​ಗೆ ಟೀಮ್ ಇಂಡಿಯಾ ತಯಾರಾಗಬೇಕಿದೆ. ಹಾಗಾದರೆ ಇಂಡೋ-ಇಂಗ್ಲೆಂಡ್ ದ್ವೀತೀಯ ಟೆಸ್ಟ್ ಯಾವಾಗ?.

IND vs ENG 2nd Test: ಭಾರತ- ಇಂಗ್ಲೆಂಡ್ ದ್ವಿತೀಯ ಟೆಸ್ಟ್ ಯಾವಾಗ ಆರಂಭ?, ಎಲ್ಲಿ?
Eng Vs Ind 2ns Test
Vinay Bhat
|

Updated on: Jun 25, 2025 | 12:56 PM

Share

ಬೆಂಗಳೂರು (ಜೂ. 25): ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ (Indian Cricket Team) ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದೆ. ಅದ್ಭುತ ಪ್ರದರ್ಶನ ನೀಡಿದರೂ ಭಾರತ 5 ವಿಕೆಟ್‌ಗಳಿಂದ ಸೋಲು ಅನುಭವಿಸಬೇಕಾಯಿತು. ಪಂದ್ಯದ ಐದನೇ ದಿನದಂದು ಇಂಗ್ಲೆಂಡ್ 371 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿತು. ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 364 ರನ್ ಗಳಿಸಿತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 465 ರನ್ ಗಳಿಸಿತು. ಭಾರತ ತಂಡದ ಪರ ನಾಲ್ವರು ಆಟಗಾರರು ಶತಕ ಗಳಿಸಿದರು. ರಿಷಭ್ ಪಂತ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದರು. ಆದರೆ, ತಂಡವನ್ನು ಪಂದ್ಯ ಗೆಲ್ಲಲು ಇದು ಸಾಕಾಗಲಿಲ್ಲ.

ಇದೀಗ ಎರಡನೇ ಟೆಸ್ಟ್​ಗೆ ಟೀಮ್ ಇಂಡಿಯಾ ತಯಾರಾಗಬೇಕಿದೆ. ಹಾಗಾದರೆ ಇಂಡೋ-ಇಂಗ್ಲೆಂಡ್ ದ್ವೀತೀಯ ಟೆಸ್ಟ್ ಯಾವಾಗ?, ಎಲ್ಲಿ ನಡೆಯಲಿದೆ?, ಎಷ್ಟು ಗಂಟೆಗೆ ಪ್ರಾರಂಭ ಎಂಬ ಕುರಿತ ಸಂಪೂರ್ಣ ಮಾಹಿತಿ ನೋಡೋಣ.

ಭಾರತ vs ಇಂಗ್ಲೆಂಡ್ 2ನೇ ಟೆಸ್ಟ್ ಯಾವಾಗ ಪ್ರಾರಂಭ?

ಇದನ್ನೂ ಓದಿ
Image
ಎರಡನೇ ಟೆಸ್ಟ್​ಗು ಮುನ್ನ ಭಾರತಕ್ಕೆ ಶಾಕ್: ಜಸ್ಪ್ರೀತ್ ಬುಮ್ರಾ ಹೊರಕ್ಕೆ?
Image
ಸೋಲುಗಳ ಸರಮಾಲೆ... ಭಾರತ ಟೆಸ್ಟ್ ತಂಡಕ್ಕೆ 'ಗಂಭೀರ' ಸಮಸ್ಯೆ
Image
ಟೀಮ್ ಇಂಡಿಯಾ ಸೋಲಿಗೆ ಶುಭ್​ಮನ್ ಗಿಲ್ ದೂರಿದ್ದು ಯಾರನ್ನ..!
Image
ಟೀಮ್ ಇಂಡಿಯಾವನ್ನು ನಾಯಿಗೆ ಹೋಲಿಸಿದ ದಿನೇಶ್ ಕಾರ್ತಿಕ್

ಭಾರತ vs ಇಂಗ್ಲೆಂಡ್ ಎರಡನೇ ಟೆಸ್ಟ್ ಜುಲೈ 2 ರಿಂದ ಆರಂಭವಾಗಲಿದೆ.

ಇಂಗ್ಲೆಂಡ್ vs ಭಾರತ 2ನೇ ಟೆಸ್ಟ್ ಪಂದ್ಯ ನಡೆಯುವ ಸ್ಥಳ ಯಾವುದು?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಭಾರತ vs ಇಂಗ್ಲೆಂಡ್ 2 ನೇ ಟೆಸ್ಟ್ ಯಾವ ಸಮಯಕ್ಕೆ ಪ್ರಾರಂಭವಾಗುತ್ತದೆ?

