ಮ್ಯಾಂಚೆಸ್ಟರ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅದ್ಭುತ ಪ್ರದರ್ಶನ ನೀಡಿತ್ತು. ಒಂದು ಹಂತದಲ್ಲಿ ಕೇವಲ 72 ರನ್‌ಗಳಿಗೆ ಭಾರತ ತಂಡದ 4 ವಿಕೆಟ್‌ಗಳನ್ನು ಉರುಳಿಸಿದ್ದರು. ಆದರೆ ನಂತರ ರಿಷಬ್ ಪಂತ್ (Rishabh Pant) ಆಂಗ್ಲರ ಗೆಲುವಿನ ಹಾದಿಗೆ ಅಡ್ಡಿಯಾದರು. ಈ ಎಡಗೈ ಬ್ಯಾಟ್ಸ್‌ಮನ್ 113 ಎಸೆತಗಳಲ್ಲಿ ಅಜೇಯ 125 ರನ್ ಗಳಿಸುವ ಮೂಲಕ ಇಂಗ್ಲೆಂಡ್‌ನಿಂದ ಏಕದಿನ ಸರಣಿಯನ್ನು ಕಸಿದುಕೊಂಡರು. ಪಾಂಡ್ಯ ಅವರೊಂದಿಗೆ 122 ರನ್‌ಗಳನ್ನು ಹಂಚಿಕೊಂಡ ಪಂತ್ ಭಾರತ ತಂಡವನ್ನು ಚಾಂಪಿಯನ್ ಮಾಡಿದರು. ಈ ಜೊತೆಯಾಟವನ್ನು ಮುರಿಯಲು ಇಂಗ್ಲೆಂಡ್‌ಗೆ ಉತ್ತಮ ಅವಕಾಶವಿದ್ದರೂ, ಅದರ ನಾಯಕ ಜೋಸ್ ಬಟ್ಲರ್ (Jos Buttler) ಮಾಡಿದ ತಪ್ಪು ತಂಡವನ್ನು ಮುಳುಗಿಸಿತು. ಬಟ್ಲರ್, 18 ರನ್ಗಳ ವೈಯಕ್ತಿಕ ಸ್ಕೋರ್ನಲ್ಲಿ ಪಂತ್ಗೆ ಜೀವದಾನ ನೀಡಿದರು. ಪಂತ್ ಅವರನ್ನು ಸ್ಟಂಪ್ ಮಾಡುವ ಅವಕಾಶವನ್ನು ಬಟ್ಲರ್ ಕಳೆದುಕೊಂಡರು. ಅದರ ನಂತರ ಪಂತ್, ಇಂಗ್ಲೆಂಡ್‌ನಿಂದ ಪಂದ್ಯವನ್ನು ಕಸಿದುಕೊಂಡರು. ಸೋಲಿನ ನಂತರ ಮಾತನಾಡಿದ ಬಟ್ಲರ್, ಪಂತ್‌ನಂತಹ ಆಟಗಾರನಿಗೆ ಜೀವದಾನ ನೀಡುವುದು ಎಂದರೆ ಎದುರಾಳಿ ತಂಡ ತಮ್ಮ ಸೋಲನ್ನು ಒಪ್ಪಿಕೊಂಡಂತೆ ಎಂಬ ಮಾತನ್ನು ಆಡಿದ್ದಾರೆ.
ಪಂತ್ ಆಟಕ್ಕೆ ಬಟ್ಲರ್ ಫಿದಾ
ಪಂದ್ಯದ ನಂತರ ಮಾತನಾಡಿದ ಬಟ್ಲರ್, ‘ಪಂತ್ ಒಬ್ಬ ಶ್ರೇಷ್ಠ ಆಟಗಾರ, ನೀವು ಅವರಿಗೆ ಎರಡನೇ ಅವಕಾಶ ನೀಡಿದರೆ, ಅವರು ನಿಮಗೆ ಸೋಲಿನ ಕಹಿ ಉಣಬಡಿಸುತ್ತಾರೆ. ರಿಷಬ್ ಪಂತ್ ಒಬ್ಬ ನಿರ್ಭೀತ ಆಟಗಾರನಾಗಿದ್ದು ಪ್ರತಿ ಮಾದರಿಯಲ್ಲೂ ಅದ್ಭುತ ಕ್ರಿಕೆಟ್ ಆಡುತ್ತಾರೆ. ಅದಕ್ಕಾಗಿಯೇ ಟೀಮ್ ಇಂಡಿಯಾ ಅವರಿಗೆ ಅವಕಾಶ ನೀಡುತ್ತದೆ ಎಂದಿದ್ದಾರೆ.
?️ “We just haven’t batted our best, we just have to play better for longer.”
Jos Buttler says he isn’t concerned that England didn’t see out the 50 overs and discusses his role as captain ?#ENGvIND pic.twitter.com/0O0HPAZndj
— Sky Sports Cricket (@SkyCricket) July 17, 2022
ಪಂತ್ ಚೊಚ್ಚಲ ಏಕದಿನ ಶತಕ
ರಿಷಬ್ ಪಂತ್ ಮ್ಯಾಂಚೆಸ್ಟರ್‌ನಲ್ಲಿ ತಮ್ಮ ODI ವೃತ್ತಿಜೀವನದ ಅತ್ಯುತ್ತಮ ಇನ್ನಿಂಗ್ಸ್ ಆಡಿ ತಮ್ಮ ಚೊಚ್ಚಲ ಏಕದಿನ ಶತಕ ಬಾರಿಸಿದರು. ಈ ಆಟಗಾರ 16 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 125 ರನ್ ಗಳಿಸಿದರು. ಅತ್ಯಂತ ಮುಖ್ಯವಾದ ವಿಷಯವೆಂದರೆ ಪಂತ್ ಮೊದಲು ಟೀಮ್ ಇಂಡಿಯಾವನ್ನು ಕಷ್ಟದ ಸಮಯದಲ್ಲಿ ನಿಭಾಯಿಸಿದರು ಮತ್ತು ಸೆಟ್ ಆದ ನಂತರ ಇಂಗ್ಲೆಂಡ್ ಆಟಗಾರರನ್ನು ರಿಮಾಂಡ್‌ಗೆ ತೆಗೆದುಕೊಂಡರು. ಶತಕ ಗಳಿಸಿದ ನಂತರ, ಡೇವಿಡ್ ವಿಲ್ಲಿ ಅವರ ಒಂದೇ ಓವರ್‌ನಲ್ಲಿ ಪಂತ್ ಸತತ ಐದು ಬೌಂಡರಿಗಳನ್ನು ಬಾರಿಸಿದರು.
ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡ ನಂತರ ಭಾರತ T20 ಮತ್ತು ODI ಸರಣಿಗಳಲ್ಲಿ ಇಂಗ್ಲೆಂಡ್ ತಂಡವನ್ನು ಹೀನಾಯವಾಗಿ ಸೋಲಿಸಿತು. ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದ ಹೀರೋ ಆಗಿ ಪಂತ್ ಆಯ್ಕೆಯಾದರು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 100 ರನ್ ಗಳಿಸುವುದರೊಂದಿಗೆ ಪಾಂಡ್ಯ ಅವರ ಹೆಸರಿನಲ್ಲಿ 6 ವಿಕೆಟ್ ಸಹ ಇದ್ದವು.
Published On - 3:25 pm, Mon, 18 July 22