ಜುಲೈ 2 ರಂದು ENG vs IND 2 ನೇ ಟೆಸ್ಟ್ ಪಂದ್ಯ IST ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ.

ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 2 ನೇ ಟೆಸ್ಟ್ ಪಂದ್ಯದ ಲೈವ್ ಟಾಸ್ ಸಮಯ ಎಷ್ಟು?

ಎರಡನೇ ಟೆಸ್ಟ್ ಪಂದ್ಯದ ENG vs IND ಟಾಸ್ IST ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

Jasprit Bumrah: ಎರಡನೇ ಟೆಸ್ಟ್​ಗು ಮುನ್ನ ಭಾರತಕ್ಕೆ ಶಾಕ್: ಜಸ್ಪ್ರೀತ್ ಬುಮ್ರಾ ಹೊರಕ್ಕೆ?

ಭಾರತ vs ಇಂಗ್ಲೆಂಡ್ ಎರಡನೇ ಟೆಸ್ಟ್ ಪಂದ್ಯವನ್ನು ಯಾವ ಟಿವಿ ಚಾನೆಲ್‌ಗಳು ನೇರ ಪ್ರಸಾರ ಮಾಡುತ್ತವೆ?

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಭಾರತದ ಇಂಗ್ಲೆಂಡ್ ಪ್ರವಾಸ 2025 ರ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಸೋನಿ ಸ್ಪೋರ್ಟ್ಸ್ 1 HD/SD ಮತ್ತು ಸೋನಿ ಸ್ಪೋರ್ಟ್ಸ್ 5 HD/SD ಇಂಗ್ಲಿಷ್ ಕಾಮೆಂಟರಿಯೊಂದಿಗೆ IND vs ENG 2 ನೇ ಟೆಸ್ಟ್ ಅನ್ನು ನೇರ ಪ್ರಸಾರ ಮಾಡುತ್ತವೆ. ಇಂಗ್ಲೆಂಡ್ vs ಭಾರತ ಟೆಸ್ಟ್ ಸರಣಿಯ ಹಿಂದಿ ಕಾಮೆಂಟರಿ ಸೋನಿ ಸ್ಪೋರ್ಟ್ಸ್ 3 HD/SD ನಲ್ಲಿ ಲಭ್ಯವಿದೆ.

ಭಾರತ vs ಇಂಗ್ಲೆಂಡ್ 2ನೇ ಟೆಸ್ಟ್ ಪಂದ್ಯದ ನೇರಪ್ರಸಾರವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಜಿಯೋ ಹಾಟ್​​ಸ್ಟರ್ ಭಾರತದಲ್ಲಿ IND vs ENG 2ನೇ ಟೆಸ್ಟ್ ಪಂದ್ಯವನ್ನು ಉಚಿತವಾಗಿ ನೇರ ಪ್ರಸಾರ ಮಾಡುತ್ತದೆ.

ಸದ್ಯ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಸೋತ ಕಾರಣ ಭಾರತ ಮತ್ತೆ ಪುಟಿದೇಳಬೇಕಿದೆ. ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯಕ್ಕೆ ಆಂಗ್ಲರ ಬಾಜ್‌ಬಾಲ್ ತಂತ್ರವನ್ನು ಎದುರಿಸಲು ಒಂದು ವಾರಕ್ಕೂ ಹೆಚ್ಚು ವಿರಾಮ ಇದೆ. ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್‌ನ ಪಿಚ್‌ಗಳು ಗಣನೀಯವಾಗಿ ಬದಲಾಗುತ್ತಿದೆ. ಮೊದಲ ಟೆಸ್ಟ್​ನ 4 ನೇ ದಿನದ ಅಂತ್ಯದ ವೇಳೆಗೆ ಮೇಲ್ಮೈ ಸಮತಟ್ಟಾಗಿತ್ತು, ಆದರೆ, 5 ನೇ ದಿನದಂದು ಪಿಚ್ ಬೌಲರ್​ಗಳಿಗೆ ಅಷ್ಟೊಂದು ಸಹಾಯ ಮಾಡಲಿಲ್ಲ. ಬರ್ಮಿಂಗ್ಹ್ಯಾಮ್ ವಿಕೆಟ್ ಆರಂಭಿಕ ಹಂತದಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಹಾಯ ಮಾಡುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